ಭಾರತದ ಸಂವಿಧಾನವೇಕೆ ಗ್ರೇಟ್? ಸಾಮಾಜಿಕ ನ್ಯಾಯದ ವಿಶ್ವಾಸದ ಜ್ಯೋತಿ, ಪ್ರಜಾಪ್ರಭುತ್ವದ ಶಾಶ್ವತ ದಾರಿದೀಪ

Date:

ಇಂದು ಸಂವಿಧಾನದ ಮೌಲ್ಯಗಳನ್ನು ಪುನಃ ಸ್ಮರಿಸುವ ಅಗತ್ಯ ಹೆಚ್ಚಾಗಿದೆ. ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವ ಗೌರವವನ್ನು ಕೇಂದ್ರದಲ್ಲಿರಿಸಿದ ಗಣರಾಜ್ಯವನ್ನು ಉಳಿಸಿಕೊಳ್ಳುವುದು ಕೇವಲ ರಾಜಕೀಯ ಕರ್ತವ್ಯವಲ್ಲ; ಅದು ರಾಷ್ಟ್ರೀಯ ನೈತಿಕ ಹೊಣೆಗಾರಿಕೆ. ಸಂವಿಧಾನವನ್ನು ಉಳಿಸುವ ಹೋರಾಟ ಎಂದರೆ ಭಾರತದ ಪ್ರಜಾಸತ್ತೆಯನ್ನು ಉಳಿಸುವ ಹೋರಾಟವೇ ಆಗಿದೆ.

- Advertisement -

ಭಾರತದ ಇತಿಹಾಸವು ಕೇವಲ ರಾಜವಂಶಗಳ, ಯುದ್ಧಗಳ ಅಥವಾ ರಾಜಕೀಯ ಪರಿವರ್ತನೆಗಳ ಕಥೆಯಲ್ಲ; ಅದು ಸರ್ವಮಾನ್ಯತೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳ ನಿರಂತರ ಯಾತ್ರೆಯಾಗಿದೆ. ಅಶೋಕನ ಧಮ್ಮದರ್ಶನದಿಂದ ಹಿಡಿದು ಸಂತ ಶಿಶುನಾಳ ಶರೀಫರ ಸಮಾನತೆಯ ಸಂದೇಶದವರೆಗೆ ಭಾರತದ ಪಂಥ–ಪರಂಪರೆಗಳು ಮಾನವ ಮೌಲ್ಯಗಳನ್ನು ಕೇಂದ್ರವಾಗಿಸಿಕೊಂಡಿವೆ. ಆದರೆ ಬ್ರಿಟಿಷರ ದಾಸ್ಯಸಂಕೋಲೆಯಿಂದ ಮುಕ್ತವಾದ ನಂತರ ಭಾರತೀಯ ಸಮಾಜಕ್ಕೆ ನಿಜವಾದ ಆತ್ಮಗೌರವ ಮತ್ತು ಭವಿಷ್ಯದ ದಿಕ್ಕನ್ನು ನೀಡಿದ ಮಹತ್ವದ ದಸ್ತಾವೇಜು ಎಂದರೆ ಭಾರತೀಯ ಸಂವಿಧಾನ.

ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನವು ಕೇವಲ ಕಾನೂನು ಗ್ರಂಥವಲ್ಲ; ಅದು ಭಾರತದ ಪ್ರಜಾಪ್ರಭುತ್ವದ ಜೀವನಾಡಿ. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಮಾನವೀಯ ಮೌಲ್ಯಗಳನ್ನು ರಾಜ್ಯ ವ್ಯವಸ್ಥೆಯ ಕೇಂದ್ರದಲ್ಲಿ ಸ್ಥಾಪಿಸಿದ ಈ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನ ಸ್ವಾಭಿಮಾನದ ಸಂಕೇತವಾಗಿದೆ. ಸಂವಿಧಾನ ಜಾಗೃತಿ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಅಚ್ಚೊತ್ತಬೇಕಾದ ನಾಗರಿಕ ಕರ್ತವ್ಯವಾಗಿದೆ.

ಭಾರತ ಸಂವಿಧಾನವು ಒಂದು ದಿನದಲ್ಲಿ ಹುಟ್ಟಿದ ಕಾನೂನು ಗ್ರಂಥವಲ್ಲ; ಅದು ದಶಕಗಳ ರಾಜಕೀಯ ಚರ್ಚೆ, ಸಾಮಾಜಿಕ ಸಂಘರ್ಷ ಮತ್ತು ಸ್ವರಾಜ್ಯದ ಕನಸಿನ ಫಲಿತಾಂಶ. ಬ್ರಿಟಿಷ್ ಆಳ್ವಿಕೆಯ ಕೊನೆಯ ಹಂತದಲ್ಲಿ ಭಾರತಕ್ಕೆ ಯಾವ ರೀತಿಯ ಆಡಳಿತ ವ್ಯವಸ್ಥೆ ಇರಬೇಕು ಎಂಬ ಪ್ರಶ್ನೆ ದೇಶದ ರಾಜಕೀಯ ನಾಯಕತ್ವವನ್ನು ವಿಭಜಿಸಿತು. ಬ್ರಿಟಿಷ್ ಆಯೋಗಗಳ ಶಿಫಾರಸುಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಪಷ್ಟವಾಗಿ “ಭಾರತೀಯರೇ ತಮ್ಮ ಸಂವಿಧಾನವನ್ನು ರಚಿಸಬೇಕು” ಎಂಬ ಸ್ವ-ನಿರ್ಣಯದ ಹಕ್ಕಿಗೆ ಒತ್ತಾಯಿಸಿತು. ಇದೇ ಬೇಡಿಕೆಯ ಫಲವಾಗಿ ಸಂವಿಧಾನ ಸಭೆಯ ಕಲ್ಪನೆ ಬಲ ಪಡೆದುಕೊಂಡಿತು.

ಡಿಸೆಂಬರ್ 1945ರಲ್ಲಿ ಸಾರ್ವತ್ರಿಕ ವಯಸ್ಕ ಮತದಾನದ ಆಧಾರದ ಮೇಲೆ ಅಲ್ಲದಿದ್ದರೂ ನಡೆದ ಪ್ರಾಂತೀಯ ಚುನಾವಣೆಗಳು ಸಂವಿಧಾನ ಸಭೆಯ ರೂಪುಗೊಳ್ಳುವಿಕೆಗೆ ದಾರಿ ಮಾಡಿಕೊಟ್ಟವು. 12 ಪ್ರಾಂತಗಳಲ್ಲಿ ನಡೆದ ಚುನಾವಣೆಯಲ್ಲಿ 1585 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷವು ಬಹುಮತವನ್ನು ಗೆದ್ದು ಸಂವಿಧಾನ ಸಭೆಯ ಮುಖ್ಯ ಶಕ್ತಿಯಾಗಿ ಹೊರಹೊಮ್ಮಿತು. ಆದರೆ ಸಂವಿಧಾನ ರಚನೆಯ ಪ್ರಕ್ರಿಯೆ ಕೇವಲ ರಾಜಕೀಯ ಪಕ್ಷದ ಯೋಜನೆಯಾಗಿರಲಿಲ್ಲ; ಅದು ವಿಭಿನ್ನ ಧರ್ಮ, ಭಾಷೆ, ಜಾತಿ ಮತ್ತು ಸಾಮಾಜಿಕ ಹಿನ್ನೆಲೆಯ ಪ್ರತಿನಿಧಿಗಳ ನಡುವಿನ ತೀವ್ರ ಚರ್ಚೆಗಳ ಮೂಲಕ ರೂಪುಗೊಂಡ ರಾಷ್ಟ್ರೀಯ ಒಪ್ಪಂದವಾಗಿತ್ತು.

ಇತಿಹಾಸಕಾರ ಬಿಪನ್ ಚಂದ್ರ ಅವರ ಅಭಿಪ್ರಾಯದಲ್ಲಿ, ಭಾರತೀಯ ಸಂವಿಧಾನವು ವಸಾಹತುಶಾಹಿ ಆಡಳಿತದ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟದ ʼರಾಜಕೀಯ ಸಂಗ್ರಹಿತ ಅನುಭವʼ ಆಗಿದೆ. ಅದೇ ರೀತಿ ಚಿಂತಕ ಗ್ರಾನ್ವಿಲ್ ಆಸ್ಟಿನ್ ಸಂವಿಧಾನವನ್ನು ʼಸಾಮಾಜಿಕ ಕ್ರಾಂತಿಯ ಸಾಧನʼ ಎಂದು ವರ್ಣಿಸುತ್ತಾರೆ. ಸಮಾನತೆ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ ಎಂಬ ಮೂರು ತತ್ವಗಳು ಸಂವಿಧಾನದ ಮೂಲ ಆಧಾರಗಳಾಗಿದ್ದು, ಗಣರಾಜ್ಯದ ಆತ್ಮವನ್ನು ಅವು ನಿರ್ಧರಿಸುತ್ತವೆ ಎಂದು ಅವರು ಹೇಳುತ್ತಾರೆ.

ಭಾರತೀಯ ಸಂವಿಧಾನದ ವಿಶಿಷ್ಟತೆ ಅದರ ಸಮಾನತೆಯ ತತ್ವದಲ್ಲಿದೆ. ಸಂವಿಧಾನವು ಕೇವಲ ರಾಜಕೀಯ ಸಮಾನತೆಯನ್ನು ಮಾತ್ರ ಘೋಷಿಸಲಿಲ್ಲ; ಶತಮಾನಗಳಿಂದ ಅಸಮಾನತೆಯಲ್ಲಿ ಬದುಕಿದ ಜನರಿಗೆ ಗೌರವದ ಬದುಕಿನ ಭರವಸೆ ನೀಡಿತು. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲಿ ನೀಡಿದ ಎಚ್ಚರಿಕೆ, “ರಾಜಕೀಯ ಸಮಾನತೆ ದೊರೆತರೂ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಮುಂದುವರಿದರೆ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆ”. ಇಂದು ಸಹ ಪ್ರಸ್ತುತವಾಗಿದೆ.

ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಸಂವಿಧಾನವು ಹಲವು ಸವಾಲುಗಳನ್ನು ಎದುರಿಸಿದೆ. 1999ರಲ್ಲಿ ಎನ್‌ಡಿಎ ಸರ್ಕಾರ ಸಂವಿಧಾನ ಪರಾಮರ್ಶೆಗೆ ಮುಂದಾಗಿ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದಾಗ ದೇಶದಲ್ಲಿ ದೊಡ್ಡ ಚರ್ಚೆ ಹುಟ್ಟಿತು. ಅಂದಿನ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಈ ಪ್ರಕ್ರಿಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದರು. “ಸಂವಿಧಾನ ವಿಫಲಗೊಂಡಿದೆಯೇ? ಅಥವಾ ನಾವು ಅದನ್ನು ವಿಫಲಗೊಳಿಸಿದ್ದೇವೆ?” ಎಂಬ ಅವರ ಪ್ರಶ್ನೆ ಭಾರತೀಯ ಪ್ರಜಾಸತ್ತೆಯ ಇತಿಹಾಸದಲ್ಲಿ ಮಹತ್ವದ ನೈತಿಕ ಪ್ರಶ್ನೆಯಾಗಿ ಉಳಿಯಿತು.

ರಾಜಕೀಯ ವಿಶ್ಲೇಷಕ ರಾಜೀವ್ ಭಾರ್ಗವ ಅವರ ಅಭಿಪ್ರಾಯದಲ್ಲಿ, ಸಂವಿಧಾನವು ಕೇವಲ ಆಡಳಿತ ವ್ಯವಸ್ಥೆಯಲ್ಲ; ಅದು ಭಾರತದ ವೈವಿಧ್ಯವನ್ನು ಸಮತೋಲನಗೊಳಿಸುವ ನೈತಿಕ ಚೌಕಟ್ಟು. ಅದನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವು ಸಮಾಜದ ಅಂಚಿನವರ ಮೇಲೆಯೇ ಮೊದಲ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಸಂವಿಧಾನ ಪರಾಮರ್ಶೆಯ ವಿರುದ್ಧ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ಸಮುದಾಯಗಳು ದೇಶಾದ್ಯಂತ ಪ್ರಬಲ ಜನಾಭಿಪ್ರಾಯ ರೂಪಿಸಿದವು.

ಮೈಸೂರಿನ ಹಿರಿಯ ಕಾನೂನು ತಜ್ಞ ಪ್ರೊ. ಸಿ.ಕೆ.ಎನ್. ರಾಜಾ ಅವರು ಸಂವಿಧಾನ ಪರಾಮರ್ಶೆ ಸಮಿತಿಯಲ್ಲಿ ಭಾಗವಹಿಸಲು ನಿರಾಕರಿಸಿದುದು ಬೌದ್ಧಿಕ ಪ್ರಾಮಾಣಿಕತೆಯ ಉದಾಹರಣೆಯಾಯಿತು. ಅದೇ ಸಮಯದಲ್ಲಿ ಕೆಲ ರಾಜಕೀಯ ನಾಯಕರು ಪರಾಮರ್ಶೆಯನ್ನು ಬೆಂಬಲಿಸಿದರೂ, ಸಾರ್ವಜನಿಕ ಚರ್ಚೆಯ ಒತ್ತಡ ಮತ್ತು ರಾಷ್ಟ್ರಪತಿ ನಾರಾಯಣನ್ ಅವರ ಸಂವಿಧಾನಾತ್ಮಕ ದೃಢತೆ ಈ ಪ್ರಕ್ರಿಯೆಯನ್ನು ಮಿತಿಗೊಳಿಸಿತು. ಇತಿಹಾಸಕಾರ ರಾಮಚಂದ್ರ ಗುಹ ಅವರ ಮಾತಿನಲ್ಲಿ, ಭಾರತೀಯ ಪ್ರಜಾಪ್ರಭುತ್ವದ ಬಲವು ಅದರ ಸಂಸ್ಥೆಗಳಷ್ಟೇ ಅಲ್ಲ; ಜಾಗೃತ ನಾಗರಿಕ ಸಮಾಜದಲ್ಲಿಯೂ ಇದೆ.
ಸಂವಿಧಾನವು ಸರ್ಕಾರಗಳ ಸೃಷ್ಟಿಯಲ್ಲ; ಜನರ ಹೋರಾಟದ ಫಲ. ಅದನ್ನು ರಕ್ಷಿಸುವ ಜವಾಬ್ದಾರಿ ಕೂಡ ಜನರದ್ದೇ. ಭಾರತದ ಇತಿಹಾಸವು ತೋರಿಸಿರುವುದು ಏನೆಂದರೆ, ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನಗಳು ಎದುರಾದಾಗಲೆಲ್ಲ ಸಮಾಜದ ಅಂಚಿನ ಜನರು ಮತ್ತು ಪ್ರಜಾಸತ್ತಾತ್ಮಕ ಚಿಂತಕರು ಅದನ್ನು ಕಾಪಾಡಲು ಮುಂದಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...
image 2026 04 14T131816.257

ಇಂದು ಸಂವಿಧಾನದ ಮೌಲ್ಯಗಳನ್ನು ಪುನಃ ಸ್ಮರಿಸುವ ಅಗತ್ಯ ಹೆಚ್ಚಾಗಿದೆ. ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವ ಗೌರವವನ್ನು ಕೇಂದ್ರದಲ್ಲಿರಿಸಿದ ಗಣರಾಜ್ಯವನ್ನು ಉಳಿಸಿಕೊಳ್ಳುವುದು ಕೇವಲ ರಾಜಕೀಯ ಕರ್ತವ್ಯವಲ್ಲ; ಅದು ರಾಷ್ಟ್ರೀಯ ನೈತಿಕ ಹೊಣೆಗಾರಿಕೆ. ಸಂವಿಧಾನವನ್ನು ಉಳಿಸುವ ಹೋರಾಟ ಎಂದರೆ ಭಾರತದ ಪ್ರಜಾಸತ್ತೆಯನ್ನು ಉಳಿಸುವ ಹೋರಾಟವೇ ಆಗಿದೆ.

ಸ್ವತಂತ್ರ ಭಾರತದ ನಿರ್ಮಾಣದ ಸಂದರ್ಭದಲ್ಲಿ ಸಮಾಜವು ಶತಮಾನಗಳ ಅಸಮಾನತೆ, ಜಾತಿ ವಿಭಜನೆ ಮತ್ತು ಆರ್ಥಿಕ ಅನ್ಯಾಯಗಳಿಂದ ಸಂಕಷ್ಟದಲ್ಲಿತ್ತು. ಈ ಹಿನ್ನೆಲೆಯಲ್ಲೇ ಅಂಬೇಡ್ಕರ್ ಅವರು “ಶ್ರೀಸಾಮಾನ್ಯರೇ ನನ್ನ ದೇವರು” ಎಂಬ ದೃಷ್ಟಿಕೋನದಿಂದ ಸಂವಿಧಾನವನ್ನು ರೂಪಿಸಿದರು. ಒಂದು ಕುಟುಂಬ, ಜಾತಿ, ಧರ್ಮ ಅಥವಾ ವರ್ಗಕ್ಕೆ ಸೀಮಿತವಾಗದೆ ಸರ್ವಜನರ ಬದುಕನ್ನು ಸಮಾನ ಹಕ್ಕುಗಳ ಮೂಲಕ ರೂಪಿಸುವುದೇ ಅದರ ಮೂಲ ಉದ್ದೇಶ.

ʼಒಬ್ಬ ವ್ಯಕ್ತಿ – ಒಂದು ಮತ – ಒಂದು ಮೌಲ್ಯʼ ಎಂಬ ತತ್ವ ಭಾರತೀಯ ಪ್ರಜಾಪ್ರಭುತ್ವದ ಮಹತ್ವದ ಆಧಾರ ಶಿಲೆಯಾಯಿತು. ಆಗರ್ಭ ಶ್ರೀಮಂತನ ಮತಕ್ಕೂ ಕಟ್ಟಕಡೆಯ ಬಡವನ ಮತಕ್ಕೂ ಒಂದೇ ಮೌಲ್ಯ ನೀಡಿದ ಈ ವ್ಯವಸ್ಥೆ ಭಾರತೀಯ ಸಮಾಜದಲ್ಲಿ ರಾಜಕೀಯ ಸಮಾನತೆಯ ಹೊಸ ಅಧ್ಯಾಯವನ್ನು ಆರಂಭಿಸಿತು.

ಸಂವಿಧಾನ: ಸಮಾನತೆಯ ದಾರ್ಶನಿಕ ದಸ್ತಾವೇಜು

1946ರಿಂದ 1949ರವರೆಗೆ ನಡೆದ ಸುದೀರ್ಘ ಚರ್ಚೆಗಳು, ಸಾವಿರಾರು ತಿದ್ದುಪಡಿಗಳ ಪರಿಶೀಲನೆ ಮತ್ತು ವೈವಿಧ್ಯಮಯ ಅಭಿಪ್ರಾಯಗಳ ಸಂವಾದದ ಫಲವಾಗಿ 1949ರ ನವೆಂಬರ್ 26ರಂದು ಸಂವಿಧಾನ ಅಂಗೀಕರಿಸಲಾಯಿತು. 1950ರ ಜನವರಿ 26ರಂದು ಅದು ಜಾರಿಗೆ ಬಂದು ಭಾರತವನ್ನು ಸರ್ವಪ್ರಜಾಧಿಪತ್ಯ ಗಣರಾಜ್ಯವನ್ನಾಗಿ ರೂಪಿಸಿತು.

ಕನ್ನಡದ ಮಹಾಕವಿ ಕುವೆಂಪು ಅವರು ಸಂವಿಧಾನ ಜಾರಿಯಾದ ಸಂದರ್ಭದಲ್ಲೇ ರಚಿಸಿದ “ಶ್ರೀಸಾಮಾನ್ಯರ ದೀಕ್ಷಾಗೀತೆ” ಕವಿತೆ, ಸಂವಿಧಾನವು ಸಾಮಾನ್ಯ ಜನರ ಬದುಕಿನಲ್ಲಿ ತಂದ ಸಾಂಸ್ಕೃತಿಕ ಕ್ರಾಂತಿಯ ಕಾವ್ಯಾತ್ಮಕ ಸಾಕ್ಷಿಯಾಗಿದೆ. ಭಾರತದ ಭೂತ–ವರ್ತಮಾನ–ಭವಿಷ್ಯವನ್ನು ಏಕೀಕರಿಸುವ ದಾರ್ಶನಿಕ ಮಾರ್ಗದರ್ಶಕ ಗ್ರಂಥವೇ ಸಂವಿಧಾನ ಎಂಬುದನ್ನು ಈ ಸಾಹಿತ್ಯ ಪರಂಪರೆ ದೃಢಪಡಿಸುತ್ತದೆ.

ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲಿ ನೀಡಿದ ಅಂತಿಮ ಭಾಷಣದಲ್ಲಿ ಮಹತ್ವದ ಎಚ್ಚರಿಕೆಯನ್ನು ನೀಡಿದ್ದರು: ರಾಜಕೀಯವಾಗಿ ಸಮಾನತೆ ದೊರೆತರೂ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಅಸಮಾನತೆ ಮುಂದುವರಿದರೆ ಪ್ರಜಾಪ್ರಭುತ್ವ ಅಪಾಯಕ್ಕೆ ಒಳಗಾಗುತ್ತದೆ ಎಂದು ಅವರು ಹೇಳಿದರು. ಸಮಾನತೆ ಇಲ್ಲದ ಸ್ವಾತಂತ್ರ್ಯವು ಕೆಲವರ ಪ್ರಭುತ್ವಕ್ಕೆ ದಾರಿ ಮಾಡುತ್ತದೆ; ಸ್ವಾತಂತ್ರ್ಯವಿಲ್ಲದ ಸಮಾನತೆ ವ್ಯಕ್ತಿತ್ವವನ್ನು ಕುಂಠಿತಗೊಳಿಸುತ್ತದೆ ಎಂಬ ಅವರ ವಿಶ್ಲೇಷಣೆ ಇಂದಿಗೂ ಪ್ರಸ್ತುತವಾಗಿದೆ.

ಭಾರತ ಸ್ವಾತಂತ್ರ್ಯ ಪಡೆಯುವ ಮೊದಲು ಒಂದೇ ರಾಜಕೀಯ ಘಟಕವಾಗಿರಲಿಲ್ಲ. ಅನೇಕ ರಾಜ್ಯಗಳು, ಪಾಳೆಗಾರರು ಮತ್ತು ಪ್ರಾದೇಶಿಕ ಆಡಳಿತ ವ್ಯವಸ್ಥೆಗಳ ನಡುವೆ ವಿಭಜಿತವಾಗಿದ್ದ ಈ ಭೂಭಾಗವನ್ನು ಜನಾಧಿಪತ್ಯದ ಮೂಲಕ ಏಕೀಕರಿಸುವ ಮಹತ್ತರ ಕಾರ್ಯವನ್ನು ಸಂವಿಧಾನ ನೆರವೇರಿಸಿತು. ಹಿಂದೂ, ಮುಸ್ಲಿಂ, ಸಿಖ್, ಜೈನ, ಕ್ರೈಸ್ತ ಸೇರಿದಂತೆ ಎಲ್ಲಾ ಸಮುದಾಯಗಳು ಸೇರಿ ನಿರ್ಮಿಸಿದ ರಾಷ್ಟ್ರವೇ ಭಾರತ ಎಂಬ ತತ್ವವನ್ನು ಸಂವಿಧಾನ ಸ್ಪಷ್ಟಪಡಿಸಿತು. ಧರ್ಮಾಧಾರಿತ ರಾಷ್ಟ್ರದ ಕಲ್ಪನೆಗೆ ಬದಲಾಗಿ ಜಾತ್ಯತೀತ, ಧರ್ಮನಿರಪೇಕ್ಷ ರಾಜ್ಯ ವ್ಯವಸ್ಥೆಯನ್ನು ಸ್ವೀಕರಿಸುವ ಮೂಲಕ ಭಾರತವು ವಿಶ್ವದ ಮುಂದೆ ವಿಶಿಷ್ಟ ಮಾದರಿಯಾಯಿತು.

ಸಂವಿಧಾನ ಜಾರಿಯಾದ ದಿನದಿಂದಲೇ ಅದರ ಮೂಲ ಮೌಲ್ಯಗಳನ್ನು ದುರ್ಬಲಗೊಳಿಸಲು ಹಲವು ಪ್ರಯತ್ನಗಳು ನಡೆದಿವೆ ಎಂಬ ವಿಮರ್ಶೆಗಳು ಮುಂದುವರಿದಿವೆ. ಒಂದೇ ಭಾಷೆ, ಒಂದೇ ಸಂಸ್ಕೃತಿ, ಒಂದೇ ಧರ್ಮ ಎಂಬ ಏಕೀಕರಣದ ರಾಜಕೀಯವು ಭಾರತದ ವೈವಿಧ್ಯಮಯ ಅಸ್ತಿತ್ವಕ್ಕೆ ಸವಾಲು ಎಸೆದುತ್ತಿದೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಧರ್ಮನಿರಪೇಕ್ಷತೆ ಮತ್ತು ಸಾಮಾಜಿಕ ನ್ಯಾಯ ಎಂಬ ಸಂವಿಧಾನದ ಆಧಾರಸ್ತಂಭಗಳನ್ನು ಕಾಪಾಡುವುದು ನಾಗರಿಕ ಸಮಾಜದ ಪ್ರಮುಖ ಹೊಣೆಗಾರಿಕೆಯಾಗಿದೆ.

ಭಾರತದ ಸಂವಿಧಾನವು ಕೇವಲ ಸರ್ಕಾರ ನಡೆಸುವ ನಿಯಮಾವಳಿ ಅಲ್ಲ; ಅದು ನಾಗರಿಕರ ನಡುವಿನ ಸಾಮಾಜಿಕ ಒಪ್ಪಂದ. ದಲಿತರು, ಹಿಂದುಳಿದವರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಸಮಾನ ಅವಕಾಶಗಳ ಬಾಗಿಲು ತೆರೆಯುವ ಸಾಮಾಜಿಕ ನ್ಯಾಯದ ಬೆಳಕಾಗಿದೆ. ಸಂವಿಧಾನವನ್ನು ಕಾಪಾಡುವುದು ನ್ಯಾಯಾಲಯಗಳ ಅಥವಾ ಸರ್ಕಾರದ ಕೆಲಸ ಮಾತ್ರವಲ್ಲ ಅದು ಪ್ರತಿಯೊಬ್ಬ ನಾಗರಿಕನ ನೈತಿಕ ಕರ್ತವ್ಯ. ಸಂವಿಧಾನದ ಆತ್ಮವನ್ನು ಬದುಕಿನಲ್ಲಿ ಅಳವಡಿಸಿದಾಗ ಮಾತ್ರ ಪ್ರಜಾಪ್ರಭುತ್ವ ಬಲವಾಗುತ್ತದೆ. ಭಾರತದ ಭವಿಷ್ಯ ಸಂವಿಧಾನದ ಅಕ್ಷರಗಳಲ್ಲಿ ಮಾತ್ರವಲ್ಲ, ಅದರ ಮೌಲ್ಯಗಳನ್ನು ಬದುಕಿನಲ್ಲಿ ಅನುಸರಿಸುವ ನಾಗರಿಕರ ಮನಸ್ಸಿನಲ್ಲಿ ಅಡಗಿದೆ. ಸಂವಿಧಾನವೇ ಭಾರತದ ಆತ್ಮವಿಶ್ವಾಸದ ಜ್ಯೋತಿ. ಅದನ್ನು ಬೆಳಗಿಸುವುದು ಎಲ್ಲಾ ಭಾರತೀಯ ನಾಗರೀಕರ ಸಾಮೂಹಿಕ ಜವಾಬ್ದಾರಿ.

ನಮ್ಮ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ನಾವು ಇನ್ನೂ ಎಷ್ಟು ವರ್ಷಗಳ ಕಾಲ ಸಮಾನತೆಯ ನಿರಾಕರಣೆಯನ್ನು ಮುಂದುವರಿಸಬೇಕು? ಒಂದು ವೇಳೆ ನಾವು ತುಂಬಾ ಸಮಯ ಈ ನಿರಾಕರಣೆಯನ್ನು ಮುಂದುವರಿಸಿದರೆ, ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನು ಗಂಡಾಂತರಕ್ಕೆ ದೂಡಿದಂತಾಗುತ್ತದೆ. ನಾವು ಈ ವೈರುಧ್ಯವನ್ನು ಆದಷ್ಟು ಕಡಿಮೆ ಸಮಯದ ಅವಧಿಯಲ್ಲಿ ತೊಡೆದುಹಾಕಬೇಕು ಅಥವಾ ಯಾರು ಈ ಅಸಮಾನತೆಯಿಂದ ಪರಿತಪಿಸುತ್ತಿದ್ದಾರೋ ಅವರು ಬಹಳ ಕಷ್ಟಪಟ್ಟು ಈ ಸಭೆಯು ನಿರ್ಮಿಸಿದ ರಾಜಕೀಯ ಪ್ರಜಾಪ್ರಭುತ್ವದ ಕಟ್ಟಡವನ್ನು ಧ್ವಂಸ ಮಾಡುತ್ತಾರೆ” ಎಂದು ಎಚ್ಚರಿಕೆಯನ್ನು ಸಹ ಅಂಬೇಡ್ಕರ್ ನೀಡಿದ್ದರು.

ಸಾಂಸ್ಕೃತಿಕ ಯಾಜಮಾನ್ಯದ ಕಾರಣದಿಂದ ಅಬಲರು ಪ್ರಬಲರ ಅಡಿಯಾಳಾಗಿರಬೇಕಾಗಿದ್ದ ಕಾಲವು ಮುಗಿದು, ಇನ್ನು ಮುಂದೆ ಯಾರಿಗಾರೂ ಅಡಿಯಾಳಾಗದೆ ಸರ್ವರೂ ತಮಗೆ ದೊರೆಯುವ ಸಮಾನ ಪ್ರಾತಿನಿಧ್ಯವುಳ್ಳ ಪ್ರಜಾಪ್ರಭುತ್ವದ ಮೂಲಕ ಸಬಲೀಕರಣಗೊಳ್ಳಬೇಕು ಎಂಬುದು ಮೂಲ ತತ್ವ. ಇದು ಇಂದು ಸಂವಿಧಾನದಿಂದ ಸಾಧ್ಯವಾದಷ್ಟೂ ಸಾಬೀತಾಗಿದೆ ಕೂಡ.

ಸಂವಿಧಾನದ ಪೀಠಿಕೆಯಲ್ಲಿರುವ ಸ್ವಾತಂತ್ರ್ಯ (Liberty), ಸಮಾನತೆ (Equality) ಮತ್ತು ಭ್ರಾತೃತ್ವ (Fraternity)ಎಂಬ ಪದಗಳು ಕೇವಲ ಶಬ್ದಗಳಲ್ಲ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯ ತಮ್ಮ ಅಂತಿಮ ಭಾಷಣದಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಎಚ್ಚರಿಸಿದ್ದರು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಪ್ರತ್ಯೇಕವಾಗಿ ನೋಡಬಾರದು. ಅವು ಒಂದೇ ತ್ರಿಮೂರ್ತಿ ತತ್ವದ ಭಾಗಗಳು. ಒಂದನ್ನು ಬಿಟ್ಟು ಇನ್ನೊಂದು ಇರಲು ಸಾಧ್ಯವಿಲ್ಲ. ಸಮಾನತೆ ಇಲ್ಲದ ಸ್ವಾತಂತ್ರ್ಯವು ಕೆಲವೇ ಜನರ ಆಡಳಿತಕ್ಕೆ ದಾರಿ ಮಾಡಿಕೊಡುತ್ತದೆ, ಸ್ವಾತಂತ್ರ್ಯವಿಲ್ಲದ ಸಮಾನತೆಯು ವ್ಯಕ್ತಿಗತ ಪ್ರತಿಭೆಯನ್ನು ಕೊಲ್ಲುತ್ತದೆ ಎಂದಿದ್ದರು.

ಮೊದಲಿನಿಂದಲೂ ಸಂವಿಧಾನದ ಮೂಲ ಆಶಯಗಳನ್ನು ತಡೆಯುವ, ದಿಕ್ಕು ತಪ್ಪಿಸುವ, ಬಲಹೀನಗೊಳಿಸುವ ಕಾರ್ಯಗಳನ್ನು ಮಾಡುತ್ತಲೇ ಬಂದರು. ಅದು ಸಂವಿಧಾನ ಅಂಗೀಕಾರಗೊಳ್ಳುವ ಪ್ರಕ್ರಿಯೆಯಿಂದಲೇ ಪ್ರಾರಂಭವಾಯಿತೆನ್ನಬಹುದು. ಸಂವಿಧಾನವನ್ನು ತಮ್ಮ ಹಿತಾಸಕ್ತಿಗಳಿಗೆ ತಕ್ಕಂತೆ ರೂಪಿಸಿಕೊಳ್ಳಲು ಸಾವಿರಾರು ತಿದ್ದುಪಡಿಗಳು ಬಂದವು. ಅವುಗಳಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ತಿದ್ದುಪಡಿಗಳಿಗೆ ಅಂಗೀಕಾರ ನೀಡಲಾಯಿತು. ಅದಕ್ಕೆ ಪ್ರಧಾನ ಕಾರಣ ಸಂವಿಧಾನ ರಚನಾ ಸಭೆಯ ಸದಸ್ಯರುಗಳಲ್ಲಿ ಬಹುತೇಕರು ಶ್ರೀಮಂತ ಭೂಮಾಲಿಕತ್ವದ ಹಿನ್ನೆಲೆಯವರು, ರಾಜಮನೆತನಗಳ ಹಿನ್ನೆಲೆಯವರು.

Bhimrao Ramji Ambedkar

ಅಂಬೇಡ್ಕರ್ ಮೂಕನಾಯಕ ಎಂಬ ಪತ್ರಿಕೆ, ಬಹಿಕೃತ ಹಿತಕಾರಿಣಿ ಸಭಾ, ಸ್ವತಂತ್ರ ಕಾರ್ಮಿಕ ಪಕ್ಷ, ಶೆಡ್ಯೂಲ್ಡ್ ಕ್ಯಾಸ್ಟ್ಸ್ ಫಡರೇಷನ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಂತಹ ಸಂಘಟನೆಗಳನ್ನು ದಲಿತ ದಮನಿತರು, ಹಿಂದುಳಿದವರು ಹಾಗೂ ಕಾರ್ಮಿಕರ ಪರವಾಗಿ ಸಂಘಟಿಸಿದ್ದರು. ಮಹಿಳಾ ಹಾಗೂ ಕಾರ್ಮಿಕ ಪರವಾದ ಹಲವು ಕಾನೂನುಗಳನ್ನು ರೂಪಿಸುವಲ್ಲಿ, ತಿದ್ದುಪಡಿ ತರುವಲ್ಲಿ ಪ್ರಧಾನವಾಗಿ ಶ್ರಮಿಸಿದ್ದರು. ದೇಶಕ್ಕೆ ನೈಜ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ಲಭಿಸುವುದು ದಲಿತ ದಮನಿತರಿಗೆ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ಖಾತ್ರಿಯಾದಾಗ ಮಾತ್ರ ಎಂಬುದನ್ನು ಅಂಬೇಡ್ಕರರು ಗ್ರಹಿಸಿದ್ದರು. ಅದನ್ನು ಅವರು ಹಲವಾರು ಸಂಧರ್ಭದಲ್ಲಿ ಪ್ರಸ್ತಾಪಿಸಿದ್ದಾರೆ. ಅಂಗೀಕಾರಗೊಂಡು 1950ರಿಂದಲೇ ಚಾಲ್ತಿಗೆ ಬಂದ ಸಂವಿಧಾನದಿಂದ ದಲಿತ ದಮನಿತರಿಗೆ ಸ್ವಾತಂತ್ರ್ಯ ಸಮಾನತೆ ಸಿಕ್ಕಿ ಬಿಡುತ್ತದೆ ಎಂಬ ಕಲ್ಪನೆ ಅಂಬೇಡ್ಕರದಾಗಿರಲಿಲ್ಲ. ತಿದ್ದುಪಡಿಗಳ ನಂತರ ಅಂಗೀಕಾರಗೊಂಡ ಸಂವಿಧಾನದ ಬಗ್ಗೆ ಅವರಿಗೆ ಸಮಾಧಾನವೂ ಇರಲಿಲ್ಲ. 1956ರ ಅವಧಿಯಲ್ಲಿ ಅಂಬೇಡ್ಕರರು ಮಾತನಾಡುತ್ತಾ “ಬಹಳಷ್ಟು ಜನರು ನಮ್ಮ ಸಂವಿಧಾನದ ಬಗ್ಗೆ ಅತೀ ಉತ್ಸಾಹಿಗಳಾಗಿ ಕಾಣುತ್ತಾರೆ. ನನ್ನದಂತೂ ಹಾಗಲ್ಲ. ಸದ್ಯದ ಭಾರತೀಯ ಸಂವಿಧಾನವನ್ನು ಕಿತ್ತೆಸೆಯಬೇಕೆನ್ನುವ, ಕನಿಷ್ಠ ಮಟ್ಟಿಗೆ ಅದನ್ನು ಸಂಪೂರ್ಣವಾಗಿ ಸರಿಪಡಿಸಲು ಹೆಣಗುವ ಜನರನ್ನು ಸೇರಿಕೊಳ್ಳಲು ನಾನು ಸಿದ್ಧ” ಎಂದು ಸ್ವತಃ ಹೇಳಿದ್ದರು.ಸ್ವತಂತ್ರ ಭಾರತ ನಿರ್ಮಾಣಕ್ಕೆ ಸಂಬಂಧಿಸಿದ ಹಲವಾರು ಒಳನೋಟಗಳನ್ನು ನೋಡ ಬೇಕಾಗುತ್ತವೆ. ರಾಷ್ಟ್ರೀಯತಾವಾದಿ ಹೋರಾಟದ ಹಿನ್ನೆಲೆಯ ಸಂವಿಧಾನ ರಚನೆ ಪ್ರಕ್ರಿಯೆಯ ವೈವಿಧ್ಯತೆಯನ್ನು ನಿರ್ವಹಿಸಲು ಅಳವಡಿಸಿಕೊಂಡ ಸಾಮಾಜಿಕ ಒಗ್ಗಟ್ಟಿನ ವ್ಯವಸ್ಥೆ, ಭಾಷಾ ಸಮುದಾಯಗಳ ಬೇಡಿಕೆಗಳನ್ನು ಪೂರೈಸಲು ರೂಪಿಸಲಾದ ಕಾರ್ಯವಿಧಾನ, ಹಿಂದುಳಿದ ವರ್ಗಗಳು ಕಲ್ಯಾಣ ಮತ್ತು ಭಾರತೀಯ ಸಂದರ್ಭದಲ್ಲಿ ಧಾರ್ಮಿಕ ಮತ್ತು ಜಾತ್ಯತೀತ ಕಾನೂನಿನ ನಿರ್ವಹಣೆಯ ಸ್ಪಷ್ಟ ತಿಳುವಳಿಕೆ ಇಂತಹ ಬಹು ಆಯಾಮದ ವಿಶ್ಲೇಷಣೆಗಳ ನಂತರ ಜಾರಿ ಸಾಧ್ಯಗೊಂಡದ್ದು ಭಾರತೀಯ ಸಂವಿಧಾನ.

WhatsApp Image 2025 12 18 at 6.38.33 PM
ಖಾಸಿಂ ಸಾಬ್ ಎ, ಬೆಂಗಳೂರು
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಬಾಗಲಕೋಟೆ | ನಿಲ್ದಾಣಗಳಿದ್ದರೂ ರಸ್ತೆಯಲ್ಲೇ ಬಸ್‌ ನಿಲುಗಡೆ; ಟ್ರಾಫಿಕ್ ಕಿರಿಕಿರಿಗೆ ಪ್ರಯಾಣಿಕರು ಹೈರಾಣ

ಬಾಗಲಕೋಟೆ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರು ಬಿಸಿಲು,...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...