ಮಹಿಳೆಯರಿಗೆ ಮತ್ತೆ ಮುಚ್ಚಲಿವೆಯೇ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಬಾಗಿಲುಗಳು?

Date:

ಕಾನೂನುಬದ್ಧವಾಗಿ ಮಹಿಳೆಯರ ಪ್ರವೇಶಕ್ಕೆ ತಡೆ ಇಲ್ಲ. ಆದರೆ 9 ನ್ಯಾಯಮೂರ್ತಿಗಳ ಪೀಠವು ನೀಡುವ ಅಂತಿಮ ತೀರ್ಪಿನ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಆದರೆ ಮಹಿಳೆಯರ ಪರವಾಗಿ ನಿಲ್ಲಬೇಕಾದ ಕೇಂದ್ರ ಸರ್ಕಾರವು ಮಹಿಳಾ ವಿರೋಧಿ ಧೋರಣೆಯನ್ನು ತಳೆದಿದೆ. ಮಹಿಳೆಯರಿಗೆ ಶಬರಿಮಲೆ ಪ್ರವೇಶಕ್ಕೆ ಅವಕಾಶ ನೀಡಬಾರದು. ಇದು ಧಾರ್ಮಿಕ ಸಂಪ್ರದಾಯ ಎಂದು ಸಮರ್ಥಿಸಿಕೊಂಡಿದೆ! 

ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶವು ದೇಶದ ಇತಿಹಾಸದಲ್ಲೇ ಒಂದು ವಿವಾದಾದ್ಮಕ ಹೋರಾಟವಾಗಿಯೇ ಉಳಿದಿದೆ. 2018ರಲ್ಲಿ ಶಬರಿಮಲೆಗೆ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ನೀಡಿ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆದರೆ ಇದೀಗ ಮತ್ತೆ ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಬಾಗಿಲುಗಳು ಮುಚ್ಚಲಿವೆಯೇ ಎಂಬ ಪ್ರಶ್ನೆಗಳು ಹುಟ್ಟಿದೆ.

- Advertisement -

ಈ ಹಿಂದೆ ಬರೀ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ್ದ ಈ ಪ್ರಕರಣವು ಇಂದು ಬರೀ ಒಂದು ದೇವಾಲಯದ ಪ್ರಕರಣವಾಗಿ ಉಳಿದಿಲ್ಲ. ಬದಲಾಗಿ ಮುಸ್ಲಿಂ ಮಹಿಳೆಯರ ಮಸೀದಿ ಪ್ರವೇಶ, ಪಾರ್ಸಿ ಮಹಿಳೆಯರ ಅಗ್ನಿ ದೇವಾಲಯ ಪ್ರವೇಶ ಮೊದಲಾದವುಗಳ ವಿಚಾರಣೆ ಆಗಿಯೂ ಮಾರ್ಪಟ್ಟಿದೆ. ಸದ್ಯ 9 ನ್ಯಾಯಮೂರ್ತಿಗಳ ಪೀಠದ ಮುಂದಿರುವ ಪ್ರಶ್ನೆಯೇನು, ಸದ್ಯ ನಡೆಯುತ್ತಿರುವುದೇನು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಏನಿದು ಶಬರಿಮಲೆ ವಿವಾದ?

ಶಬರಿಮಲೆಯ ಅಯ್ಯಪ್ಪ ಸ್ವಾಮಿಯನ್ನು ‘ನೈಷ್ಠಿಕ ಬ್ರಹ್ಮಚಾರಿ’ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ 10 ರಿಂದ 50 ವರ್ಷ ವಯಸ್ಸಿನ ಅಂದರೆ ಋತುಸ್ರಾವದ ವಯಸ್ಸಿನ ಮಹಿಳೆಯರಿಗೆ ದೇವಸ್ಥಾನ ಪ್ರವೇಶವನ್ನು ಕೇರಳದ ಹಿಂದೂ ಸಾರ್ವಜನಿಕ ಆರಾಧನಾ ಸ್ಥಳಗಳ (ಪ್ರವೇಶದ ಅಧಿಕಾರ) ನಿಯಮಗಳು, 1965ರ ಅಡಿಯಲ್ಲಿ ನಿರ್ಬಂಧಿಸಲಾಗಿತ್ತು. ಆದರೆ ಸಂವಿಧಾನದ 14ನೇ ವಿಧಿಯ ಪ್ರಕಾರ ಪ್ರತಿಯೊಬ್ಬರಿಗೂ ಸಮಾನತೆಯ ಹಕ್ಕಿದೆ. ಮಹಿಳೆಯರನ್ನು ಕೇವಲ ಅವರ ಜೈವಿಕ ಕಾರಣಗಳಿಗಾಗಿ (ಋತುಚಕ್ರ) ತಾರತಮ್ಯ ಮಾಡುವುದು ಸಂವಿಧಾನಬಾಹಿರ ಎಂದು ಹೇಳಿ ಈ ನಿರ್ಬಂಧವನ್ನು ಪ್ರಶ್ನಿಸಿ ‘ಯಂಗ್ ಲಾಯರ್ಸ್ ಅಸೋಸಿಯೇಷನ್’ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿ ಸಲ್ಲಿಕೆಯು ದೇಶಾದ್ಯಂತ ತೀವ್ರ ಚರ್ಚೆಗೆ ನಾಂದಿ ಹಾಡಿತು. ಪರ-ವಿರೋಧಗಳು ಕೇಳಿಬಂದವು.

ಇದನ್ನು ಓದಿದ್ದೀರಾ? ಶಬರಿಮಲೆಗೆ ಮಹಿಳೆಯರ ಪ್ರವೇಶ | ಏ.7 ರಿಂದ ಸುಪ್ರೀಂನ 9 ಮಂದಿ ನ್ಯಾಯಮೂರ್ತಿಗಳ ಪೀಠದಿಂದ ಅಂತಿಮ ವಿಚಾರಣೆ

2018ರ ಐತಿಹಾಸಿಕ ತೀರ್ಪು

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು 2018ರ ಸೆಪ್ಟೆಂಬರ್ 28ರಂದು 4:1 ಬಹುಮತದೊಂದಿಗೆ ಮಹತ್ವದ ತೀರ್ಪು ನೀಡಿತು. “ಯಾವುದೇ ವಯಸ್ಸಿನ ನಿರ್ಬಂಧವಿಲ್ಲದೆ ಎಲ್ಲ ಮಹಿಳೆಯರಿಗೂ ಶಬರಿಮಲೆ ಪ್ರವೇಶಕ್ಕೆ ಅವಕಾಶ ನೀಡಬೇಕು. ಜೈವಿಕ ಕಾರಣಗಳಿಗಾಗಿ ಮಹಿಳೆಯರನ್ನು ದೂರವಿಡುವುದು ಸಂವಿಧಾನದ ವಿಧಿ 14 (ಸಮಾನತೆ) ಮತ್ತು ವಿಧಿ 25ರ (ಧಾರ್ಮಿಕ ಸ್ವಾತಂತ್ರ್ಯ) ಉಲ್ಲಂಘನೆಯಾಗಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿತು.

ಈ ಪೀಠದಲ್ಲಿದ್ದ ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, “ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ನೀಡಬೇಕು” ಎಂದು ತೀರ್ಪು ನೀಡಿದರು. ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್, ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿ ಆರ್. ಎಫ್. ನಾರಿಮನ್ ಈ ತೀರ್ಪಿಗೆ ಬೆಂಬಲ ನೀಡಿದರು. ಆದರೆ ಪೀಠದಲ್ಲಿದ್ದ ಏಕೈಕ ಮಹಿಳಾ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದರು! “ಧಾರ್ಮಿಕ ಆಚರಣೆಗಳಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಬಾರದು” ಎಂದು ಹೇಳಿಕೊಂಡಿದ್ದರು. ಪುರುಷ ನ್ಯಾಯಮೂರ್ತಿಗಳು ಮಹಿಳಾ ಸಮಾನತೆಯನ್ನು ಸಾರಿದಾಗ, ಮಹಿಳಾ ನ್ಯಾಯಮೂರ್ತಿ ಮಾತ್ರ ವಿಭಿನ್ನ ನಿಲುವು ತಾಳಿದ್ದು ತೀವ್ರ ಚರ್ಚೆಗೆ ಒಳಗಾಗಿತ್ತು.

2019ರ ಮರುಪರಿಶೀಲನಾ ಅರ್ಜಿಗಳು

2018ರ ತೀರ್ಪನ್ನು ವಿರೋಧಿಸಿ ಸುಮಾರು 65ಕ್ಕೂ ಹೆಚ್ಚು ಮರುಪರಿಶೀಲನಾ ಅರ್ಜಿಗಳು ಸಲ್ಲಿಕೆಯಾದವು. 2019ರ ನವೆಂಬರ್ 14ರಂದು ಸುಪ್ರೀಂ ಕೋರ್ಟ್ ಈ ಮರುಪರಿಶೀಲನಾ ಅರ್ಜಿಗಳ ವಿಚಾರಣೆ ನಡೆಸುತ್ತಾ ಈ ವಿವಾದವು ಕೇವಲ ಒಂದು ದೇವಸ್ಥಾನಕ್ಕೆ ಸೀಮಿತವಾಗಿಲ್ಲ ಎಂದು ಅಭಿಪ್ರಾಯಪಟ್ಟಿತು.

ಮುಸ್ಲಿಂ ಮಹಿಳೆಯರ ಮಸೀದಿ ಪ್ರವೇಶ, ಪಾರ್ಸಿ ಮಹಿಳೆಯರ ಅಗ್ನಿ ದೇವಾಲಯ ಪ್ರವೇಶ ಮತ್ತು ದಾವೂದಿ ಬೊಹ್ರಾ ಸಮುದಾಯದ ಸ್ತ್ರೀ ಸುನ್ನತ್ ಪದ್ಧತಿಯಂತಹ ವಿಷಯಗಳೂ ಇದರೊಂದಿಗೆ ಸಂಬಂಧ ಹೊಂದಿವೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಿಸಿತು. ಹೀಗಾಗಿ ಈ ಸಂಕೀರ್ಣ ಸಾಂವಿಧಾನಿಕ ಪ್ರಶ್ನೆಗಳನ್ನು ಬಗೆಹರಿಸಲು ಪ್ರಕರಣವನ್ನು ಒಂಬತ್ತು ನ್ಯಾಯಮೂರ್ತಿಗಳ ಬೃಹತ್ ಪೀಠಕ್ಕೆ ವರ್ಗಾಯಿಸಲಾಯಿತು.

ಇದನ್ನು ಓದಿದ್ದೀರಾ? ಶಬರಿಮಲೆ | ‘ಮಹಿಳೆಯರಿಗೆ ನಿರ್ಬಂಧ ಸರಿ’ ಎಂದು ಸುಪ್ರೀಂನಲ್ಲಿ ಮತ್ತೆ ಸಮರ್ಥಿಸಿಕೊಂಡ ಕೇಂದ್ರ

ಸದ್ಯ ಒಂಬತ್ತು ನ್ಯಾಯಮೂರ್ತಿಗಳ ಪೀಠದ ಮುಂದಿರುವ ಪ್ರಶ್ನೆಗಳು

ಪ್ರಸ್ತುತ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳ ಪೀಠವು ಕೇವಲ ಶಬರಿಮಲೆಯ ಬಗ್ಗೆ ಮಾತ್ರವಲ್ಲದೆ, ಮಹಿಳೆಯರಿಗೆ ದೇವಾಲಯ, ಮಸೀದಿ ಪ್ರವೇಶ ಸಂಬಂಧಿಸಿದ ವಿಶಾಲವಾದ ಸಾಂವಿಧಾನಿಕ ಅಂಶಗಳನ್ನು ಪರಿಶೀಲಿಸುತ್ತಿದೆ.

ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ಈ ಪೀಠದ ವಿಚಾರಣೆಯು ದೀರ್ಘಕಾಲ ಮುಂದೂಡಲ್ಪಟ್ಟಿತ್ತು. ನಂತರ ಪೀಠದಲ್ಲಿದ್ದ ಕೆಲವು ನ್ಯಾಯಮೂರ್ತಿಗಳು ನಿವೃತ್ತರಾದ ಕಾರಣ, ಪೀಠವನ್ನು ಪುನರ್ರಚಿಸುವ ಅಗತ್ಯ ಉಂಟಾಯಿತು. ಇದೀಗ ವಿಚಾರಣೆ ನಡೆಯುತ್ತಿದೆ. ವಿಚಾರಣೆಯ ಆರಂಭದಲ್ಲಿ ಪೀಠವು ಧರ್ಮ ಮತ್ತು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ 7 ಪ್ರಮುಖ ಕಾನೂನಾತ್ಮಕ ಪ್ರಶ್ನೆಗಳನ್ನು ಪೀಠವು ರೂಪಿಸಿದೆ.

ಪ್ರಶ್ನೆ 1: ಸಂವಿಧಾನದ ವಿಧಿ 25ರ ಅಡಿಯಲ್ಲಿ ರಕ್ಷಿಸಲ್ಪಟ್ಟ ‘ಧಾರ್ಮಿಕ ಸ್ವಾತಂತ್ರ್ಯ’ದ ವ್ಯಾಪ್ತಿ ಎಷ್ಟು ಅಥವಾ ಒಂದು ಆಚರಣೆಯು ಧರ್ಮದ ಅವಿಭಾಜ್ಯ ಅಂಗವೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸುವ ಅಧಿಕಾರ ನ್ಯಾಯಾಲಯಕ್ಕೆ ಇದೆಯೇ?
ಪ್ರಶ್ನೆ 2: ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಸಮಾನತೆಯ ಹಕ್ಕನ್ನು ನಿರಾಕರಿಸಬಹುದೇ?
ಪ್ರಶ್ನೆ 3: ವಿಧಿ 25(1)ರಲ್ಲಿ ಉಲ್ಲೇಖಿಸಲಾದ “ನೈತಿಕತೆ” ಎಂದರೆ ಅದು ಕೇವಲ ಸಾಂವಿಧಾನಿಕ ನೈತಿಕತೆಯೇ ಅಥವಾ ನಿರ್ದಿಷ್ಟ ಧರ್ಮದ ನೈತಿಕತೆಯೇ?
ಪ್ರಶ್ನೆ 4: ವಿಧಿ 26ರ ಅಡಿಯಲ್ಲಿ ಧಾರ್ಮಿಕ ಪಂಗಡಗಳಿಗೆ ಇರುವ ತಮ್ಮದೇ ಆದ ಆಚರಣೆಗಳನ್ನು ನಿರ್ವಹಿಸುವ ಹಕ್ಕು, ವಿಧಿ 25ರ ಅಡಿಯಲ್ಲಿ ವ್ಯಕ್ತಿಗಿರುವ ಧಾರ್ಮಿಕ ಸ್ವಾತಂತ್ರ್ಯಕ್ಕೆ ಪೂರಕವಾಗಿದೆಯೇ ಅಥವಾ ಅದನ್ನು ಮೀರಿ ನಿಲ್ಲುತ್ತದೆಯೇ?
ಪ್ರಶ್ನೆ 5: ಧಾರ್ಮಿಕ ಆಚರಣೆಗಳಲ್ಲಿ ನ್ಯಾಯಾಲಯವು ಎಷ್ಟು ಮಟ್ಟಿಗೆ ಪ್ರವೇಶಿಸಬಹುದು? ಧಾರ್ಮಿಕ ಮುಖ್ಯಸ್ಥರ ನಿರ್ಧಾರಗಳನ್ನು ನ್ಯಾಯಾಲಯವು ಪ್ರಶ್ನಿಸಬಹುದೇ?
ಪ್ರಶ್ನೆ 6: ವಿಧಿ 25(2)(b) ಅಡಿಯಲ್ಲಿ ಬರುವ “ಹಿಂದೂ ಧಾರ್ಮಿಕ ಸಂಸ್ಥೆಗಳು” ಎಂಬ ಪದದ ವ್ಯಾಪ್ತಿ ಏನು? ಶಬರಿಮಲೆ ದೇವಸ್ಥಾನದಂತಹ ನಿರ್ದಿಷ್ಟ ಸಂಪ್ರದಾಯಗಳನ್ನು ಅನುಸರಿಸುವವರನ್ನು ಪ್ರತ್ಯೇಕ ಧಾರ್ಮಿಕ ಪಂಗಡ ಎಂದು ಪರಿಗಣಿಸಬೇಕೇ?
ಪ್ರಶ್ನೆ 7: ಧರ್ಮದ ಆಚರಣೆಗಳಿಗೆ ಸಂಬಂಧಿಸಿದಂತೆ, ಆ ಧರ್ಮಕ್ಕೆ ಸೇರದ ವ್ಯಕ್ತಿಗಳು ಅಥವಾ ಆ ಆಚರಣೆಯಿಂದ ಬಾಧಿತರಾಗದ ವ್ಯಕ್ತಿಗಳು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಆಚರಣೆಯನ್ನು ಪ್ರಶ್ನಿಸಬಹುದೇ?

ಮರುಪರಿಶೀಲನಾ ಅರ್ಜಿಯ ಸಂದರ್ಭದಲ್ಲಿ ಇಂತಹ ವಿಶಾಲವಾದ ಕಾನೂನಾತ್ಮಕ ಪ್ರಶ್ನೆಗಳನ್ನು ಉನ್ನತ ಪೀಠಕ್ಕೆ ವರ್ಗಾಯಿಸಬಹುದೇ ಎಂಬ ತಾಂತ್ರಿಕ ಪ್ರಶ್ನೆ ಎದ್ದಿತ್ತು. ಆದರೆ, 2020ರ ಫೆಬ್ರವರಿಯಲ್ಲಿ ಪೀಠವು ಇದನ್ನು ಸಮರ್ಥಿಸಿ, ಸಾಂವಿಧಾನಿಕ ಅಂಶಗಳನ್ನು ನಿರ್ಧರಿಸಲು ತನಗೆ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿತು. ಸದ್ಯ “ಅಗತ್ಯ ಧಾರ್ಮಿಕ ಆಚರಣೆಗಳು” ಯಾವುವು ಮತ್ತು ಅವುಗಳಲ್ಲಿ ನ್ಯಾಯಾಲಯ ಎಷ್ಟು ಮಟ್ಟಿಗೆ ಹಸ್ತಕ್ಷೇಪ ಮಾಡಬಹುದು ಎಂಬುದು ಈ ವಿಚಾರಣೆಯ ಪ್ರಮುಖ ಭಾಗವಾಗಿದೆ.

ಮಹಿಳೆಯರಿಗೆ ಮತ್ತೆ ಮುಚ್ಚಲಿವೆಯೇ ಶಬರಿಮಲೆ?

ಈ ಎಲ್ಲ ವಾದ ವಿವಾದಗಳ ನಡುವೆ ಮಹಿಳೆಯರಿಗೆ ಮತ್ತೆ ಶಬರಿಮಲೆ ಬಾಗಿಲು ಮುಚ್ಚಲಿವೆಯೇ ಎಂಬ ಪ್ರಶ್ನೆ ಹುಟ್ಟಿದೆ. ಸದ್ಯಕ್ಕೆ, 2018ರ ತೀರ್ಪು ಜಾರಿಯಲ್ಲಿದೆ. ಅಂದರೆ ಕಾನೂನುಬದ್ಧವಾಗಿ ಮಹಿಳೆಯರ ಪ್ರವೇಶಕ್ಕೆ ತಡೆ ಇಲ್ಲ. ಆದರೆ 9 ನ್ಯಾಯಮೂರ್ತಿಗಳ ಪೀಠವು ನೀಡುವ ಅಂತಿಮ ತೀರ್ಪಿನ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಆದರೆ ಮಹಿಳೆಯರ ಪರವಾಗಿ ನಿಲ್ಲಬೇಕಾದ ಕೇಂದ್ರ ಸರ್ಕಾರವು ಮಹಿಳಾ ವಿರೋಧಿ ಧೋರಣೆಯನ್ನು ತಳೆದಿದೆ. ಮಹಿಳೆಯರಿಗೆ ಶಬರಿಮಲೆ ಪ್ರವೇಶಕ್ಕೆ ಅವಕಾಶ ನೀಡಬಾರದು. ಇದು ಧಾರ್ಮಿಕ ಸಂಪ್ರದಾಯ ಎಂದು ಸಮರ್ಥಿಸಿಕೊಂಡಿದೆ!

ಈ ವಾದ ವಿವಾದದ ಬಳಿಕ ಒಂದು ವೇಳೆ ಪೀಠವು “ಧಾರ್ಮಿಕ ಸಂಪ್ರದಾಯಗಳು ಮತ್ತು ನಂಬಿಕೆಗಳು ಸಾಂವಿಧಾನಿಕ ನೈತಿಕತೆಗಿಂತ ಮೇಲು” ಎಂದು ಅಭಿಪ್ರಾಯಪಟ್ಟರೆ ಮತ್ತೆ ಹಳೆಯ ಸಂಪ್ರದಾಯ ಮರುಕಳಿಸಬಹುದು. “ಲಿಂಗ ಸಮಾನತೆಯೇ ಪರಮೋಚ್ಚ” ಎಂದು ಸಾರಿದರೆ 2018ರ ತೀರ್ಪು ಗಟ್ಟಿಯಾಗಲಿದೆ. ಸದ್ಯ ಸಾಂವಿಧಾನಿಕ ಪೀಠವು ಧರ್ಮ ಮತ್ತು ಕಾನೂನಿನ ನಡುವಿನ ಸೂಕ್ಷ್ಮ ಗೆರೆಯನ್ನು ಗುರುತಿಸುವ ಪ್ರಕ್ರಿಯೆಯಲ್ಲಿದೆ. ಆದರೆ ಯಾವುದೇ ಧರ್ಮದ ಆಚರಣೆಗಳು ಮಹಿಳೆಯರನ್ನು ತುಚ್ಛವಾಗಿ ಕಾಣುವುದಾದರೆ ಅದು ಧರ್ಮವಾಗುವುದೇ?

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅಂಕಿತಾ ಹತ್ಯೆ ಶಂಕಿತರಿಗೆ ಸಾಂವಿಧಾನಿಕ ಹುದ್ದೆ ಸರಿಯೇ?

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿದ್ದ ವಿಐಪಿ ದುಶ್ಯಂತ್‌ ಅವರ ಮೇಲಿನ...

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...

ಬಾಗಲಕೋಟೆ | ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್...

ಬೆಳಗಾವಿ | ಚೂನಪ್ಪ ಪೂಜೇರಿ, ನಾನು ಸತ್ತರೂ ಒಂದೇ ಗೋರಿಯಲ್ಲಿ ಮಣ್ಣಾಗಬೇಕು: ಶಶಿಕಾಂತ ಗುರೂಜಿ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಹತ್ತರಗಿ...