ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದೇ ವಾರದಲ್ಲಿ 8 ಕಾಲರಾ ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ನಗರದಲ್ಲಿ ಬೀದಿಬದಿ ಹಣ್ಣುಗಳನ್ನು ಕಟ್ ಮಾಡಿ ತೆರೆದ ವಾಹನದಲ್ಲಿ ಇಟ್ಟು ಮಾರಾಟ ಮಾಡುವುದನ್ನು ಬಿಬಿಎಂಪಿ ನಿರ್ಬಂಧ ಮಾಡಲು ಮುಂದಾಗಿದೆ. ಅಲ್ಲದೇ, ನಿರ್ದಿಷ್ಟ ಅವಧಿಯವರೆಗೆ ನಗರದ ಬೀದಿಬದಿ ಗಾಡಿಗಳಲ್ಲಿ ಊಟ, ತಿಂಡಿ ಮಾರಾಟ ಮಾಡುವುದನ್ನು ಬ್ಯಾನ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ವೈಮಾನಿಕ ಕೇಂದ್ರವಾಗಿ ಬೆಂಗಳೂರು ಅಭಿವೃದ್ಧಿ; ಏರ್ ಇಂಡಿಯಾ-ಬಿಐಎಎಲ್ ಒಪ್ಪಂದ
ಸದ್ಯ ಬೇಸಿಗೆ ಇರುವುದರಿಂದ ನೀರಿನ ಸಮಸ್ಯೆ ತಲೆದೋರಿದೆ. ಹೀಗಾಗಿ ಹೆಚ್ಚಿನ ಮಟ್ಟದಲ್ಲಿ ನೀರಿನ ಸರಬರಾಜು ಮಾಡಿಕೊಳ್ಳುತ್ತಿರುವುದರಿಂದ ಕಲುಶಿತ ನೀರು ಪೂರೈಕೆ ಆಗುತ್ತಿದೆ. ಕಾಲರಾ ಹರಡುವಿಕೆಯಲ್ಲಿ ನೀರಿನ ಪಾತ್ರ ಪ್ರಮುಖವಾಗಿದೆ. ಹೀಗಾಗಿ, ಕಾಲರಾ ವಾಂತಿ, ಭೇದಿ ಕೂಡ ಹೆಚ್ಚಾಗುತ್ತಿದೆ. ಇನ್ನೂ ರೆಸ್ಟೋರೆಂಟ್ ಮತ್ತು ಹೊಟೇಲ್‌ಗಳಲ್ಲಿ ಗ್ರಾಹಕರಿಗೆ ಬಿಸಿ ನೀರು ಕೊಡಬೇಕು ಎಂದು ಬಿಬಿಎಂಪಿ ಸೂಚಿಸಿದೆ.