ವಿಶ್ವಕಪ್ | ದಕ್ಷಿಣ ಆಫ್ರಿಕಾಕ್ಕೆ 5 ವಿಕೆಟ್ ಗೆಲುವು; ಉತ್ತಮ ಪ್ರದರ್ಶನ ನೀಡಿ ಟೂರ್ನಿಯಿಂದ ಅಫ್ಘಾನ್‌ ನಿರ್ಗಮನ

Date:

ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ರೌಂಡ್‌ ರಾಬಿನ್‌ ಲೀಗ್‌ನ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ ದಕ್ಷಿಣ ಆಫ್ರಿಕಾ 5 ವಿಕೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನ್‌ ನೀಡಿದ 245 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 47.3 ಓವರ್‌ಗಳಲ್ಲಿ ಜಯದ ಮುನ್ನಡಿ ಬರೆಯಿತು. ಹರಿಣಗಳ ಗೆಲುವಿನಲ್ಲಿ  ವಾನ್ ಡರ್ ಡುಸೆನ್(ಅಜೇಯ 76), ಆಂಡಿಲೆ ಫೆಹ್ಲುಕ್ವಾಯೊ(ಅಜೇಯ 39)  ಮಾರ್ಕ್ರಾಮ್ (25),ಡೇವಿಡ್ ಮಿಲ್ಲರ್ (24) ಹಾಗೂ ಕ್ವಿಂಟನ್‌ ಡಿ ಕಾಕ್ (41) ಗೆಲುವಿನ ರೂವಾರಿಗಳಾದರು.

ರಶೀದ್ ಖಾನ್‌ 37/2, ಮೊಹಮ್ಮದ್ ನಬಿ 35/2 ವಿಕೆಟ್ ಪಡೆದು ಪಡೆದು ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಾಡಿ ಒಂದಿಷ್ಟು ಭರವಸೆ ಮೂಡಿಸಿದರೂ ಕೊನೆಯಲ್ಲಿ ವಿಕೆಟ್  ಉರುಳಿಸಲು ಸಾಧ್ಯವಾಗಲಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅತ್ಯಂತ ಹೆಚ್ಚು ಗಳಿಸಿ 430ಕ್ಕೂ ಅಧಿಕ ರನ್‌ಗಳ ಅಂತರ ಗೆಲುವು ಸಾಧಿಸಿದ್ದರೆ ಅಫ್ಘಾನಿಸ್ತಾನ ಸೆಮಿಫೈನಲ್‌ ರೇಸಿನ ಪೈಪೋಟಿಯಲ್ಲಿ ಸ್ಥಾನ ಪಡೆಯುತ್ತಿತ್ತು. ಆದರೆ ಸಾಧರಣ ಮೊತ್ತ ಗಳಿಸುವುದರೊಂದಿಗೆ ಮೊದಲ ನಾಲ್ಕರ ಘಟ್ಟದ ಕನಸು ಕಮರಿ ಹೋಯಿತು. ಜೊತೆಗೆ ದಕ್ಷಿಣ ಆಫ್ರಿಕಾ ತಂಡವನ್ನು ಕೂಡ ಅಲೌಟ್‌ ಮಾಡಲು ಸಾಧ್ಯವಾಗಲಿಲ್ಲ.

ಆದರೂ ಈ ಟೂರ್ನಿಯಲ್ಲಿ ಇಂಗ್ಲೆಂಡ್, ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳಂಥ ಪ್ರಬಲ ತಂಡಗಳನ್ನು ಮಣಿಸಿ ಉತ್ತಮ ಪ್ರದರ್ಶನ ತೋರಿತು.

ಈ ಸುದ್ದಿ ಓದಿದ್ದೀರಾ? ಒಂದೇ ಬಾಲ್‌ಗೆ ಎರಡು ವಿಕೆಟ್: ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ‘ಟೈಮ್ಡ್ ಔಟ್’ಗೆ ಮ್ಯಾಥ್ಯೂಸ್ ಔಟ್

ಒಮರ್ಜಾಯ್ ಉತ್ತಮ ಆಟ

ಟಾಸ್‌ ಗೆದ್ದ ಅಫ್ಘಾನ್‌ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ಬ್ಯಾಟಿಂಗ್‌ ಆಯ್ದುಕೊಂಡರು. ಅಜ್ಮತುಲ್ಲಾ ಒಮರ್ಜಾಯ್  ಅವರ ಅಜೇಯವಾಗಿ ಗಳಿಸಿದ 97 ರನ್‌ಗಳ ಆಟದಿಂದ ಅಫ್ಘಾನ್‌ 50 ಓವರ್‌ಗಳಲ್ಲಿ  ತನ್ನ ಎಲ್ಲ ವಿಕೆಟ್ ಕಳೆದುಕೊಂಡು 244 ರನ್‌ಗಳ ಸಾಧಾರಣ ಮೊತ್ತ ಕಲೆ ಹಾಕಿತು.

ಅಫ್ಘಾನ್‌ ಒಂದು ಹಂತದಲ್ಲಿ  ಕುಸಿತ ಕಂಡಿತ್ತು. 116 ರನ್‌ ವೇಳೆಗೆ 6 ವಿಕೆಟ್‌ ಪತನವಾಗಿತ್ತು. ಆದರೆ, ಕೊನೆಯವರೆಗೂ ನಿಂತು ಆಡಿದ ಒಮರ್ಜಾಯ್‌ ತಂಡದ ಮೊತ್ತ 240 ದಾಟಲು ಕಾರಣರಾದರು.  3 ರನ್‌ಗಳಿಂದ ಶತಕ ವಂಚಿತರಾದರೂ ಅಜೇಯರಾಗಿ ಉಳಿದರು. 107 ಎಸೆತಗಳನ್ನು ಎದುರಿಸಿದ ಅವರು 7 ಬೌಂಡರಿ ಹಾಗೂ 3 ಸಿಕ್ಸರ್‌ನೊಂದಿಗೆ  97 ರನ್‌ ಬಾರಿಸಿದರು.

ಇವನ್ನು ಹೊರತು ಪಡಿಸಿದರೆ ನೂರ್ ಅಹ್ಮದ್ (26),ರಹಮತ್ ಶಾ (26) ಹಾಗೂ ರಹಮಾನುಲ್ಲಾ ಗುರ್ಬಾಜ್ (25) ರನ್‌ಗಳ ಕೊಡುಗೆ ನೀಡಿದರು.

ದಕ್ಷಿಣ ಆಫ್ರಕಾ ಪರ ಜೆರಾಲ್ಡ್ ಕೋಟ್ಜಿ 44/4, ಕೇಶವ್‌ ಮಹಾರಾಜ್‌ 25/2 ಹಾಗೂ ಲುಂಗಿ ಎನ್ಗಿಡಿ 69/2 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್‌ಗಳೆನಿಸಿಕೊಂಡರು.

 

 

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಇತಿಹಾಸ ನಿರ್ಮಿಸಿದ 17ರ ಹರೆಯದ ಭಾರತೀಯ ಡಿ ಗುಕೇಶ್

ಭಾರತದ 17 ವರ್ಷದ ಗ್ರ್ಯಾಂಡ್‌ ಮಾಸ್ಟರ್ ಡಿ ಗುಕೇಶ್ ಟೊರೊಂಟೊದಲ್ಲಿ ನಡೆದ...

ಐಪಿಎಲ್ | ಪಂಜಾಬ್ ವಿರುದ್ಧ ಗುಜರಾತ್ ಟೈಟನ್ಸ್‌ಗೆ ಮೂರು ವಿಕೆಟ್‌ಗಳ ಜಯ

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್‌...

ಐಪಿಎಲ್ | ರೋಚಕ ಹಣಾಹಣಿಯಲ್ಲಿ ಕೈಕೊಟ್ಟ ನಸೀಬು: ಕೆಕೆಆರ್‌ ವಿರುದ್ಧ ಆರ್‌ಸಿಬಿಗೆ 1 ರನ್‌ಗಳ ಸೋಲು

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಇಂದು ನಡೆದ ಐಪಿಎಲ್ 36ನೇ ಪಂದ್ಯದಲ್ಲಿ ರಾಯಲ್...