ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಬಾಬರ್ ಅಜಂ

Date:

ಸತತವಾಗಿ ಅತಿ ಹೆಚ್ಚು ಇನಿಂಗ್ಸ್‌ಗಳಲ್ಲಿ ಶತಕ ಗಳಿಸಲಾಗದೇ ಔಟ್ ಆದ ಅನಪೇಕ್ಷಿತ ದಾಖಲೆಯ ಪಟ್ಟಿಯಲ್ಲಿ ಪಾಕಿಸ್ತಾನದ ಸ್ಟಾರ್ ಆಟಗಾರ ಬಾಬರ್ ಅಜಂ ಅವರು ಭಾರತದ ವಿರಾಟ್ ಕೊಹ್ಲಿಯವರ ದಾಖಲೆಯನ್ನು ಸರಿಗಟ್ಟಿದ್ದಾರೆ.

- Advertisement -

ಮಂಗಳವಾರ ನಡೆದ ಶ್ರೀಲಂಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದ 24ನೇ ಓವರ್ ನಲ್ಲಿ ಔಟ್ ಆಗುವ ಮೂಲಕ ಅಜಂ ಸತತ 83 ಇನಿಂಗ್ಸ್ ಗಳಲ್ಲಿ ಶತಕ ಸಾಧಿಸಲಾಗದ ಕುಖ್ಯಾತಿಗೆ ಪಾತ್ರರಾದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?

ಚುನಾವಣಾ ಆಯೋಗದಲ್ಲಿ ಎಸ್‌ಐಆರ್‌ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಸರ್ವಾಧಿಕಾರಿಯಂತೆ, ಏಕಪಕ್ಷೀಯವಾಗಿ ನಿರ್ಧಾರಗಳ ತೆಗೆದುಕೊಂಡು, ಜಾರಿ ಮಾಡುತ್ತಿದ್ದಾರೆ ಎಂಬ ತನಿಖಾ ವರದಿ ದೇಶಾದ್ಯಂತ ಭಾರೀ ಚರ್ಚೆ...

ಕ್ರೀಡೆ, ವ್ಯಾಪಾರ ಮತ್ತು ಮೌನ: ಲಿಯೋನೆಲ್ ಮೆಸ್ಸಿ ಎಂಬ...

2013ರ ಪ್ರವಾಸದ ವೇಳೆ ಅವರು ಇಸ್ರೇಲ್‌ನ ವೆಸ್ಟರ್ನ್ ವಾಲ್‌ನಲ್ಲಿ 'ಕಿಪ್ಪಾ' (ಯಹೂದಿಗಳ ಸಾಂಪ್ರದಾಯಿಕ ಟೋಪಿ) ಧರಿಸಿ ನಿಂತಿದ್ದ ಚಿತ್ರವು, ಅವರ ಇಸ್ರೇಲ್ ಪರ ಒಲವಿಗೆ ಅಳಿಸಲಾಗದ ಸಾಕ್ಷಿಯಾಗಿ ಉಳಿದುಕೊಂಡಿದೆ. ಶಾಂತಿ ಪ್ರವಾಸದ ಹೆಸರಿನಲ್ಲಿ...

ಅಜಂ ಈ ಪಂದ್ಯದಲ್ಲಿ 51 ಎಸೆತಗಳಲ್ಲಿ ಕೇವಲ 29 ರನ್ ಬಾರಿಸಿ ನಿರಾಶೆ ಮೂಡಿಸಿದರು. ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ಅವರ ನಿಬ್ಬೆರಗಾಗಿಸುವ ಎಸೆತದಲ್ಲಿ ಅಜಂ ವಿಕೆಟ್ ಒಪ್ಪಿಸಿದರು. ಆಫ್‍ಸ್ಟಂಪ್ ಆಚೆಗೆ ಲ್ಯಾಂಡ್ ಆದ ಚೆಂಡು ಯಾರೂ ನಿರೀಕ್ಷಿದಷ್ಟು ಸ್ಪಿನ್ ಆಗಿ ಬಾಬರ್ ಅವರ ರಕ್ಷಣಾ ಕೋಟೆಯನ್ನು ಭೇದಿಸಿ ಸ್ಟಂಪ್ ಚದುರಿಸಿತು.

ಇದನ್ನು ಓದಿದ್ದೀರಾ? ರಾಹುಲ್ ದ್ರಾವಿಡ್ ಪುತ್ರ ಅನ್ವಯ್‌ಗೆ ಭಾರತ ಅಂಡರ್-19 ತಂಡದಲ್ಲಿ ಸ್ಥಾನ

ಶ್ರೀಲಂಕಾ ಕೋಚ್ ಸನತ್ ಜಯಸೂರ್ಯ ಕೂಡಾ ಸ್ಪಿನ್ ಮೋಡಿಗೆ ರೋಮಾಂಚನಗೊಂಡಿದ್ದ, ಅವರ ಪ್ರತಿಕ್ರಿಯೆ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಾಬರ್ 2023ರ ಏಷ್ಯಾಕಪ್‍ನಲ್ಲಿ ನೇಪಾಳ ವಿರುದ್ಧ ಮೂರಂಕಿಯ ಸ್ಕೋರ್ ದಾಖಲಿಸಿದ ಬಳಿಕ 83 ಇನಿಂಗ್ಸ್ ಗಳಲ್ಲಿ ಶತಕ ಸಾಧಿಸುವುದು ಸಾಧ್ಯವಾಗಿಲ್ಲ. ಏಷ್ಯಾದ ಬ್ಯಾಟ್ಸ್ ಮನ್‍ ಗಳ ಪೈಕಿ 88 ಇನಿಂಗ್ಸ್ ಗಳೊಂದಿಗೆ ಸನತ್ ಜಯಸೂರ್ಯ ಅಗ್ರಸ್ಥಾನದಲ್ಲಿದ್ದಾರೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಪಾಕ್‌ ತಂಡದ ಪರ ಭರವಸೆಯ ಬ್ಯಾಟರ್ ಸಲ್ಮಾನ್‌ ಅಘಾ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 87 ಎಸೆತಗಳಲ್ಲಿ 9 ಬೌಂಡರಿ ನೆರವಿನಿಂದ 195 ರನ್‌ ಸಿಡಿಸಿದರು. ಇನ್ನು ಹುಸೇನ್‌ ತಲತ್ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 62 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು.

ಪರಿಣಾಮ ಪಾಕ್‌ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 299 ರನ್‌ ಕಲೆ ಹಾಕಿತು. ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಪರ ಟಾಪ್‌ ಆರ್ಡರ್‌ನಲ್ಲಿ ಯಾವೊಬ್ಬ ಬ್ಯಾಟರ್‌ ಜವಾಬ್ದಾರಿಯುತ ಆಟ ಆಡಲಿಲ್ಲ. ಆಲ್‌ರೌಂಡರ್‌ ವನಿಂದು ಹಸರಂಗ್‌ 59 ರನ್ ಬಾರಿಸಿದರು. ಅಂತಿಮವಾಗಿ ಲಂಕಾ 9 ವಿಕೆಟ್‌ಗೆ 293 ರನ್‌ ಗಳಿಸಿ ಸೋಲು ಕಂಡಿತು.

ಶತಕ ಗಳಿಸದೆ ಅತಿ ಹೆಚ್ಚು ಅಂತಾರಾಷ್ಟ್ರೀಯ ಇನಿಂಗ್ಸ್‌ ಆಡಿದ ಆಟಗಾರರು

ಸನತ್ ಜಯಸೂರ್ಯ,ಶ್ರೀಲಂಕಾ- 88 ಇನಿಂಗ್ಸ್‌

ವಿರಾಟ್ ಕೊಹ್ಲಿ,ಭಾರತ- 83 ಇನಿಂಗ್ಸ್‌

ಬಾಬರ್ ಅಜಮ್,ಪಾಕಿಸ್ತಾನ- 83 ಇನಿಂಗ್ಸ್‌

ಶಿವನಾರಾಯಣ್ ಚಂದ್ರಪಾಲ್,ವೆಸ್ಟ್ ಇಂಡೀಸ್- 78 ಇನಿಂಗ್ಸ್‌

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಗೇಮ್ಸ್: ಪಾಕ್ ಮಣಿಸಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಟೀಮ್ ಇಂಡಿಯಾ

ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಪುರುಷರ ಟಿ20 ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ...

ಏಷ್ಯನ್ ಗೇಮ್ಸ್: ಬಿಲ್ಲುಗಾರಿಕೆಯಲ್ಲಿ ಇತಿಹಾಸ ಬರೆದ 17 ವರ್ಷದ ಕುಂಕುಮ್‌ಗೆ ಬಂಗಾರ!

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಏಷ್ಯನ್ ಗೇಮ್ಸ್‌ನ 15ನೇ ದಿನ...

ಏಷ್ಯನ್ ಗೇಮ್ಸ್: 4 ದಶಕಗಳ ಬಳಿಕ ಮಹಿಳಾ ಹಾಕಿಯಲ್ಲಿ ಭಾರತಕ್ಕೆ ಒಲಿದ ಸುವರ್ಣ ಪದಕ

ಜಪಾನಿನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ...