ಸಂವಿಧಾನವೆಂಬ ನಮ್ಮೆಲ್ಲರ ಆಸ್ತಿಗಾಗಿ ಸತ್ಯಾಗ್ರಹ

Date:

ಇವತ್ತು ಬೀದಿಗೆ ಇಳಿದಿರೋ ಜನ ಸಾಮಾನ್ಯರಲ್ಲ. ಬದುಕಿನ ಹಕ್ಕನ್ನು ಈ ದೇಶದ ಜನರಿಗೆ ಮರಳಿ ಕೊಡಿಸುವುದಕ್ಕಾಗಿ, ಗಾಂಧೀಜಿಯವರ ಮಾತುಗಳು ಮತ್ತು ಅಂಬೇಡ್ಕರ್ ಅವರ ಸಂವಿಧಾನದ ಪೀಠಿಕೆಯನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿರುವ ನಿಜವಾದ ಹೋರಾಟಗಾರರು.

ಸರ್ಕಾರದ ದಬ್ಬಾಳಿಕೆಯ ವಿರುದ್ಧ ಜನ ಬೀದಿಗೆ ಇಳಿದು ಧ್ವನಿ ಎತ್ತಿದಾಗ ಮಾತ್ರ, ಪರಸ್ಪರ ಕಾಳಜಿ ಮತ್ತು ಒಗ್ಗಟ್ಟಿನ ನಿಜವಾದ ರಾಜಕಾರಣ ಏನೆಂದು ಗೊತ್ತಾಗುತ್ತದೆ; ಇವತ್ತು ಬೀದಿಯಲ್ಲಿರುವ ಹೋರಾಟಗಾರರು ನಮಗೆ ಅದನ್ನೇ ತೋರಿಸಿಕೊಡುತ್ತಿದ್ದಾರೆ.

- Advertisement -

ಈಗ ಭಾರತದ ಬೀದಿಗಳಲ್ಲಿ ಏನೆಲ್ಲ ನಡೆಯುತ್ತಿದೆಯೋ, ಅದೆಲ್ಲವೂ ನಮ್ಮ ಹಕ್ಕುಗಳು ಮತ್ತು ಸಂವಿಧಾನದ ಬಗ್ಗೆ ಹೊಸದೊಂದು ಸಂವಾದವನ್ನು ಪ್ರಾರಂಭಿಸಿದೆ. ಇದು ಒಂದೇ ರಾತ್ರಿಯಲ್ಲಿ ಆಗಿದ್ದಲ್ಲ; ಕಳೆದ ಹದಿನೈದು ವರ್ಷಗಳಿಂದ ಜನರ ಮನಸ್ಸಿನಲ್ಲಿ ಬೇಯುತ್ತಿದ್ದ ಸಿಟ್ಟು ಇದು. ಸರ್ಕಾರ ಜನರ ಬದುಕನ್ನು ಹೇಗೆಲ್ಲ ಕಿತ್ತುಕೊಳ್ಳುತ್ತಿದೆ ನೋಡಿ-ಮೊದಲು ಮನೆ-ಜಾಗ ಹೋದವು, ಉಳಿತಾಯದ ಹಣ ಕರಗಿತು, ಶಿಕ್ಷಣ ಕೈತಪ್ಪಿತು, ಈಗ ಕಡೆಗೆ ಮತದಾನದ ಹಕ್ಕಿನ ಮೇಲೂ ಕಣ್ಣು ಬಿದ್ದಿದೆ. ಇದರ ವಿರುದ್ಧ ಜನರ ಆಕ್ರೋಶ ಕಟ್ಟೆಯೊಡೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಿಲಿಕಾನ್ ಸಿಟಿಗಳಲ್ಲಿ ಹಸಿದ ಹಲವು ಬದುಕುಗಳ ಕಥೆ–ವ್ಯಥೆ

ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವು ನಮ್ಮನ್ನು ತಟ್ಟದಿದ್ದರೆ, ನಮ್ಮ ಪ್ರಗತಿಯ ಬಗ್ಗೆ ಮತ್ತೊಮ್ಮೆ ಯೋಚಿಸಬೇಕಾಗುತ್ತದೆ. ಮತ್ತೊಬ್ಬರ ಹಸಿವು ನಮ್ಮ ಮನಸ್ಸಿನಲ್ಲಿ ಸಂವೇದನೆ ಮೂಡಿಸದಿದ್ದರೆ, ನಮ್ಮ ಮಾನವೀಯತೆಯ ಸ್ವರೂಪವನ್ನೇ ಪರಿಶೀಲಿಸಬೇಕಾಗುತ್ತದೆ. ಆಧುನಿಕ ನಗರಗಳೆಂದರೆ ನೆನಪಾಗುವುದು ಸಿಲಿಕಾನ್...

