ಮಗ ಕ್ರಿಕೆಟಿಗನಾಗದೇ ಇದ್ದರೆ ಚೆನ್ನಾಗಿರುತ್ತಿತ್ತು: ಬೇಸರ ಹೊರಹಾಕಿದ ರವೀಂದ್ರ ಜಡೇಜಾ ತಂದೆ

Date:

  • ರಿವಾಬಾಳನ್ನು ಮಗ ಮದುವೆಯಾಗದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು: ಅನಿರುದ್ಧ್ ಸಿಂಗ್ ಜಡೇಜಾ
  • ‘ಪತ್ನಿಯ ಹೆಸರಿಗೆ ಮಸಿ ಬಳಿಯಲು ಯತ್ನ’ ಎಂದು ಟ್ವೀಟ್ ಮಾಡಿದ ಕ್ರಿಕೆಟಿಗ ಜಡೇಜಾ

ಟೀಮ್ ಇಂಡಿಯಾದ ಆಟಗಾರನಾಗಿರುವ ರವೀಂದ್ರ ಜಡೇಜಾ ಸದ್ಯ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

“ಮಗನನ್ನು ಕ್ರಿಕೆಟರ್ ಮಾಡದಿರುತ್ತಿದ್ದರೆ ಚೆನ್ನಾಗಿತ್ತು. ರವೀಂದ್ರ ಜಡೇಜಾಗೂ ನಮಗೂ ಈಗ ಯಾವುದೇ ಸಂಬಂಧವಿಲ್ಲ, ಮಾತು ಬಿಟ್ಟು ವರ್ಷಗಳೇ ಕಳೆದಿವೆ. ಇದಕ್ಕೆಲ್ಲ ಆತನ ಪತ್ನಿಯೇ ಕಾರಣ” ಎಂದು ಜಡೇಜಾ ತಂದೆ ಅನಿರುದ್ಧ್ ಸಿಂಗ್ ಜಡೇಜಾ, ಕುಟುಂಬದೊಳಗೆ ಸಂಘರ್ಷ ನಡೆದಿರುವ ಸಂಗತಿಗಳನ್ನು ಹೊರಹಾಕಿದ್ದಾರೆ.

ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ಅವರ ತಂದೆಯನ್ನು ‘ದೈನಿಕ್ ಭಾಸ್ಕರ್’ ಸಂದರ್ಶನ ನಡೆಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ವೇಳೆ ತಮ್ಮ ಕುಟುಂಬದಲ್ಲಿ ನಡೆದಿರುವ ಸಂಗತಿಗಳನ್ನು ಹೊರಹಾಕಿರುವ ಅನಿರುದ್ಧ್ ಸಿಂಗ್, ‘ಕುಟುಂಬದೊಳಗಿನ ಈ ಸಂಘರ್ಷಕ್ಕೆ ಜಡೇಜಾ ಪತ್ನಿ, ಸದ್ಯ ಗುಜರಾತ್‌ನ ಬಿಜೆಪಿ ಶಾಸಕಿಯಾಗಿರುವ ರಿವಾಬಾ ಜಡೇಜಾ ಕಾರಣ’ ಎಂದು ಆರೋಪಿಸಿದ್ದಾರೆ.

ಜಡೇಜಾ ಪತ್ನಿ ರಿವಾಬಾ 2022ರಲ್ಲಿ ಗುಜರಾತ್‌ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜಾಮ್‌ನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಶಾಸಕಿಯಾಗಿ ಆಯ್ಕೆಯಾಗಿದ್ದರು.

ಪತ್ನಿ ರಿವಾಬಾರೊಂದಿಗೆ ರವೀಂದ್ರ ಜಡೇಜಾ

ಸಂದರ್ಶನದಲ್ಲಿ “ತಮ್ಮ ಮಗ ರವೀಂದ್ರ ಮತ್ತು ಸೊಸೆ ರಿವಾಬಾ ಅವರೊಂದಿಗೆ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದ್ದಾರೆ.

“ಅವರು ನಮ್ಮನ್ನು ಕರೆಯುವುದಿಲ್ಲ, ನಾವು ಸಹ ಅವರನ್ನು ಕರೆಯುವುದಿಲ್ಲ. ನಮ್ಮ ನಡುವೆ ಯಾವುದೇ ಸಂಬಂಧವಿಲ್ಲ. ಕಳೆದ ಐದು ವರ್ಷಗಳಿಂದ ಮೊಮ್ಮಗಳ ಮುಖವನ್ನೇ ನೋಡಿಲ್ಲ” ಎಂದಿದ್ದಾರೆ.

“ಮದುವೆಯಾದ ಎರಡು-ಮೂರು ತಿಂಗಳ ನಂತರ ಕುಟುಂಬದೊಳಗೆ ವಿವಾದಗಳು ನಡೆಯಲಾರಂಭಿಸಿದವು. ಆಮೇಲೆ ರಿವಾಬಾ ಎಲ್ಲವೂ ತನ್ನದಾಗಬೇಕು ಎಂದು ಹೇಳಲು ಪ್ರಾರಂಭಿಸಿದಳು. ಅದರಲ್ಲೂ ರಿವಾಬಾ ಅವರ ತಾಯಿ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ನಮ್ಮ ಕುಟುಂಬದ ವಿಚಾರದಲ್ಲಿ ಅವರ ಹಸ್ತಕ್ಷೇಪ ಅತಿಯಾಗಿತ್ತು” ಎಂದಿದ್ದಾರೆ.

ರವೀಂದ್ರ ಜಡೇಜಾ ಅವರ ತಂದೆ ಹತ್ತು ವರ್ಷಗಳಿಂದ ಜಾಮ್‌ನಗರದ ಎರಡು ಬೆಡ್‌ರೂಮ್ ಇರುವ ಫ್ಲ್ಯಾಟ್‌ವೊಂದರಲ್ಲಿ ವಾಸಿಸುತ್ತಿದ್ದಾರೆ. 20 ಸಾವಿರ ಪಿಂಚಣಿಯ ನೆರವಿನಿಂದ ಜೀವನ ಸಾಗಿಸುತ್ತಿದ್ದಾರೆ.

“ರವೀಂದ್ರನನ್ನು ಕ್ರಿಕೆಟಿಗನನ್ನಾಗಿ ಮಾಡಲು ಶ್ರಮಿಸಿದ್ದೇವೆ. ಅವನ ಸಹೋದರಿ ರವೀಂದ್ರನನ್ನು ತಾಯಿಯಂತೆ ನೋಡಿಕೊಂಡಳು. ಆದರೆ ಇದೀಗ ಅವನಿಗೂ ನೈನಾಗೂ ಸಂಬಂಧವೇ ಇಲ್ಲದಂತಾಗಿದೆ. ಅವರನ್ನು ಕ್ರಿಕೆಟಿಗನನ್ನಾಗಿ ಮಾಡದೇ ಇದ್ದಿದ್ದರೆ ಚೆನ್ನಾಗಿತ್ತು. ಸೊಸೆ ರಿವಾಬಾ ಕೇವಲ ಹಣದ ಬಗ್ಗೆ ಕಾಳಜಿ ವಹಿಸುತ್ತಾಳೆ. ಆತನಿಗೆ ಮದುವೆಯಾಗದೇ ಇದ್ದಿದ್ದರೆ ಚೆನ್ನಾಗಿತ್ತು. ಆತನಿಗೆ ಏನು ಮಾಟಮಂತ್ರ ಹಾಕಿದ್ದಾಳೋ ದೇವನಿಗೇ ಗೊತ್ತು. ನಾವು ಈ ಪರಿಸ್ಥಿತಿಯಲ್ಲಿ ಇರುತ್ತಿರಲಿಲ್ಲ” ಎಂದು ಬೇಸರ ಹೊರಹಾಕಿದ್ದಾರೆ.

‘ಪತ್ನಿಯ ಹೆಸರಿಗೆ ಮಸಿ ಬಳಿಯಲು ಯತ್ನ’ ಎಂದು ಟ್ವೀಟ್ ಮಾಡಿದ ಕ್ರಿಕೆಟಿಗ ಜಡೇಜಾ

ರವೀಂದ್ರ ಜಡೇಜಾ ತಂದೆ ನೀಡಿರುವ ಹೇಳಿಕೆಯು ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ. ಈ ಹಿನ್ನೆಲೆಯಲ್ಲಿ ಇದು ವಿವಾದಕ್ಕೂ ಕಾರಣವಾಗಿದೆ.

ಈ ಬಗ್ಗೆ ಗುಜರಾತ್ ಭಾಷೆಯಲ್ಲಿ ಟ್ವೀಟ್ ಮಾಡಿರುವ ಟೀಮ್ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ, “ಪತ್ನಿಯ ಹೆಸರಿಗೆ ಮಸಿ ಬಳಿಯುವ ಯತ್ನವಿದು. ದೈನಿಕ್ ಭಾಸ್ಕರ್‍‌ನ ಈ ಸಂದರ್ಶನವು ಪೂರ್ವಯೋಜಿತವಾದುದು. ಇದನ್ನು ನಿರ್ಲಕ್ಷ್ಯಿಸಿ” ಎಂದು ಬರೆದುಕೊಂಡಿದ್ದಾರೆ.

“ದೈನಿಕ್ ಭಾಸ್ಕರ್ ಸಂದರ್ಶನದಲ್ಲಿ ಹೇಳಿರುವ ಎಲ್ಲಾ ವಿಷಯಗಳು ಅಸಂಬದ್ಧ, ಇದು ಸಂಪೂರ್ಣವಾಗಿ ಅರ್ಥಹೀನ ಮತ್ತು ಅಸತ್ಯ. ಇದು ನಿಜವಾಗಿಯೂ ಖಂಡನೀಯ. ನನ್ನ ಹೆಂಡತಿಯ ಹೆಸರನ್ನು ಹಾಳುಮಾಡುವ ಪ್ರಯತ್ನ ಇದು. ನನಗೂ ಹೇಳಲು ಬಹಳಷ್ಟು ವಿಷಯಗಳಿವೆ. ಆದರೆ ಅದನ್ನು ಸಾರ್ವಜನಿಕವಾಗಿ ಹೇಳುವುದಿಲ್ಲ” ಎಂದು ಜಡೇಜಾ ಬರೆದಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಶಸ್ವಿ ಜೈಸ್ವಾಲ್ ಎರಡು ದ್ವಿಶಕ ಸಾಧನೆ: ಐಸಿಸಿ ಟಾಪ್ 20 ಟೆಸ್ಟ್ ಶ್ರೇಯಾಂಕದಲ್ಲಿ ಜೈಸ್ವಾಲ್‌ಗೆ ಸ್ಥಾನ

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಕ್ರಿಕೆಟ್ ಸರಣಿಯಲ್ಲಿ ಸತತ ಎರಡು ದ್ವಿಶತಕ...

ವಿರಾಟ್ ಕೊಹ್ಲಿ-ಅನುಷ್ಕಾ ದಂಪತಿಗೆ ಗಂಡು ಮಗು: ಟ್ವೀಟ್ ಮೂಲಕ ಖುಷಿ ಹಂಚಿಕೊಂಡ ಸ್ಟಾರ್ ಆಟಗಾರ

ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ಟೀಮ್...

2024ರ ಐಪಿಎಲ್ ಉದ್ಘಾಟನಾ ದಿನಾಂಕ ಘೋಷಣೆ

ಭಾರತೀಯ ಕ್ರಿಕೆಟ್ ಪ್ರೇಮಿಗಳ ಹಬ್ಬ 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್...

ಮೂರನೇ ಟೆಸ್ಟ್ : ಜಡೇಜಾ ಸ್ಪಿನ್ ದಾಳಿಗೆ ನಲುಗಿದ ಇಂಗ್ಲೆಂಡ್ ;ಭಾರತಕ್ಕೆ 434 ರನ್‍ ಅಂತರದ ಭರ್ಜರಿ ಜಯ

ರಾಜ್‍ಕೋಟ್‍ನಲ್ಲಿ ನಡೆದ ಮೂರನೇ ಟೆಸ್ಟ್ ನಲ್ಲಿ  ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ...