ಏಷ್ಯನ್ ಗೇಮ್ಸ್: ಪಾಕ್ ಮಣಿಸಿ ಫೈನಲ್‌ಗೇರಿದ ಭಾರತ ಹಾಕಿ ತಂಡ; ಕುಸ್ತಿಯಲ್ಲಿ ನಿತೇಶ್‌ಗೆ ಬೆಳ್ಳಿ

Date:

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದ 13ನೇ ದಿನವಾದ ಗುರುವಾರ (ಅಕ್ಟೋಬರ್ 1) ಭಾರತೀಯ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಪುರುಷರ ಹಾಕಿಯ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿದ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿದೆ. ಜೊತೆಗೆ, ಕುಸ್ತಿ ಹಾಗೂ ನೌಕಾಯಾನದಲ್ಲಿ (ಸೇಲಿಂಗ್) ಭಾರತಕ್ಕೆ ಬೆಳ್ಳಿ ಪದಕಗಳು ಒಲಿದಿದ್ದರೆ, ಸ್ಕ್ವಾಷ್ ಮತ್ತು ಬಿಲ್ಲುಗಾರಿಕೆಯಲ್ಲಿ (ಆರ್ಚರಿ) ಕಂಚಿನ ಪದಕಗಳು ಲಭಿಸಿವೆ.

- Advertisement -

​ ಅಭಿಮಾನಿಗಳ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪುರುಷರ ಹಾಕಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ 4-3 ಗೋಲುಗಳ ಅಂತರದಿಂದ ಪಾಕಿಸ್ತಾನವನ್ನು ಮಣಿಸಿತು. ಪಂದ್ಯದ ಆರಂಭದಲ್ಲಿಯೇ ಭರ್ಜರಿ ಆಟ ಪ್ರದರ್ಶಿಸಿದ ಭಾರತ 3-0 ಅಂತರದ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯಾರ್ಧದಲ್ಲಿ ತಿರುಗೇಟು ನೀಡಿದ ಪಾಕಿಸ್ತಾನ ಸತತ ಮೂರು ಗೋಲು ಬಾರಿಸಿ 3-3 ಸಮಬಲ ಸಾಧಿಸಿತು. ಪಂದ್ಯ ಮುಗಿಯಲು ಕೇವಲ 50 ಸೆಕೆಂಡ್‌ಗಳು ಬಾಕಿ ಇರುವಾಗ, ಭಾರತದ ಅಭಿಷೇಕ್ ಬಾರಿಸಿದ ಚೆಂಡು ಪಾಕಿಸ್ತಾನಿ ಆಟಗಾರನ ಸ್ಟಿಕ್‌ಗೆ ತಾಗಿ ಗೋಲು ಪೆಟ್ಟಿಗೆ ಸೇರುವ ಮೂಲಕ ಭಾರತಕ್ಕೆ 4-3 ಅಂತರದ ಐತಿಹಾಸಿಕ ಜಯ ತಂದುಕೊಟ್ಟಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹವ್ಯಾಸದಿಂದ ಉದ್ಯಮದತ್ತ: ಶಿರಸಿ ಮಹಿಳೆಯರ ʻಡೇರೆʼ ಕೃಷಿಗೆ ಸ್ವಾವಲಂಬನೆಯ...

ಮನೆಯಂಗಳದ ಅಂದ ಹೆಚ್ಚಿಸುವ ಹೂವಷ್ಟೇ ಆಗಿದ್ದ ಡೇರೆ ಹೂವು (ಡೇಲಿಯಾ), ಇದೀಗ ಮಲೆನಾಡಿನ ಮಹಿಳೆಯರ ಪಾಲಿಗೆ ಹೊಸ ಆದಾಯದ ಸಾಧ್ಯತೆಗಳನ್ನು ತೆರೆದಿಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಶಿವಮೊಗ್ಗ...

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

​ ಪುರುಷರ 97 ಕೆ.ಜಿ. ಗ್ರೀಕೋ-ರೋಮನ್ ವಿಭಾಗದ ಫೈನಲ್‌ನಲ್ಲಿ ಜಪಾನ್‌ನ ನಕಜಾಟೊ ಯೂರಿ ವಿರುದ್ಧ ಸೆಣಸಿದ ಭಾರತದ ನಿತೇಶ್ 0-4 ಅಂತರದಲ್ಲಿ ಪರಾಭವಗೊಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಜಪಾನ್ ಕುಸ್ತಿಪಟು ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಮತ್ತೊಂದೆಡೆ, ಮಹಿಳೆಯರ ಕುಸ್ತಿಯ 62 ಕೆ.ಜಿ ವಿಭಾಗದ ಕಂಚಿನ ಪದಕದ ಹಣಾಹಣಿಯಲ್ಲಿ ಭಾರತದ ಮಾನ್ಸಿ, ಮಂಗೋಲಿಯಾದ ತೊಗ್ಟೋಕ್ ಅಲ್ಟ್ಜಿನ್ ವಿರುದ್ಧ ವೀರೋಚಿತ ಹೋರಾಟ ನಡೆಸಿ ಸೋಲು ಕಂಡರು.

​ ಪುರುಷರ ಸ್ಕ್ವಾಷ್ ತಂಡದ ಸೆಮಿಫೈನಲ್‌ನಲ್ಲಿ ಭಾರತ ಮಲೇಷ್ಯಾ ಎದುರು ಕಠಿಣ ಹೋರಾಟ ನಡೆಸಿ ಸೋಲು ಅನುಭವಿಸಿತು. ಭಾರತದ ಅಭಯ್ ಸಿಂಗ್ ಮೊದಲ ಪಂದ್ಯದಲ್ಲಿ 0-3 ಅಂತರದಲ್ಲಿ ಸೋತರೆ, ವೀರ್ ಚೋತ್ರಾನಿ ಎರಡನೇ ಪಂದ್ಯವನ್ನು 11-4 ರಲ್ಲಿ ಗೆದ್ದು ಸಮಬಲ ತಂದರು. ಆದರೆ ನಿರ್ಣಾಯಕ ಮೂರನೇ ಪಂದ್ಯದಲ್ಲಿ ವೇಲವನ್ ಸೆಂಥಿಲ್‌ಕುಮಾರ್ ಅವರು ಮಲೇಷ್ಯಾದ ಅಮೀಶೆನ್‌ರಾಜ್ ಚಂದ್ರನ್ ಎದುರು ಕಠಿಣ ಹೋರಾಟದ ಹೊರತಾಗಿಯೂ ಸೋಲುವ ಮೂಲಕ ಭಾರತ ತಂಡ ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು.

​ ನೌಕಾಯಾನದ (ಸೇಲಿಂಗ್) ಪುರುಷರ ಸ್ಕಿಫ್ ರೇಸ್‌ನಲ್ಲಿ ಮನು ಫ್ರಾನ್ಸಿಸ್ ಮತ್ತು ಪ್ರಿನ್ಸ್ ನೋಬೆಲ್ ಕುರಿಸುಂಕಲ್ ಜೋಡಿ ಅಮೋಘ ಪ್ರದರ್ಶನ ನೀಡಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿತು. ಇನ್ನು ಬಿಲ್ಲುಗಾರಿಕೆಯ ಪುರುಷರ ಕಾಂಪೌಂಡ್ ವೈಯಕ್ತಿಕ ವಿಭಾಗದಲ್ಲಿ ಗಣೇಶ್ ಮಣಿರತ್ನಂ ಕಂಚಿನ ಪದಕ ಗೆದ್ದರು. ಜೂಡೋ ಮಹಿಳೆಯರ 70 ಕೆ.ಜಿ ವಿಭಾಗದಲ್ಲಿ ಇನುಂಗಂಬಿ ತಖೆಲ್ಲಂಬಮ್ ಕಂಚಿನ ಪದಕದ ಸುತ್ತಿನಲ್ಲಿ ಮಂಗೋಲಿಯಾದ ಅನುಜಿನ್ ಎದುರು ನಿರಾಸೆ ಅನುಭವಿಸಿದರು. ಕ್ರೀಡಾ ಕ್ಲೈಂಬಿಂಗ್‌ನ ಸ್ಪೀಡ್ 4 ವಿಭಾಗದಲ್ಲಿ ದೀಪು ಮಲ್ಲೇಶ್ ಕ್ವಾರ್ಟರ್‌ಫೈನಲ್ ಪ್ರವೇಶಿಸುವಲ್ಲಿ ವಿಫಲರಾದರು.

​ ಕ್ರೀಡಾಕೂಟದ 13ನೇ ದಿನದ (ಅಕ್ಟೋಬರ್ 1) ಸ್ಪರ್ಧೆಗಳ ಅಂತ್ಯದ ವೇಳೆಗೆ ಭಾರತವು ಏಷ್ಯನ್ ಗೇಮ್ಸ್‌ನಲ್ಲಿ ತನ್ನ ಅದ್ಭುತ ಪ್ರದರ್ಶನ ಮುಂದುವರಿಸಿದೆ. ಈ ಹಂತದವರೆಗೆ ಭಾರತವು ಒಟ್ಟು 86 ಪದಕಗಳನ್ನು (21 ಚಿನ್ನ, 32 ಬೆಳ್ಳಿ, 33 ಕಂಚು) ಗೆದ್ದುಕೊಳ್ಳುವ ಮೂಲಕ ಪದಕ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಕ್ರೀಡಾಕೂಟದಲ್ಲಿ ಎಂದಿನಂತೆ ಕ್ರೀಡಾ ಬಲಾಢ್ಯ ರಾಷ್ಟ್ರಗಳಾದ ಚೀನಾ ಅಗ್ರಸ್ಥಾನದಲ್ಲಿದ್ದರೆ, ಆತಿಥೇಯ ಜಪಾನ್ ದ್ವಿತೀಯ ಹಾಗೂ ದಕ್ಷಿಣ ಕೊರಿಯಾ ತೃತೀಯ ಸ್ಥಾನವನ್ನು ಅಲಂಕರಿಸುವ ಮೂಲಕ ಪದಕ ಪಟ್ಟಿಯ ಮೊದಲ ಮೂರು ಸ್ಥಾನಗಳಲ್ಲಿ ತಮ್ಮ ಪಾರಮ್ಯ ಮೆರೆದಿವೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹವ್ಯಾಸದಿಂದ ಉದ್ಯಮದತ್ತ: ಶಿರಸಿ ಮಹಿಳೆಯರ ʻಡೇರೆʼ ಕೃಷಿಗೆ ಸ್ವಾವಲಂಬನೆಯ ಮೆರಗು

ಮನೆಯಂಗಳದ ಅಂದ ಹೆಚ್ಚಿಸುವ ಹೂವಷ್ಟೇ ಆಗಿದ್ದ ಡೇರೆ ಹೂವು (ಡೇಲಿಯಾ), ಇದೀಗ...

ಪತ್ರಕರ್ತರು, ನಾಗರಿಕರ ವಿರುದ್ಧ ವಿಶೇಷಾಧಿಕಾರ ಅಸ್ತ್ರ ಬೇಡ: ಸುಪ್ರೀಂಗೆ CPIM ನಾಯಕಿ ಸುಭಾಷಿಣಿ ಅಲಿ ಮನವಿ

ಶಾಸಕಾಂಗವನ್ನು ಟೀಕಿಸಿದ ಮಾತ್ರಕ್ಕೆ ಸಂಸತ್ ಸದಸ್ಯರಲ್ಲದ ನಾಗರಿಕರು ಅಥವಾ ಪತ್ರಕರ್ತರ ವಿರುದ್ಧ...