ಐಪಿಎಲ್ 2023 | ರಿಂಕು ಸಿಂಗ್‌ ಸಿಕ್ಸರ್‌ಗಳ ಸುರಿಮಳೆ; ಗುಜರಾತ್‌ಗೆ ಮೊದಲ ಸೋಲು   

Date:

ರಿಂಕು ಸಿಂಗ್ ಕೊನೆಯ ಓವರ್‌ನಲ್ಲಿ ಸಿಡಿಸಿದ ಐದು ಸಿಕ್ಸರ್‌ ನೆರವಿನಿಂದ ಕೋಲ್ಕತ್ತಾ ನೈಟ್‌ ರೈಡರ್ಸ್, ಗುಜರಾತ್‌ ಟೈಟಾನ್ಸ್‌ ವಿರುದ್ಧ ಮೂರು ವಿಕೆಟ್‌ಗಳ ಜಯ ದಾಖಲಿಸಿತು.

ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ 16ನೇ ಆವೃತ್ತಿಯ 13 ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್ ನೀಡಿದ 205 ರನ್‌ಗಳನ್ನು ಬೆನ್ನಟ್ಟಿದ ಕೋಲ್ಕತ್ತಾ, ಕೊನೆಯ ಓವರ್‌ನಲ್ಲಿ ಯಶ್ ದಯಾಳ್ ಬೌಲಿಂಗ್‌ನಲ್ಲಿ ರಿಂಕು ಸಿಂಗ್ ಸಿಡಿಸಿದ 5 ಸಿಕ್ಸರ್‌ ನೆರವಿನಿಂದ 3 ವಿಕೆಟ್‌ಗಳ ರೋಚಕ ಗೆಲುವು ಕಂಡಿತು.

ಉತ್ತಮ ಆರಂಭ ಪಡೆಯುವಲ್ಲಿ ಕೆಕೆಆರ್ ಬ್ಯಾಟ್ಸಮನ್‌ಗಳು ವಿಫಲವಾದರು. ಮೂರನೆಯ ಓವರ್‌ನ ಮೂರನೇ ಎಸೆತದಲ್ಲಿ ರೆಹಮನುಲ್ಲಾ ಗುರ್ಬಾಜ್‌ 15 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮನ್‌ದೀಪ್‌ ಸಿಂಗ್ ಬದಲಿಗೆ ಸ್ಥಾನ ಪಡೆದಿದ್ದ ಎನ್ ಜಗದೀಶನ್‌ ಆಟ ಕೇವಲ 6 ರನ್‌ಗೆ ಸೀಮಿತವಾಯಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಯ್ಯರ್- ರಾಣಾ ಶತಕದ ಜತೆಯಾಟ

ಕೇವಲ 28 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಕೆಕೆಆರ್‌ಗೆ ಮೂರನೇ ವಿಕೆಟ್‌ಗೆ ಇಂಪ್ಯಾಕ್ಟ್‌ ಪ್ಲೇಯರ್ ವೆಂಕಟೇಶ್ ಅಯ್ಯರ್ ಹಾಗೂ ನಾಯಕ ನಿತೀಶ್ ರಾಣಾ ಸ್ಪೋಟಕ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

ಕೇವಲ 55 ಎಸೆತಗಳಲ್ಲಿ ಇವರಿಬ್ಬರ ಜೋಡಿ 100 ರನ್‌ಗಳ ಜತೆಯಾಟವಾಡಿತು. ಆಕರ್ಷಕ ಬ್ಯಾಟಿಂಗ್ ನಡೆಸಿದ ನಾಯಕ ನಿತೀಶ್ ರಾಣಾ, 29 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 45 ರನ್ ಬಾರಿಸಿ ಅಲ್ಜೆರಿ ಜೋಸೆಫ್‌ಗೆ ವಿಕೆಟ್‌ ಒಪ್ಪಿಸಿದರು.

ವೆಂಕಟೇಶ್ ಅಯ್ಯರ್ ಕೇವಲ 40 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 83 ರನ್ ಬಾರಿಸಿ ಅವರೂ ಕೂಡ ಅಲ್ಜೆರಿ ಜೋಸೆಫ್‌ಗೆ ಔಟಾದರು. ಇದರ ಬೆನ್ನಲ್ಲೇ ಕೆಕೆಆರ್ ತಂಡ ರಶೀದ್ ಖಾನ್ ಹ್ಯಾಟ್ರಿಕ್ ದಾಳಿಗೆ ಏಕಾಏಕಿ ಕುಸಿಯಿತು.

ರಶೀದ್ ಖಾನ್ ಮೊದಲ ಹ್ಯಾಟ್ರಿಕ್

ತಮ್ಮ ಐಪಿಎಲ್‌ ಕೆರಿಯರ್‌ನಲ್ಲಿ ಮೊದಲ ಹ್ಯಾಟ್ರಿಕ್‌ ವಿಕೆಟ್‌ ಪಡೆಯುವ ಮೂಲಕ ಸ್ಪಿನ್ನರ್‌ ರಶೀದ್‌ ಖಾನ್‌ ವಿಶೇಷ ಸಾಧನೆ ಮಾಡಿದರು. ತಮ್ಮ 17ನೇ ಓವರ್‌ನಲ್ಲಿ ರಸಲ್‌, ಸುನಿಲ್‌ ನರೈನ್‌ ಹಾಗೂ ಶಾರ್ಧೂಲ್‌ ಠಾಕೂರ್‌ ಅವರ ವಿಕೆಟ್ ಪಡೆದರು.     

ವಿಜಯ್‌ ಶಂಕರ್‌, ಸಾಯಿ ಸುದರ್ಶನ್‌ ಭರ್ಜರಿ ಆಟ

ಹಾರ್ದಿಕ್‌ ಪಾಂಡ್ಯ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿದ್ದ ರಶೀದ್ ಖಾನ್, ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. 

ಆರಂಭಿಕ ಬ್ಯಾಟ್ಸಮನ್ ವೃದ್ಧಿಮಾನ್‌ ಸಾಹಾ ಮತ್ತು ಶುಭಮನ್‌ ಗಿಲ್‌ ಮೊದಲ ವಿಕೆಟ್‌ ಜೊತೆಯಾಟದಲ್ಲಿ 33 ರನ್‌ ಕಲೆ ಹಾಕಿದರು. 17 ರನ್‌ ಗಳಿಸಿ ಸಾಹಾ ಔಟಾದ ಬಳಿಕ ಸಾಯಿ ಸುದರ್ಶನ್‌ ಹಾಗೂ ಗಿಲ್‌ ಜೊತೆಗೂಡಿದರು. ಇವರಿಬ್ಬರೂ ಉತ್ತಮ ಜೊತೆಯಾಟವಾಡಿ ತಂಡದ ಮೊತ್ತವನ್ನು ಶತಕದತ್ತ ಕೊಂಡೊಯ್ದರು.

ಗಿಲ್‌, ಸುನಿಲ್‌ ನರೈನ್‌ ಬೌಲಿಂಗ್‌ನಲ್ಲಿ ನಿರ್ಗಮಿಸಿದ ನಂತರ ಶುರುವಾದದ್ದು ಸಾಯಿ ಸುದರ್ಶನ್‌ ಮತ್ತು ವಿಜಯ್‌ ಶಂಕರ್‌ ಅವರ ಜೊತೆಯಾಟ. ಇಬ್ಬರ ಜೋಡಿ, ಬೌಂಡರಿ, ಸಿಕ್ಸರ್‌ ಬಾರಿಸುತ್ತಾ ತಂಡದ ಮೊತ್ತವನ್ನು 204ಕ್ಕೆ ಕೊಂಡೊಯ್ದುರು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಪೈರ್ ಜೊತೆ ವಾಗ್ವಾದ: ಕೊಹ್ಲಿಗೆ ಶೇ.50 ರಷ್ಟು ದಂಡ

ಐಪಿಎಲ್‌ ಟೂರ್ನಿಯಲ್ಲಿ ಕೆಕೆಆರ್‌ ತಂಡದ ವಿರುದ್ಧದ ಪಂದ್ಯದಲ್ಲಿ ಅಂಪೈರ್‌ ವಿರುದ್ಧ ವಾಗ್ವಾದ...

ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಇತಿಹಾಸ ನಿರ್ಮಿಸಿದ 17ರ ಹರೆಯದ ಭಾರತೀಯ ಡಿ ಗುಕೇಶ್

ಭಾರತದ 17 ವರ್ಷದ ಗ್ರ್ಯಾಂಡ್‌ ಮಾಸ್ಟರ್ ಡಿ ಗುಕೇಶ್ ಟೊರೊಂಟೊದಲ್ಲಿ ನಡೆದ...

ಐಪಿಎಲ್ | ಪಂಜಾಬ್ ವಿರುದ್ಧ ಗುಜರಾತ್ ಟೈಟನ್ಸ್‌ಗೆ ಮೂರು ವಿಕೆಟ್‌ಗಳ ಜಯ

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್‌...