ಚಾಂಪಿಯನ್ಸ್‌ ಲೀಗ್‌ | ಮ್ಯಾಂಚೆಸ್ಟರ್‌ ಸಿಟಿ vs ಇಂಟರ್‌ ಮಿಲಾನ್‌ ʻಫೈನಲ್‌ ಫೈಟ್‌ʼ

Date:

ಯುರೋಪ್‌ ಕ್ಲಬ್‌ ಫುಟ್‌ಬಾಲ್‌ನ ಅತ್ಯುನ್ನತ ಟೂರ್ನಿ ʻ ಯುಇಎಫ್‌ಎ ಚಾಂಪಿಯನ್ಸ್‌ ಲೀಗ್‌ʼನ ಫೈನಲ್‌ ಪಂದ್ಯವು ಭಾನುವಾರ ನಡೆಯಲಿದೆ.

ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಚಾಂಪಿಯನ್‌ ತಂಡ ಮ್ಯಾಂಚೆಸ್ಟರ್‌ ಸಿಟಿ ಮತ್ತು ಇಟಾಲಿಯನ್‌ ಕ್ಲಬ್‌ ಇಂಟರ್‌ ಮಿಲಾನ್‌ ನಡುವೆ ʻಫೈನಲ್‌ ಫೈಟ್‌ʼ ನಡೆಯಲಿದೆ.

ಮೊದಲ ಯುಸಿಎಲ್‌ ಪ್ರಶಸ್ತಿ ನಿರೀಕ್ಷೆಯಲ್ಲಿ ಸಿಟಿ

ತಲಾ ಏಳು ಬಾರಿ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಮತ್ತು ಎಫ್‌ಎ ಕಪ್‌ ಪ್ರಶಸ್ತಿ ಗೆದ್ದಿರುವ ಮ್ಯಾಂಚೆಸ್ಟರ್‌ ಸಿಟಿ ತಂಡಕ್ಕೆ ʻಚಾಂಪಿಯನ್ಸ್‌ ಲೀಗ್‌ʼ ಪ್ರಶಸ್ತಿ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಆದರೆ ಈ ಬಾರಿ ಪ್ರಖ್ಯಾತ ತರಬೇತುದಾರ ಪೆಪ್‌ ಗಾರ್ಡಿಯೋಲಾ ಗರಡಿಯಲ್ಲಿ ಪಳಗಿರುವ ಸಿಟಿ ಪಡೆ, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ.

ಪ್ರಸಕ್ತ ಆವೃತ್ತಿಯ ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಟೂರ್ನಿಯಲ್ಲಿ ಸಿಟಿ ತಂಡವು ಅಜೇಯವಾಗಿ ಫೈನಲ್‌ ಪ್ರವೇಶಿಸಿದೆ. ಆಡಿರುವ 12 ಪಂದ್ಯಗಳಲ್ಲಿ, 2 ಪಂದ್ಯಗಳಲ್ಲಿ ಗೋಲು ರಹಿತ ಡ್ರಾ ಸೇರಿದಂತೆ ಒಟ್ಟು 5 ಪಂದ್ಯಗಳಲ್ಲಿ ಡ್ರಾ ಫಲಿತಾಂಶ ಕಂಡಿದೆ. ಕೇವಲ 5 ಗೋಲುಗಳನ್ನಷ್ಟೇ ಎದುರಾಳಿ ತಂಡಗಳಿಗೆ ಬಿಟ್ಟುಕೊಟ್ಟಿದೆ ಎನ್ನುವುದು ತಂಡದ ಹೆಗ್ಗಳಿಕೆ. ಮತ್ತೊಂದೆಡೆ ಇಂಟರ್‌ ಮಿಲಾನ್‌ 19 ಗೋಲು ದಾಖಲಿಸಿದ್ದು, 10 ಗೋಲುಗಳನ್ನು ಬಿಟ್ಟುಕೊಟ್ಟಿದೆ.

ನಾಲ್ಕನೇ ಪ್ರಶಸ್ತಿ ಗೆಲುವಿಗೆ ಕಠಿಣ ಸವಾಲು

ಇಂಟರ್‌ ಮಿಲಾನ್‌, ಇದುವರೆಗೂ ಮೂರು ಬಾರಿ ʻಚಾಂಪಿಯನ್ಸ್‌ ಲೀಗ್‌ʼ ಪ್ರಶಸ್ತಿ ಗೆದ್ದಿದೆ. ಜೋಸ್ ಮೌರಿನ್ಹೋ ಮುಖ್ಯ ಕೋಚ್‌ ಆಗಿದ್ದ ವೇಳೆ  2010ರಲ್ಲಿ ಕೊನೆಯದಾಗಿ ಯುಸಿಎಲ್‌ ಫೈನಲ್‌ ಪ್ರವೇಶಿಸಿದ್ದ ಇಟಾಲಿಯನ್‌ ಕ್ಲಬ್‌, 2-0 ಅಂತರದಲ್ಲಿ ಬಯಾರ್ನ್ ಮ್ಯೂನಿಚ್ ತಂಡವನ್ನು ಮಣಿಸಿ ಚಾಂಪಿಯನ್‌ ಪಟ್ಟವನ್ನೇರಿತ್ತು.

ಆದರೆ ಈ ಬಾರಿ ಸಿಮೋನ್ ಇಂಝಘಿ ತಂಡ ಬಲಿಷ್ಠ ಸಿಟಿಯ ಸವಾಲನ್ನು ಮೀರುವುದು ಅಷ್ಟು ಸುಲಭವಲ್ಲ. ಹಾಲಿ ಋತುವುವಿನಲ್ಲಿ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಮತ್ತು ಎಫ್‌ಎ ಕಪ್‌ ಪ್ರಶಸ್ತಿ ಗೆದ್ದಿರುವ ಮ್ಯಾಂಚೆಸ್ಟರ್‌ ಸಿಟಿ, ಯುಸಿಎಲ್‌ ಗೆಲ್ಲುವ ಮೂಲಕ ಐತಿಹಾಸಿಕ ಟ್ರೆಬಲ್‌ (ಮೂರು ಪ್ರಮುಖ ಪ್ರಶಸ್ತಿ) ಸಾಧನೆಯ ಹಠದಲ್ಲಿದೆ.  ಆ ಮೂಲಕ ಒಂದೇ ಋತುವಿನಲ್ಲಿ (1999) ಮೂರು ದೊಡ್ಡ ಟ್ರೋಫಿಗಳನ್ನು ಗೆದ್ದ ಮ್ಯಾಂಚೆಸ್ಟರ್ ಯುನೈಟೆಟ್‌ ಕ್ಲಬ್‌ನ ಸಾಧನೆಯನ್ನು ಸರಿಗಟ್ಟುವ ನಿರೀಕ್ಷೆಯಲ್ಲಿದೆ. ಇದುವರೆಗೂ ಟ್ರೆಬಲ್‌ ʻಸಾಧನೆ ಮಾಡಿದ ಮೊದಲ ಮತ್ತು ಏಕೈಕ ತಂಡ ಎಂಬ ಹೆಗ್ಗಳಿಗೆ ಮ್ಯಾಂಚೆಸ್ಟರ್ ಯುನೈಟೆಡ್‌ ಹೆಸರಿನಲ್ಲಿದೆ.

ಯುಇಎಫ್‌ಎ ಚಾಂಪಿಯನ್ಸ್‌ ಲೀಗ್‌ʼನ ಫೈನಲ್‌ ಪಂದ್ಯ:

ಮ್ಯಾಂಚೆಸ್ಟರ್‌ ಸಿಟಿ vs ಇಂಟರ್‌ ಮಿಲಾನ್‌

ಪಂದ್ಯ ನಡೆಯುವುದು ಎಲ್ಲಿ ?

ಮ್ಯಾಂಚೆಸ್ಟರ್ ಸಿಟಿ ಮತ್ತು ಇಂಟರ್ ಮಿಲನ್ ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯವು ಇಸ್ತಾನ್‌ಬುಲ್‌ನ ಅಟಾಟುರ್ಕ್ ಒಲಿಂಪಿಕ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸಮಯ: ಭಾರತೀಯ ಕಾಲಮಾನ ಶನಿವಾರ  ತಡರಾತ್ರಿ 12.30

ಕೋಚ್‌;

ಮ್ಯಾಂಚೆಸ್ಟರ್‌ ಸಿಟಿ ; ಪೆಪ್ ಗಾರ್ಡಿಯೋಲಾ

ಇಂಟರ್ ಮಿಲನ್; ಸಿಮೋನ್ ಇಂಝಘಿ

ನೇರಪ್ರಸಾರ

ಮ್ಯಾಂಚೆಸ್ಟರ್ ಸಿಟಿ ಮತ್ತು ಇಂಟರ್ ಮಿಲನ್ ತಂಡಗಳ ನಡುವಿನ ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯವು ಸೋನಿ ಲಿವ್ ಅಪ್ಲಿಕೇಶನ್, ಸೋನಿ . ಸೋನಿ ಟೆನ್‌ (ಇಂಗ್ಲಿಷ್, ಹಿಂದಿ, ತಮಿಳು, ತೆಲುಗು) ಭಾಷೆಗಳಲ್ಲಿ ನೇರ ಪ್ರಸಾರ ಕಾಣಲಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಂದು ಏಷ್ಯಾಕಪ್‌ ಫೈನಲ್‌ | ಭಾರತ-ಶ್ರೀಲಂಕಾ ಹಣಾಹಣಿ

ಏಷ್ಯಾಕಪ್ 2023ರ ಫೈನಲ್ ಪಂದ್ಯವು ಇಂದು (ಸೆ 17) ನಡೆಯುತ್ತಿದ್ದು, ಶ್ರೀಲಂಕಾ...

ಏಷ್ಯಾ ಕಪ್ | ಶುಭ್‌ಮನ್‌ ಗಿಲ್ ಶತಕ ವ್ಯರ್ಥ; ಸಂಘಟಿತ ಹೋರಾಟದಿಂದ ಬಾಂಗ್ಲಾಗೆ ಗೆಲುವು

ಏಷ್ಯಾ ಕಪ್ ಸೂಪರ್‌ 4 ಅಂತಿಮ ಹಾಗೂ ಅಪೌಚಾರಿಕ ಪಂದ್ಯದಲ್ಲಿ ಬಾಂಗ್ಲಾದೇಶ...