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಒಂದೆಡೆ ಕೈಯಲ್ಲಿ ಬಂದೂಕು, ಲಾಠಿ ಹಿಡಿದ ಪೊಲೀಸರು; ಇನ್ನೊಂದೆಡೆ ಯಾವುದೇ ಭಯವಿಲ್ಲದೆ ಎದುರು ನಿಂತ ಯುವಜನರು. ಜನಸಾಮಾನ್ಯರ ಜೊತೆ ನಿಂತು ಬೀದಿಯಲ್ಲಿ ಹೋರಾಡುವ ರಾಜಕಾರಣಿಗಳಿಗೆ ಮಾತ್ರ ಜನ ಮರ್ಯಾದೆ ಕೊಡುತ್ತಾರೆ. ಹೋರಾಟಗಾರರ ಪರ ನಿಲ್ಲಲು ಹೊರಟ ವಕೀಲರಿಗೂ ಗೊತ್ತಾಗಿದೆ. ಪೊಲೀಸರು ತಮ್ಮನ್ನೂ ವ್ಯಾನ್‌ನಲ್ಲಿ ತುರುಕಿ, ಕೇಸ್ ಜಡಿಯುತ್ತಾರೆ ಎಂದು ಅವರಿಗೂ ಸ್ಪಷ್ಟವಾಗಿದೆ. ಇನ್ನು ಜನರ ಮತಗಳನ್ನು ಕದ್ದು, ಸಿಂಹಾಸನ ಏರಿ ಕುಳಿತ ನಾಯಕರಿಗೆ ಆ ಗದ್ದುಗೆಯ ಮೇಲೆ ಕೂರಲು ಧೈರ್ಯ ಸಾಲುತ್ತಿಲ್ಲ; ಭಯದಿಂದ ಅದರ ಹಿಂದೆಯೇ ಅವಿತುಕೊಳ್ಳುತ್ತಿದ್ದಾರೆ.

ಇದನ್ನು ಓದಿದ್ದೀರಾ?: ಸಂವಿಧಾನದಲ್ಲಿ ಇಂಪೀಚ್‌ಮೆಂಟ್‌ ಮೂಲಕ ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಿಗೊಳಿಸಲು ಅವಕಾಶವಿದೆ: ಶಶಿ ತರೂರ್‌

ಇತ್ತ ನ್ಯಾಯಾಲಯಗಳ ಕಥೆ ನೋಡಿದರೆ, ನ್ಯಾಯಾಧೀಶರು ಇವತ್ತಿಗೂ ಅದೇ ಹಳಸಲು ಮಾತುಗಳನ್ನು ಆಡುತ್ತಿದ್ದಾರೆ. “ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟಿಸಿದರೆ ಮಾತ್ರ ನಾವು ಕೇಳುತ್ತೇವೆ” ಎನ್ನುತ್ತಾರೆ. ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಅವರಂಥವರಿಗೆ ಜಾಮೀನು ನೀಡುವ ವಿಚಾರ ಬಂದಾಗ, “ಕೋರ್ಟ್ ನಿಯಮಗಳಿಗೆ ನಾವು ಕಟ್ಟುಬಿದ್ದಿದ್ದೇವೆ” ಎಂದು ಜಾರಿಕೊಳ್ಳುತ್ತಾರೆ. ಆದರೆ ಆಳುವ ಸರ್ಕಾರವೇ ಸ್ವತಃ ಕಾನೂನನ್ನು ಗಾಳಿಗೆ ತೂರಿ ದೌರ್ಜನ್ಯ ಎಸಗುತ್ತಿರುವಾಗ, ಇಂಥವರ ವಿರುದ್ಧ ‘ಕಾನೂನುಬದ್ಧ ಪ್ರತಿಭಟನೆ’ ಮಾಡಬೇಕು ಎನ್ನುವುದಕ್ಕೇ ಅರ್ಥವಿಲ್ಲ. ಕೋರ್ಟು ಮತ್ತು ಕಾನೂನನ್ನೇ ಕಟ್ಟಿಹಾಕಿರುವಾಗ, ಜನ ನ್ಯಾಯ ಕೇಳಿಕೊಂಡು ಯಾರ ಮುಂದೆ ಹೋಗಿ ಕೈಕಟ್ಟಿ ನಿಲ್ಲಬೇಕು?
ಸರ್ವಾಧಿಕಾರದಲ್ಲಿ ಪ್ರಶ್ನೆ ಮಾಡುವುದೇ ಅಪರಾಧ; ಅದೇ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದು ಪ್ರತಿಯೊಬ್ಬರ ಹಕ್ಕು. ತಮ್ಮ ಹಕ್ಕಿನ ಬಗ್ಗೆ ಮಾತನಾಡಿದ ಜನರಿಗೆ ಸರ್ಕಾರ ‘ಆಂದೋಲನಜೀವಿ’ಗಳು ಎಂದು ಪಟ್ಟ ಕಟ್ಟಿ, ಅಪರಾಧಿಗಳಂತೆ ನೋಡುತ್ತಿದೆ. ಸಂವಿಧಾನಕ್ಕೇ ಕಂಟಕ ಬಂದಿರುವಾಗ ನ್ಯಾಯಾಲಯಗಳು ಕಣ್ಣುಮುಚ್ಚಿ ಕುಳಿತಿರುವುದು ನಿಜಕ್ಕೂ ದುರಂತ.

constitution and protest1

ದೇಶದ ಮೇಲಿನ ಕರ್ತವ್ಯ
ಸತ್ಯಾಗ್ರಹ ಹುಟ್ಟಿದ್ದೇ ಈ ನೆಲದಲ್ಲಿ; ಕಾಲಕ್ಕೆ ತಕ್ಕಂತೆ ಅದು ಹೊಸ ರೂಪ ಪಡೆಯುತ್ತಲೇ ಇರುತ್ತದೆ. ನಾವೀಗ ಅಂಥದ್ದೇ ಒಂದು ದೊಡ್ಡ ತಿರುವಿನಲ್ಲಿ ಬಂದು ನಿಂತಿದ್ದೇವೆ. ಜನರ ಹೊಟ್ಟೆಯಲ್ಲಿ ಹೊತ್ತಿ ಉರಿಯುತ್ತಿರುವ ಆಕ್ರೋಶವನ್ನು ಪೆಲ್ಲೆಟ್ ಗನ್ ಮೂಲಕ, ಲಾಠಿ ಬೀಸಿ ಇಲ್ಲವೇ ಕೋರ್ಟ್ ಬೆದರಿಕೆ ಹಾಕಿ ತಣಿಸಲು ಸಾಧ್ಯವಿಲ್ಲ. ಶಾಂತಿಯುತವಾಗಿ ಬೀದಿಯಲ್ಲಿ ಹೋರಾಡುವುದೊಂದೇ ಇದಕ್ಕೆ ದಾರಿ, ಮತ್ತು ಅದು ನಮ್ಮ ಜನ್ಮಸಿದ್ಧ ಹಕ್ಕು.

ಸಂವಿಧಾನ ಅನ್ನೋದು ಯಾರದೋ ಒಬ್ಬರ ಖಾಸಗಿ ಆಸ್ತಿಯಲ್ಲ; ಅದು ನಾವೆಲ್ಲರೂ ಸೇರಿ ಬಳಸುವ ಸಾರ್ವಜನಿಕ ಸಂಪತ್ತು. ಅದು ಪ್ರತಿಯೊಬ್ಬರಿಗೂ ಗೌರವ, ಆತ್ಮಗೌರವ ಮತ್ತು ಸಮಾನತೆಯನ್ನು ನೀಡುತ್ತದೆ. ಭೇದಭಾವ, ಅನ್ಯಾಯವನ್ನು ಕಿತ್ತೊಗೆದು, ನಾವೆಲ್ಲ ಒಂದೇ ಎಂಬ ಭಾವನೆಯನ್ನು ಮೂಡಿಸುತ್ತದೆ. ‘ಸಂವಿಧಾನ ನಮ್ಮೆಲ್ಲರ ಆಸ್ತಿ’ ಎಂಬ ಕಲ್ಪನೆಯೇ ಈ ಹೊತ್ತಿನ ನ್ಯಾಯದ ಹೋರಾಟಕ್ಕೆ ದಾರಿ.

ಕೋರ್ಟ್‌ಗಳು ಮತ್ತು ನ್ಯಾಯಾಧೀಶರು ಇನ್ನು ಮುಂದಾದರೂ ಈ ‘ಬೀದಿಯ ನ್ಯಾಯ’ವನ್ನು ಅರ್ಥಮಾಡಿಕೊಳ್ಳಬೇಕು. ನ್ಯಾಯ ಅನ್ನೋದು ಕೇವಲ ಕೋರ್ಟಿನ ನಾಲ್ಕು ಗೋಡೆಗಳೊಳಗೆ ಅಥವಾ ಸಂಸತ್ತಿನ ಭದ್ರವಾದ ಕೋಟೆಯಲ್ಲೋ ಸಿಗುವಂಥದ್ದಲ್ಲ. ಅದು ಇವತ್ತು ಆ ಗೋಡೆಗಳನ್ನೆಲ್ಲ ದಾಟಿ ಹೊರಬಂದಿದೆ. ತೆರೆದ ಆಕಾಶದ ಕೆಳಗೆ, ಬೀದಿಯಲ್ಲೇ ಇವತ್ತು ಸಂವಿಧಾನ ಜೀವಂತವಾಗಿ ಉಸಿರಾಡುತ್ತಿರುವುದು.

ಇದನ್ನು ಓದಿದ್ದೀರಾ?: ದಿಕ್ಕು ತೋಚದೆ ತಬ್ಬಿಬ್ಬಾಗಿರುವ ಚುನಾವಣಾ ಆಯೋಗ: ದಿನೇ ದಿನೆ ಕುಸಿಯುತ್ತಿರುವ ವಿಶ್ವಾಸಾರ್ಹತೆ

ಸರ್ಕಾರ ಮಾಡುವ ಅನ್ಯಾಯಗಳನ್ನು ಪ್ರಶ್ನಿಸುವುದೇ ಈ ಕಾಳಜಿಯ ರಾಜಕಾರಣ. ಈ ದೇಶದ ಜನರಿಗೆ ತಮ್ಮ ಬದುಕಿನ ಮೇಲಿನ ಹಕ್ಕನ್ನು ಮರಳಿ ಕೊಡಿಸುವುದಕ್ಕಾಗಿ, ಇವತ್ತು ಬೀದಿಗೆ ಇಳಿದಿರುವ ಪ್ರತಿಯೊಬ್ಬ ಹೋರಾಟಗಾರನ ಕೈಯಲ್ಲೂ ಗಾಂಧಿಯವರ ತತ್ವ ಮತ್ತು ಅಂಬೇಡ್ಕರ್ ಅವರ ಸಂವಿಧಾನದ ಬಲವಿದೆ.

ಕೃಪೆ: ದಿ ಹಿಂದೂ, ಮೂಲ: ಕಲ್ಪನಾ ಕಣ್ಣಬಿರನ್, ವಿಯೆನ್ನಾ ವಿಶ್ವವಿದ್ಯಾಲಯದ ವಿಯೆನ್ನಾ ಸೆಂಟರ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್‌ನಲ್ಲಿ ಅಡ್ವಾನ್ಸ್ಡ್ ಫೆಲೋ, ಕನ್ನಡಕ್ಕೆ: ಟಿ.ಎಸ್. ವೇಣುಗೋಪಾಲ್

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕ ಹಿಂದಿಕ್ಕಿ ಭಾರತದ ನಂ.1 LNG ಪೂರೈಕೆದಾರನಾದ ಓಮನ್‌!

ಪಶ್ಚಿಮ ಏಷ್ಯಾದ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಅನಿಲ ಪೂರೈಕೆಯಲ್ಲಿ...

ಸಿಲಿಕಾನ್ ಸಿಟಿಗಳಲ್ಲಿ ಹಸಿದ ಹಲವು ಬದುಕುಗಳ ಕಥೆ–ವ್ಯಥೆ

ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವು ನಮ್ಮನ್ನು ತಟ್ಟದಿದ್ದರೆ, ನಮ್ಮ ಪ್ರಗತಿಯ ಬಗ್ಗೆ...