ತುರ್ತು ಪರಿಸ್ಥಿತಿಯ ವಿರುದ್ಧ ಅಮೆರಿಕದಲ್ಲಿ ಹೋರಾಟ ಕಟ್ಟಿದ್ದ ಹಿರೇಮಠ ದಂಪತಿ

Date:

ಜಯಪ್ರಕಾಶ್ ನಾರಾಯಣ ಅವರು 1976 ಮೇ 2 ರಂದು ಭಾರತದ ಸ್ವಾತಂತ್ರ್ಯ ಪ್ರೇಮಿಗಳಿಗೆಲ್ಲ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಕರೆ ನೀಡಿದರು. ಇದನ್ನು ಗಮನಿಸಿದ ಎಸ್.ಆರ್. ಹಿರೇಮಠ ಮತ್ತು ಅವರ ಪತ್ನಿ ಶ್ಯಾಮಲಾ ಅಮೆರಿಕದಲ್ಲಿದ್ದುಕೊಂಡೇ ಭಾರತದಲ್ಲಿನ ಎಮರ್ಜೆನ್ಸಿ ಕಿತ್ತು ಹಾಕಲು ಹೋರಾಟ ಸಂಘಟಿಸಲು ನಿರ್ಧರಿಸಿ ಕಾರ್ಯಪ್ರವೃತ್ತರಾಗಿದ್ದರು.

- Advertisement -

ರಾಜ್ಯದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ವಿರುದ್ಧ ಧಾರವಾಡದ ಸಮಾಜ ಪರಿವರ್ತನೆ ವೇದಿಕೆಯ ಎಸ್. ಆರ್.ಹಿರೇಮಠ ಅವರ ದಿಟ್ಟ ಹೋರಾಟದ ಕಥೆ ಎಲ್ಲರಿಗೂ ಗೊತ್ತಿದೆ. ಆದರೆ 1975 ರಲ್ಲಿ ದೇಶದ ಮೇಲೆ ಹೇರಲಾಗಿದ್ದ ‘ತುರ್ತು ಪರಿಸ್ಥಿತಿ’ಯ ವಿರುದ್ಧ ಎಸ್.ಆರ್.ಹಿರೇಮಠ ಮತ್ತು ಅವರ ವಿದೇಶಿ ಪತ್ನಿ ಮೇವಿಸ್ ಸಿಗ್ವಾಲ್ (ಶ್ಯಾಮಲಾ) ಕೂಡಿ ನಡೆಸಿದ ಹೋರಾಟದ ಗಾಥೆ ಬಹಳ ಜನಕ್ಕೆ ಗೊತ್ತಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

ಎಸ್.ಆರ್.ಹಿರೇಮಠರು ಬಿ.ಇ.ಪದವಿ ಪಡೆದ ನಂತರ 1969ರಲ್ಲಿ ಅಮೆರಿಕಕ್ಕೆ ತೆರಳಿದರು. ಅಲ್ಲಿ ಇಂಜಿನಿಯರಾಗಿ ಕೆಲಸ ಮಾಡುತ್ತಿದ್ದಾಗ ಶ್ಯಾಮಲಾ ಪರಿಚಯವಾಗಿ, ಸ್ನೇಹ ಬೆಳೆಯಿತು. ಪಾಲಕರ ಒಪ್ಪಿಗೆ ಮೇರೆಗೆ ಮುಂದೆ ಮದುವೆಯೂ ನಡೆಯಿತು. ಸಮಾಜಶಾ ಸ್ತ್ರ ವಿಷಯದಲ್ಲಿ ಪದವಿ ಪಡೆದ ಶ್ಯಾಮಲಾ ಅವರು ಸಾಮಾಜಿಕ ಹೋರಾಟಗಳಲ್ಲಿ ಸಹಜವಾಗಿ ಆಸಕ್ತಿ ಹೊಂದಿದ್ದಾರೆ. ಅವರು ಭಾರತ ಮತ್ತು ವಿದೇಶಿ ನೆಲದಲ್ಲಿ ಬಹಳಷ್ಟು ಜನಪರ ಹೋರಾಟಗಳನ್ನು ಕಟ್ಟಿದ್ದಾರೆ. ಭಾರತದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯ ವಿರುದ್ಧ ಅವರು ನಡೆಸಿದ್ದ ಸಂಘಟಿತ ಹೋರಾಟ ನಿಜಕ್ಕೂ ಐತಿಹಾಸಿಕ ಮಹತ್ವ ಪಡೆದಿದೆ. ಅದನ್ನು ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮ ಎಂದೇ ಬಣ್ಣಿಸಲಾಗುತ್ತದೆ.

ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು 1975, ಜೂನ್ 25ರಂದು ಭಾರತದ ಮೇಲೆ ‘ತುರ್ತು ಪರಿಸ್ಥಿತಿ ‘ ಹೇರಿದರು. ಇದು ದೇಶದ ಚರಿತ್ರೆಯ ಅತ್ಯಂತ ಕರಾಳ ಅಧ್ಯಾಯ. ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿಯವರ ಲೋಕಸಭೆಯ ಸದಸ್ಯತ್ವವನ್ನು ರದ್ದುಗೊಳಿಸಿ ಆರು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ತೀರ್ಪು ನೀಡಿತ್ತು. ಇದರಿಂದ ಬಚಾವಾಗಿ ಅಧಿಕಾರ ಉಳಿಸಿಕೊಳ್ಳುವ ಉದ್ದೇಶದಿಂದ ಅವರು ಎಮರ್ಜೆನ್ಸಿ ಪ್ರಕಟಿಸಿದ್ದರು. ಜಯಪ್ರಕಾಶ್ ನಾರಾಯಣ , ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಜಾರ್ಜ್ ಫರ್ನಾಂಡಿಸ್, ಬಿ.ಎಸ್.ಯಡಿಯೂರಪ್ಪ, ಜೆ.ಎಚ್.ಪಟೇಲ್ ಮುಂತಾದವರನ್ನು ಒಳಗೊಂಡು ದೇಶದ ತುಂಬಾ 6,000ಕ್ಕೂ ಹೆಚ್ಚು ವಿರೋಧಿ ಪಕ್ಷದ ಕಾರ್ಯಕರ್ತರನ್ನು ಬಂಧಿಸಿ ಜೈಲಿನಲ್ಲಿ ಇಡಲಾಗಿತ್ತು. ಪತ್ರಿಕಾ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ ರದ್ದುಗೊಳಿಸಲಾಗಿತ್ತು. ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿದವರನ್ನೆಲ್ಲ ಜೈಲಿಗೆ ಕಳಿಸಲಾಗಿತ್ತು. ಭಾರತದ ಸ್ವಾತಂತ್ರ್ಯ ಮತ್ತೊಮ್ಮೆ ಹರಣವಾಗಿತ್ತು. ಪತ್ರಿಕೆಗಳ ಬಾಯಿಮುಚ್ಚಲಾಗಿತ್ತು. ಪ್ರಕಟಣೆಯ ಪೂರ್ವದಲ್ಲಿ ಜಿಲ್ಲಾಧಿಕಾರಿಯ ಒಪ್ಪಿಗೆ ಪಡೆಯಬೇಕಾಗಿತ್ತು. ಕೆಲವು ರಾಜ್ಯಗಳಲ್ಲಿ ಬಲವಂತವಾಗಿ ಪುರುಷರ ಸಂತಾನ ಹರಣ ಚಿಕಿತ್ಸೆ ನಡೆಸಲಾಯಿತು. ಜನ ಭಯದಲ್ಲಿ ಬದುಕುತ್ತಿದ್ದರು.

ಜಯಪ್ರಕಾಶ್ ನಾರಾಯಣ ಅವರು 1976 ಮೇ 2 ರಂದು ಭಾರತದ ಸ್ವಾತಂತ್ರ್ಯ ಪ್ರೇಮಿಗಳಿಗೆಲ್ಲ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಕರೆ ನೀಡಿದರು. ಇದನ್ನು ಗಮನಿಸಿದ ಎಸ್.ಆರ್. ಹಿರೇಮಠ ಮತ್ತು ಪತ್ನಿ ಶ್ಯಾಮಲಾ ಅಮೆರಿಕದಲ್ಲಿದ್ದುಕೊಂಡೇ ಭಾರತದಲ್ಲಿನ ಎಮರ್ಜೆನ್ಸಿ ಕಿತ್ತು ಹಾಕಲು ಹೋರಾಟ ಸಂಘಟಿಸಲು ನಿರ್ಧರಿಸಿ ಕಾರ್ಯಪ್ರವೃತ್ತರಾದರು. ಅಮೆರಿಕದಲ್ಲಿ ನೆಲೆಸಿದ್ದ 6000ಕ್ಕೂ ಹೆಚ್ಚು ಜನರನ್ನು ಸೇರಿಸಿ ಸಭೆ, ಮೆರವಣಿಗೆಗಳನ್ನು ನಡೆಸಿದರು. ‘ಇಂಡಿಯನ್ಸ್ ಫಾರ್ ಡೆಮಾಕ್ರಸಿ’ ಎಂಬ ಸಂಘಟನೆಯನ್ನು ಹುಟ್ಟು ಹಾಕಿದರು. ಇಟಲಿ, ಜರ್ಮನ್, ಯುರೋಪಿನ ಬೇರೆ ಬೇರೆ ದೇಶಗಳಲ್ಲಿ ಭಾರತದಲ್ಲಿ ನಡೆಯುತ್ತಿರುವ ಎಮರ್ಜೆನ್ಸಿಯ ದಬ್ಬಾಳಿಕೆಗಳ ವಿರುದ್ಧ ಪ್ರತಿಭಟನೆಗಳನ್ನು ಸಂಘಟಿಸಿದ್ದು ಗಮನಾರ್ಹ ಸಂಗತಿ.

ಹಿರೇಮಠ ದಂಪತಿಗಳ ಹೋರಾಟವನ್ನು ಗಮನಿಸಿ ಭಾರತ ಸರ್ಕಾರ ಅವರ ವೀಸಾಗಳನ್ನು ರದ್ದುಗೊಳಿಸಿತು. ಬೆದರಿಕೆಗಳನ್ನು ಹಾಕಿತು. ಹಿರೇಮಠ ದಂಪತಿಗಳು ಇದಕ್ಕೆ ಹೆದರದೆ ಹೋರಾಟವನ್ನು ಮುಂದುವರಿಸಿದರು.

ಅಮೆರಿಕದಲ್ಲಿ ವಾಸವಾಗಿದ್ದ 3 ನೊಬೆಲ್ ಪ್ರಶಸ್ತಿ ಪುರಸ್ಕೃತರು ಇವರ ಹೋರಾಟಕ್ಕೆ ಬೆಂಬಲ ನೀಡಿದ್ದು ವಿಶೇಷವಾಗಿತ್ತು. ಅಲ್ಲಿ ಓದುತ್ತಿದ್ದ ಭಾರತದ ವಿದ್ಯಾರ್ಥಿಗಳು ಬಂದು ಹೋರಾಟಕ್ಕೆ ಸೇರಿಕೊಂಡರು. ಅಮೆರಿಕದ 18 ಮಹಾನಗರಗಳಲ್ಲಿ 36 ಸಭೆಗಳನ್ನು ನಡೆಸಲಾಯಿತು.

WhatsApp Image 2026 06 25 at 2.37.47 PM

ಹಿರೇಮಠ ದಂಪತಿಗಳು ತುರ್ತು ಪರಿಸ್ಥಿತಿಯ ವಿರುದ್ಧ ಅಮೆರಿಕದಲ್ಲಿ ನಡೆಸುತ್ತಿದ್ದ ಹೋರಾಟಗಳ ವಿವರವಾದ ವರದಿಗಳು, ಜಗತ್ತಿನ ಪತ್ರಿಕೆಗಳಲ್ಲಿ ಪ್ರಮುಖ ಸುದ್ದಿಯಾಗಿ ವರದಿಯಾಗ ತೊಡಗಿದವು. ಸಂಪಾದಕೀಯ ಲೇಖನಗಳು ಪ್ರಕಟವಾದ ತೊಡಗಿದವು. ಹೋರಾಟ ಜಗತ್ತಿನ ಗಮನ ಸೆಳೆತೊಡಗಿತು. ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ, ಭೂಗತರಾಗಿ ಸಂಚರಿಸುತ್ತಿದ್ದ ಸುಬ್ರಹ್ಮಣ್ಯಂ ಸ್ವಾಮಿ ಅಮೆರಿಕಕ್ಕೆ ಬಂದು ಹಿರೇಮಠ ದಂಪತಿಗಳ ಹೋರಾಟಕ್ಕೆ ಬೆಂಬಲ ನೀಡಿದರು. ಸಭೆಗಳಲ್ಲಿ ಭಾಗವಹಿಸಿ ಭಾಷಣ ಮಾಡಿದರು.

ಹಿರೇಮಠ ದಂಪತಿಗಳ ಹೋರಾಟದ ಜಗತ್ತಿನಾದ್ಯಂತ ಬಹಳ ಜಾಗೃತಿ ಮೂಡಿಸಿತು. ಇಂದಿರಾಗಾಂಧಿ ಎಮರ್ಜೆನ್ಸಿಯನ್ನು 1977 ರಲ್ಲಿ ರದ್ದುಗೊಳಿಸಿ ಲೋಕಸಭೆಯ ಚುನಾವಣೆ ನಡೆಸಿದರು. ಇಂದಿರಾ ಗಾಂಧಿ, ಸಂಜಯ ಗಾಂಧಿ, ಕಾಂಗ್ರೆಸ್ ಪಕ್ಷ ಭಾರಿ ಸೋಲು ಭಾರಿ ಅನುಭವಿಸಿತು. ಮೊದಲ ಬಾರಿಗೆ ಕಾಂಗ್ರೆಸ್ ಸೇತರ ಪ್ರಧಾನಿಯಾಗಿ ಮುರಾರ್ಜಿ ದೇಸಾಯಿ ಅಧಿಕಾರ ವಹಿಸಿಕೊಂಡರು.
ಹಿರೇಮಠ ದಂಪತಿ ಎಮರ್ಜೆನ್ಸಿ ವಿರುದ್ಧ ನಡೆಸಿದ ಹೋರಾಟ ಕುರಿತು ಸುಗತ್ ಶ್ರೀನಿವಾಸ ರಾಜು ಅವರು ‘ದಿ ಕಾನ್ಶಿಯಸ್ನೆಸ್ ನೆಟ್ವರ್ಕ್ ‘ ಎಂಬ ಮಹತ್ವದ ಗ್ರಂಥ ರಚಿಸಿದ್ದಾರೆ.

ಹಿರೇಮಠ ಅವರು ತಮ್ಮ 80ರ ಇಳಿ ವಯಸ್ಸಿನಲ್ಲಿಯೂ ಸಮಾಜ ಕಾರ್ಯದಲ್ಲಿ ಕ್ರಿಯಾಶೀಲರಾಗಿದ್ದಾರೆ. ಅವರ ಹೋರಾಟದ ಛಲ ಎಳ್ಳಷ್ಟೂ ಕಡಿಮೆಯಾಗಿಲ್ಲ.

mallikarjuna
ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ
+ posts

ಹಿರಿಯ ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ
ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ
ಹಿರಿಯ ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಹರಾಜು ರದ್ದು, ಲೀಸ್‌ಗೆ ನೀಡಲು ಸಿಎಂ ಭರವಸೆ : ಶ್ರೀಮಂತ ಬಿರಾದರ್

ಬೀದರ್ ಜಿಲ್ಲೆಯ ರೈತರು‌, ಕಾರ್ಮಿಕರ ಜೀವನಾಡಿಯಾಗಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ...

‘ದೇವರೇ ಈ ದೇಶವನ್ನು ಕಾಪಾಡಬೇಕು’: ರೈಲು ಪ್ರಯಾಣದ ಗದ್ದಲಕ್ಕೆ ಬೇಸತ್ತ ತೇಜಸ್ವಿ ಸೂರ್ಯ ಪತ್ನಿ

ರೈಲು ಪ್ರಯಾಣದ ವೇಳೆ ಸಹಪ್ರಯಾಣಿಕರ ಗದ್ದಲದಿಂದ ತೀವ್ರ ಕಿರಿಕಿರಿ ಅನುಭವಿಸಿರುವುದಾಗಿ ಬಿಜೆಪಿ...

ಬೀದರ್ | ಬರ ಪರಿಸ್ಥಿತಿ : ವಿಶೇಷ ಪ್ಯಾಕೇಜ್ ಘೋಷಿಸಲು ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಬೆಳೆ...