‘ಅಸ್ಪೃಶ್ಯ ಭಾರತ’ ಭೂತಕ್ಕಿಂತಲೂ ಚಲನಶೀಲವಾಗುತ್ತಿದೆ…

Date:

ಇತ್ತೀಚೆಗೆ ಉತ್ತರಾಖಂಡದ ಹಲ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ್ದರು ಎಂಬ ಕಾರಣಕ್ಕೆ ಅಲ್ಲಿಯ ಕೆಲ ಹಿಂದುತ್ವ ಸಂಘಟನೆಯವರು ಹೋಮ-ಹವನ ಮಾಡುವುದರ ಮೂಲಕ ಆ ಸ್ಥಳವನ್ನು ಶುದ್ಧೀಕರಣ ಮಾಡಿದ್ದಾರೆ. ಈ ಕೃತ್ಯ ಸಂವಿಧಾನ ವಿರೋಧಿ ಧೋರಣೆಯಾಗಿದೆ.

- Advertisement -

ಅಸಮಾನತೆಯ ಅಮಾನವೀಯ ವ್ಯವಸ್ಥೆಗೆ ಬಲಿಯಾಗಿ ಅಪಮಾನವನ್ನು ನುಂಗಿ ಹಲವಾರು ಶತಮಾನ ಪ್ರಾಣಿಗಳಿಗಿಂತ ಕಡೆಯಾಗಿ ಬದುಕು ಸಾಗಿಸಿದೆ ಅಸ್ಪೃಶ್ಯ ಶೋಷಿತ ಸಮುದಾಯ. ಅವರನ್ನು ಶತಮಾನಗಳಿಂದ ಅಕ್ಷರ ಜ್ಞಾನದಿಂದ ದೂರವಿಟ್ಟದ್ದು ಈ ಭಾರತೀಯ ಜಾತೀವಾದಿ ಸಮಾಜ. ಜಾತಿ ವ್ಯವಸ್ಥೆಯ ಮನಸ್ಥಿತಿಯ ಕಾರಣದಿಂದಾಗಿ ಅಸ್ಪೃಶ್ಯತೆಯನ್ನು ಆಚರಿಸುತ್ತ ಬರಲಾಗಿತ್ತು. ಅಂಬೇಡ್ಕರ್ ಅವರು 1927 ಮಹಾಡ್ ಚೌಡರ್ ಕೆರೆಯ ನೀರು ಕುಡಿಯುವ ಹೋರಾಟದ ಮೂಲಕ ಅಸ್ಪೃಶ್ಯ ಭಾರತದ ನಿಜ ಸ್ವರೂಪವನ್ನು ಜಗದ ಮುಂದೆ ಬೆತ್ತಲು ಮಾಡಿದರು. ಇದು ಭಾರತದೊಳಗಡೆಯೇ ಇರುವ ಮತ್ತೊಂದು ಅಸ್ಪೃಶ್ಯ ಭಾರತದ ಚಿತ್ರಣವಾಗಿತ್ತು. ಇಷ್ಟಕ್ಕೆ ಸುಮ್ಮನಾಗದ ಬಾಬಾಸಾಹೇಬರು ಅಸ್ಪೃಶ್ಯತೆಯ ಕೂಪದಲ್ಲಿ ನರಕ ಯಾತನೆಯ ಬದುಕು ಸಾಗಿಸಿದ ಶೋಷಿತ ವರ್ಗಕ್ಕೆ ನ್ಯಾಯ ದೊರಕಿಸಲು ಪಣತೊಟ್ಟರು. ಈ ಜಾತಿ ಮತ್ತು ಅಸ್ಪೃಶ್ಯತೆಯ ತಾರತಮ್ಯ ಹುಟ್ಟಿಗೆ ಮೂಲವಾದ ಮನುಧರ್ಮ ಶಾಸ್ತ್ರವನ್ನು ಸುಟ್ಟು, ಭಾರತದ ಎಲ್ಲ ಶೋಷಿತ ಸಮುದಾಯಕ್ಕೆ ಸಂವಿಧಾನದ ಮೂಲಕ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಪರಿಕಲ್ಪನೆಯನ್ನು ಸ್ಥಾಯಿಗೊಳಿಸಿದರು. ಇದಕ್ಕೆ ಭಾರತದ ಸಂವಿಧಾನ ಪೀಠಿಕೆಯೇ ಸಾಕ್ಷಿ.

ದುರಂತವೆಂದರೆ ಭಾರತವು ತನ್ನ 77ನೇ ಗಣರಾಜ್ಯೋತ್ಸವವನ್ನು ಮುಗಿಸಿ ಈಗ 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡುತ್ತಿರುವ ಈ ಹೊತ್ತಲ್ಲಿ ಈಗ ಮತ್ತದೆ ‘ಅಸ್ಪೃಶ್ಯ ಭಾರತ’ ಭೂತಕ್ಕಿಂತಲೂ ಚಲನಶೀಲವಾಗುತ್ತಿದೆ. ಇತ್ತೀಚೆಗೆ ಉತ್ತರಾಖಂಡದ ಹಲ್ವಾನಿಯ ರಾಮಲೀಲಾ ಮೈದಾನದಲ್ಲಿ ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಆಗಸ್ಟ್ 08 ರಂದು ಭಾಷಣ ಮಾಡಿದ್ದರು. ಅದಾದ ತರುವಾಯದಲ್ಲಿ ಅಲ್ಲಿಯ ಕೆಲ ಹಿಂದುತ್ವ ಸಂಘಟನೆಯವರು ಹೋಮ-ಹವನ ಮಾಡಿ ಮಾಡುವುದರ ಮೂಲಕ ಆ ಸ್ಥಳವನ್ನು ಶುದ್ಧೀಕರಣ ಮಾಡಿ ಧೀಮಂತ ನಾಯಕರನ್ನು ಅವಮಾನಿಸಲಾಗಿದೆ. ಈ ಕೃತ್ಯ ಸಂವಿಧಾನ ವಿರೋಧಿ ಧೋರಣೆಯಾಗಿದೆ. ಇಲ್ಲಿ ಮುಖ್ಯವಾಗಿ ವಂಚಿತಗೊಂಡ ಸಮುದಾಯದಿಂದ ಬಂದ ಮಲ್ಲಿಕಾರ್ಜುನ ಖರ್ಗೆಯವರ ಬೆಳವಣಿಗೆ ಮನುವಾದಿಗಳಿಗೆ ನುಂಗಲಾರದ ತುತ್ತಾಗಿದೆ. ಇದು ಬರೀ ಮಲ್ಲಿಕಾರ್ಜುನ ಖರ್ಗೆಯವರಿಗಾದ ಅವಮಾನವಲ್ಲ, ಇಡೀ ಶೋಷಿತ ಸಮುದಾಯಗಳಿಗಾದದ್ದು. ಅಸ್ಪೃಶ್ಯತೆ ಆಚರಣೆ ದೇಶದೋಹಿ ಕೃತ್ಯ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...
ಖರ್ಗೆ 13

ಈ ಘಟನೆಯ ಮೂಲಕ ಮತ್ತೆ-ಮತ್ತೆ ಅಸ್ಪೃಶ್ಯ ಭಾರತದ ಆಂತರ್ಯದಲ್ಲಿ ಅಡಕವಾಗಿರುವ ಅನಿಷ್ಠ ಕೊಳಕು ಮನಸ್ಥಿತಿಗೆ ಹಿಡಿದ ಕನ್ನಡಿ. ಹೀಗಾಗಿ ವರ್ತಮಾನದ ನಮ್ಮ ಅನೇಕ ಭಾರತಗಳಲ್ಲಿನ ಅಸ್ಪೃಶ್ಯ ಸ್ವತಂತ್ರ ಭಾರತದೊಡನೆ ಮುಖಾ-ಮುಖಿಯಾಗುವುದು ಮುಖ್ಯ. ವಿದೇಶಿಯರಿಂದ ದಕ್ಕಿದ ಸ್ವಾತಂತ್ರ್ಯ ಭಾರತೀಯರ ಹಿತ ಮಾತ್ರವಲ್ಲದೆ, ಇವರ ಒಳಿತನ್ನು ಧ್ಯಾನಿಸಿ ಬದುಕುವಂತಹ, ದೃಷ್ಟಿಕೋನವನ್ನ ಬೆಳೆಸುವಂತಹ, ವೈಚಾರಿಕ-ವೈಜ್ಞಾನಿಕತೆ, ತಾರ್ಕಿಕತೆಯನ್ನು ಒಳಗೊಂಡ ಮನೋಭಾವನೆಯನ್ನು ಮೂಡಿಸುವಂತಹ ಸ್ವಾತಂತ್ರ್ಯಾಕಾಂಕ್ಷೆ ತುಡಿತವನ್ನು ಸಾಕಾರಗೊಳಿಸುವಲ್ಲಿ ಸ್ವತಂತ್ರ ಭಾರತ ಅದೆಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳಬೇಕಿದೆ.

ಭಾರತದ ಸಮಾಜದಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿರುವ ಸಾಮಾಜಿಕ-ಆರ್ಥಿಕ, ರಾಜಕೀಯ ಅಸಮಾನತೆಗಳು. ಅವು ತಮ್ಮ ಜೀವಂತಿಕೆಯ ಸಹಜ ಸ್ಥಿತಿಯ ಕುರುಹುಗಳನ್ನು ಎಲ್ಲ ಕಾಲಕ್ಕೂ ವಿಸ್ತರಿಸಿಕೊಳ್ಳುತ್ತಲೇ ಬಂದಿವೆ, ಬರುತ್ತಿವೆ ಕೂಡ. ಹೀಗಾಗಿ ಭಾರತವೇ ಒಂದು ಅಸಮಾನತೆಯ ಕೂಪವಾಗಿ ನಿರ್ಮಾಣವಾಗಿದೆ. ಅಲ್ಲದೆ ಬಹುಮುಖ್ಯವಾಗಿ ಜಾತಿ, ಲಿಂಗ, ಮತದ ತಾರತಮ್ಯತೆಯನ್ನು ಪೋಷಿಸುತ್ತ ಭಾರತೀಯ ಸಮಾಜದಲ್ಲಿ ಪ್ರಜಾಸತಾತ್ಮಕ ಅಸಮಾನತೆಯ ಸ್ವತಂತ್ರ ಭಾರತವನ್ನು ಹುಟ್ಟು ಹಾಕಿದೆ. ಈ ಮೂಲಕ ಪ್ರಜಾಪ್ರಭುತ್ವ ಎಂಬ ವೇಷದಲ್ಲಿ ಸರ್ವಾಧಿಕಾರಿ ಆಡಳಿತ ಭೂತವು ಬಹುಸಂಖ್ಯಾತರ ಸ್ವಾತಂತ್ರ್ಯವನ್ನು ಕುತಂತ್ರಗಳ ಮುಖೇನವಾಗಿ ಹತ್ತಿಕ್ಕುತ್ತಿದೆ.

ಸಂವಿಧಾನ ಜಾರಿಯಾಗಿ ಇಷ್ಟು ವರ್ಷಗಳಾದರೂ ಇಂದಿಗೂ ಸಹ ಭಾರತದ ಬಹುತೇಕ ಹಳ್ಳಿಗಳಲ್ಲಿ ಜಾತಿ, ಅಸ್ಪೃಶ್ಯತೆ, ದಲಿತ ಮಹಿಳೆಯರ ಅತ್ಯಾಚಾರ ಕೊಲೆ, ಶೋಷಣೆ ಇನ್ನು ತಾಂಡವವಾಡುತ್ತಿದೆ. ಅಲ್ಲದೆ ಸಾರ್ವಜನಿಕ ಸ್ಥಳಗಳಾದ ಕೆರೆ, ಬಾವಿ, ದೇವಾಸ್ಥಾನ, ಹೋಟೆಲುಗಳ ಪ್ರವೇಶವಿಲ್ಲ. ಜಾತಿ ಕ್ರೂರತೆಯ ಸಂಕೇತಗಳಾಗಿ ಮೀಸೆ ಬಿಟ್ಟರೆ, ಕುದುರೆ ಮೇಲೆ ಮದುವೆ ಮೆರವಣಿಗೆ ಹೋದರೆ, ಅಂತರ್ಜಾತಿ ವಿವಾಹವಾದರೆ ಮರ್ಯಾದೆ ಹೆಸರಲ್ಲಿ ಕೊಲ್ಲುವುದು, ನಗರ ಕೇಂದ್ರಗಳಲ್ಲಿ ದಲಿತರಿಗೆ ಮನೆ ಬಾಡಿಗೆ ನೀಡದೆ ಅವಮಾನಿಸುವುದು ಸಮಾಜದ ಕೊಳಕು ಮನಸ್ಥಿತಿಯ ಪ್ರತಿಂಬ. ಅಸ್ಪೃಶ್ಯ ಸಮುದಾಯದ ಯುವ ಜನರಲ್ಲಿ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡುತ್ತಾ ಬಂದಂತೆ ಅವರ ಮೇಲಿನ ದೌರ್ಜನ್ಯಗಳು ಇನ್ನೂ ಹೆಚ್ಚಾಗುತ್ತಿವೆ. ಉನ್ನತ ಶಿಕ್ಷಣಕ್ಕಾಗಿ ವಿಶ್ವವಿದ್ಯಾಲಯಗಳನ್ನು ಪ್ರವೇಶ ಮಾಡುವ ವಿದ್ಯಾರ್ಥಿಗಳು ಕೂಡ ಇದಕ್ಕೆ ಹೊರತಾಗಿಲ್ಲ. ಈ ಮೇಲ್ಜಾತಿಯವರ ದಬ್ಬಾಳಿಕೆಗೆ ಬಲಿಯಾದ ಅಸ್ಪೃಶ್ಯ ದಲಿತ ಸಮುದಾಯದ ಯುವಕರ ಪಟ್ಟಿ ದೊಡ್ಡದಿದೆ. ಭಾರತದಲ್ಲಿ ದಲಿತರ ಸ್ಥಿತಿಯು ಗರಿಷ್ಠ ಮಟ್ಟದ ವಿರೋಧಾಭಾಸದ ಮಟ್ಟವನ್ನು ತಲುಪಿದೆ. ಇದು ಸ್ವತಂತ್ರ ಭಾರತದ ವಾಸ್ತವವು ಕೂಡ. ಇಂತಹ ಘನಘೋರ ದೃಷ್ಟಾಂತಗಳ ನಡುವೆ ಮತಗಳ ನೆಪದಲ್ಲಾಗುವ ಸಮುದಾಯ ಕೇಂದ್ರಿತ ದಾಳಿಗಳು ಬೇರೆ. ಬೇರೊಂದು ಕೋಮಿನ ಬಡವನ ಮನೆಯಲ್ಲಿ ಮಾಂಸ ದೊರೆತಿದ್ದನ್ನೇ ನೆಪವಾಗಿಸಿ ಆ ವ್ಯಕ್ತಿಯನ್ನು ಕೊಂದಾಕುವಷ್ಟು ಕ್ರೂರ ಮತಾಂಧತೆ ಅಥವಾ ಅನ್ಯ ಮತ ದ್ವೇಷ ಮಸ್ತಕಕ್ಕೆ ತುಂಬಿಕೊಂಡ ಈ ದೇಶಕ್ಕೆ ಭವಿಷ್ಯವಿದೆಯೇ?

ಸರ್ಕಾರಗಳು ತನ್ನ ಸರ್ವಪ್ರಜೆಗಳ ಹಕ್ಕು ಬಾಧ್ಯತೆಗಳನ್ನು ರಕ್ಷಿಸುವುದು ಹಾಗೂ ಸಾಮಾಜಿಕ ಅನಿಷ್ಟಗಳನ್ನು ಹೊಗಲಾಡಿಸಿ ದೇಶದ ಜನತೆಗೆ ಘನತೆಯ ಬದುಕಿನ ವಾತಾವರಣವನ್ನು ಸೃಷ್ಟಿಸುವುದೇ ನಿಜವಾದ ಸ್ವತಂತ್ರ ಭಾರತದ ಲಕ್ಷಣ. ಈ ಕಾರ್ಯ ನಮ್ಮನಾಳುವ ಸರ್ಕಾರಗಳು ಮಾಡಬೇಕಾದದ್ದು. ದುರಂತವೆಂದರೆ ಮೌಢ್ಯ, ಅಂಧಚಾರ, ಧಾರ್ಮಿಕ ಅಸಹಿಷ್ಣುತೆ ಹುಟ್ಟು ಹಾಕುವ ಮಂದಿರ-ಮಸೀದಿಗಳನ್ನು ನಿರ್ಮಿಸುವುದರ ಮೂಲಕ ಜನ ಕಲ್ಯಾಣಕ್ಕಾಗಿ ಬಳಕೆಯಾಗಬೇಕಿದ್ದ ಸಾರ್ವಜನಿಕ ಸಂಪತ್ತು ಇವತ್ತು ಕೋಮುದ್ವೇಷ ಬಿತ್ತುವ ಸಂಗತಿಗಳಿಗೆ ಪೋಲಾಗುತ್ತಿದೆ. ಸಾಮಾಜಿಕ ಸಮಾನತೆಯನ್ನು ತರುವ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಹಿನ್ನಲೆಯಲ್ಲಿ ಈ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳಾದ ಚುನಾವಣಾ ಆಯೋಗ ಮತ್ತು ನ್ಯಾಯಾಂಗ ವ್ಯವಸ್ಥೆಯು ಸೇರಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿತ್ತು. ಆದರೆ, ಅವುಗಳು ಕೂಡ ಪ್ರಭುತ್ವದ ಕೈಗೊಂಬೆಗಳಾಗಿ ವರ್ತಿಸುತ್ತಿರುವುದು ದುರಂತ.

ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ತೊಡೆದು ಹಾಕಲು ಪ್ರಭುತ್ವ ಕಾಳಜಿ ವಹಿಸಬೇಕು. ಆದ್ದರಿಂದ ದೇಶದ ಎಲ್ಲ ವಂಚಿತ ಸಮುದಾಯಗಳಾದ ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಧಾರ್ಮಿಕ ಅಲ್ಪಸಂಖ್ಯಾತ, ಮಹಿಳೆಯರು ಹೀಗೆ ವಿವಿಧ ವಂಚಿತ ಸಮುದಾಯಗಳಿಗೆ ಕಡ್ಡಾಯ ಮತ್ತು ಸಮಾನ ಶಿಕ್ಷಣ, ಆರೋಗ್ಯ ಆಹಾರ ಭದ್ರತೆ ದೇಶದ ಎಲ್ಲ ಜನರ ಧಾರಣಾ ಸಾಮರ್ಥ್ಯ ವಿಸ್ತಾರಗೊಳಿಸಲು ಪ್ರಾಮಾಣಿಕವಾಗಿ ಸರ್ಕಾರಗಳು ನಡೆದುಕೊಳ್ಳಬೇಕಿದೆ. ಅನಕ್ಷರತೆ, ಜಾತಿ, ಅಸ್ಪೃಶ್ಯತೆ, ಲಿಂಗ ತಾರತಮ್ಯ, ಕೋಮುವಾದ, ಶ್ರೇಷ್ಠ-ಕನಿಷ್ಠವೆಂಬ ಬಿನ್ನ-ಭೇದಭಾವಗಳ ಬಂಧನದಿಂದ ಮುಕ್ತವಾಗಿ ಜಾತೀಯ ತಾರತಮ್ಯ ಧರ್ಮಗಳ ವ್ಯಾಪ್ತಿಯನ್ನೂ ಮೀರಿ, ಸಹೋದರತೆ, ಸಮಾನತೆ, ಭ್ರಾತೃತ್ವದ ತತ್ವವನ್ನೊಳಗೊಂಡು ‘ನಾವು ಭಾರತೀಯರು’ ಎಂಬ ವಿವೇಕ ಪ್ರಜ್ಞೆ ಮೂಡಿದಾಗ ಮಾತ್ರ ಜಾತಿ-ಅಸ್ಪೃಶ್ಯ ಭಾರತ ಅಳಿದು ಸರ್ವಾಂಗೀಣ ಅಭಿವೃದ್ಧಿಯ ಪ್ರಬುದ್ಧ ಭಾರತವಾಗಲು ಸಾಧ್ಯ.

Nandakumar
ಡಾ. ಪಿ. ನಂದಕುಮಾರ್
+ posts

ಕವಿ,ಯುವ ಬರಹಗಾರ

ಪೋಸ್ಟ್ ಹಂಚಿಕೊಳ್ಳಿ:

ಡಾ. ಪಿ. ನಂದಕುಮಾರ್
ಡಾ. ಪಿ. ನಂದಕುಮಾರ್
ಕವಿ,ಯುವ ಬರಹಗಾರ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹಿಳೆಯರಿಲ್ಲದ ಸಂಪುಟ; ಮಾತು ತಪ್ಪಿತೇ ಕಾಂಗ್ರೆಸ್?

ರಾಜ್ಯದ ಮಹಿಳೆಯರು ಜನಸಂಖ್ಯೆಯಲ್ಲಿ ಸರಿಸುಮಾರು ಅರ್ಧದಷ್ಟಿದ್ದರೂ, ಅಧಿಕಾರದ ವಿಚಾರ ಬಂದಾಗ ಅವರು...

ಬೀದರ್‌ | ಜನವರಿಯಲ್ಲಿ ಅಗ್ನಿವೀರ ಸೇನಾ ಭರ್ತಿ ರ‍್ಯಾಲಿ

ಬೀದರ್‌ ನಗರದಲ್ಲಿ 2027ರ ಜನವರಿ ತಿಂಗಳಲ್ಲಿ 15 ದಿನಗಳ ಕಾಲ ಅಗ್ನಿವೀರ...

ದೇವಿಯಿಂದ ಕತ್ತಿ ಪಡೆದ ರಾಜರ ಕಥೆಗಳು ಶಾಲಾ ಪಠ್ಯದಲ್ಲಿ; NCERTಯಿಂದ ಮತ್ತೊಂದು ವಿವಾದ?

"ಭಾರತದಲ್ಲಿ ದೇವಿಯರ ಆರಾಧನೆಗೂ, ಯುದ್ಧಕ್ಕೂ ಅನಾದಿ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಪ್ರಾಚೀನ...

‘INDIA’ ಮೈತ್ರಿಕೂಟದ ಸಭೆಗಾಗಿ ದೆಹಲಿಗೆ ಮಮತಾ ಪ್ರಯಾಣ: ‘ದಿಮಾಗಿ ನಕ್ಸಲರ’ ಜತೆ ಸಮಾಲೋಚನೆ ಎಂದ ಸುವೇಂದು ಅಧಿಕಾರಿ

ಬುಧವಾರ ನಡೆಯಲಿರುವ 'INDIA' ಮೈತ್ರಿಕೂಟದ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಲು ಪಶ್ಚಿಮ ಬಂಗಾಳದ...