ಅಮೆರಿಕದೊಂದಿಗೆ ಶೀಘ್ರ ವ್ಯಾಪಾರ ಒಪ್ಪಂದಕ್ಕೆ ಬದ್ಧ: ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯದ ಆರೋಪ ತಳ್ಳಿಹಾಕಿದ ಭಾರತ

Date:

ಅಮೆರಿಕದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಶೀಘ್ರದಲ್ಲೇ ಅಂತಿಮಗೊಳಿಸಲು ಬದ್ಧವಾಗಿರುವುದಾಗಿ ಕೇಂದ್ರ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ. ಇದೇ ವೇಳೆ, ಭಾರತದ ತಯಾರಿಕಾ ವಲಯದಲ್ಲಿ ರಚನಾತ್ಮಕ ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯ ಇದೆ ಎಂಬ ಅಮೆರಿಕದ ಆರೋಪವನ್ನು ಸರ್ಕಾರ ತಳ್ಳಿಹಾಕಿದೆ.

- Advertisement -

ಭಾರತದಿಂದ ಆಮದಾಗುವ ಸರಕುಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸಲು ಅಮೆರಿಕ ಬುಧವಾರ ಪ್ರಸ್ತಾವ ಮುಂದಿಟ್ಟ ಬೆನ್ನಲ್ಲೇ ಭಾರತ ಈ ಪ್ರತಿಕ್ರಿಯೆ ನೀಡಿದೆ. ಆದರೆ, ಉಭಯ ದೇಶಗಳ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಏರ್ಪಟ್ಟರೆ ಈ ಸುಂಕವನ್ನು ಶೇ 17ಕ್ಕೆ ಸೀಮಿತಗೊಳಿಸುವ ಅವಕಾಶವನ್ನು ಅಮೆರಿಕ ನೀಡಿದೆ. ಇದರಿಂದ ಏಷ್ಯಾದ ಇತರ ಪ್ರತಿಸ್ಪರ್ಧಿ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಅಲ್ಪ ಮಟ್ಟಿನ ಅನುಕೂಲ ದೊರೆಯಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯುಪಿ ಚುನಾವಣೆ | ಯುದ್ಧಕ್ಕೆ ಮೊದಲೇ ಉಡುಗಿ ಹೋಯಿತೇ...

ಉತ್ತರ ಪ್ರದೇಶದಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನಾಗಾಲೋಟಕ್ಕೆ ಬ್ರೇಕ್ ಹಾಕಿ ದೇಶದ ರಾಜಕಾರಣದಲ್ಲೇ ಸಂಚಲನ ಮೂಡಿಸಿತ್ತು ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್ ಮೈತ್ರಿ. ಆದರೀಗ, 2027ರ ಉತ್ತರ ಪ್ರದೇಶ ವಿಧಾನಸಭಾ...

ಬಂಡವಾಳಶಾಹಿಯ ನಾಲ್ಕು ಕಟ್ಟುಕಥೆಗಳು ಮತ್ತು ನಮ್ಮ ಬದುಕಿನ ಬೆಲೆ

ನಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ಒಮ್ಮೆ ಗಮನಿಸಿ ನೋಡಿ. ಒಂದು ಕಡೆ, 2025ರ ಒಂದೇ ವರ್ಷದಲ್ಲಿ ಜಗತ್ತಿನ ಅತ್ಯಂತ ಶ್ರೀಮಂತ 500 ವ್ಯಕ್ತಿಗಳ ಸಂಪತ್ತು ಸುಮಾರು 2.2 ಟ್ರಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದೆ. ಇನ್ನೊಂದು ಕಡೆ,...

ಸಂವಿಧಾನಕ್ಕೆ 77 – ಈಡೇರದ ಕನಸು…..

ಸಂವಿಧಾನ ದಿನ ಒಂದು ಬಗೆಯ ಲಯವಿದೆ. ಅಂದು ಮುಂಜಾನೆಯಿಂದ ಇರುಳಿನವರೆಗೂ ಸಂವಿಧಾನದ್ದೇ ಸದ್ದು. ಅದರ ಮಹತ್ವ, ಅಗತ್ಯ, ಅನಿವಾರ್ಯತೆ, ಅನುಕೂಲತೆ ಬಗ್ಗೆ ಸ್ಮರಿಸಿಕೊಂಡು ಸಂಭ್ರಮಿಸುತ್ತೇವೆ. ಪ್ರಧಾನಿಯಿಂದ ಗ್ರಾಮ ಪಂಚಾಯಿತಿ ಸದಸ್ಯರವರೆಗೂ ಪ್ರಶ್ನಿಸಲು ಇರುವ "ಅಧಿಕಾರಭಾಗ್ಯ"...

ತಯಾರಿಕಾ ವಲಯಗಳಲ್ಲಿನ ರಚನಾತ್ಮಕ ಹೆಚ್ಚುವರಿ ಸಾಮರ್ಥ್ಯ ಮತ್ತು ಉತ್ಪಾದನೆಗೆ ಸಂಬಂಧಿಸಿದಂತೆ ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿ (ಯುಎಸ್‌ಟಿಆರ್) ನಡೆಸಿದ ತನಿಖೆಯ ಬಳಿಕ ಈ ಹೊಸ ಸುಂಕವನ್ನು ಪ್ರಸ್ತಾಪಿಸಲಾಗಿದೆ. ಚೀನಾ, ಯುರೋಪಿಯನ್ ಒಕ್ಕೂಟ, ಸಿಂಗಪುರ, ಸ್ವಿಟ್ಜರ್ಲೆಂಡ್, ಇಂಡೊನೇಷ್ಯಾ, ಮಲೇಷ್ಯಾ, ಕಾಂಬೋಡಿಯಾ, ಥಾಯ್ಲೆಂಡ್, ಕೊರಿಯಾ, ವಿಯೆಟ್ನಾಂ, ತೈವಾನ್, ಬಾಂಗ್ಲಾದೇಶ, ಜಪಾನ್, ನಾರ್ವೆ, ಮೆಕ್ಸಿಕೊ ಮತ್ತು ಭಾರತ ಸೇರಿದಂತೆ ಒಟ್ಟು 16 ಪ್ರಮುಖ ಆರ್ಥಿಕತೆಗಳನ್ನು ಈ ತನಿಖೆಗೆ ಒಳಪಡಿಸಲಾಗಿತ್ತು.

ಈ ಕುರಿತು ಪ್ರಕಟಣೆ ಹೊರಡಿಸಿರುವ ಕೇಂದ್ರ ವಾಣಿಜ್ಯ ಸಚಿವಾಲಯವು, ಭಾರತವೂ ಸೇರಿದಂತೆ 14 ಆರ್ಥಿಕತೆಗಳ ತಯಾರಿಕಾ ವಲಯದ ನೀತಿಗಳು, ಕ್ರಮಗಳು ಮತ್ತು ರಚನಾತ್ಮಕ ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯಕ್ಕೆ ಸಂಬಂಧಿಸಿ ಸೆಕ್ಷನ್ 301ರ ಅಡಿ ಯುಎಸ್‌ಟಿಆರ್ ಹೊರಡಿಸಿರುವ ನಿರ್ಧಾರದ ನೋಟಿಸ್ ಮತ್ತು ಅಭಿಪ್ರಾಯ ಕೋರಿಕೆಯನ್ನು ಗಮನಿಸಲಾಗಿದೆ ಎಂದು ತಿಳಿಸಿದೆ. ಸದ್ಯ ಈ ನೋಟಿಸ್ ಅನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದೆ.

‘ಈ ತನಿಖೆಯ ಉದ್ದಕ್ಕೂ ಭಾರತವು ಸಕಾರಾತ್ಮಕವಾಗಿ ಪಾಲ್ಗೊಂಡಿದೆ. ತನಿಖೆಯ ಆರಂಭದ ನೋಟಿಸ್‌ಗೆ ನೀಡಿದ ಉತ್ತರದಲ್ಲಿ ಹಾಗೂ ನಂತರದ ಪ್ರಕ್ರಿಯೆಗಳಲ್ಲಿ, ಭಾರತದ ಯಾವುದೇ ವಲಯದಲ್ಲೂ ರಚನಾತ್ಮಕ ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯ ಇಲ್ಲ ಎಂದು ವಾಣಿಜ್ಯ ಇಲಾಖೆ ಸ್ಪಷ್ಟಪಡಿಸಿದೆ’ ಎಂದು ಸಚಿವಾಲಯ ತಿಳಿಸಿದೆ.
ಉಭಯ ದೇಶಗಳು ವ್ಯಾಪಾರ ಮಾತುಕತೆಯಲ್ಲಿ ತೊಡಗಿದ್ದು, ವ್ಯಾಪಾರಕ್ಕೆ ಸಂಬಂಧಿಸಿದ ಯಾವುದೇ ಕಳವಳಗಳನ್ನು ಇದೇ ಮಾತುಕತೆಯ ಚೌಕಟ್ಟಿನೊಳಗೆ ಬಗೆಹರಿಸಿಕೊಳ್ಳಬೇಕು ಎಂಬುದು ಭಾರತದ ನಿಲುವಾಗಿದೆ.

