ನಾಳೆಯಿಂದ ಐಪಿಎಲ್‌ ಹಬ್ಬ; 12 ಮೈದಾನ, 74 ಪಂದ್ಯ, 18 ಡಬಲ್‌ಹೆಡರ್‌

Date:

ಐಪಿಎಲ್‌ ಚುಟುಕು ಕ್ರಿಕೆಟ್‌ ಟೂರ್ನಿಯ ʻಸುಲ್ತಾನ್‌ʼ ಇಂಡಿಯನ್‌ ಪ್ರೀಮಿಯರ್‌ ಲೀಗ್‌, ಐಪಿಎಲ್‌ ಪಂದ್ಯಾವಳಿ ನಾಳೆ ಅಹ್ಮದಾಬಾದ್‌ನಲ್ಲಿ ಅದ್ಧೂರಿ ಚಾಲನೆ ದೊರೆಯಲಿದೆ. ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್ ತಂಡವು ತವರು ಮೈದಾನದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಎಂಎಸ್ ಧೋನಿ ಸಾರಥ್ಯದ 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

18 ಡಬಲ್‌ಹೆಡರ್ ಐಪಿಎಲ್ ಪಂದ್ಯಗಳು

ಐಪಿಎಲ್‌ನ 16ನೇ ಆವೃತ್ತಿಯಲ್ಲಿ 12 ಮೈದಾನಗಳಲ್ಲಿ 52 ದಿನಗಳ ಕಾಲ ಒಟ್ಟು 74 ಪಂದ್ಯಗಳು  ನಡೆಯಲಿದ್ದು, ಮೇ 21ರಂದು ಕೊನೆಯ ಐಪಿಎಲ್ ಲೀಗ್‌ ಪಂದ್ಯ ನಡೆಯಲಿದೆ. 18 ಡಬಲ್‌ಹೆಡರ್‌ಗಳು (ಒಂದೇ ದಿನದಲ್ಲಿ ಎರಡು ಪಂದ್ಯ) ಇರಲಿದ್ದು, ಮೊದಲ ಪಂದ್ಯ ಮಧ್ಯಾಹ್ನ 3:30ಕ್ಕೆ ಮತ್ತು ಎರಡನೇ ಪಂದ್ಯ ಸಂಜೆ 07:30ಕ್ಕೆ ಪ್ರಾರಂಭವಾಗಲಿವೆ.

ತವರು ಮತ್ತು ಹೊರಗಿನ ಮಾದರಿಯಲ್ಲಿ ತಲಾ 7 ಪಂದ್ಯ

ಕೋವಿಡ್ ಕಾರಣದಿಂದಾಗಿ ಕಳೆದ ಆವೃತ್ತಿಯ ಎಲ್ಲಾ ಪಂದ್ಯಗಳು ಮುಂಬೈ, ಪುಣೆ ಮತ್ತು ಅಹಮದಾಬಾದ್‌ನಲ್ಲಿ ನಡೆದಿದ್ದವು. ಆದರೆ ಇದೀಗ ಮತ್ತೆ ಪಂದ್ಯಾವಳಿ ಮೂಲ ಸ್ವರೂಪಕ್ಕೆ ಮರಳಲಿದ್ದು, ಎಲ್ಲಾ ತಂಡಗಳು ಐಪಿಎಲ್ ಲೀಗ್ ಹಂತದಲ್ಲಿ ತವರು ಮೈದಾನ ಮತ್ತು ಹೊರಗಿನ ಮೈದಾನಗಳಲ್ಲಿ ತಲಾ 7 ಪಂದ್ಯಗಳನ್ನು ಆಡಲಿವೆ. ಲೀಗ್ ಹಂತದಲ್ಲಿ ಓಟ್ಟು 70 ಪಂದ್ಯಗಳು ನಡೆಯಲಿವೆ.

ಈ ಸುದ್ದಿ ಓದಿದ್ದೀರಾ? ಐಪಿಎಲ್‌ ಹಿನ್ನೋಟ | 15 ಆವೃತ್ತಿ, 3 ಫೈನಲ್, ಒಮ್ಮೆಯೂ ಒಲಿಯದ ಚಾಂಪಿಯನ್‌ ಪಟ್ಟ

ಗುಂಪು ಹಂತದಲ್ಲಿ ಪ್ರತಿ ತಂಡಗಳಿಗೆ 14 ಪಂದ್ಯ

ಐಪಿಎಲ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಹತ್ತು ತಂಡಗಳನ್ನು ತಲಾ 5 ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪು ಹಂತದಲ್ಲಿ, ಪ್ರತಿ ತಂಡವು ಒಟ್ಟು 14 ಪಂದ್ಯಗಳನ್ನಾಡಲಿದೆ. ತಮ್ಮ ಗುಂಪಿನ ಇತರ ನಾಲ್ಕು ತಂಡಗಳೊಂದಿಗೆ ತಲಾ ಎರಡು ಬಾರಿ (ಒಂದು ಹೋಮ್‌ ಮತ್ತು ಒಂದು ಅವೇ), ಮತ್ತು ಇನ್ನೊಂದು ಗುಂಪಿನ ನಾಲ್ಕು ತಂಡಗಳ ವಿರುದ್ದ ತಲಾ 1 ಪಂದ್ಯಗಳನ್ನಾಡಲಿದೆ. ಡ್ರಾ ಅಥವಾ ಪಂದ್ಯ ರದ್ದಾದರೆ ಎರಡೂ ತಂಡಗಳಿಗೆ ತಲಾ 1 ಅಂಕವನ್ನು ನೀಡಲಾಗುತ್ತದೆ.

ಪ್ಲೇ ಆಫ್‌, ಕ್ವಾಲಿಫೈಯರ್

ಐಪಿಎಲ್ ಪ್ಲೇಆಫ್‌ ಹಂತದಲ್ಲಿ ನಾಲ್ಕು ಪಂದ್ಯಗಳು ನಡೆಯಲಿವೆ. ಗುಂಪು ಹಂತದಲ್ಲಿ ಮೊದಲ ಮತ್ತು ಎರಡನೇ ಶ್ರೇಯಾಂಕದ ತಂಡಗಳ ನಡುವೆ ಕ್ವಾಲಿಫೈಯರ್ 1, ಗುಂಪು ಹಂತದಲ್ಲಿ ಮೂರು ಮತ್ತು ನಾಲ್ಕನೇ ಶ್ರೇಯಾಂಕದ ತಂಡಗಳ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಕ್ವಾಲಿಫೈಯರ್ 1ನಲ್ಲಿ ಸೋತ ಮತ್ತು ಎಲಿಮಿನೇಟರ್‌ ವಿಜೇತರ ನಡುವೆ ಕ್ವಾಲಿಫೈಯರ್ 2 ಪಂದ್ಯ ನಡೆಯಲಿದೆ. ಈ ಪಂದ್ಯದ ವಿಜೇತರು ಕ್ವಾಲಿಫೈಯರ್ 1 ವಿಜೇತರನ್ನು ಫೈನಲ್‌ನಲ್ಲಿ ಎದುರಿಸಲಿದ್ದಾರೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜೂನ್‌ 15ರವರೆಗೆ ಪ್ರತಿಭಟನೆ ನಿಲ್ಲಿಸಲು ಕುಸ್ತಿಪಟುಗಳ ನಿರ್ಧಾರ

ಭಾರತೀಯ ಕುಸ್ತಿ ಫೆಡರೇಷನ್​ನ ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್​ ಭೂಷಣ್​...

ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ | ತಂಡದಿಂದ ಹೊರಬಿದ್ದ ವಿಶ್ವ ನಂ.1 ಬೌಲರ್‌ ಅಶ್ವಿನ್‌!

ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಮ್‌...

ಕುಸ್ತಿಪಟುಗಳನ್ನು ಮಾತುಕತೆಗೆ ಆಹ್ವಾನಿಸಿದ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್

ಕುಸ್ತಿಪಟುಗಳೊಂದಿಗೆ ಅವರ ಸಮಸ್ಯೆಗಳನ್ನು ಚರ್ಚಿಸಲು ಸರ್ಕಾರ ಸಿದ್ಧವಿದೆ. ಇದಕ್ಕಾಗಿ ಮತ್ತೊಮ್ಮೆ ಕುಸ್ತಿಪಟುಗಳನ್ನು...

ಟೆಸ್ಟ್‌ ಚಾಂಪಿ​ಯ​ನ್‌​ಶಿ​ಪ್‌ ಫೈನಲ್‌ | ಅಭ್ಯಾಸದ ವೇಳೆ ರೋಹಿತ್‌ ಶರ್ಮಾ ಕೈ ಬೆರಳಿಗೆ ಗಾಯ

ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ರೋಹಿತ್‌...