ಬೀದರ್‌ | ಸತ್ಯಶುದ್ಧ ಕಾಯಕ, ಪ್ರಾಮಾಣಿಕತೆಯಿಂದ ಜೀವನದಲ್ಲಿ ಯಶಸ್ಸು: ಬಸವಲಿಂಗ ಪಟ್ಟದ್ದೇವರು

Date:

ಭಾಲ್ಕಿ: ಸತ್ಯಶುದ್ಧ ಕಾಯಕ, ಕಾಯಕನಿಷ್ಠೆ, ಪ್ರಾಮಾಣಿಕ ನಡೆ ಹಾಗೂ ನಿರಂತರ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಈ ಮೌಲ್ಯಗಳನ್ನು ಮೈಗೂಡಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿರುವುದು ಸಂತಸದ ಸಂಗತಿ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಬಸವಲಿಂಗ ಪಟ್ಟದ್ದೇವರು ಹೇಳಿದರು.

- Advertisement -

ತಾಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ವತಿಯಿಂದ ಸೋಮವಾರ ಆಯೋಜಿಸಿದ್ದ ವಿವಿಧ ಕ್ಷೇತ್ರಗಳ ಸಾಧಕರ ಗೌರವ ಸನ್ಮಾನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಕಿನ ಹಬ್ಬಕ್ಕೆ ಮಾಲಿನ್ಯದ ಕತ್ತಲು; ದೆಹಲಿ ಜನ ಪಾಠ...

ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬವನ್ನು ಕೇವಲ ದೀಪಗಳ ಹಬ್ಬವೆಂದು ನೋಡದೆ, ಬೆಳಕಿನ ಸಂಭ್ರಮದ ಪ್ರತೀಕವಾಗಿಯೂ ಪರಿಗಣಿಸಲಾಗಿದೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಹಬ್ಬ ಪ್ರತಿವರ್ಷವೂ 'ಉಸಿರುಗಟ್ಟಿಸುವ ನರಕಯಾತನೆ'ಯಾಗಿ ಬದಲಾಗುತ್ತಿರುವುದು ಕಟು ಸತ್ಯ....

NCPಯನ್ನು ಒಡೆದಿದ್ದ ಬಿಜೆಪಿಯೇ ಅದನ್ನು ಕೂಡಿಸಲು ಹೊರಟಿದೆ; ರಾಜಕೀಯ...

ವಿರೋಧ ಪಕ್ಷಗಳ ಸಾಲಿನಲ್ಲಿದ್ದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಶರದ್ ಪವಾರ್ ನಡುವಿನ ಸೌಹಾರ್ದ ಸಂಬಂಧ ಮುಂದುವರಿದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪವಾರ್ ಅವರ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ ಮತ್ತು ದೆಹಲಿಯಲ್ಲಿ...

ಇಸ್ರೇಲ್ ಚುಕ್ಕಾಣಿ ಹಿಡಿಯಲು ಮುಂದಾದ ‘ಗಾಡಿ ಐಸೆನ್‌ಕೋಟ್’; ಗಾಜಾ...

ಇಡೀ ಜಗತ್ತು ಕಾತರದಿಂದ ಕೇಳುತ್ತಿರುವ ಅತಿದೊಡ್ಡ ಪ್ರಶ್ನೆಯೆಂದರೆ, ಐಸೆನ್‌ಕೋಟ್‌ ಆಡಳಿತದಲ್ಲಿ ಗಾಜಾ ಬಿಕ್ಕಟ್ಟು ಶಾಶ್ವತವಾಗಿ ಪರಿಹಾರವಾಗುತ್ತದೆಯೇ ಎಂಬುದು. ಆದರೆ, ಇದು ವಾಸ್ತವಕ್ಕೆ ತೀರಾ ದೂರವಾದ ನಿರೀಕ್ಷೆಯಾಗಿದೆ. ಐಸೆನ್‌ಕೋಟ್‌ ಅವರು ವಾಸ್ತವಿಕವಾದಿ ನಾಯಕನೇ ಹೊರತು,...