‘2026ರ ಫೆಬ್ರುವರಿ 2ರಂದು ಘೋಷಿಸಲಾದ ಮತ್ತು ಫೆಬ್ರುವರಿ 7ರ ಜಂಟಿ ಹೇಳಿಕೆಗೆ ಅನುಗುಣವಾಗಿ, ಭಾರತ–ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಶೀಘ್ರ ಪೂರ್ಣಗೊಳಿಸಲು ಅಮೆರಿಕದೊಂದಿಗೆ ನಿಕಟವಾಗಿ ಕೆಲಸ ಮಾಡಲು ಭಾರತ ಸರ್ಕಾರ ಬದ್ಧವಾಗಿದೆ’ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ. ಏಷ್ಯಾದ ಇತರ ಪ್ರತಿಸ್ಪರ್ಧಿ ರಾಷ್ಟ್ರಗಳಿಗಿಂತ ತನಗೆ ಸ್ಪರ್ಧಾತ್ಮಕ ಅನುಕೂಲ ಇರಬೇಕು ಎಂದು ಭಾರತ ಒತ್ತಾಯಿಸುತ್ತಲೇ ಬಂದಿದ್ದು, ಅಮೆರಿಕವು ತನ್ನ ಸುಂಕ ಪ್ರಸ್ತಾವದಲ್ಲಿ ಈ ಬೇಡಿಕೆಯನ್ನು ಪರಿಗಣಿಸಿದೆ.

ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಚಿಂತಕರ ಚಾವಡಿ ‘ಜಿಟಿಆರ್‌ಐ’, ಸೆಕ್ಷನ್ 301ರ ಅಡಿಯ ಹೆಚ್ಚುವರಿ ಸಾಮರ್ಥ್ಯ ತನಿಖೆಯ ಹೆಸರಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿರುವ ಹೊಸ ಸುಂಕಗಳು ಪ್ರತಿಸುಂಕ ವ್ಯವಸ್ಥೆಯನ್ನೇ ಹೊಸ ಹೆಸರಿನಲ್ಲಿ ಮರುಸೃಷ್ಟಿಸಿವೆ ಎಂದು ವಿಶ್ಲೇಷಿಸಿದೆ. ಕೈಗಾರಿಕಾ ವಲಯದ ರಚನಾತ್ಮಕ ಅಧಿಕ ಉತ್ಪಾದನೆಯ ಸಮಸ್ಯೆಯನ್ನು ನಿಜವಾಗಿಯೂ ಬಗೆಹರಿಸುವುದಕ್ಕಿಂತ, ವ್ಯಾಪಾರ ಪಾಲುದಾರ ದೇಶಗಳನ್ನು ಏಕಪಕ್ಷೀಯ ಹಾಗೂ ದುಬಾರಿ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕುವಂತೆ ಸೆಳೆಯುವ ತಂತ್ರ ಇದಾಗಿದೆ ಎಂದು ಅದು ಹೇಳಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಅರ್ಥಪೂರ್ಣ ಸಂವಿಧಾನ ದಿನವನ್ನು ಆಚರಿಸಿದ ಗೋಲಭಾವಿಯ ಶಾಲೆ

ತಾಲೂಕಿನ ಗೋಲಭಾವಿ ಗ್ರಾಮದ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ...

CJP ನಾಯಕ ಸೌರವ್ ದಾಸ್ ವಿರುದ್ಧ ‘ಲುಕ್ ಔಟ್ ನೋಟಿಸ್‌’; ದೆಹಲಿ ಹೈಕೋರ್ಟ್‌ಗೆ ಕೇಂದ್ರ ಮಾಹಿತಿ; ಮೋದಿ ವಿರುದ್ಧ ದೀಪ್ಕೆ ವಾಗ್ದಾಳಿ

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ (LSE) ಉಪನ್ಯಾಸ...

ಈ ದಿನ ಸಂಪಾದಕೀಯ | ಯಶ್ ‘ರಾಮಾಯಣ’ ಮತ್ತು ಬಿಜೆಪಿ ಸಾಂಸ್ಕೃತಿಕ ರಾಜಕಾರಣ

ರಾಮನನ್ನು ಪ್ರೀತಿಸುವವರೆಲ್ಲ ಬಿಜೆಪಿ ಬೆಂಬಲಿಗರಲ್ಲ. ರಾಮಾಯಣವನ್ನು ಗೌರವಿಸುವವರೆಲ್ಲ ಹಿಂದುತ್ವ ರಾಜಕಾರಣವನ್ನು ಒಪ್ಪಿಕೊಳ್ಳಬೇಕೆಂದಿಲ್ಲ....

ರಾಜಕೀಯ ಅಥವಾ ವೈಯಕ್ತಿಕ ಲಾಭಕ್ಕಾಗಿ ಸಂಸ್ಥೆಗಳ ಮೇಲೆ ದಾಳಿ ಸಲ್ಲದು: ಮುಖ್ಯ ನ್ಯಾ. ಸೂರ್ಯಕಾಂತ್

ಸಾಂವಿಧಾನಿಕ ಪ್ರಕ್ರಿಯೆಗಳಿಗೆ ಪ್ರತಿಯೊಬ್ಬರೂ ಗೌರವ ನೀಡಬೇಕು ಮತ್ತು ಯಾವುದೇ ನಿರ್ದಿಷ್ಟ ಸಂದರ್ಭದಲ್ಲಿ...