80ನೇ ಸ್ವಾತಂತ್ರ್ಯೋತ್ಸವದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸ್ಮರಣೆ

Date:

ಸಂಗೊಳ್ಳಿ ರಾಯಣ್ಣ ತನ್ನ ರಾಜ್ಯದ ಸ್ವಾಂತಂತ್ರ್ಯಕ್ಕಾಗಿ ತನ್ನ ಕುಟುಂಬ, ಜೀವನ ಎಲ್ಲವನ್ನೂ ತ್ಯಾಗ ಮಾಡಿದರು. ಅಂತೆಯೇ ನಮ್ಮ ದೇಶದ ಗಡಿಯಲ್ಲಿ ಯೋಧರು, ಶಾಲೆಯಲ್ಲಿ ಶಿಕ್ಷಕರು ಅದೇ ತ್ಯಾಗ ಮಾಡುತ್ತಿದ್ದಾರೆ. ಆರಡಿ ಕಾಯದ ಕುದುರೆಯ ಮೇಲೆ ಕತ್ತಿ ಹಿಡಿದು ಕನ್ನಡ ಬಾವುಟ ಹಾರಿಸುವ ಸಂಗೊಳ್ಳಿ ರಾಯಣ್ಣ ಇಂದು ಯುವಕರ ಪ್ರೇರಣೆ. ʼಕ್ರಾಂತಿವೀರʼ ಎಂಬ ಬಿರುದು ಅವರಿಗೆ ಸಾರ್ಥಕವಾಗಿದೆ.

ಭಾರತವು ಆಗಸ್ಟ್ 15ರ ತನ್ನ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವ ಈ ಶುಭ ದಿನದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ಹೋರಾಟಗಾರರನ್ನು ನೆನೆಯುವುದೂ ಕೂಡ ನಮ್ಮ ಕರ್ತವ್ಯ. ಈ ದಿನವೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತಿಯೂ ಆಗಿರುವುದು ವಿಶೇಷವಾಗಿದೆ. ತ್ರಿವರ್ಣ ಧ್ವಜದ ಅಡಿಯಲ್ಲಿ ನಾವು ಸ್ವಾತಂತ್ರ್ಯವನ್ನು ಆಚರಿಸುತ್ತಿರುವಾಗ, ಕೆಂಪು-ಹಳದಿ ಕನ್ನಡ ಬಾವುಟ ಹಿಡಿದು ಬ್ರಿಟಿಷರ ವಿರುದ್ಧ ಸಿಡಿದೇಳಲು ಕರೆನೀಡಿದ ರಾಯಣ್ಣನ ತ್ಯಾಗ ಅವಸ್ಮರಣೀಯ.

- Advertisement -

ನಮ್ಮ ದೇಶದ 80ನೇ ಸ್ವಾತಂತ್ರ್ಯ ದಿನ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

1947ರ ಆಗಸ್ಟ್ 15ರಂದು ನಾವು ಬ್ರಿಟಿಷರ ದಾಸ್ಯದಿಂದ ಮುಕ್ತರಾದೆವು. 2026ಕ್ಕೆ ಕಾಲಿಟ್ಟಿರುವ ಭಾರತ ಇಂದು ವಿಶ್ವದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಐದನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದೆ ಎಂದು ಕೆಂಪು ಕೋಟೆಯಿಂದ ಪ್ರಧಾನಮಂತ್ರಿಯವರು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. ಆಕಾಶದಲ್ಲಿ ಯುದ್ಧ ವಿಮಾನಗಳ ಪ್ರದರ್ಶನ, ಬೀದಿಗಳಲ್ಲಿ ತ್ರಿವರ್ಣ ಧ್ವಜ, ಮಕ್ಕಳ ಕೈಯಲ್ಲಿ ʼಜೈ ಹಿಂದ್, ವಂದೇ ಮಾತರಂʼ ಘೋಷಣೆಗಳು ಮೊಳಗುತ್ತವೆ.

