SIR ಫಾರ್ಮ್-7 ಹಗರಣ | ಬದುಕಿದ್ದವರನ್ನೇ ‘ಸತ್ತಿದ್ದಾರೆ’ ಎಂದು ನಕಲಿ‌ ದಾಖಲೆ‌ ಕೊಟ್ಟ ಯತ್ನಾಳ್; ಸಿಐಡಿ ತನಿಖೆಗೆ ಜಾಗೃತ ಕರ್ನಾಟಕ ಆಗ್ರಹ

Date:

ಬದುಕಿರುವ ನಾಗರಿಕರನ್ನು ‘ಮೃತಪಟ್ಟಿದ್ದಾರೆ’ ಎಂದು ಸುಳ್ಳು ಪತ್ರ ಮತ್ತು ದಾಖಲೆಗಳನ್ನು ನೀಡಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಬಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯತ್ನಿಸಿದ್ದಾರೆ. ಈ ಅಕ್ರಮ ಎಸಗಲು ಚುನಾವಣಾ ಆಯೋಗವು ಬಿಜೆಪಿ-ಯತ್ನಾಳ್‌ ಜೊತೆಗೆ ಶಾಮೀಲಾಗಿ ಸಹಕರಿಸುತ್ತಿದೆ ಎಂದು ಜಾಗೃತ ಕರ್ನಾಟಕದ ಮುಖಂಡ ಡಾ. ಎಚ್.ವಿ ವಾಸು ಆರೋಪಿಸಿದ್ದಾರೆ. ಯತ್ನಾಳ್ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.

- Advertisement -

ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ವಿ. ವಾಸು, ಚುನಾವಣಾ ಆಯೋಗದ ನಿಯಮಾವಳಿಗಳು ಮತ್ತು ಯತ್ನಾಳ್ ಅವರು ನಡೆಸಿರುಗ ಮತ ಹರಣ ಕೃತ್ಯಗಳನ್ನು ವಿವರವಾಗಿ ಪ್ರಸ್ತಾಪಿಸಿದರು. “ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಒಬ್ಬ ಬೂತ್ ಮಟ್ಟದ ಏಜೆಂಟ್ (BLA) ದಿನಕ್ಕೆ ಗರಿಷ್ಠ 10 ಮತ್ತು ಇಡೀ ಪ್ರಕ್ರಿಯೆಯಲ್ಲಿ ಗರಿಷ್ಠ 30 ಅರ್ಜಿಗಳನ್ನು ಮಾತ್ರ ಸಲ್ಲಿಸಲು ಅವಕಾಶವಿದೆ. ಆದರೆ, ಯಾವುದೇ ಶಾಸಕನಿಗೂ ಅಥವಾ ಸಾಮಾನ್ಯ ನಾಗರಿಕನಿಗೂ ಇಲ್ಲದ ಸೂಪರ್ ಪವರ್ ಬಳಸಿ, ಶಾಸಕ ಯತ್ನಾಳ್ ಅವರು ಅಧಿಕೃತ ಫಾರಂ-7 ಅರ್ಜಿಗಳನ್ನೇ ಸಲ್ಲಿಸದೆ ಕೇವಲ ತಮ್ಮ ವೈಯಕ್ತಿಕ ಲೆಟರ್‌ಹೆಡ್‌ನಲ್ಲಿ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಬಿಡುಗಡೆಯಾದ ಕೇವಲ ಒಂದೇ ವಾರದಲ್ಲಿ (ಆಗಸ್ಟ್ 31) ಪತ್ರ ಬರೆದು, ಬಿಜಾಪುರ ನಗರದ 198 ಮತಗಟ್ಟೆಗಳಲ್ಲಿ 1054 ಜನ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಸುಳ್ಳು ಆರೋಪ ಮತ್ತು ಲೆಟರ್‌ಹೆಡ್ ಪತ್ರವನ್ನೇ ಆಧರಿಸಿ ಸ್ಥಳೀಯ ಚುನಾವಣಾ ಅಧಿಕಾರಿಗಳು ಕ್ರಮ ಕೈಗೊಂಡು, ತನಿಖೆ ನಡೆಸಲು ಮುಂದಾಗಿರುವುದು ಕಾನೂನುಬಾಹಿರ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ತನ್ನ ಕಾದಂಬರಿಗಳ ಪಾತ್ರಗಳಂತೆಯೇ ಜೀವಿಸಿದ್ದ ಜನಪ್ರಿಯ ಕಾದಂಬರಿಕಾರ ಜೆಫ್ರಿ...

ಜನಪ್ರಿಯ ಕಾದಂಬರಿಕಾರ ಜೆಫ್ರಿ ಆರ್ಚರ್, ತಮ್ಮ 86ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸೇನೆ, ಪೊಲೀಸ್, ದೈಹಿಕ ಶಿಕ್ಷಣ ಶಿಕ್ಷಕ, ರಾಜಕಾರಣಿ, ಕಾದಂಬರಿಕಾರ... ಅವರ ಬದುಕೇ ಕಾದಂಬರಿಯ ಕಥಾವಸ್ತುವಾಗಿತ್ತು. ತಮ್ಮ ಬದುಕಿನ ಕೊನೆಯ ದಿನವೂ ಅವರು...

ಚುನಾವಣಾ ಆಯೋಗವು ತಾನೇ ಹಾಕಿಕೊಂಡ ಗಂಟುಗಳನ್ನು ಬಿಡಿಸಿಕೊಳ್ಳಬಲ್ಲದೇ? ಇದೇ...

SIR ನಡೆಸುವ ನಿರ್ಧಾರ ಸರ್ವಾನುಮತದಿಂದ ಕೂಡಿತ್ತು ಎಂದು ಜನ ನಂಬಬೇಕಾದರೆ, ಆಯೋಗವು ಸಂಬಂಧಿಸಿದ ಸಭೆಯ ಅಧಿಕೃತ ನಡಾವಳಿಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. ಆ ಮೂಲಕ ಚುನಾವಣಾ ಆಯೋಗವು ತಾನೇ ಸೃಷ್ಟಿಸಿಕೊಂಡಿರುವ ಗೋಜಲುಗಳಿಂದ ಬಿಡಿಸಿಕೊಳ್ಳಬೇಕು. ಭಾರತೀಯ...

ನೊಬೆಲ್‌ ಪ್ರಶಸ್ತಿ ಸರಣಿ | ಕಣ ಭೌತವಿಜ್ಞಾನ-ಖಗೋಳವಿಜ್ಞಾನಗಳೆರಡರ ಸಮ್ಮಿಳನದ...

ಫ್ರಾನ್ಸಿಸ್ ಹಾಲ್ಜೆನ್ ಅವರ ಮೂಲ ಆಲೋಚನೆ ಕೇವಲ ಹಿಮದೊಳಗೆ ಸಂವೇದಕಗಳನ್ನು ಇಡುವ ಯೋಜನೆಯಾಗಿರಲಿಲ್ಲ. ಅದು ವಿಶ್ವವನ್ನು ನೋಡುವ ಹೊಸ ವಿಧಾನಕ್ಕೆ ಬಾಗಿಲು ತೆರೆಯುವ ಆಲೋಚನೆಯಾಗಿತ್ತು. ಅಗೋಚರವಾಗಿರುವ ಕಣಗಳನ್ನು ಹಿಡಿಯುವ ಮೂಲಕ, ವಿಶ್ವದ ಅತ್ಯಂತ...

“ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕರು ಮತದಾರರ ಪಟ್ಟಿಯನ್ನು ‘ಮೆಷಿನ್ ರೀಡಬಲ್ ಫಾರ್ಮ್ಯಾಟ್’ನಲ್ಲಿ ನೀಡುವಂತೆ ಮನವಿ ಮಾಡಿದರೂ ಆಯೋಗ ನೀಡರಿಲಿಲ್ಲ. ಹೀಗಿರುವಾಗ ಕೇವಲ ಒಂದೇ ವಾರದಲ್ಲಿ 1054 ಮೃತರ ಡೆತ್ ಸರ್ಟಿಫಿಕೇಟ್‌ಗಳನ್ನು ಸಂಗ್ರಹಿಸಿ, 297 ಬೂತ್‌ಗಳಲ್ಲಿ ಹುಡುಕಾಟ ನಡೆಸಿ ಈ ಪಟ್ಟಿ ತಯಾರಿಸಲು ಯತ್ನಾಳ್‌ಗೆ ಹೇಗೆ ಸಾಧ್ಯವಾಯಿತು? ಆಯೋಗದ ಒಳಗಿನಿಂದಲೇ ಯತ್ನಾಳ್‌ಗೆ ಗೌಪ್ಯ ಮಾಹಿತಿ ತಲುಪಿದೆ ಎಂಬುದು ಸ್ಪಷ್ಟವಾಗುತ್ತದೆ. ಮುಖ್ಯವಾಗಿ, ಸಾಮಾನ್ಯ ಎಪಿಕ್ ಕಾರ್ಡ್‌ಗಳಲ್ಲಿ ಬ್ಲಾಕ್ ಅಂಡ್ ವೈಟ್ ಫೋಟೋಗಳು ಮಾತ್ರ ಇರುತ್ತವೆ, ಕಲರ್ ಫೋಟೋಗಳು ಕೇವಲ ಚುನಾವಣಾ ಆಯೋಗದ ಕಂಪ್ಯೂಟರ್‌ಗಳಲ್ಲಿ ಮಾತ್ರ ಲಭ್ಯವಿರುತ್ತವೆ. ಆದರೆ, ಶಾಸಕ ಯತ್ನಾಳ್ ಅವರು ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕಲರ್ ಫೋಟೋಗಳನ್ನು ಲಗತ್ತಿಸಲಾಗಿದ್ದು, ಇದನ್ನು ಆಯೋಗವೇ ಅವರಿಗೆ ಅಕ್ರಮವಾಗಿ ನೀಡಿದೆ” ಎಂದು ವಾಸು ಆರೋಪಿಸಿದ್ದಾರೆ.

ಇಷ್ಟೇ ಅಲ್ಲದೆ, “ಯತ್ನಾಳ್ ಅವರು ನೀಡಿದ 1054 ಜನರ ಪೈಕಿ ಕೇವಲ 8 ಜನರಿಗೆ ಸಂಬಂಧಿಸಿದ ಡೆತ್ ಸರ್ಟಿಫಿಕೇಟ್‌ಗಳನ್ನು ಲಗತ್ತಿಸಿದ್ದರು. ಆ ದಾಖಲೆಗಳಲ್ಲಿದ್ದ ಹೆಸರು ಮತ್ತು ಗಂಡ/ತಂದೆಯ ಹೆಸರುಗಳಲ್ಲಿ ಗೊಂದಲವನ್ನು ಸ್ವತಃ ತಾವೇ ಸೃಷ್ಟಿಸಿ, ಬದುಕಿದ್ದ ಮಲಂದಿ ಜಮಾದಾರ್, ಮಹಬೂಬಿ ಶೇಖ್ ಮತ್ತು ರಜಿಯಾ ಶೇಖ್ ಅವರಂತಹ ನಾಗರಿಕರನ್ನು ಸತ್ತಿದ್ದಾರೆ ಎಂದು ಸುಳ್ಳು ಹೇಳಿ, ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಶಾಸಕರು ಲೆಟರ್ ಬರೆದ ತಕ್ಷಣ ಇಆರ್‌ಒ ಮತ್ತು ಡಿಸಿ ಮಟ್ಟದ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಮೆಷಿನರಿಯನ್ನು ತನಿಖೆಗೆ ಇಳಿಸಿರುವುದು ಅಕ್ರಮಕ್ಕೆ ಸಾಕ್ಷಿಯಾಗಿದೆ” ಎಂದು ಅವರು ವಿವರಿಸಿದ್ದಾರೆ.

“ಬಲ್ಕ್ ಆಗಿ (ಗುಂಪಾಗಿ) ಅರ್ಜಿ ಬಂದಾಗ ಮೊದಲು ದೂರು ನೀಡಿದವರನ್ನು ವಿಚಾರಣೆ ಮಾಡಬೇಕು ಎಂಬ ಸುಪ್ರಿಂ ಕೋರ್ಟ್ ನಿಯಮವನ್ನು ಆಯೋಗ ಗಾಳಿಗೆ ತೂರಿದೆ. ಈ ಬಗ್ಗೆ ಸಿಇಒ ಅನ್ಬುಕುಮಾರ್ ಅವರನ್ನು ಪ್ರಶ್ನಿಸಿದರೆ, :ಯಾರ ಹೆಸರೂ ಡಿಲೀಟ್ ಆಗಿಲ್ಲವಲ್ಲ’ ಎಂಬ ಉಡಾಫೆಯ ಉತ್ತರ ನೀಡುತ್ತಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಯನ್ನೇ ದುರ್ಬಳಕೆ ಮಾಡಿಕೊಂಡು, ಅರ್ಹರನ್ನೂ-ಬದುಕಿರುವವರನ್ನೂ ಮತಪಟ್ಟಿಯಿಂದ ಹೊರಹಾಕಲು ಹೊರಟಿರುವ ಯತ್ನಾಳ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು” ಎಂದು ವಾಸು ಆಗ್ರಹಿಸಿದ್ದಾರೆ.

WhatsApp Image 2026 10 07 at 1.58.09 PM 1

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪತ್ರಕರ್ತ ಇರ್ಫಾನ್ ಶೇಖ್, “ಬಿಜಾಪುರ ನಗರ ಕ್ಷೇತ್ರದಲ್ಲಿ ಶಾಸಕ ಯತ್ನಾಳ್ ಅವರೇ ತಮಗೆ ಅನುಕೂಲ ಆಗಿವಂತೆ ನೂರಾರು ಹಳ್ಳಿಗಳಿಂದ ಸುಮಾರು 60,000 ದಿಂದ 80,000 ಬೋಗಸ್ ಅಥವಾ ಡುಪ್ಲಿಕೇಟ್ ಮತಗಳನ್ನು ತಂದು ಸೇರಿಸಿದ್ದರು. ಆದರೆ ಈ ಬಾರಿಯ ಎಸ್ಐಆರ್ ಪ್ರಕ್ರಿಯೆಯಲ್ಲಿ ಜಾಗರೂಕರಾದ ಬಿಎಲ್ಎಗಳು ಪರಿಶೀಲನೆ ನಡೆಸಿ ಅಂತಹ ಬೋಗಸ್ ಮತಗಳನ್ನು ಹೊರಹಾಕಿಸಿದರು. ಇದರಿಂದ ಮುಂಬರುವ ಚುನಾವಣೆಯಲ್ಲಿ ಸೋಲುವ ಭಯ ಯತ್ನಾಳ್‌ಗೆ ಆವರಿಸಿದೆ. ಆದ್ದರಿಂದ, ಬದುಕಿರುವ ನೈಜ ಮತದಾರರನ್ನೇ ಸಾವನ್ನಪ್ಪಿದ್ದಾರೆಂದು ಯತ್ನಾಳ್ ಸುಳ್ಳು ಹೇಳಲು ಪ್ರಾರಂಭಿಸಿದ್ದಾರೆ. ಅದರ ಭಾಗವಾಗಿಯೇ ಒಮ್ಮೆ 5000, ಇನ್ನೊಮ್ಮೆ 8000 ರಂತೆ ಒಟ್ಟು 13,000 ಮುದ್ರಿತ ಫಾರಂ-7 ಅರ್ಜಿಗಳನ್ನು ಪಾಲಿಕೆ ಆಯುಕ್ತರಿಗೆ ಸಲ್ಲಿಸಲಾಗಿತ್ತು. ಆದರೆ, ಆಯೋಗವು ಸ್ವಯಂ ಘೋಷಣಾ ಪತ್ರದ ಕುರಿತು ಹಿಂಬರಹ ಕೇಳಿದ ತಕ್ಷಣ, ಆಯೋಜಿತ ಹುನ್ನಾರ ಬಯಲಾಗುವ ಹೆದರಿಕೆಯಿಂದ ಬಿಜೆಪಿಗರು ಆ 13,000 ಅರ್ಜಿಗಳನ್ನು ಅದೇ ದಿನ ಸಾಯಂಕಾಲ ವಾಪಸ್ ತೆಗೆದುಕೊಂಡು ಓಡಿಹೋದರು” ಎಂದು ವಿವರಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ ಪುನಃ ಭುಗಿಲೆಬ್ಬಿಸಿದ ವಿವಾದ

“ಯತ್ನಾಳ್ ಅವರು ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳ ಮುಂದೆ ಸವಾಲು ಹಾಕಿದ್ದ 1054 ಜನರ ಪಟ್ಟಿಯನ್ನು ಹಿಡಿದು ಸ್ಥಳೀಯ ಬಿಎಲ್ಎಗಳು ಮನೆ ಮನೆಗೆ ಹೋಗಿ ಪರಿಶೀಲಿಸಿದಾಗ,‌ ಪಟ್ಟಿಯಲ್ಲಿದ್ದ 1054 ಜನರೂ ಜೀವಂತವಾಗಿರುವುದು ಕಂಡುಬಂತು. ಶಾಸಕರು ಡೆತ್ ಸರ್ಟಿಫಿಕೇಟ್ ಲಗತ್ತಿಸಿದ್ದ 8 ಜನವೂ ಸಹ ಜೀವಂತವಾಗಿದ್ದರು. ‘ಸತ್ತವರು ಎಸ್‌ಐಆರ್‌ನಲ್ಲಿ‌ ದಾಖಲಾಗಲು, ಅವರಿಗೆ ಸಂಜೀವಿನಿ ಸಿಕ್ಕಿದೆಯೇ’ ಎಂದು ಯತ್ನಾಳ್ ಪ್ರಶ್ನಿಸಿದ್ದರು.‌ ಆದಿಲ್ ಶಾಹಿ ಕಾಲದ ಹಳೆಯ ವೋಟರ್ ಲಿಸ್ಟ್ ಇಟ್ಟುಕೊಂಡು ಪತ್ರಿಕಾಗೋಷ್ಠಿ ಮಾಡುವ ಶಾಸಕರ ಹಿಟ್ ಅಂಡ್ ರನ್ ತಂತ್ರಕ್ಕೆ ಅಧಿಕಾರಿಗಳು ಕೂಡ ಸಾಥ್ ನೀಡುತ್ತಿದ್ದಾರೆ. ಈ ಬೋಗಸ್ ಯತ್ನದ ವಿರುದ್ಧ ಕಾಂಗ್ರೆಸ್ ಸರ್ಕಾರ ಮತ್ತು ಚುನಾವಣಾ ಆಯೋಗ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

“ಯತ್ನಾಳ್‌ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಸಿಐಡಿ ತನಿಖೆ‌ನಡೆಸಬೇಕು. ಸಂತ್ರಸ್ತರಿಗೆ‌ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಬೃಹತ್‌ ಹೋರಾಟ ನಡೆಯಲಿದೆ” ಎಂದು ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ‌ ಹಾಜರಿದ್ದ, ಮೃತಪಟ್ಟಿದ್ದಾರೆಂದು ಯತ್ನಾಳ್‌ ಬಿಂಬಿಸಿದ್ದ ಸಂತ್ರಸ್ತ ಮಹಿಳೆಯರಾದ ಮಹಬೂಬಿ ಶೇಖ್, ಮಲಂದಿ ಜಮಾದಾರ್ ಹಾಗೂ ರಜಿಯಾ ಶೇಖ್ ಅವರು, ತಾವು ಜೀವಂತವಾಗಿದ್ದರೂ ಸತ್ತಿದ್ದಾರೆ ಎಂದು ಸುಳ್ಳು ಹಬ್ಬಿಸಿ ತಮ್ಮ ಮತದಾನದ ಹಕ್ಕನ್ನು ಕಸಿಯಲು ಯತ್ನಿಸಲಾಗಿದೆ. ನಾನು ಮುಸ್ಲಿಮರಾಗಿರುವ ಕಾರಣ, ನಾವು ಬದುಕಿದ್ದರೂ ಸತ್ತಿದ್ದೇವೆಂದು ಬಿಂಬಿಸಿ ನಮ್ಮ‌ ಮತದ ಹಕ್ಕು ಕಸಿದುಕೊಳ್ಳುವ ಯತ್ನ ನಡೆದಿದೆ. ನಮಗೆ ನ್ಯಾಯಬೇಕು ಎಂದು ಆಗ್ರಹಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಚಾಲಕನ ಬ್ಯಾಂಕ್‌ ಖಾತೆಗೆ ಸೈಬರ್ ಕನ್ನ; ರೂ. 4 ಲಕ್ಷ ವಂಚನೆ!

ಶಿವಮೊಗ್ಗದಲ್ಲಿ ಡ್ರೈವರ್​ ಒಬ್ಬರ ವೈಯಕ್ತಿಕ ಮಾಹಿತಿ ಪಡೆದು ಸೈಬರ್​ ವಂಚಕರು ಲಕ್ಷಾಂತರ...

ಉಡುಪಿ | ಅ.11 ರಂದು ‘ಮಹಿಷ ಮಹೋತ್ಸವ’ ಮೂಲ ನಿವಾಸಿಗಳ ಸಾಂಸ್ಕೃತಿಕ ಹಬ್ಬ : ಗಣೇಶ್ ನೆರ್ಗಿ

ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಹಾಗೂ ವಿವಿಧ ಸಹಭಾಗಿ ಸಂಘಟನೆಗಳ ಸಹಯೋಗದಲ್ಲಿ...

ಆಕಾಶವಾಣಿ ಭವನಕ್ಕೆ ಬಲವಂತದ ಪ್ರವೇಶ ಆರೋಪ: ರಾಹುಲ್, ಪ್ರಿಯಾಂಕಾ ವಿರುದ್ಧ FIR

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧದ ಪ್ರತಿಪಕ್ಷಗಳ ಪ್ರತಿಭಟನೆ ವೇಳೆ...

ವಿಜಯಪುರ | ‘ಜಲಜೀವನ್ ಮಿಷನ್’ ಕಾಮಗಾರಿ ಪೂರ್ಣಗೊಳಿಸಲು ಡಿಸೆಂಬರ್‌ ಗಡುವು

ಗ್ರಾಮೀಣ ಭಾಗದಲ್ಲಿ ಬೇಸಿಗೆ ಸೇರಿದಂತೆ ಯಾವುದೇ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ...