ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದ ಮೋಹಿತ್ ಉಲ್ವಾ; ಪಾಕ್ ಮಣಿಸಿ 9ನೇ ಬಾರಿ ಅಂಡರ್-19 ಏಷ್ಯಾ ಕಪ್ ಗೆದ್ದ ಭಾರತ

Date:

ಕೊನೆಯ ಎಸೆತದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ‘ಎಸಿಸಿ ಪುರುಷರ ಅಂಡರ್-19 ಏಷ್ಯಾ ಕಪ್ 2026’ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 1 ವಿಕೆಟ್‌ನಿಂದ ಮಣಿಸಿದ ಭಾರತ ತಂಡ ದಾಖಲೆಯ 9ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. (ಇದರಲ್ಲಿ 2012ರ ಜಂಟಿ ವಿಜೇತ ಪ್ರಶಸ್ತಿಯೂ ಸೇರಿಲ್ಲ. ಅದನ್ನು ಸೇರಿಸಿದರೆ 10ನೇ ಬಾರಿ ಆಗುತ್ತದೆ.)

- Advertisement -

ಒಮಾನ್‌ನ ಅಲ್ ಅಮೇರತ್ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 338 ರನ್‌ಗಳ ಬೃಹತ್ ಗುರಿಯನ್ನು ಭಾರತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ತಲುಪಿತು. ಈ ಗೆಲುವಿನೊಂದಿಗೆ 2021ರ ಬಳಿಕ ಭಾರತ ಮೊದಲ ಬಾರಿಗೆ ಈ ಟ್ರೋಫಿಯನ್ನು ಮರಳಿ ಪಡೆದುಕೊಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸ್ಮರಣೆ | ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೇ ಜೈಲುಶಿಕ್ಷೆ ವಿಧಿಸಿ,...

ನ್ಯಾಯಮೂರ್ತಿಗಳ ವಿರುದ್ಧ ಜಾತಿ ತಾರತಮ್ಯದ ಆರೋಪ ಮಾಡಿ, ನ್ಯಾಯಾಂಗದೊಂದಿಗಿನ ಸಂಘರ್ಷ ನಡೆಸಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೇ ಐದು ವರ್ಷಗಳ ಶಿಕ್ಷೆಯ ಆದೇಶ ಹೊರಡಿಸಿ, ಕೊನೆಗೆ ತಾವೇ ಆರು ತಿಂಗಳ ಜೈಲುವಾಸ ಅನುಭವಿಸಿದ್ದವರು,...

ಡಿ.ಡಿ. ಕೋಸಾಂಬಿ | ಜ್ಞಾನದ ಹಲವು ಜಗತ್ತುಗಳನ್ನು ಶೋಧಿಸಿದ...

ಡಿ.ಡಿ. ಕೋಸಾಂಬಿಯವರ ಬದುಕು ಕೇವಲ ಯಶಸ್ಸಿನ ಕಥೆಯಷ್ಟೇ ಅಲ್ಲ; ಅದು ಅಸಾಧಾರಣ ಪ್ರತಿಭೆ ಹಾಗೂ ಮನುಷ್ಯ ಸಹಜ ಭಾವನೆಗಳ ನಡುವಿನ ಸುಂದರ ಪಯಣ. ತಮಿಳು ಇತಿಹಾಸಕಾರ ಎ.ಆರ್. ವೆಂಕಟಾಚಲಪತಿ ಅವರಂತಹ ವಿಮರ್ಶಕರು ಈ...

ಒಂದು ಬದಿ ಅಧಿಕಾರ ನಿರಾಕರಣೆ, ಮತ್ತೊಂದು ಬದಿ ಕರ್ತವ್ಯದ...

