ಪಾನ್-ಜಂಕ್ ಫುಡ್ ನಿಷೇಧ; ಜನಾರೋಗ್ಯಕ್ಕೆ ಶೂನ್ಯ ರಾಜಿ ಸೂತ್ರ: ಸರ್ಕಾರದ ದಿಟ್ಟ ಹೆಜ್ಜೆ

Date:

ಸಾಮಾನ್ಯವಾಗಿ ಸಣ್ಣಪುಟ್ಟ ಹೋಟೆಲ್‌ಗಳು ಅಥವಾ ಅಂಗಡಿಗಳ ಮೇಲೆ ಮಾತ್ರ ಆಹಾರ ಭದ್ರತಾ ಇಲಾಖೆ ದಾಳಿ ನಡೆಸುತ್ತದೆ ಎಂಬ ಸಾರ್ವಜನಿಕ ಆಕ್ಷೇಪವಿತ್ತು. ಆದರೆ ಆಹಾರ ಭದ್ರತೆ ಮತ್ತು ಔಷಧ ನಿಯಂತ್ರಣ ಇಲಾಖೆ (FDA) ಈ ಬಾರಿ ಸರ್ಕಾರದ ಕಾರ್ಯಾಂಗದ ಕೇಂದ್ರಭಾಗದಲ್ಲೇ ತನ್ನ ಕಠಿಣ ನಿರ್ಧಾರವನ್ನು ಪ್ರದರ್ಶಿಸಿದೆ.

ಜನಸಾಮಾನ್ಯರ ಆರೋಗ್ಯ ರಕ್ಷಣೆ, ಆಹಾರ ಭದ್ರತೆ ಮತ್ತು ಯುವ ಪೀಳಿಗೆಯ ಭವಿಷ್ಯವನ್ನು ನೈರ್ಮಲ್ಯಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಅತ್ಯಂತ ದಿಟ್ಟ ಹಾಗೂ ಐತಿಹಾಸಿಕ ಕ್ರಮಗಳನ್ನು ಕೈಗೊಂಡಿದೆ. ಅಧಿಕಾರದ ಪರಮೋಚ್ಛ ಕೇಂದ್ರಗಳಾದ ವಿಕಾಸ ಸೌಧ, ಎಚ್‌ಎಎಲ್‌ ಮತ್ತು ಬಹುಮಹಡಿ (ಎಂ.ಎಸ್) ಕಟ್ಟಡಗಳ ಶಾಸಕರ ಹಾಗೂ ನೌಕರರ ಕ್ಯಾಂಟಿನ್‌ಗಳ ಮೇಲಿನ ದಿಢೀರ್ ದಾಳಿ ಮತ್ತು ಕಳಪೆ ಕ್ಯಾಂಟಿನ್‌ಗಳಿಗೆ ಬೀಗ ಜಡಿಯುವ ತೀರ್ಮಾನವು, ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಸಾಬೀತುಪಡಿಸಿದೆ. ಇದರೊಂದಿಗೆ ಶಾಲಾ-ಕಾಲೇಜುಗಳ ಸುತ್ತಮುತ್ತ ಜಂಕ್ ಫುಡ್ ನಿಷೇಧ ಮತ್ತು ಅಪಾಯಕಾರಿ ತಂಬಾಕು/ಪಾನ್ ಉತ್ಪನ್ನಗಳ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಸರ್ಕಾರ ಜನಾರೋಗ್ಯ ರಕ್ಷಣೆಗೆ ಹೊಸ ಭಾದ್ಯತೆಯನ್ನು ಮೆರೆದಿದೆ. ಅಷ್ಟಕ್ಕೂ ಪಾನ್‌ ನಿಷೇಧ ಅಷ್ಟು ಸುಲಭವೇನಲ್ಲ. ಇಡೀ ದೇಶದಲ್ಲಿ ಅದರ ವಿರುದ್ಧ ಲಾಭಿ ಇದೆ. ಆದರೂ ಆರೋಗ್ಯ ಸಚಿವ ಯು ಟಿ ಖಾದರ್‌ ಇಂತಹ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಮಾಡಿರುವುದು ಅಭಿನಂದನಾರ್ಹ.