ಆದರೆ, ಈ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿಲ್ಲ. ಲಕ್ಷಾಂತರ ಹುತಾತ್ಮರ ರಕ್ತದಿಂದ ತೋಯ್ದಿದೆ. ದೆಹಲಿಯ ಇಂಡಿಯಾ ಗೇಟ್‌ನಿಂದ ಹಿಡಿದು ಕರ್ನಾಟಕದ ಕಿತ್ತೂರು ಕೋಟೆಯವರೆಗೆ ಪ್ರತಿ ಮಣ್ಣಿನ ಕಣದಲ್ಲೂ ಹೋರಾಟದ ಕಥೆ ಇದೆ. ಈ 80 ವರ್ಷಗಳಲ್ಲಿ ನಾವು ಬಡತನದಿಂದ ಬಾಹ್ಯಾಕಾಶಕ್ಕೆ, ಅನಕ್ಷರತೆಯಿಂದ ಡಿಜಿಟಲ್ ಇಂಡಿಯಾಕ್ಕೆ ನಡೆದಿದ್ದೇವೆ. ಆದರೂ ʼಸರ್ವರಿಗೂ ಶಿಕ್ಷಣ, ಸರ್ವರಿಗೂ ಸಮಾನತೆʼ ಎಂಬ ಕನಸು ಸಂಪೂರ್ಣವಾಗಿಲ್ಲ.

ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲೇ ಮರೆಯಲಾಗದ ಹೆಸರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ಇವರು ಆಗಸ್ಟ್ 15ರಂದೇ ಜನಿಸಿದ ಮಹಾನ್ ಹುತಾತ್ಮ. 1798ರಂದು ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯಲ್ಲಿ ಜನಿಸಿದ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮನ ಸೇನಾಪತಿ. 1824ರಲ್ಲಿ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಮೊದಲ ಹೋರಾಟ ಮಾಡಿದಾಗ ರಾಯಣ್ಣ ಅವರ ಬಲಗೈಯಾಗಿದ್ದರು. ರಾಣಿಯ ಮರಣದ ನಂತರವೂ ಅವರು ಹೋರಾಟ ನಿಲ್ಲಿಸಲಿಲ್ಲ.

ಬ್ರಿಟಿಷರು ಕಿತ್ತೂರು ಸಂಸ್ಥಾನವನ್ನು ಕಿತ್ತುಕೊಂಡಾಗ, ರಾಯಣ್ಣ ಗೆರಿಲ್ಲಾ ಯುದ್ಧ ತಂತ್ರದಿಂದ ಏಳು ವರ್ಷಗಳ ಕಾಲ ಅವರ ಮೂಗಿನ ನೇರವಾಗಿ ಹೋರಾಡಿದರು. ಕಾಡು-ಮೇಡು ಸುತ್ತಿ, ಜನರನ್ನು ಸಂಘಟಿಸಿ ʼನಮ್ಮ ನೆಲ, ನಮ್ಮ ರಾಜ್ಯʼ ಎಂದು ಘೋಷಿಸಿದರು. 1830ರ ಜನವರಿ 26ರಂದು ನಂದಗಡದಲ್ಲಿ ತಮ್ಮವರ ಕುತಂತ್ರದಿಂದ ಬ್ರಿಟಿಷರಿಗೆ ಸಿಕ್ಕಿಬಿದ್ದರು.

ಬ್ರಿಟಿಷ್ ನ್ಯಾಯಾಧೀಶರ ಮುಂದೆ ವಿಚಾರಣೆ ನಡೆದಾಗ, ʼನಾನು ಅಪರಾಧಿ ಅಲ್ಲ; ನನ್ನ ದೇಶಕ್ಕಾಗಿ ಹೋರಾಡಿದೆʼ ಎಂದು ಸಿಂಹದಂತೆ ಘರ್ಜಿಸಿದರು. 1831ರ ಜನವರಿ 26ರಂದು ನಂದಗಡ ಕೋಟೆಯ ಎದುರು ಅವರನ್ನು ಗಲ್ಲಿಗೇರಿಸಲಾಯಿತು. ಸಾಯುವ ಮುನ್ನ ʼನನ್ನ ದೇಹ ಬಿದ್ದರೂ ನನ್ನ ಕಲ್ಪನೆ ಬೀಳುವುದಿಲ್ಲʼ ಎಂದಿದ್ದರು.

ಇಂದು ನಾವು 80ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿದ್ದೇವೆ. ಆದರೆ ರಾಯಣ್ಣ ತೋರಿಸಿದ ದಾರಿ ಇಂದಿಗೂ ಪ್ರಸ್ತುತ. ನಾವು ಭಾರತೀಯರು ಎಂಬ ಸ್ವಾಭಿಮಾನ ಬ್ರಿಟಿಷರು ಕೊಟ್ಟ ಅಧಿಕಾರವನ್ನು ತಿರಸ್ಕರಿಸಿ ಸ್ವಂತ ಗೌರವಕ್ಕಾಗಿ ಹೋರಾಡಿದರು. ಇಂದು ನಾವು ಮೇಡ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತ ಎಂದು ಹೇಳಲು ಅದೇ ಸ್ವಾಭಿಮಾನ ಕಾರಣ. ರಾಯಣ್ಣ ಸಾಮಾನ್ಯ ರೈತ, ಕೂಲಿ ಕಾರ್ಮಿಕರನ್ನು ಸಂಘಟಿಸಿದರು. ಇಂದಿನ ಜನ ಭಾಗಿದಾರಿ ಯೋಜನೆಗಳಿಗೂ ಅದೇ ಮೂಲ.

ಸಂಗೊಳ್ಳಿ ರಾಯಣ್ಣ ತನ್ನ ರಾಜ್ಯದ ಸ್ವಾಂತಂತ್ರ್ಯಕ್ಕಾಗಿ ತನ್ನ ಕುಟುಂಬ, ಜೀವನ ಎಲ್ಲವನ್ನೂ ತ್ಯಾಗ ಮಾಡಿದರು. ಅಂತೆಯೇ ನಮ್ಮ ದೇಶದ ಗಡಿಯಲ್ಲಿ ಯೋಧರು, ಶಾಲೆಯಲ್ಲಿ ಶಿಕ್ಷಕರು ಅದೇ ತ್ಯಾಗ ಮಾಡುತ್ತಿದ್ದಾರೆ. ಆರಡಿ ಕಾಯದ ಕುದುರೆಯ ಮೇಲೆ ಕತ್ತಿ ಹಿಡಿದು ಕನ್ನಡ ಬಾವುಟ ಹಾರಿಸುವ ಸಂಗೊಳ್ಳಿ ರಾಯಣ್ಣ ಇಂದು ಯುವಕರ ಪ್ರೇರಣೆ. ʼಕ್ರಾಂತಿವೀರʼ ಎಂಬ ಬಿರುದು ಅವರಿಗೆ ಸಾರ್ಥಕವಾಗಿದೆ.

80 ವರ್ಷದ ಸ್ವಾತಂತ್ರ್ಯದ ಸಂಭ್ರಮದ ಜತೆಗೆ ಒಂದು ಪ್ರಶ್ನೆ ಕಾಡುತ್ತದೆ: ನಿಜವಾದ ಸ್ವಾತಂತ್ರ್ಯ ಎಂದರೆ ಏನು? ಕೇವಲ ರಾಜಕೀಯ ಸ್ವಾತಂತ್ರ್ಯ ಸಾಕೇ? ಬಡತನ, ಅನಕ್ಷರತೆ, ಮೌಢ್ಯದಿಂದ ನಾವು ಮುಕ್ತರಾಗಿದ್ದೇವೆಯೇ? ಎಂದುಕೊಳ್ಳುವಾಗಲೇ ರಾಯಣ್ಣನ ಕಥೆ ನಮಗೆ ಪಾಠ ಹೇಳುತ್ತದೆ. ಅವರು ಕೇವಲ ಬ್ರಿಟಿಷರ ವಿರುದ್ಧ ಹೋರಾಡಲಿಲ್ಲ. ಜನರ ಮನಸ್ಸಿನಲ್ಲಿದ್ದ ಭಯದ ವಿರುದ್ಧವೂ ಹೋರಾಡಿದರು.

ಇದನ್ನೂ ಓದಿದ್ದೀರಾ? ಚಲೇ ಜಾವ್‌ನಿಂದ ಹುತಾತ್ಮದವರೆಗೆ: ಕೊಗನೂರಿನ ಸ್ವಾತಂತ್ರ್ಯ ಹೋರಾಟದ ರೋಚಕ ಇತಿಹಾಸ

80ನೇ ಸ್ವಾತಂತ್ರ್ಯ ದಿನದಂದು ನಾವು ಎರಡು ಪ್ರತಿಜ್ಞೆ ಮಾಡೋಣ. ಒಂದು ದೇಶದ ಏಕತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವುದು, ಎರಡನೆಯದು ಪ್ರತಿ ಮಗುವನ್ನು ಶಾಲೆಗೆ ಕಳುಹಿಸುವುದು. ರಾಯಣ್ಣನ ಜಯಂತಿ ಮತ್ತು ಸ್ವಾತಂತ್ರ್ಯ ದಿನ ಒಂದೇ ದಿನ ಬಂದಿರುವುದು ಕೇವಲ ಕಾಕತಾಳೀಯವಲ್ಲ. ಇದು ನಮಗೆ ನೀಡಿದ ಸಂದೇಶ ʼಸ್ವಾತಂತ್ರ್ಯವನ್ನು ಪಡೆಯುವುದು ಕಷ್ಟ, ಅದನ್ನು ಉಳಿಸಿಕೊಳ್ಳುವುದು ಇನ್ನೂ ಕಷ್ಟ. ಅದಕ್ಕೆ ಪ್ರತಿ ಪೀಳಿಗೆಯೂ ಹೋರಾಡಬೇಕುʼ ತ್ರಿವರ್ಣ ಧ್ವಜದೊಂದಿಗೆ ಕನ್ನಡ ಬಾವುಟವೂ ಹಾರಬೇಕು.

WhatsApp Image 2026 07 27 at 18.26.00
ಕೆ ಎಸ್ ಜಯಶಂಕರ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಕಾಲೇಜಿನಲ್ಲಿ ಶೌಚಾಲಯವಿದೆ, ನೀರಿಲ್ಲ: 400 ಮಂದಿ ವಿದ್ಯಾರ್ಥಿನಿಯರ ಪರದಾಟ

ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದಷ್ಟೇ ಸಾಲದು; ಅವರು ಸುರಕ್ಷಿತ, ಗೌರವಯುತ ಹಾಗೂ ಸ್ವಚ್ಛ...

ಮಹಿಳೆಯರಿಲ್ಲದ ಸಂಪುಟ; ಮಾತು ತಪ್ಪಿತೇ ಕಾಂಗ್ರೆಸ್?

ರಾಜ್ಯದ ಮಹಿಳೆಯರು ಜನಸಂಖ್ಯೆಯಲ್ಲಿ ಸರಿಸುಮಾರು ಅರ್ಧದಷ್ಟಿದ್ದರೂ, ಅಧಿಕಾರದ ವಿಚಾರ ಬಂದಾಗ ಅವರು...

ಬೀದರ್‌ | ಜನವರಿಯಲ್ಲಿ ಅಗ್ನಿವೀರ ಸೇನಾ ಭರ್ತಿ ರ‍್ಯಾಲಿ

ಬೀದರ್‌ ನಗರದಲ್ಲಿ 2027ರ ಜನವರಿ ತಿಂಗಳಲ್ಲಿ 15 ದಿನಗಳ ಕಾಲ ಅಗ್ನಿವೀರ...

ದೇವಿಯಿಂದ ಕತ್ತಿ ಪಡೆದ ರಾಜರ ಕಥೆಗಳು ಶಾಲಾ ಪಠ್ಯದಲ್ಲಿ; NCERTಯಿಂದ ಮತ್ತೊಂದು ವಿವಾದ?

"ಭಾರತದಲ್ಲಿ ದೇವಿಯರ ಆರಾಧನೆಗೂ, ಯುದ್ಧಕ್ಕೂ ಅನಾದಿ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಪ್ರಾಚೀನ...