ಸೋನಿಯಾ ಗಾಂಧಿ ಅವರ ಈ ಆತ್ಮಕಥೆಯ ಆಯ್ದ ಭಾಗಗಳು ಕೇವಲ ರಾಜಕೀಯ ಇತಿಹಾಸದ ದಾಖಲೆಯಷ್ಟೇ ಅಲ್ಲ, ಬದಲಿಗೆ ಮನುಷ್ಯನ ಮನಸ್ಸಿನ ಆಳದ ಸಂವೇದನೆಗಳ ಕನ್ನಡಿ. ಅಧಿಕಾರ ಸಿಕ್ಕ ಕೂಡಲೇ ಅದನ್ನು ಬಾಚಿಕೊಳ್ಳಲು ಹಾತೊರೆಯುವ...

ಇದನ್ನೂ ಓದಿ: ಏಷ್ಯಾ ಕಪ್ 2025: ಭಾರತ-ಪಾಕಿಸ್ತಾನ ಪುನಃ ಮುಖಾಮುಖಿ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ಅಂಡರ್-19 ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್ ಕಲೆಹಾಕಿತು. ಆರಂಭಿಕ ಆಟಗಾರ ಉಸ್ಮಾನ್ ಖಾನ್ (111 ಎಸೆತಗಳಲ್ಲಿ 107 ರನ್) ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಅವರಿಗೆ ಉತ್ತಮ ಸಾಥ್ ನೀಡಿದ ಅಬ್ದುಲ್ ಖಾದಿರ್ 54 ಎಸೆತಗಳಲ್ಲಿ 8 ಸಿಕ್ಸರ್ ಸಹಿತ 80 ರನ್ ಮತ್ತು ನಾಯಕ ಫರ್ಹಾನ್ ಯೂಸಫ್ 60 ಎಸೆತಗಳಲ್ಲಿ 63 ರನ್ ಗಳಿಸಿದರು.

ಒಂದು ಹಂತದಲ್ಲಿ 350ಕ್ಕೂ ಹೆಚ್ಚು ರನ್ ಗಳಿಸುವ ಸೂಚನೆ ನೀಡಿದ್ದ ಪಾಕ್ ತಂಡಕ್ಕೆ ಕೊನೆಯ ಓವರ್‌ಗಳಲ್ಲಿ ಭಾರತೀಯ ಬೌಲರ್‌ಗಳು ಕಡಿವಾಣ ಹಾಕಿದರು. ಭಾರತದ ಪರ ಕಾವ್ಯ ಪರೇಶ್ ಪಟೇಲ್ 4 ವಿಕೆಟ್ ಹಾಗೂ ಚಿಗುರುಪಾಟಿ ವೆಂಕಟ 3 ವಿಕೆಟ್ ಪಡೆದು ಮಿಂಚಿದರು.

338 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕ ಲಕ್ಷ್ಯ ರೈಚಂದಾನಿ (80 ರನ್) ಮತ್ತು ಆರ್ಯವೀರ್ ಸೆಹ್ವಾಗ್ (58 ರನ್) ಮೊದಲ ವಿಕೆಟ್‌ಗೆ ಉತ್ತಮ ಆರಂಭ ಒದಗಿಸಿದರು. ಆದರೆ ಮಧ್ಯಮ ಕ್ರಮಾಂಕದ ಕುಸಿತದಿಂದಾಗಿ ಭಾರತ 252 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.

ಈ ಹಂತದಲ್ಲಿ ಒಂದಾದ ಕೆಳಕ್ರಮಾಂಕದ ಆಟಗಾರರಾದ ಮನಲ್ ಚೌಹಾನ್ ಮತ್ತು ಮೋಹಿತ್ ಉಲ್ವಾ ಪಂದ್ಯದ ದಿಕ್ಕನ್ನೇ ಬದಲಿಸಿದರು. ಮನಲ್ ಚೌಹಾನ್ ಕೇವಲ 32 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 47 ರನ್ ಸಿಡಿಸಿ 48ನೇ ಓವರ್‌ನಲ್ಲಿ ಔಟಾದರು.

ಕೊನೆಯ ಓವರ್‌ನಲ್ಲಿ ಭಾರತದ ಗೆಲುವಿಗೆ 8 ರನ್‌ಗಳ ಅಗತ್ಯವಿತ್ತು. ಪಂದ್ಯದ ಅಂತಿಮ ಎಸೆತದಲ್ಲಿ ಗೆಲುವಿಗೆ 3 ರನ್ ಬೇಕಿದ್ದಾಗ, 10ನೇ ಕ್ರಮಾಂಕದ ಬ್ಯಾಟರ್ ಮೋಹಿತ್ ಉಲ್ವಾ ಎಕ್ಸ್‌ಟ್ರಾ ಕವರ್ ಮೂಲಕ ಆಕರ್ಷಕ ಬೌಂಡರಿ ಬಾರಿಸಿ ಭಾರತಕ್ಕೆ ಅವಿಸ್ಮರಣೀಯ ಜಯ ತಂದುಕೊಟ್ಟರು. 26 ಎಸೆತಗಳಲ್ಲಿ ಅಜೇಯ 49 ರನ್ (5 ಬೌಂಡರಿ, 3 ಸಿಕ್ಸರ್) ಸಿಡಿಸಿದ ಮೋಹಿತ್ ಉಲ್ವಾ ‘ಪಂದ್ಯಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಮರಣೆ | ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೇ ಜೈಲುಶಿಕ್ಷೆ ವಿಧಿಸಿ, ತಾವೇ ಜೈಲು ಸೇರಿದ್ದ ನ್ಯಾಯಮೂರ್ತಿ ಕರ್ಣನ್!

ನ್ಯಾಯಮೂರ್ತಿಗಳ ವಿರುದ್ಧ ಜಾತಿ ತಾರತಮ್ಯದ ಆರೋಪ ಮಾಡಿ, ನ್ಯಾಯಾಂಗದೊಂದಿಗಿನ ಸಂಘರ್ಷ ನಡೆಸಿ,...

‘ಅಬ್ ಕೀ ಬಾರ್, ಎಕ್ಯೂಐ ಚಾರ್‌ ಸೋ ಪಾರ್’: ದೆಹಲಿ ವಾಯುಮಾಲಿನ್ಯದ ವಿಚಾರದಲ್ಲಿ ಪ್ರಧಾನಿ ಮೋದಿಗೆ ಕಾಂಗ್ರೆಸ್ ಟಾಂಗ್

ದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟ ತೀವ್ರವಾಗಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಶನಿವಾರ ಪ್ರಧಾನಿ...

ಬಿಸಿಯೂಟಕ್ಕೂ ಖಾಸಗೀಕರಣದ ಬಿಸಿ! ಕೆಲಸ ಕಸಿಯುವ ಹುನ್ನಾರ ವಿರೋಧಿಸಿ ಪ್ರತಿಭಟನೆ

ಬಿಸಿಯೂಟ ತಯಾರಕ ಮಹಿಳೆಯರನ್ನು ಕೆಲಸದಿಂದ ವಜಾಗೊಳಿಸಿ, ಎನ್‌ಜಿಓ ಖಾಸಗಿ ಸಂಘ ಸಂಸ್ಥೆಗಳಿಗೆ...

ತೆಲಂಗಾಣ | ಗಿಗ್ ಕಾರ್ಮಿಕರಿಗೆ ₹15 ಲಕ್ಷ ವಿಮೆ, ವೈ-ಫೈ ವಿಶ್ರಾಂತಿ ವಲಯಕ್ಕೆ ರಾಹುಲ್ ಚಾಲನೆ!

ತೆಲಂಗಾಣ ಸರ್ಕಾರ ಜಾರಿಗೆ ತಂದಿರುವ ಗಿಗ್ ಕಾರ್ಮಿಕರ ಕಲ್ಯಾಣ ಕಾಯ್ದೆಯನ್ನು ಕಾಂಗ್ರೆಸ್...