- Advertisement -

ಸಾಮಾನ್ಯವಾಗಿ ಸಣ್ಣಪುಟ್ಟ ಹೋಟೆಲ್‌ಗಳು ಅಥವಾ ಅಂಗಡಿಗಳ ಮೇಲೆ ಮಾತ್ರ ಆಹಾರ ಭದ್ರತಾ ಇಲಾಖೆ ದಾಳಿ ನಡೆಸುತ್ತದೆ ಎಂಬ ಸಾರ್ವಜನಿಕ ಆಕ್ಷೇಪವಿತ್ತು. ಆದರೆ ಆಹಾರ ಭದ್ರತೆ ಮತ್ತು ಔಷಧ ನಿಯಂತ್ರಣ ಇಲಾಖೆ (FDA) ಈ ಬಾರಿ ಸರ್ಕಾರದ ಕಾರ್ಯಾಂಗದ ಕೇಂದ್ರಭಾಗದಲ್ಲೇ ತನ್ನ ಕಠಿಣ ನಿರ್ಧಾರವನ್ನು ಪ್ರದರ್ಶಿಸಿದೆ. ವಿಕಾಸ ಸೌಧ, ಎಚ್‌ಎಎಲ್‌ ಹಾಗೂ ಬಹುಮಹಡಿ (MS) ಕಟ್ಟಡಗಳ ಕ್ಯಾಂಟಿನ್‌ಗಳಲ್ಲಿ ದಾಳಿ ನಡೆಸಿ, ನೈರ್ಮಲ್ಯ ಲೋಪ ಮತ್ತು ಕಾಲಾವಧಿ ಮುಗಿದ ಸಾಮಗ್ರಿಗಳ ಬಳಕೆಯನ್ನು ಪತ್ತೆಹಚ್ಚಿ ಕ್ಯಾಂಟಿನ್‌ಗಳನ್ನು ತಕ್ಷಣವೇ ಬಂದ್ ಮಾಡಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಇದನ್ನೂ ಓದಿ: ಕರ್ನಾಟಕದಲ್ಲಿ ಗುಟ್ಕಾ, ತಂಬಾಕು, ಪಾನ್‌ ಮಸಾಲಾ ಮಾರಾಟಕ್ಕೆ ಒಂದು ವರ್ಷ ನಿಷೇಧ

ಸರ್ಕಾರಿ ನೌಕರರು, ಜನಪ್ರತಿನಿಧಿಗಳು ಹಾಗೂ ದಿನನಿತ್ಯ ಸಾವಿರಾರು ಸಾರ್ವಜನಿಕರು ಭೇಟಿ ನೀಡುವ ಸ್ಥಳಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವುದು ಆದ್ಯ ಕರ್ತವ್ಯ ಎಂಬುದನ್ನು ಈ ಕಠಿಣ ಕ್ರಮ ಸಾರಿದೆ. ಇದು ಕೇವಲ ಒಂದು ಶಿಕ್ಷೆಯಾಗದೆ, ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕ್ಯಾಂಟಿನ್‌ಗಳಿಗೆ ಆಹಾರ ಭದ್ರತೆಯ ವಿಚಾರದಲ್ಲಿ ಎಚ್ಚರಿಕೆಯ ಸಂದೇಶ ನೀಡಿದೆ.

ಮಕ್ಕಳ ದೈಹಿಕ ಪ್ರಗತಿಗೆ ‘ಜಂಕ್ ಫುಡ್’ ಮುಕ್ತಿ

ಶಾಲಾ-ಕಾಲೇಜುಗಳ ಕಾಂಪೌಂಡ್‌ನಿಂದ 50 ಮೀಟರ್ ವ್ಯಾಪ್ತಿಯಲ್ಲಿ ಅಧಿಕ ಕೊಬ್ಬು, ಸಕ್ಕರೆ ಹಾಗೂ ಉಪ್ಪಿನಾಂಶವಿರುವ (HFSS) ಜಂಕ್ ಫುಡ್‌ಗಳ ಮಾರಾಟವನ್ನು ಇಲಾಖೆ ಸಂಪೂರ್ಣವಾಗಿ ನಿಷೇಧಿಸಿದೆ. ಶಾಲಾ ಮಕ್ಕಳಲ್ಲಿ ಬೊಜ್ಜು (Obesity), ಡಯಾಬಿಟಿಸ್ ಮತ್ತು ಏಕಾಗ್ರತೆಯ ಕೊರತೆಗೆ ಕಾರಣವಾಗುತ್ತಿದ್ದ ಕರಿದ ಹಾಗೂ ಸಂಸ್ಕರಿಸಿದ ಜಂಕ್ ಫುಡ್‌ಗಳಿಂದ ಮಕ್ಕಳನ್ನು ದೂರವಿಡಲು ಈ ನಿರ್ಧಾರ ಅತ್ಯಂತ ಮಹತ್ವದ್ದಾಗಿದೆ. ಬರ್ಗರ್, ಪಿಜ್ಜಾಗಳ ಬದಲಾಗಿ ಸಾಂಪ್ರದಾಯಿಕ ಹಾಗೂ ಪೌಷ್ಟಿಕ ಆಹಾರ ಸೇವನೆಯನ್ನು ಪ್ರೋತ್ಸಾಹಿಸಲು ಶಾಲಾ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಲಾಗಿದೆ.

ತಂಬಾಕು ಮತ್ತು ಪಾನ್ ವಿರುದ್ಧ ಕಠಿಣ ಹೋರಾಟ

ಇನ್ನೊಂದೆಡೆ ರಾಜ್ಯದಲ್ಲಿ ಗುಟ್ಕಾ, ನಿಕೋಟಿನ್ ಹಾಗೂ ಅಪಾಯಕಾರಿ ಪಾನ್ ಮಸಾಲಾ ಉತ್ಪಾದನೆ, ಸಂಗ್ರಹಣೆ ಹಾಗೂ ಮಾರಾಟದ ಮೇಲೆ ನಿರಂತರ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ. ಇದು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದಷ್ಟೇ ಅಲ್ಲದೆ, ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಂದ ಯುವಜನತೆಯನ್ನು ರಕ್ಷಿಸುವಲ್ಲಿ ಅತ್ಯಂತ ಸಕಾರಾತ್ಮಕ ಹೆಜ್ಜೆಯಾಗಿದೆ.

ಆರೋಗ್ಯಕರ ಸಮಾಜದ ನಿರ್ಮಾಣ ಕೇವಲ ಸರ್ಕಾರದ ಆದೇಶಗಳಿಂದಷ್ಟೇ ಸಾಧ್ಯವಿಲ್ಲ. ಅದಕ್ಕೆ ಸಾರ್ವಜನಿಕರ ಸಕ್ರಿಯ ಸಹಕಾರವೂ ಅತ್ಯಗತ್ಯ. ಜಂಕ್ ಫುಡ್ ಹಾಗೂ ತಂಬಾಕು ಉತ್ಪನ್ನಗಳ ವಿರುದ್ಧ ಸರ್ಕಾರ ಹೂಡಿರುವ ಈ ಸಮರಕ್ಕೆ ಪೋಷಕರು, ಶಿಕ್ಷಕರು ಮತ್ತು ಕಚೇರಿ ಸಿಬ್ಬಂದಿ ಕೈಜೋಡಿಸಬೇಕಿದೆ. ಸಾರ್ವಜನಿಕರ ಶಾರೀರಿಕ ಕ್ಷೇಮಕ್ಕಾಗಿ ರಾಜ್ಯ ಸರ್ಕಾರವು ತೆಗೆದುಕೊಂಡಿರುವ ಈ ಶೂನ್ಯ ಸಹನೆಯ ಕ್ರಮವು ಅಭಿನಂದನಾರ್ಹವಾಗಿದ್ದು, ಸ್ವಚ್ಛ ಹಾಗೂ ಆರೋಗ್ಯಕರ ಕರ್ನಾಟಕದ ಕನಸನ್ನು ನನಸು ಮಾಡಲು ದಾರಿ ಮಾಡಿಕೊಟ್ಟಿದೆ. ಸದ್ಯ ಅಡಿಕೆ ಬೆಳಗಾರರಿಗೆ ಸಮಸ್ಯೆ ಆಗುತ್ತದೆ ಎಂಬ ಬಗ್ಗೆ ಆಕ್ಷೇಪವಿದೆ. ಆದರೆ ಯಾವುದೇ ಒತ್ತಡಕ್ಕೂ ನಾವು ಮಣಿಯುವುದಿಲ್ಲ ಎಂದು ಆರೋಗ್ಯ ಸಚಿವ ಯು ಟಿ ಖಾದರ್ ಸ್ಪಷ್ಟಪಡಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಸವಕಲ್ಯಾಣ | ಅಲ್ಲಮ ಜಗತ್ತಿನ ಶ್ರೇಷ್ಠ ಅನುಭಾವಿ

ಅಲ್ಲಮಪ್ರಭು ಅವರು ಜಗತ್ತಿನ ಶ್ರೇಷ್ಠ ಅನುಭಾವಿಗಳಾಗಿದ್ದು, ಅವರ ಚಿಂತನೆ ಹಾಗೂ ವಚನಗಳ...

ರಾಯಚೂರು | ಕಾಲೇಜಿನಲ್ಲಿ ಶೌಚಾಲಯವಿದೆ, ನೀರಿಲ್ಲ: 400 ಮಂದಿ ವಿದ್ಯಾರ್ಥಿನಿಯರ ಪರದಾಟ

ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದಷ್ಟೇ ಸಾಲದು; ಅವರು ಸುರಕ್ಷಿತ, ಗೌರವಯುತ ಹಾಗೂ ಸ್ವಚ್ಛ...

ಮಹಿಳೆಯರಿಲ್ಲದ ಸಂಪುಟ; ಮಾತು ತಪ್ಪಿತೇ ಕಾಂಗ್ರೆಸ್?

ರಾಜ್ಯದ ಮಹಿಳೆಯರು ಜನಸಂಖ್ಯೆಯಲ್ಲಿ ಸರಿಸುಮಾರು ಅರ್ಧದಷ್ಟಿದ್ದರೂ, ಅಧಿಕಾರದ ವಿಚಾರ ಬಂದಾಗ ಅವರು...

ಬೀದರ್‌ | ಜನವರಿಯಲ್ಲಿ ಅಗ್ನಿವೀರ ಸೇನಾ ಭರ್ತಿ ರ‍್ಯಾಲಿ

ಬೀದರ್‌ ನಗರದಲ್ಲಿ 2027ರ ಜನವರಿ ತಿಂಗಳಲ್ಲಿ 15 ದಿನಗಳ ಕಾಲ ಅಗ್ನಿವೀರ...