ಐಪಿಎಲ್‌ 2023 | ಗೆಲುವಿನಂಚಿನಲ್ಲಿ ಎಡವಿದ ಹೈದರಾಬಾದ್‌; ಕೋಲ್ಕತ್ತಾಗೆ ರೋಚಕ ಗೆಲುವು

Date:

ಐಪಿಎಲ್‌ 16ನೇ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌, ಕೆಕೆಆರ್ ತಂಡ‌ 4ನೇ ಗೆಲುವು ದಾಖಲಿಸಿದೆ.

ಹೈದರಾಬಾದ್‌ನ ರಾಜೀವ್‌ ಗಾಂಧಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್‌, ಆತಿಥೇಯ ಸನ್‌ರೈಸರ್ಸ್‌ ಹೈದರಾಬಾದ್‌, ಎಸ್‌ಆರ್‌ಎಚ್‌ ವಿರುದ್ಧ 5 ರನ್‌ಗಳ ರೋಚಕ ಗೆಲುವು ಸಾಧಿಸಿದೆ.

ಮೂರು ಓವರ್‌ ಬೌಲಿಂಗ್‌ನಲ್ಲಿ 3 ಬೈ ಸೇರಿದಂತೆ ಕೇವಲ 12 ರನ್‌ ಬಿಟ್ಟುಕೊಟ್ಟ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಚೇಸಿಂಗ್‌ ವೇಳೆ 15ನೇ ಓವರ್‌ವರೆಗೂ ಗೆಲುವಿನತ್ತ ಮುನ್ನಡೆದಿದ್ದ ಎಸ್‌ಆರ್‌ಎಚ್‌, ಕೊನೆಯ 5 ಓವರ್‌ಗಳಲ್ಲಿ ಬ್ಯಾಟಿಂಗ್‌ನಲ್ಲಿ ತೋರಿದ ನಿರ್ಲ್ಯಕ್ಷದಿಂದಾಗಿ ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಕೆಕೆಆರ್‌ 9 ವಿಕೆಟ್‌ ನಷ್ಟದಲ್ಲಿ 171 ರನ್‌ಗಳಿಸಿತ್ತು. ಸವಾಲಿನ ಮೊತ್ತ ಬೆನ್ನಟ್ಟುವ ವೇಳೆ ಹೈದರಾಬಾದ್‌ ತಂಡ 15 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್‌ ನಷ್ಟದಲ್ಲಿ 134 ರನ್‌ಗಳಿಸಿತ್ತು. ಮುಂದಿನ 30 ಎಸೆತಗಳಲ್ಲಿ 38 ರನ್‌ಗಳಿಸಬೇಕಾದ ಸಾಮನ್ಯ ಗುರಿ ಆತಿಥೇಯ ತಂಡದ ಎದುರಿಗಿತ್ತು. ಈ ವೇಳೆ ನಾಯಕ ಮಾರ್ಕಮ್‌ ಮತ್ತು ಅಬ್ದುಲ್‌ ಸಮದ್‌ ಕ್ರೀಸ್‌ನಲ್ಲಿದ್ದರು. ಹೀಗಾಗಿ ಗೆಲುವಿನ ಅವಕಾಶ ಆತಿಥೇಯ ತಂಡ ಪಾಲಿಗೆ ಇತ್ತು.

ಆದರೆ ಅಂತಿಮ 5 ಓವರ್‌ಗಳಲ್ಲಿ ಬಿಗು ಬೌಲಿಂಗ್‌ ಪ್ರದರ್ಶನ ನೀಡಿದ ಕೆಕೆಆರ್‌ ಬೌಲರ್‌ಗಳು, ಕೈ ಬಿಟ್ಟು ಹೋಗಿದ್ದ ಪಂದ್ಯವನ್ನು ಮತ್ತೆ ತಮ್ಮ ವಶಕ್ಕೆ ಪಡೆದರು. ಕೊನೆಯ 5 ಓವರ್‌ಗಳಲ್ಲಿ ಕ್ರಮವಾಗಿ 4,8,5,12 ಹಾಗೂ ಕೊನೆಯ ಓವರ್‌ನಲ್ಲಿ ಕೇವಲ ಮೂರು ರನ್‌ಗಳಿಸಲಷ್ಟೇ ಎಸ್‌ಆರ್‌ಎಚ್‌ ಬ್ಯಾಟರ್‌ಗಳಿಗೆ ಸಾಧ್ಯವಾಯಿತು.

ಅಂತಿಮ  6 ಎಸೆತಗಳಲ್ಲಿ ಎಸ್‌ಆರ್‌ಎಚ್‌ ಗೆಲುವಿಗೆ ಕೇವಲ 9 ರನ್‌ಗಳ ಅಗತ್ಯವಿತ್ತು. ಆದರೆ ಸ್ಪಿನ್ನರ್ ವರುಣ್‌ ಚಕ್ರವರ್ತಿ,  ಕೇವಲ ಮೂರು ರನ್ ಮಾತ್ರ ಬಿಟ್ಟುಕೊಡುವ ಕೊಡುವ ತಂಡಕ್ಕೆ ಗೆಲುವು ತಂದುಕೊಟ್ಟರು.   

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಪೈರ್ ಜೊತೆ ವಾಗ್ವಾದ: ಕೊಹ್ಲಿಗೆ ಶೇ.50 ರಷ್ಟು ದಂಡ

ಐಪಿಎಲ್‌ ಟೂರ್ನಿಯಲ್ಲಿ ಕೆಕೆಆರ್‌ ತಂಡದ ವಿರುದ್ಧದ ಪಂದ್ಯದಲ್ಲಿ ಅಂಪೈರ್‌ ವಿರುದ್ಧ ವಾಗ್ವಾದ...

ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಇತಿಹಾಸ ನಿರ್ಮಿಸಿದ 17ರ ಹರೆಯದ ಭಾರತೀಯ ಡಿ ಗುಕೇಶ್

ಭಾರತದ 17 ವರ್ಷದ ಗ್ರ್ಯಾಂಡ್‌ ಮಾಸ್ಟರ್ ಡಿ ಗುಕೇಶ್ ಟೊರೊಂಟೊದಲ್ಲಿ ನಡೆದ...

ಐಪಿಎಲ್ | ಪಂಜಾಬ್ ವಿರುದ್ಧ ಗುಜರಾತ್ ಟೈಟನ್ಸ್‌ಗೆ ಮೂರು ವಿಕೆಟ್‌ಗಳ ಜಯ

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್‌...