ಪಾಕ್ ವೆಬ್‌ ಸರಣಿ ವಿವಾದ: ಭಾರತದಲ್ಲಿ ಪಾಕಿಸ್ತಾನಿ ಕಂಟೆಂಟ್ ತಡೆಯಲು ನೆಟ್‌ಫ್ಲಿಕ್ಸ್‌ಗೆ ಕೇಂದ್ರ ಸೂಚನೆ!

Date:

ಪಾಕಿಸ್ತಾನ ಮೂಲದ ‘ಜೋ ಬಚಯ್ ಹೈನ್ ಸಂಗ್ ಸಮೈಟ್ ಲೋ’ ವೆಬ್ ಸರಣಿಯ ಬಿಡುಗಡೆಯ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಭಾರತದಲ್ಲಿ ಪಾಕಿಸ್ತಾನ ಮೂಲದ ಯಾವುದೇ ವಿಷಯವನ್ನು ಸ್ಟ್ರೀಮಿಂಗ್ ಮಾಡದಂತೆ ಖಚಿತಪಡಿಸಿಕೊಳ್ಳಲು ನೆಟ್‌ಫ್ಲಿಕ್ಸ್ ಸಂಸ್ಥೆಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೂಚಿಸಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.

- Advertisement -

ಮಂಗಳವಾರ ಈ ಸರಣಿಯ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಡಿಸೆಂಬರ್ 4 ರಂದು ಬಿಡುಗಡೆಯಾಗಲಿರುವ ಈ ಸರಣಿಯು ಭಾರತದಲ್ಲಿ ಪ್ರಸಾರವಾಗಲಿದೆಯೇ ಅಥವಾ ಕೇವಲ ಪಾಕಿಸ್ತಾನ ಮತ್ತು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಮಾತ್ರ ಸೀಮಿತವಾಗಿರಲಿದೆಯೇ ಎಂಬುದರ ಕುರಿತು ನೆಟ್‌ಫ್ಲಿಕ್ಸ್ ಇನ್ನೂ ಸ್ಪಷ್ಟನೆ ನೀಡಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಸರಣಿಗೆ ‘All the Love Our Hearts Carry’ ಎಂದು ಹೆಸರಿಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯುಪಿ ಚುನಾವಣೆ | ಯುದ್ಧಕ್ಕೆ ಮೊದಲೇ ಉಡುಗಿ ಹೋಯಿತೇ...

ಉತ್ತರ ಪ್ರದೇಶದಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನಾಗಾಲೋಟಕ್ಕೆ ಬ್ರೇಕ್ ಹಾಕಿ ದೇಶದ ರಾಜಕಾರಣದಲ್ಲೇ ಸಂಚಲನ ಮೂಡಿಸಿತ್ತು ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್ ಮೈತ್ರಿ. ಆದರೀಗ, 2027ರ ಉತ್ತರ ಪ್ರದೇಶ ವಿಧಾನಸಭಾ...

ಬಂಡವಾಳಶಾಹಿಯ ನಾಲ್ಕು ಕಟ್ಟುಕಥೆಗಳು ಮತ್ತು ನಮ್ಮ ಬದುಕಿನ ಬೆಲೆ

ನಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ಒಮ್ಮೆ ಗಮನಿಸಿ ನೋಡಿ. ಒಂದು ಕಡೆ, 2025ರ ಒಂದೇ ವರ್ಷದಲ್ಲಿ ಜಗತ್ತಿನ ಅತ್ಯಂತ ಶ್ರೀಮಂತ 500 ವ್ಯಕ್ತಿಗಳ ಸಂಪತ್ತು ಸುಮಾರು 2.2 ಟ್ರಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದೆ. ಇನ್ನೊಂದು ಕಡೆ,...

ಸಂವಿಧಾನಕ್ಕೆ 77 – ಈಡೇರದ ಕನಸು…..

ಸಂವಿಧಾನ ದಿನ ಒಂದು ಬಗೆಯ ಲಯವಿದೆ. ಅಂದು ಮುಂಜಾನೆಯಿಂದ ಇರುಳಿನವರೆಗೂ ಸಂವಿಧಾನದ್ದೇ ಸದ್ದು. ಅದರ ಮಹತ್ವ, ಅಗತ್ಯ, ಅನಿವಾರ್ಯತೆ, ಅನುಕೂಲತೆ ಬಗ್ಗೆ ಸ್ಮರಿಸಿಕೊಂಡು ಸಂಭ್ರಮಿಸುತ್ತೇವೆ. ಪ್ರಧಾನಿಯಿಂದ ಗ್ರಾಮ ಪಂಚಾಯಿತಿ ಸದಸ್ಯರವರೆಗೂ ಪ್ರಶ್ನಿಸಲು ಇರುವ "ಅಧಿಕಾರಭಾಗ್ಯ"...

ಪಾಕಿಸ್ತಾನ ಮೂಲದ ಒಟಿಟಿ ಮತ್ತು ಸ್ಟ್ರೀಮಿಂಗ್ ಸೇವೆಗಳ ವಿಷಯಗಳನ್ನು ಭಾರತದಲ್ಲಿ ಸ್ಥಗಿತಗೊಳಿಸುವಂತೆ ಕೋರಿ ಸಚಿವಾಲಯವು ಮೇ 8, 2025 ರಂದು ಹೊರಡಿಸಿದ್ದ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೆಟ್‌ಫ್ಲಿಕ್ಸ್‌ಗೆ ತಿಳಿಸಲಾಗಿದೆ. ಅಲ್ಲದೆ, ಪಾಕಿಸ್ತಾನ ಮೂಲದ ಯಾವುದೇ ಸಿನಿಮಾ ಅಥವಾ ಸರಣಿಯನ್ನು ಭಾರತೀಯ ಚಂದಾದಾರರಿಗೆ ಲಭ್ಯವಾಗದಂತೆ ನೋಡಿಕೊಂಡಿರುವುದಾಗಿ ಜೂನ್‌ನಲ್ಲಿ ನೆಟ್‌ಫ್ಲಿಕ್ಸ್ ನೀಡಿದ್ದ ಬದ್ಧತೆಯನ್ನು ಸಚಿವಾಲಯ ನೆನಪಿಸಿದ್ದು, ಅದೇ ನಿಲುವನ್ನು ಮುಂದುವರಿಸುವಂತೆ ಸೂಚಿಸಿದೆ.

ಈ ಸರಣಿಯ ಬಿಡುಗಡೆಯನ್ನು ತಡೆಯಲು ಮಧ್ಯಪ್ರವೇಶಿಸುವಂತೆ ಕೋರಿ ಎರಡು ಪ್ರಮುಖ ಸಿನಿಮಾ ಕಾರ್ಮಿಕ ಸಂಘಟನೆಗಳಾದ ‘ಆಲ್ ಇಂಡಿಯನ್ ಸಿನೆ ವರ್ಕರ್ಸ್ ಅಸೋಸಿಯೇಷನ್’ (AICWA) ಮತ್ತು ‘ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್’ (FWICE) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿವೆ.

ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಹಾಗೂ ನೆಟ್‌ಫ್ಲಿಕ್ಸ್ ಇಂಡಿಯಾಗೂ ಪತ್ರದ ಪ್ರತಿಯನ್ನು ಕಳುಹಿಸಿರುವ AICWA, ಈ ಸರಣಿಯ ಬಿಡುಗಡೆಯು ಸಚಿವಾಲಯದ ಸಲಹೆಯ ಆಶಯ ಮತ್ತು ದೇಶದ ಭಾವನೆಗಳಿಗೆ ವಿರುದ್ಧವಾಗಿದೆ ಎಂದು ಹೇಳಿದೆ. ಪುಲ್ವಾಮಾ ದಾಳಿಯ ನಂತರ ಪಾಕಿಸ್ತಾನಿ ಕಲಾವಿದರನ್ನು ಭಾರತೀಯ ಚಿತ್ರರಂಗದಲ್ಲಿ ನಿಷೇಧಿಸಿದ್ದನ್ನು ಹಾಗೂ ಕಳೆದ ವರ್ಷ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಿ ಕಲಾವಿದರು ಮತ್ತು ವಿಷಯಗಳ ಮೇಲೆ ವಿಧಿಸಲಾದ ನಿರ್ಬಂಧಗಳನ್ನು ಸಂಘಟನೆಯ ಅಧ್ಯಕ್ಷ ಸುರೇಶ್ ಶ್ಯಾಮಲಾಲ್ ಗುಪ್ತಾ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

32 ಸಂಘಟನೆಗಳು ಮತ್ತು ಸುಮಾರು ಐದು ಲಕ್ಷ ಸದಸ್ಯರನ್ನು ಪ್ರತಿನಿಧಿಸುವ FWICE, ಪ್ರಸ್ತಾವಿತ ಬಿಡುಗಡೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಪ್ರಧಾನಿಯನ್ನು ಒತ್ತಾಯಿಸಿದೆ. ಒಂದು ವೇಳೆ ಸರಣಿಯು ಭಾರತದಲ್ಲಿ ಬಿಡುಗಡೆಯಾದರೆ, “ನೆಟ್‌ಫ್ಲಿಕ್ಸ್‌ನ ಎಲ್ಲಾ ಪ್ರಾಜೆಕ್ಟ್‌ಗಳ ಚಿತ್ರೀಕರಣವನ್ನು ಸ್ಥಗಿತಗೊಳಿಸುವುದಾಗಿ” ಎಚ್ಚರಿಕೆ ನೀಡಿದೆ. ಈ ಕುರಿತು ಪಿಟಿಐ ಜೊತೆ ಮಾತನಾಡಿದ FWICE ಅಧ್ಯಕ್ಷ ಬಿ. ಎನ್. ತಿವಾರಿ, “ನಮಗೆ ದೇಶ ಮೊದಲು, ಪಾಕಿಸ್ತಾನಿ ಕಲಾವಿದರು ನಮಗೆ ಬೇಡ” ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತದಲ್ಲಿನ ನಿಷೇಧದ ಒತ್ತಾಯಕ್ಕೆ ಪಾಕಿಸ್ತಾನದ ಯೋಜನೆ ಮತ್ತು ಅಭಿವೃದ್ಧಿ ಸಚಿವ ಅಹ್ಸಾನ್ ಇಕ್ಬಾಲ್ ಆಕ್ಷೇಪ ವ್ಯಕ್ತಪಡಿಸಿದ್ದು, ಕಲೆ ಮತ್ತು ಸಂಸ್ಕೃತಿಯನ್ನು ರಾಜಕೀಯಗೊಳಿಸುತ್ತಿದೆ ಎಂದು ಭಾರತವನ್ನು ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಕ್ರೀಡೆ, ನೀರಿನ ಬಳಿಕ ಇದೀಗ ಕಲೆ ಮತ್ತು ಸಂಸ್ಕೃತಿಯನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದಿದ್ದು, ಕ್ರಿಕೆಟ್ ಪಂದ್ಯವನ್ನು ರಾಜಕೀಯ ಬೆದರಿಕೆಯಂತೆಯೂ, ಟಿವಿ ನಾಟಕವನ್ನು ರಾಷ್ಟ್ರೀಯ ಭದ್ರತೆಯ ಆತಂಕವಾಗಿಯೂ ನೋಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಪಾಕಿಸ್ತಾನಿ ಕಾದಂಬರಿಕಾರ ಫರ್ಹತ್ ಇಶ್ತಿಯಾಕ್ ಅವರು 2013 ರಲ್ಲಿ ಬರೆದ ಜನಪ್ರಿಯ ಉರ್ದು ಕಾದಂಬರಿಯನ್ನು ಆಧರಿಸಿ ಈ ಸರಣಿಯನ್ನು ರೂಪಿಸಲಾಗಿದೆ. ಮೊಮಿನಾ ದುರೈದ್ ಇದರ ಸೃಷ್ಟಿಕರ್ತೆ, ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿದ್ದಾರೆ. ಭಾರತೀಯ ಪ್ರೇಕ್ಷಕರಿಗೆ ಪರಿಚಿತರಾಗಿರುವ ಫವಾದ್ ಖಾನ್, ಮಾಹಿರಾ ಖಾನ್ ಮತ್ತು ಸನಮ್ ಸಯೀದ್ ಅವರೊಂದಿಗೆ ಅಹದ್ ರಜಾ ಮಿರ್, ಇಕ್ರಾ ಅಜೀಜ್, ಹಾನಿಯಾ ಆಮಿರ್ ಮತ್ತು ಹಮ್ಜಾ ಅಲಿ ಅಬ್ಬಾಸಿ ಪ್ರಮುಖ ತಾರಾಗಣದಲ್ಲಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ಸಂಘರ್ಷಗಳು ಮತ್ತು ಭಯೋತ್ಪಾದಕ ದಾಳಿಗಳ ಹಿನ್ನೆಲೆಯಲ್ಲಿ, ಪಾಕಿಸ್ತಾನಿ ಕಲಾವಿದರು, ಸಿನಿಮಾಗಳು ಮತ್ತು ಡಿಜಿಟಲ್ ಕಂಟೆಂಟ್ ಕುರಿತಂತೆ ಭಾರತದಲ್ಲಿ ಕಾಲಕಾಲಕ್ಕೆ ಕಠಿಣ ನಿಲುವುಗಳು ವ್ಯಕ್ತವಾಗುತ್ತಿವೆ. ಒಟಿಟಿ ವೇದಿಕೆಗಳ ಮೂಲಕ ಗಡಿಯಾಚೆಗಿನ ವಿಷಯಗಳು ಸುಲಭವಾಗಿ ಪ್ರೇಕ್ಷಕರನ್ನು ತಲುಪುವ ಕಾರಣ, ಕಾನೂನು ಮತ್ತು ನಿಯಂತ್ರಣಾತ್ಮಕ ಚೌಕಟ್ಟಿನ ಕುರಿತು ಹೊಸ ಚರ್ಚೆಗಳು ಹುಟ್ಟಿಕೊಂಡಿವೆ.

 ಮತ್ತೊಂದೆಡೆ, ಕಲೆ ಮತ್ತು ಸಾಹಿತ್ಯವನ್ನು ಗಡಿ ರಾಜಕೀಯದಿಂದ ಪ್ರತ್ಯೇಕವಾಗಿ ಇಡಬೇಕು ಎಂಬ ವಾದವೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೇಳಿಬರುತ್ತಿದೆ. ಡಿಸೆಂಬರ್ 4 ರ ಹತ್ತಿರವಾಗುತ್ತಿದ್ದಂತೆ ನೆಟ್‌ಫ್ಲಿಕ್ಸ್ ಸಂಸ್ಥೆಯ ಮುಂದಿನ ನಡೆಯ ಮೇಲೆ ಎಲ್ಲರ ಗಮನ ನೆಟ್ಟಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಯಶ್ ‘ರಾಮಾಯಣ’ ಮತ್ತು ಬಿಜೆಪಿ ಸಾಂಸ್ಕೃತಿಕ ರಾಜಕಾರಣ

ರಾಮನನ್ನು ಪ್ರೀತಿಸುವವರೆಲ್ಲ ಬಿಜೆಪಿ ಬೆಂಬಲಿಗರಲ್ಲ. ರಾಮಾಯಣವನ್ನು ಗೌರವಿಸುವವರೆಲ್ಲ ಹಿಂದುತ್ವ ರಾಜಕಾರಣವನ್ನು ಒಪ್ಪಿಕೊಳ್ಳಬೇಕೆಂದಿಲ್ಲ....

ರಾಜಕೀಯ ಅಥವಾ ವೈಯಕ್ತಿಕ ಲಾಭಕ್ಕಾಗಿ ಸಂಸ್ಥೆಗಳ ಮೇಲೆ ದಾಳಿ ಸಲ್ಲದು: ಮುಖ್ಯ ನ್ಯಾ. ಸೂರ್ಯಕಾಂತ್

ಸಾಂವಿಧಾನಿಕ ಪ್ರಕ್ರಿಯೆಗಳಿಗೆ ಪ್ರತಿಯೊಬ್ಬರೂ ಗೌರವ ನೀಡಬೇಕು ಮತ್ತು ಯಾವುದೇ ನಿರ್ದಿಷ್ಟ ಸಂದರ್ಭದಲ್ಲಿ...

ನೇಪಾಳ ಭೀಕರ ಪ್ರವಾಹಕ್ಕೆ 3 ತಿಂಗಳು: ನಾಪತ್ತೆಯಾಗಿದ್ದ 213 ಭಾರತೀಯರನ್ನು ಮೃತರೆಂದು ಘೋಷಿಸಲು ಪ್ರಕ್ರಿಯೆ ಆರಂಭ

ಕಳೆದ ಆಗಸ್ಟ್ ತಿಂಗಳಲ್ಲಿ ನೇಪಾಳದ ತ್ರಿಶೂಲಿ-ಭೋಟೆ ಕೋಶಿ ನದಿ ಪ್ರದೇಶದಲ್ಲಿ ಸಂಭವಿಸಿದ...

ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ಬಿ ನಾಗೇಂದ್ರಗೆ ಸಿಐಡಿ ಕ್ಲೀನ್ ಚಿಟ್; ಆರೋಪಿಯಲ್ಲ ಈಗ ಸಾಕ್ಷಿ

ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ...