ಮಹಿಳಾ ಮೀಸಲಾತಿ | ಧ್ವನಿ ಕಳೆದುಕೊಂಡ ರಾಜ್ಯ ಕಾಂಗ್ರೆಸ್‌ ಮಹಿಳಾ ಘಟಕ!

Date:

ಲೋಕಸಭೆಯಲ್ಲಿ ಮಂಡಿಸಲಾದ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಮಹಿಳಾ ಮೀಸಲಾತಿ ಮಸೂದೆಯನ್ನು ತಳುಕು ಹಾಕಿದ್ದಕ್ಕೆ ಅಗತ್ಯವಾದ ಎರಡನೇ ಮೂರರಷ್ಟು ಬಹುಮತ ಲಭ್ಯವಾಗದ ಬೆನ್ನಲ್ಲೇ ಅದರ ಅಪಕೀರ್ತಿಯನ್ನು ಕಾಂಗ್ರೆಸ್‌ ಮೇಲೆ ಹಾಕುವುದಕ್ಕೆ ಬಿಜೆಪಿ ಹೊಸ ಸಿನಿಕತೆ ಸೃಷ್ಟಿಸಿದೆ. ಬಿಜೆಪಿ ತನ್ನ ಮಹಿಳಾ ಮೋರ್ಚಾದ ಮೂಲಕ ʼಕಾಂಗ್ರೆಸ್‌ ಮಹಿಳಾ ವಿರೋಧಿʼ ಎಂದು ಬಿಂಬಿಸಲು ಹೂಡಿರುವ ಹುನ್ನಾರಕ್ಕೂ ರಾಜ್ಯ ಕಾಂಗ್ರೆಸ್‌ ಇನ್ನೂ ಎಚ್ಚೆತ್ತುಕೊಂಡಂತೆ ಕಾಣಿಸುತ್ತಿಲ್ಲ. 

- Advertisement -

ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಹಮ್ಮಿಕೊಂಡಿರುವ ‘ಸಬಲ ನಾರಿ ಸಮರ್ಥ ಭಾರತ’ ಅಭಿಯಾನ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಮಹಿಳಾ ಮತದಾರರನ್ನು ಸೆಳೆಯುವಲ್ಲಿ ಬಿಜೆಪಿ ಆಕ್ರಮಣಕಾರಿ ಹೆಜ್ಜೆ ಇಡುತ್ತಿದ್ದರೆ, ಆಡಳಿತಾರೂಢ ಕಾಂಗ್ರೆಸ್ ಇದಕ್ಕೆ ಸೂಕ್ತ ‘ಕೌಂಟರ್’ ನೀಡಲು ಪರದಾಡುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಬಿಜೆಪಿಯ ಸಂಘಟಿತ ದಾಳಿಗೆ ಕಾಂಗ್ರೆಸ್ ಮೌನವಹಿಸಿದೆ. ಸಂಸತ್ತಿನಲ್ಲಿಯೂ ರಾಜ್ಯದ ಕಾಂಗ್ರೆಸ್ ಸಂಸದರ ಪರಿಣಾಮಕಾರಿಯಲ್ಲದ ಪ್ರತಿಕ್ರಿಯೆಗಳು ಇಲ್ಲಿ ಪ್ರಶ್ನಾರ್ಹವಾಗಿದೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮಹಿಳಾ ಮತದಾರರು ಎಂದಿಗೂ ‘ನಿರ್ಣಾಯಕ ಶಕ್ತಿ’. ಈ ಶಕ್ತಿಯನ್ನು ತನ್ನತ್ತ ಸೆಳೆದುಕೊಳ್ಳಲು ಬಿಜೆಪಿ ಈಗ ‘ಸಬಲ ನಾರಿ ಸಮರ್ಥ ಭಾರತ’ ಎಂಬ ಬೃಹತ್ ಅಭಿಯಾನದ ಮೂಲಕ ಅಖಾಡಕ್ಕಿಳಿದಿದೆ. ಆದರೆ, ಬಿಜೆಪಿಯ ಈ ಸಾಂಘಿಕ ಹೋರಾಟಕ್ಕೆ ಪ್ರತ್ಯುತ್ತರ ನೀಡುವಲ್ಲಿ ಕಾಂಗ್ರೆಸ್ ಹಿಂದೆ ಬಿದ್ದಿದೆ.

ಬಿಜೆಪಿ ಈಗ ಮಾಡುತ್ತಿರುವ ಕಾರ್ಯತಂತ್ರಗಳು ಬರೀ ರಾಜಕೀಯ ಯೋಜನೆಗಳಲ್ಲ, ಭಾವನಾತ್ಮಕ ಬೆಸುಗೆ ಹಾಕುವುದಕ್ಕೆ ಮಾಡುತ್ತಿರುವ ಯತ್ನ. ಇದು ಕಾಂಗ್ರೆಸ್ ಅಂತಹ ಪಕ್ಷಕ್ಕೆ ಇನ್ನೂ ಅರ್ಥವಾಗಿಲ್ಲ. ಕನಿಷ್ಠಪಕ್ಷ ʼಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕುʼ ಎನ್ನುವ ಸಾಮಾನ್ಯ ಜ್ಞಾನವನ್ನೂ ಕಾಂಗ್ರೆಸ್ ಇನ್ನೂ ಅರಿತಂತೆ ಕಾಣಿಸುತ್ತಿಲ್ಲ. ಬಿಜೆಪಿಯ ಅಭಿಯಾನ ಕೇವಲ ಭಾಷಣಗಳಿಗೆ ಸೀಮಿತವಾಗಿಲ್ಲ. ‘ನಾರಿ ಶಕ್ತಿ’ಯನ್ನು ರಾಷ್ಟ್ರ ನಿರ್ಮಾಣದ ಅಡಿಪಾಯ ಎಂದು ಬಿಂಬಿಸುವ ಮೂಲಕ ಮಹಿಳೆಯರಲ್ಲಿ ಹೆಮ್ಮೆ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಆದರೆ, ಕಾಂಗ್ರೆಸ್, ʼಗ್ಯಾರಂಟಿʼಗಳ ಮೇಲೆ ಅತಿಯಾದ ನಂಬಿಕೆಯಲ್ಲಿಯೇ ಇದೆ. ಕಾಂಗ್ರೆಸ್ ಸರ್ಕಾರ ‘ಗೃಹಲಕ್ಷ್ಮಿ’ ಮತ್ತು ‘ಶಕ್ತಿ’ ಯೋಜನೆಗಳ ಮೂಲಕ ಮಹಿಳೆಯರನ್ನು ಸೆಳೆದುಕೊಂಡಿದೆ ನಿಜ. ಆದರೆ, ಬಿಜೆಪಿ ಮಹಿಳಾ ಮೋರ್ಚಾ ಬೀದಿಗೆ ಇಳಿದು ಕೆಲಸ ಮಾಡಿ ಮಹಿಳೆಯರನ್ನು ಸೆಳೆಯುತ್ತಿದ್ದರೆ, ಕಾಂಗ್ರೆಸ್ನ ಮಹಿಳಾ ಘಟಕ ಕೇವಲ ಅಂಕಿ-ಅಂಶಗಳಿಗೆ ಸೀಮಿತಗೊಂಡಿದೆ. ಸ್ಪಷ್ಟವಾಗಿ ಕಾಂಗ್ರೆಸ್ ಮಹಿಳಾ ಘಟಕ ಸಂಘಟನಾತ್ಮಕ ಹಿನ್ನಡೆಯನ್ನು ಅನುಭವಿಸುತ್ತಿದೆ.

‘ಸಬಲ ನಾರಿ’ ಎಂಬ ಘೋಷಣೆಯಡಿ ಜನರನ್ನು ತಲುಪಿ ಮಹಿಳಾ ಸುರಕ್ಷತೆ ಮತ್ತು ರಾಷ್ಟ್ರೀಯತೆಯನ್ನು ತಳುಕು ಹಾಕುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಜನರನ್ನು ತಲುಪುತ್ತಿಲ್ಲ. ಅಥವಾ ಮೊದಲಿಗರಾಗುತ್ತಿಲ್ಲ. ಬಿಜೆಪಿಯ ಈ ಅಭಿಯಾನ ಕೇವಲ ಚುನಾವಣಾ ಗಿಮಿಕ್ ಎನ್ನುವುದು ಸ್ಪಷ್ಟ, ಆದರೆ ಅದು ತಲುಪಿಸುವ ಸಂದೇಶ ಮಾತ್ರ ತೀಕ್ಷ್ಣವಾಗಿದೆ. ಒಂದು ವೇಳೆ ಕಾಂಗ್ರೆಸ್ ತನ್ನ ಮಹಿಳಾ ಘಟಕವನ್ನು ಬಲಪಡಿಸದೆ, ಬಿಜೆಪಿಯ ‘ಸಬಲ ನಾರಿ’ ಅಭಿಯಾನಕ್ಕೆ ತಕ್ಕುದಾದ ‘ವೈಚಾರಿಕ ಮತ್ತು ಸಂಘಟನಾತ್ಮಕ’ ಕೌಂಟರ್ ನೀಡದಿದ್ದರೆ, ಮುಂಬರುವ ಚುನಾವಣೆಗಳಲ್ಲಿ ಗ್ಯಾರಂಟಿ ಯೋಜನೆಗಳ ಲಾಭವನ್ನು ಬಿಜೆಪಿ ತನ್ನ ಪ್ರಚಾರದ ಮೂಲಕ ಹೈಜಾಕ್ ಮಾಡುವ ಸಾಧ್ಯತೆ ದಟ್ಟವಾಗಿ ಕಾಣಿಸುತ್ತಿದೆ.

ಹೆಸರಿಗಷ್ಟೆ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕ!?

ಬಿಜೆಪಿ ಮಹಿಳಾ ಮೋರ್ಚಾದ ಆಕ್ರಮಣಕಾರಿ ಹೋರಾಟದ ಮುಂದೆ ಕಾಂಗ್ರೆಸ್ ಮಹಿಳಾ ಘಟಕ ಮಂಕಾಗಿದೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮಹಿಳಾ ಮತದಾರರು ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿದ್ದಾರೆ. ಹೀಗಿರುವಾಗ, ಜನಸಾಮಾನ್ಯರ ಧ್ವನಿಯಾಗಬೇಕಿದ್ದ ಮಹಿಳಾ ಘಟಕಗಳ ಕಾರ್ಯವೈಖರಿ ಈಗ ಚರ್ಚೆಯ ವಿಷಯವಾಗಿದೆ. ರಾಜ್ಯದಲ್ಲಿ ಯಾವುದೇ ಸಣ್ಣ ಘಟನೆ ನಡೆದರೂ ಬಿಜೆಪಿ ಮಹಿಳಾ ಮೋರ್ಚಾ ತಕ್ಷಣವೇ ಬೀದಿಗಿಳಿಯುತ್ತಿದೆ. ಬೆಲೆ ಏರಿಕೆ, ಅಥವಾ ಸರ್ಕಾರದ ವೈಫಲ್ಯಗಳ ವಿರುದ್ಧ ಪ್ರತಿಭಟನೆಗಳ ಮೂಲಕ ಬಿಜೆಪಿ ಮಹಿಳೆಯರು ಸದ್ದು ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಸತತವಾಗಿ ಪೋಸ್ಟ್‌ ಗಳನ್ನು ಹಾಕುವ ಮೂಲಕ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ. ಆದರೇ, ಕಾಂಗ್ರೆಸ್ ಮಹಿಳಾ ಘಟಕ ಮಾತ್ರ ‘ನೀರಸʼವಾಗುತ್ತಿದೆ.

ಆಡಳಿತ ಪಕ್ಷವಾಗಿರುವ ಕಾರಣವೋ ಅಥವಾ ಆಂತರಿಕ ಸಮನ್ವಯದ ಕೊರತೆಯೋ ತಿಳಿಯುತ್ತಿಲ್ಲ, ಕಾಂಗ್ರೆಸ್ ಮಹಿಳಾ ಘಟಕ ಬಿಜೆಪಿಗೆ ತಿರುಗೇಟು ನೀಡುವಲ್ಲಿ ವಿಫಲವಾಗುತ್ತಿದೆ. ಬಿಜೆಪಿ ಮಾಡುವ ಆರೋಪಗಳಿಗೆ ತಕ್ಷಣದ ತಾರ್ಕಿಕ ಉತ್ತರ ನೀಡುವಲ್ಲಿ ಕಾಂಗ್ರೆಸ್ ಮಹಿಳಾ ನಾಯಕಿಯರು ಹಿಂದೆ ಬೀಳುತ್ತಿದ್ದಾರೆ. ಕೇವಲ ಎಸಿ ರೂಮ್ ಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡುವುದೋ ಅಥವಾ ಟಿವಿ ಚಾನೆಲ್ ಗಳು ನಡೆಸುವ ಚರ್ಚಾ ಕಾರ್ಯಕ್ರಮಗಳಲ್ಲಿ ಬೊಬ್ಬೆ ಹಾಕುವುದಕ್ಕೆ ಮಾತ್ರ ಕಾಂಗ್ರೆಸ್ ಮಹಿಳಾ ಘಟಕ/ಕಾಂಗ್ರೆಸ್ ಸೀಮಿತವಾಗಿದೆ. “ರಾಜಕೀಯದಲ್ಲಿ ಕೇವಲ ಅಧಿಕಾರವಿದ್ದರೆ ಸಾಲದು, ಆ ಅಧಿಕಾರವನ್ನು ಉಳಿಸಿಕೊಳ್ಳಲು ಬೇಕಾದ ಹೋರಾಟದ ಮನೋಭಾವ ಸಂಘಟನೆಯಲ್ಲಿರಬೇಕು. ಕಾಂಗ್ರೆಸ್ನ ರಾಜ್ಯ ಮಹಿಳಾ ಘಟಕದಲ್ಲಿ ಸಾಂಘಿಕ ಶಕ್ತಿಯೂ ಕಾಣಿಸುತ್ತಿಲ್ಲ, ಹೋರಾಟದ ಮನೋಭಾವವಂತೂ ಮೊದಲೇ ಇಲ್ಲ. 

ಬಿಜೆಪಿ ಮಹಿಳಾ ಮೋರ್ಚಾದ ಅಬ್ಬರದ ಮುಂದೆ ಕಾಂಗ್ರೆಸ್ ಮಹಿಳಾ ಘಟಕ ಕೇವಲ ‘ಪ್ರತಿಕ್ರಿಯೆ’ ನೀಡುವ ಸ್ಥಿತಿಯಲ್ಲಿದೆ. ಮುಂಬರುವ ಚುನಾವಣೆಯನ್ನಾದರೂ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ತನ್ನ ಮಹಿಳಾ ಪಡೆಯನ್ನು ಮರುಸಂಘಟಿಸದಿದ್ದರೆ, ಕೇವಲ ʼಗ್ಯಾರಂಟಿ ಯೋಜನೆಗಳುʼ ಪಕ್ಷದ ಕೈ ಹಿಡಿಯಲಾರವು. ಮಹಿಳಾ ಘಟಕ ಕೇವಲ ನಾಮಮಾತ್ರಕ್ಕಾಗಿರದೆ, ಪಕ್ಷದ ಭದ್ರಕೋಟೆಯಾಗಿ ಬದಲಾಗಬೇಕಿದೆ.

ಕಾಂಗ್ರೆಸ್ ರಾಜ್ಯ ಮಹಿಳಾ ಘಟಕಗಳ ಪುನಶ್ಚೇತನದ ಅಗತ್ಯ

ಕ್ಷೇತ್ರ ಮರುವಿಂಗಡಣೆಯನ್ನು ಮಹಿಳಾ ಮೀಸಲಾತಿಯೊಂದಿಗೆ ಸೇರಿಸಿದ್ದನ್ನು ವಿರೋಧಿಸಿ “ರಾಷ್ಟ್ರೀಯ ಮಹಿಳಾ ಘಟಕ ದೆಹಲಿ ಮತ್ತು ಜೈಪುರದಲ್ಲಿ ಪ್ರತಿಭಟನೆಯನ್ನು ನಡೆಸಿದೆ. ರೌಸ್ ಅವೆನ್ಯೂ ಕೋರ್ಟ್ ಸಮೀಪವಿರುವ ದೆಹಲಿ ಕಾಂಗ್ರೆಸ್ ಕಚೇರಿ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಮಂತ್ರಿ ಮೋದಿಯವರ ಪ್ರತಿಕೃತಿ ದಹಿಸಿ, ಬಿಜೆಪಿ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕುವುದಕ್ಕೆ ಯತ್ನಿಸಿದ್ದರು. ದೊಡ್ಡ ಹೈಡ್ರಾಮವೇ ಸೃಷ್ಟಿಯಾಗಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನೀತಿಯನ್ನು ಖಂಡಿಸಿ ತೀವ್ರ ಹೋರಾಟ ನಡೆಸಿದೆ.

ಆದರೆ, ರಾಷ್ಟ್ರೀಯ ಮಟ್ಟದಲ್ಲಿ ಅಖಿಲ ಭಾರತ ಮಹಿಳಾ ಕಾಂಗ್ರೆಸ್ (AIMC) ದಶಕಗಳಿಂದ ತನ್ನದೇ ಆದ ಛಾಪು ಮೂಡಿಸಿದ್ದರೂ, ರಾಜ್ಯ ಮಟ್ಟದಲ್ಲಿ ಅದರ ಪ್ರಭಾವ ಕುಂದಿದೆ ಎನ್ನುವುದು ಇಲ್ಲಿ ಮುಖ್ಯಾಂಶ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಮಹಿಳಾ ಘಟಕವಾದ ‘ಅಖಿಲ ಭಾರತ ಮಹಿಳಾ ಕಾಂಗ್ರೆಸ್’ (AIMC) ದೇಶದ ಹಳೆಯ ಮತ್ತು ದೊಡ್ಡ ರಾಜಕೀಯ ಸಂಘಟನೆಗಳಲ್ಲಿ ಒಂದು. ಸುಚೇತಾ ಕೃಪಲಾನಿಯಂತಹ ದಿಗ್ಗಜ ನಾಯಕಿಯರಿಂದ ಆರಂಭಗೊಂಡು ಇಂದು ಅಲ್ಕಾ ಲಾಂಬಾ ಅವರ ನಾಯಕತ್ವದವರೆಗೆ ಈ ಘಟಕ ದೆಹಲಿಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದರೂ, ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಅದರ ಸಂಘಟನಾ ಶಕ್ತಿ ಕ್ಷೀಣಿಸಿದೆ.

ರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ಕಾಂಗ್ರೆಸ್ ಹೆಚ್ಚಾಗಿ ದೆಹಲಿ ಕೇಂದ್ರಿತ ಪ್ರತಿಭಟನೆಗಳು ಮತ್ತು ರಾಷ್ಟ್ರೀಯ ನೀತಿಗಳ ಬಗ್ಗೆ ಧ್ವನಿ ಎತ್ತುತ್ತದೆ. ಆದರೆ, ರಾಜ್ಯ ಮಟ್ಟದಲ್ಲಿ ಸಂಘಟನೆಯನ್ನು ವಿಸ್ತರಿಸಲು ಬೇಕಾದ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ.

ಇದನ್ನೂ ಓದಿ : ‘ಪಹಲ್ಗಾಮ್‌’ ಪೈಶಾಚಿಕ ಕೃತ್ಯಕ್ಕೆ ವರ್ಷ: ‘ಆಪರೇಷನ್ ಸಿಂಧೂರ’ದ ಮರೆಯಲ್ಲಿ ಅವಿತ ಪ್ರಶ್ನೆಗಳಿಗೆ ಉತ್ತರ ಕೊಡುವವರಾರು?

ರಾಜ್ಯ ಮಟ್ಟದಲ್ಲಿ ಮಹಿಳಾ ಘಟಕಗಳಿಗೆ ಪ್ರತ್ಯೇಕವಾದ ನಿಧಿ ಅಥವಾ ಸಂಪನ್ಮೂಲಗಳ ಕೊರತೆ ಇದೆ. ಪಕ್ಷದ ನೆರಳಿನಲ್ಲೇ ಕೆಲಸ ಮಾಡುವ ಅನಿವಾರ್ಯತೆ ಇರುವುದರಿಂದ, ಮಹಿಳಾ ಸಮಸ್ಯೆಗಳಿಗಿಂತ ಪಕ್ಷದ ಕಾರ್ಯಸೂಚಿಗಳಿಗೆ ಹೆಚ್ಚು ಆದ್ಯತೆ ನೀಡಬೇಕಾದ ಪರಿಸ್ಥಿತಿಯಲ್ಲಿ ಮಹಿಳಾ ಘಟಕವಿದೆ. ಇದರಿಂದ ಮಹಿಳೆಯರಿಗೆ ಸಂಬಂಧಿಸಿದ ಸ್ಥಳೀಯ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದೇನೋ ನಿಜ. ಆದರೆ, ಹಿಂದೆ ಕಾಂಗ್ರೆಸ್ ಮಹಿಳಾ ಘಟಕ ಹಳ್ಳಿ ಹಳ್ಳಿಗಳಲ್ಲಿ ಮಹಿಳಾ ಮಂಡಲಗಳ ಮೂಲಕ ಸಂಪರ್ಕ ಹೊಂದಿತ್ತು. ಇಂದು ಆ ಜಾಗವನ್ನು ಸ್ವಸಹಾಯ ಸಂಘಗಳು ಮತ್ತು ಇತರ ಪಕ್ಷಗಳ ಮಹಿಳಾ ಘಟಕಗಳು ಆಕ್ರಮಿಸಿಕೊಂಡಿವೆ. ಕೇವಲ ನಗರ ಪ್ರದೇಶಗಳಲ್ಲಿ ಅಥವಾ ಮಾಧ್ಯಮಗಳ ಮುಂದೆ ಸಕ್ರಿಯವಾಗಿರುವುದು ರಾಜ್ಯ ಮಟ್ಟದ ಸಂಘಟನೆಯನ್ನು ಬಲಪಡಿಸಲು ಸಾಲದು ಎನ್ನುವುದು ಇಲ್ಲಿ ಪ್ರಮುಖಾಂಶ.

ಒಟ್ಟಿನಲ್ಲಿ, ಮಹಿಳಾ ಮೀಸಲಾತಿ ಕಾಯ್ದೆ (ನಾರಿ ಶಕ್ತಿ ವಂದನ್ ಅಧಿನಿಯಮ) ಜಾರಿಯ ಬಗ್ಗೆ ಚರ್ಚೆಯಾಗುತ್ತಿರುವ ಈ ಸಂದರ್ಭದಲ್ಲಿ, ಕಾಂಗ್ರೆಸ್ ತನ್ನ ಮಹಿಳಾ ಘಟಕವನ್ನು ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಪುನಶ್ಚೇತನಗೊಳಿಸುವುದು ಅನಿವಾರ್ಯ. ಕೇವಲ ರಾಷ್ಟ್ರೀಯ ಮಟ್ಟದ ಪ್ರತಿಭಟನೆ/ಹೋರಾಟಗಳಿಗೆ ಸೀಮಿತವಾಗದೆ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮಹಿಳೆಯರಿಗೆ ಹೆಚ್ಚಿನ ರಾಜಕೀಯ ಅಧಿಕಾರ/ಅವಕಾಶ ನೀಡಿದಾಗ ಮಾತ್ರ ಕಾಂಗ್ರೆಸ್ನ ಮಹಿಳಾ ಘಟಕ ಬಲಿಷ್ಠವಾಗಲು ಸಾಧ್ಯವಿದೆ. ಇದು ಆಗದೇ ಉಳಿದಿದ್ದೇ ಆದಲ್ಲಿ ಕ್ರಮೇಣ ಮಹಿಳಾ ಮತದಾರರನ್ನು ಕಾಂಗ್ರೆಸ್ ಕಳೆದುಕೊಂಡರೂ ಅಚ್ಚರಿಯೇನಿಲ್ಲ.

IMG 20260316 WA0002
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನಕಲಿ ವೈದ್ಯರಿಗೆ ಔಷಧ ಪೂರೈಕೆ : 7 ಮೆಡಿಕಲ್‌ಗಳ ಪರವಾನಗಿ ಅಮಾನತು

ನಕಲಿ ವೈದ್ಯರಿಗೆ ಔಷಧಗಳನ್ನು ಸರಬರಾಜು ಮಾಡಿದ ಆರೋಪದ ಹಿನ್ನೆಲೆ ಜಿಲ್ಲೆಯ ಏಳು...

ʼತ್ರಿವರ್ಣ ಧ್ವಜ ಹಾರಿಸಲು ಅನುಮತಿ ಬೇಕಿಲ್ಲʼ; ಪೊಲೀಸ್ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ನೇಹಾ ಬೋರಾ

ರಾಷ್ಟ್ರಧ್ವಜ ಹಾರಿಸಲು ಯಾರ ಅನುಮತಿಯೂ ಅಗತ್ಯವಿಲ್ಲ ಎಂದು ವಾದಿಸಿರುವ ಎಐಎಸ್‌ಎ (AISA)...

ಬೀದರ್‌ | ಕನಿಷ್ಠ ವೇತನ ಪಾವತಿಗೆ ಅರಣ್ಯ ಇಲಾಖೆ ದಿನಗೂಲಿ ನೌಕರರ ಮನವಿ

ಔರಾದ ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೀಕ್ಷಕರು ಹಾಗೂ ದಿನಗೂಲಿ...

ಬೀದರ್‌ | ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸೋಣ : ಡಿಸಿ ಶಿಲ್ಪಾ ಶರ್ಮಾ

ಬೀದರ್ ಜಿಲ್ಲೆಯಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಆಕರ್ಷಕವಾಗಿ...