ವಿಶ್ವಗುರು ಬಸವಣ್ಣನವರು ಹೇಳಿದಂತೆ, ‘ಸತ್ಯವ ನುಡಿಯುವುದೇ ದೇವಲೋಕ, ಮಿಥ್ಯವ ನುಡಿಯುವುದೇ ಮರ್ತ್ಯಲೋಕ’. ಸತ್ಯ ಮತ್ತು ಪ್ರಾಮಾಣಿಕತೆಯ ಹಾದಿಯಲ್ಲಿ ಸಾಗುವ ಮೂಲಕ ಸಾಧಕರು ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ಸಾಧನೆ ಕೇವಲ ವೈಯಕ್ತಿಕ ಯಶಸ್ಸಿಗೆ ಸೀಮಿತವಾಗದೆ, ಶರಣ ಸಂಕುಲ ಹಾಗೂ ನಾಡಿನ ಗೌರವವನ್ನು ಹೆಚ್ಚಿಸಿದೆ ಎಂದರು.

‘ಇವನಾರವ ಇವನಾರವ ಎಂದೆನಿಸದಿರಯ್ಯಾ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ’ ಎಂಬ ಬಸವಣ್ಣನವರ ವಚನದಂತೆ ತಮ್ಮ ಕಾಯಕ ಮತ್ತು ಸೇವೆಯ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಅಷ್ಟಾವರಣ, ಪಂಚಾಚಾರ ಹಾಗೂ ಷಟ್‌ಸ್ಥಲಗಳ ತತ್ವಗಳ ಆಧಾರದಲ್ಲಿ ಅವರ ಬದುಕು ಮತ್ತಷ್ಟು ಬೆಳಗಲಿ. ಅವರ ಜ್ಞಾನ ಮತ್ತು ಅನುಭವ ಮುಂದಿನ ಪೀಳಿಗೆಯ ಯುವಕರಿಗೆ ದಾರಿದೀಪವಾಗಲಿ ಎಂದು ಆಶಿಸಿದರು.

9blk3

ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ.ಸಂದೀಪ ಹರ್ಷಂಗಿ ಮಾತನಾಡಿ, “ಬಸವಲಿಂಗ ಪಟ್ಟದ್ದೇವರು ಗಡಿಭಾಗದಲ್ಲಿ ಸಲ್ಲಿಸುತ್ತಿರುವ ಶೈಕ್ಷಣಿಕ ಸೇವೆ ಅನನ್ಯವಾಗಿದೆ. ಈ ಭಾಗದಲ್ಲಿ ಪೂಜ್ಯರು ಶಿಕ್ಷಣದ ಬೃಹತ್ ಆಲದ ಮರವನ್ನು ಬೆಳೆಸಿದ್ದು, ಅದರ ನೆರಳಿನಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು” ಎಂದು ಹೇಳಿದರು.

ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸಮ್ಮುಖ ವಹಿಸಿದ್ದರು. ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಸಚಿವ ಡಾ. ರೇವಣಸಿದ್ಧಪ್ಪ ಬಿ. ಪಾಟೀಲ ಮಾತನಾಡಿದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಶಶಿಧರ ಕೋಸಂಬೆ ಬಸವಗುರುವಿನ ಪೂಜೆ ನೆರವೇರಿಸಿದರು.

ಸಂಸ್ಥೆಯ ಆಡಳಿತಾಧಿಕಾರಿ ಮೋಹನ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಧುಕರ ಗಾಂವಕರ್ ನಿರೂಪಿಸಿದರು. ಸಿದ್ರಾಮ ಗೊಗ್ಗಾ ವಂದಿಸಿದರು. ಕುಮಾರಿ ಗಾನವಿ ನಟೇಶ ವಚನ ಗಾಯನ ಪ್ರಸ್ತುತಪಡಿಸಿದರು. ಸಮೀಕ್ಷೆ ಬಸವರಾಜ ಹೊಸಪೇಟೆ ವಚನ ನೃತ್ಯ ಪ್ರದರ್ಶಿಸಿದರು.

ಸಾಧಕರಿಗೆ ಗೌರವ ಸನ್ಮಾನ

ಸಮಾರಂಭದಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆಗೈದ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಸಂದೀಪ ಹರ್ಷಂಗಿ, ಡಾ. ರೇವಣಸಿದ್ಧಪ್ಪ ಬಿ. ಪಾಟೀಲ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಜಗನ್ನಾಥ ಹಲ್ಕಂಡಗೆ, ಚಂದ್ರಶೇಖರ ಭೀಮಣಪ್ಪ ಸೋಮಶೆಟ್ಟಿ ಹಾಗೂ ಶಾಂತಾಬಾಯಿ ಮೋಹನರಾವ ಕಾಂಬಳೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಚನ್ನಬಸವೇಶ್ವರ ಗುರುಕುಲದಲ್ಲಿ ಶಿಕ್ಷಣ ಪಡೆದು ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಕ್ಷೇತ್ರದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಾದ ಅಂಕಿತರೆಡ್ಡಿ, ನರೇಂದ್ರರೆಡ್ಡಿ, ರಿತ್ವಿಕ್, ಸುದರ್ಶನ, ಅಭಿಷೇಕ ಹಾಗೂ ಪ್ರಿಯಾಂಶು ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

WhatsApp Image 2026 10 10 at 7.46.08 PM 40

ಇದನ್ನೂ ಓದಿ : ಔರಾದ್‌ | ಸಂಭ್ರಮದಿಂದ ಜರುಗಿದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥಾಪನಾ ದಿನ

WhatsApp Image 2026 10 10 at 6.59.42 PM 20
eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಸ್ಥಳೀಯ ಸಂಸ್ಥೆಗಳ ಚುನಾವಣೆ ಗೊಂದಲಕ್ಕೆ ತೆರೆ ಎಳೆಯಿರಿ: ಗ್ರಾಮ ಸ್ವರಾಜ್ಯ ಕರ್ನಾಟಕ ಆಗ್ರಹ

ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳ ದಿನಾಂಕ ಮತ್ತು ಮತದಾರರ...

‘ಮೋದಿಯ ಸುಳ್ಳುಗಳನ್ನು ಯೋಧರು ನಂಬಲಿಲ್ಲ’: ‘ದಿಮಾಗಿ ನಕ್ಸಲರು’ ಹೇಳಿಕೆಗೆ ರಾಹುಲ್ ತಿರುಗೇಟು

ಪ್ರಧಾನಿ ನರೇಂದ್ರ ಮೋದಿ ಅವರ ‘ದಿಮಾಗಿ ನಕ್ಸಲರು’ ಹೇಳಿಕೆಗೆ ಲೋಕಸಭೆಯ ವಿರೋಧ...

ದಕ್ಷಿಣ ಕನ್ನಡ | ಅಂಗನವಾಡಿ ನೌಕರರ ಬಾಕಿ ವೇತನಕ್ಕೆ ಆಗ್ರಹ; ಹೋರಾಟದ ಎಚ್ಚರಿಕೆ

ಅಂಗನವಾಡಿ ನೌಕರರ ದ.ಕ. ಜಿಲ್ಲಾ ಸಮಿತಿ ಸಭೆಯು ಬಿಸಿರೋಡ್ ರಿಕ್ಷಾ ಭವನದಲ್ಲಿ...

ಹಾಸನ ಡಿಸಿ ಕಚೇರಿಯಲ್ಲಿ ಲಂಚಾವತಾರ ಆರೋಪ: ಎಚ್‌ಡಿಕೆ ಕೈಯಲ್ಲಿ 15 ಪುಟಗಳ ವಾಟ್ಸ್‌ಆ್ಯಪ್‌ ಚಾಟ್; ಸಿಕ್ಕಿದ್ದು ಹೇಗೆ?

ಕರ್ನಾಟಕದ ರಾಜಕೀಯ ವಲಯದಲ್ಲಿ ಮತ್ತೊಮ್ಮೆ ಭ್ರಷ್ಟಾಚಾರದ ಗಂಭೀರ ಆರೋಪಗಳು ಮುನ್ನೆಲೆಗೆ ಬಂದಿವೆ....