ನಕಲಿ ಜಾಲತಾಣಗಳಲ್ಲಿ ಐಪಿಎಲ್‌ ಪಂದ್ಯಾವಳಿ ಅಕ್ರಮ ಪ್ರಸಾರ ತಡೆಯುವಂತೆ ದೆಹಲಿ ಹೈಕೋರ್ಟ್‌ ಆದೇಶ

Date:

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್‌ ಪಂದ್ಯಾವಳಿಯನ್ನು ಅಕ್ರಮವಾಗಿ ಪ್ರಸಾರ ಮಾಡದಂತೆ ಕೆಲ ನಕಲಿ ಜಾಲತಾಣಗಳಿಗೆ ನಿರ್ಬಂಧ ವಿಧಿಸಿ ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ.

ಐಪಿಎಲ್ ಪಂದ್ಯಗಳನ್ನು ಅಕ್ರಮವಾಗಿ ಪ್ರಸಾರ ಮಾಡುವ ಹಲವಾರು ನಕಲಿ ಜಾಲತಾಣಗಳಿವೆ ಎಂದು ದೂರಿ ವಯಾಕಾಮ್ 18 ಮೀಡಿಯಾ ಪ್ರೈವೇಟ್ ಲಿಮಿಟೆಡ್ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ನರುಲಾ, ಐಪಿಎಲ್ ಪಂದ್ಯಾವಳಿಗಳು ಅಲ್ಪಾವಧಿಯದ್ದಾಗಿರುವುದರಿಂದ ನಕಲಿ ಜಾಲತಾಣಗಳ ಬಳಕೆ ನಿರ್ಬಂಧಿಸುವಲ್ಲಿ ಯಾವುದೇ ವಿಳಂಬ ಉಂಟು ಮಾಡಿದರೆ ಅದರಿಂದ ವಯಾಕಾಮ್ 18 ಗಮನಾರ್ಹ ಆರ್ಥಿಕ ನಷ್ಟ ಅನುಭವಿಸಲು ಕಾರಣವಾಗಬಹುದು ಎಂದು ಉಲ್ಲೇಖಿಸಿ, ನಕಲಿ ಜಾಲತಾಣಗಳಲ್ಲಿ ಐಪಿಎಲ್‌ ಪಂದ್ಯಾವಳಿ ಅಕ್ರಮ ಪ್ರಸಾರ ತಡೆಯುವಂತೆ ಆದೇಶದಲ್ಲಿ ತಿಳಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕೃತಿಸ್ವಾಮ್ಯ ಇರುವ ಕೃತಿಗಳಿಗೆ ಅವುಗಳು ಸೃಷ್ಟಿಯಾದ ಕೂಡಲೇ ರಕ್ಷಣೆ ನೀಡುವ ಸಲುವಾಗಿ ಜೊತೆಗೆ ಕೃತಿಕಾರರು ಮತ್ತು ಮಾಲೀಕರಿಗೆ ಯಾವುದೇ ಸರಿಪಡಿಸಲಾಗದಂತಹ ನಷ್ಟ ಉಂಟಾಗದಂತೆ ನೋಡಿಕೊಳ್ಳಲು ಡೈನಾಮಿಕ್‌ ಪ್ಲಸ್‌ ತಡೆಯಾಜ್ಞೆ ನೀಡಲಾಗುತ್ತದೆ.

ಪ್ರಸಾರ ಹಕ್ಕುಗಳಲ್ಲಿ ವಯಾಕಾಮ್‌ ಮಾಡಿರುವ ಹೂಡಿಕೆಗೆ ರಕ್ಷಣೆ ಒದಗಿಸಲು ಮತ್ತು ಅದರ ಕೃತಿಸ್ವಾಮ್ಯತ್ವ ಉಳಿಸಿಕೊಳ್ಳಲು ಅಂತಹ ಉಲ್ಲಂಘನೆಯನ್ನು ತ್ವರಿತವಾಗಿ ನಿರ್ಬಂಧಿಸುವುದು ನಿರ್ಣಾಯಕ ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ ವಯಾಕಾಮ್ 18ರ ಮೊಕದ್ದಮೆಯಲ್ಲಿ ಆಕ್ಷೇಪಿಸಲಾದ ಜಾಲತಾಣಗಳ ಬಳಕೆ ನಿರ್ಬಂಧಿಸಲು ವಿವಿಧ ಅಂತರ್ಜಾಲ ಸೇವಾ ಪೂರೈಕೆದಾರರಿಗೆ ಆದೇಶಿಸಲಾಗಿದೆ.

ನಕಲಿ ಜಾಲತಣಾಗಳನ್ನು ನಿರ್ಬಂಧಿಸಿ ಅವುಗಳ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಲು ನ್ಯಾಯಾಲಯ ಡೊಮೇನ್ ಹೆಸರು ನೋಂದಣಿದಾರರಿಗೆ ಸೂಚಿಸಿದೆ.

ಇದನ್ನು ಓದಿದ್ದೀರಾ? ಅಮೇರಿಕ | 2.6 ಕಿ.ಮೀ ಉದ್ದದ ಬಾಲ್ಟಿಮೋರ್ ಸೇತುವೆಗೆ ಹಡಗು ಡಿಕ್ಕಿ: 7 ಮಂದಿ ನಾಪತ್ತೆ; ವಿಡಿಯೋ ವೈರಲ್

ವಯಾಕಾಮ್ 18 ಓವರ್-ದಿ-ಟಾಪ್ (ಒಟಿಟಿ) ವೇದಿಕೆ ಜಿಯೋ ಸಿನೆಮಾವನ್ನು ಹೊಂದಿದ್ದು, 2023ರಿಂದ 2027ರವರೆಗೆ ನಡೆಯುವ ಐಪಿಎಲ್‌ ಪಂದ್ಯಾವಳಿಗಳ ಪ್ರಸಾರಕ್ಕೆ ಸಂಬಂಧಿಸಿದಂತೆ ಭಾರತೀಯ ಉಪಖಂಡದ ವಿಶೇಷ ಡಿಜಿಟಲ್ ಮಾಧ್ಯಮ ಹಕ್ಕು ಮತ್ತು ಸಾಗರೋತ್ತರ ಟಿವಿ ಹಕ್ಕುಗಳನ್ನು ಪಡೆದುಕೊಂಡಿದೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ | ಪಂಜಾಬ್ ವಿರುದ್ಧ ಗುಜರಾತ್ ಟೈಟನ್ಸ್‌ಗೆ ಮೂರು ವಿಕೆಟ್‌ಗಳ ಜಯ

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್‌...

ಐಪಿಎಲ್ | ರೋಚಕ ಹಣಾಹಣಿಯಲ್ಲಿ ಕೈಕೊಟ್ಟ ನಸೀಬು: ಕೆಕೆಆರ್‌ ವಿರುದ್ಧ ಆರ್‌ಸಿಬಿಗೆ 1 ರನ್‌ಗಳ ಸೋಲು

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಇಂದು ನಡೆದ ಐಪಿಎಲ್ 36ನೇ ಪಂದ್ಯದಲ್ಲಿ ರಾಯಲ್...

ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ‘ಕೆಎಂಎಫ್’ ಪ್ರಯೋಜಕತ್ವ

ನಂದಿನಿ ಬ್ರಾಂಡ್‌ನೊಂದಿಗೆ ಡೇರಿ ಉದ್ಯಮಗಳಲ್ಲಿ ಎಲ್ಲಡೆ ಹೆಸರುವಾಸಿಯಾಗಿರುವ ಕರ್ನಾಟಕ ಹಾಲು ಒಕ್ಕೂಟ...