ಬೆಂಗಳೂರು | ಬರೋಬ್ಬರಿ ₹67.5 ಕೋಟಿಗೆ ಸೇಲ್ ಆದ ಕೋರಮಂಗಲದ ನಿವೇಶನ

Date:

ರಾಜ್ಯ ರಾಜಧಾನಿ ಬೆಂಗಳೂರು ಅಭಿವೃದ್ಧಿ ಹೊಂದುತ್ತಿರುವ ನಗರ. ನಗರದಲ್ಲಿ ಒಂದು ಸ್ವಂತ ಮನೆ ಮಾಡುವುದು ಹಲವು ಜನರ ಕನಸಾಗಿರುತ್ತದೆ. ಆದರೆ, ಇಲ್ಲಿ ಮನೆ ಕೊಂಡುಕೊಳ್ಳೋಕೆ ಜೀವಮಾನದ ಸಂಪಾದನೆ ವ್ಯಯಿಸಬೇಕಾಗುತ್ತದೆ. ಇನ್ನು ಕೆಲವು ಪ್ರತಿಷ್ಟಿತ ಏರಿಯಾಗಳಲ್ಲಿಯಂತೂ ಕೊಂಡುಕೊಳ್ಳುವುದು ಕೆಲವರಿಗೆ ಕನಸಿನ ಮಾತಾಗಿದೆ. ಇದೀಗ, ದುಬಾರಿ ಇರುವ ಏರಿಯಾಗಳ ಪೈಕಿ ಕೋರಮಂಗಲದ ಮೂರನೇ ಬ್ಲಾಕ್ ಕೂಡ ಒಂದಾಗಿದೆ.

- Advertisement -

ಕೋರಮಂಗಲವನ್ನು ಬಿಲಿಯನೇರ್ ಸ್ಟ್ರೀಟ್ ಎಂದೂ ಹೇಳುವುದುಂಟು. ಸಾವಿರಾರು ಕೋಟಿ ರೂಪಾಯಿ ಒಡೆಯರಿರುವ ಈ ಏರಿಯಾದಲ್ಲಿ ಇತ್ತಿಚೆಗೆ, 10,000 ಚದರಡಿಯ ನಿವೇಶನವೊಂದಕ್ಕೆ ಕ್ವೆಸ್ ಕಾರ್ಪ್ ಕಂಪನಿಯ ಸಂಸ್ಥಾಪಕ ಅಜಿತ್ ಅಬ್ರಹಾಂ ಐಸಾಕ್ ಎಂಬುವವರು ಬರೋಬ್ಬರಿ ₹67.5 ಕೋಟಿಗೆ ಈ ಪ್ರಾಪರ್ಟಿ ಖರೀದಿಸಿದ್ದಾರೆ. ಇದು ಪ್ರತಿ ಚದರ ಅಡಿ ಬೆಲೆ ₹70,300 ಆಗಿದ್ದು, ಬೆಂಗಳೂರು ಆಸ್ತಿ ಮಾರುಕಟ್ಟೆಗೆ ಹೊಸ ಮಾನದಂಡವನ್ನು ನೀಡಿದೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಇದು ಅತ್ಯಂತ ದುಬಾರಿ ಆಸ್ತಿ ಎನಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಟಿಇಎಸ್ ಮೋಟಾರ್ಸ್ ₹65 ಕೋಟಿ ಕೊಟ್ಟು ಖರೀದಿಸಿದ ನಿವೇಶನ 9,488 ಚದರಡಿ ವಿಸ್ತೀರ್ಣದ್ದಾಗಿದೆ. ಚದರಡಿಗೆ ₹68,508 ನಂತೆ ಇದು ಬೆಲೆ ಪಡೆದಿದೆ. ಈ ಏರಿಯಾದಲ್ಲಿ ಭೂಮಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ದೊಡ್ಡ ದೊಡ್ಡ ಉದ್ಯಮಿಗಳು ಇಲ್ಲಿ ಪ್ರಾಪರ್ಟಿ ಪಡೆಯಲು ಮುಂದಾಗುತ್ತಾರೆ.

ಕಳೆದ ವಾರ ಈ ಆಸ್ತಿಯ ಒಪ್ಪಂದ ಮಾಡಲಾಯಿತು. ಈ ಆಸ್ತಿ ಅರವಿಂದ್ ರೆಡ್ಡಿ ಮತ್ತು ಗೀತಾ ರೆಡ್ಡಿ ಎಂಬುವವರಿಗೆ ಸೇರಿತ್ತು.

ಕಳೆದ ದಶಕದಲ್ಲಿ ಭಾರತದ ಪ್ರಮುಖ ವ್ಯಾಪಾರ ಸೇವಾ ಪೂರೈಕೆದಾರರಾಗಿ ಕ್ವೆಸ್ ಕಾರ್ಪ್ ತ್ವರಿತ ಬೆಳವಣಿಗೆಯ ಕಾಣುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕ್ವೆಸ್ ಕಾರ್ಪ್ ಅನ್ನು 2007ರಲ್ಲಿ ಸ್ಥಾಪಿಸಲಾಯಿತು. ಈ ಕಂಪನಿಯೂ ಬೆಂಗಳೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. ಕ್ವೆಸ್ ಇಂದು ಭಾರತ, ಆಗ್ನೇಯ ಏಷ್ಯಾ ಮತ್ತು ಉತ್ತರ ಅಮೇರಿಕಾದಲ್ಲಿ 644 ಸ್ಥಳಗಳಲ್ಲಿ ಅಸ್ತಿತ್ವ ಹೊಂದಿದೆ.

ಬೆಂಗಳೂರು ನಗರದಲ್ಲಿ ಕೋರಮಂಗಲ ಉದ್ಯಮಶೀಲತೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕೇಂದ್ರವಾಗಿ ಹೊರಹೊಮ್ಮಿದೆ. ಅಲ್ಲದೇ, ವ್ಯಾಪಾರ ಕೇಂದ್ರಗಳಿಗೆ ಪ್ರಮುಖ ಸ್ಥಳವಾಗಿದೆ. ಸ್ಟಾರ್ಟ್‌ಅಪ್‌ಗಳು ಮತ್ತು ಸ್ವಯಂ-ನಿರ್ಮಿತ ಬಿಲಿಯನೇರ್‌ಗಳಿಗೆ ಸಮಾನ ಬೇಡಿಕೆಯ ನೆರೆಹೊರೆಯಾಗಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗೋವಾ ಕನ್ನಡಿಗರ ಮೇಲೆ ದೌರ್ಜನ್ಯ; ನ್ಯಾಯಕ್ಕಾಗಿ ರಾಷ್ಟ್ರಪತಿಗೆ ಕರವೇ ಮನವಿ

ವಾಸ್ತವವಾಗಿ, ಕೋರಮಂಗಲದ ಮೂರನೇ ಬ್ಲಾಕ್ ಗಣ್ಯ ಎನ್‌ಕ್ಲೇವ್ ಎಂದು ಖ್ಯಾತಿಯನ್ನು ಗಳಿಸಿದೆ. ಯಶಸ್ವಿ ಉದ್ಯಮಿಗಳ ಮನೆ ಎಂದು ಕರೆಯುತ್ತಾರೆ. ಯಶಸ್ವಿ ಉದ್ಯಮಿಗಳು ಇಲ್ಲಿ ನೆಲೆಸಿದ್ದಾರೆ. ಈ ಪೈಕಿ ಫ್ಲಿಪ್‌ಕಾರ್ಟ್ ಸಹ-ಸಂಸ್ಥಾಪಕ ಸಚಿನ್ ಬನ್ಸಾಲ್ ಅವರು 2019ರಲ್ಲಿ ಕೋರಮಂಗಲದಲ್ಲಿ ₹45 ಕೋಟಿ ಮೌಲ್ಯದ ಆಸ್ತಿಯನ್ನು ಪಡೆದಿದ್ದಾರೆ.

ಅಜಿತ್ ಅಬ್ರಹಾಂ ಐಸಾಕ್ ಅವರು ಮೂರು ವರ್ಷದ ಹಿಂದೆ ಇದೇ ಏರಿಯಾದಲ್ಲಿ ಮತ್ತೊಂದು ಪ್ರಾಪರ್ಟಿ ಖರೀದಿಸಿದ್ದರು. ₹52 ಕೋಟಿಗೆ 9,507 ಚದರಡಿ ವಿಸ್ತೀರ್ಣದ ಬಂಗಲೆ ಖರೀದಿ ಮಾಡಿದ್ದರು. ಸಿಂಗಾಪುರದಲ್ಲಿರುವ ಎನ್​ಆರ್​ಐ ಬ್ರಿಜೇಶ್ ಆರ್ ವಾಹಿ ಎಂಬುವವರಿಂದ ಅಜಿತ್ ಈ ಬಂಗಲೆ ಪಡೆದಿದ್ದರು. ಚದರಡಿಗೆ ₹58,000 ಬೆಲೆಯಂತೆ ಇದರ ಸೇಲ್ ಆಗಿತ್ತು.

ಐಸಾಕ್ ಅವರು ಇನ್ಫೋಸಿಸ್‌ನ ಸಹ-ಸಂಸ್ಥಾಪಕರಾದ ನಂದನ್ ನಿಲೇಕಣಿ ಮತ್ತು ಕ್ರಿಸ್ ಗೋಪಾಲಕೃಷ್ಣನ್, ಹೆಸರಾಂತ ಹೃದಯ ಶಸ್ತ್ರಚಿಕಿತ್ಸಕ ಡಾ. ದೇವಿ ಶೆಟ್ಟಿ ಮತ್ತು ಪ್ರಸಿದ್ಧ ಉದ್ಯಮಿ ಮತ್ತು ರಾಜಕಾರಣಿ ರಾಜೀವ್ ಚಂದ್ರಶೇಖರ್ ಅವರು ಕೂಡ ಇಲ್ಲಿ ನೆಲೆಸಿದ್ದಾರೆ. ಅವರು ಇವರ ನೆರೆಹೊರೆಯವರಾಗಿದ್ದಾರೆ.

ಭಾರತದಲ್ಲಿನ ಐಷಾರಾಮಿ ರಿಯಲ್ ಎಸ್ಟೇಟ್ ಮಾರುಕಟ್ಟೆಯು ₹50 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಉನ್ನತ-ಮಟ್ಟದ ಮನೆಗಳ ಮಾರಾಟ ಮೌಲ್ಯದಲ್ಲಿ ಗಮನಾರ್ಹ ಏರಿಕೆಯನ್ನು ಕಂಡಿದೆ.

ಈ ಐಷಾರಾಮಿ ಆಸ್ತಿಗಳ ಮಾರಾಟದ ಮೌಲ್ಯವು 2023 ರಲ್ಲಿ ₹4,319 ಕೋಟಿ ತಲುಪಿದೆ. ಇದು 2022ರಲ್ಲಿ ದಾಖಲಾದ ₹2,859 ಕೋಟಿಗೆ ಹೋಲಿಸಿದರೆ ಸುಮಾರು 1.5 ಪಟ್ಟು ಗಮನಾರ್ಹ ಹೆಚ್ಚಳವಾಗಿದೆ. ಸೂಪರ್ ಐಷಾರಾಮಿ ಮನೆಗಳ ಮಾರಾಟವು ಮುಂಬೈ, ದೆಹಲಿ-ಎನ್‌ಸಿಆರ್‌ನಲ್ಲಿ ಪ್ರಧಾನವಾಗಿ ಮುನ್ನಡೆ ಸಾಧಿಸಿದೆ. ಬೆಂಗಳೂರಿನ ಆಸ್ತಿಗಳು ಗಣನೀಯ ಬೇಡಿಕೆ ಕಂಡಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂಡಗೋಡ | ಬಾಚಣಕಿ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ಉತ್ತರಾಖಂಡ ಮೂಲದ ಯುವಕ ಸಾವು

ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾಮದ ಡ್ಯಾಂ ಹಿನ್ನೀರಿನಲ್ಲಿ ಈಜಾಡಲು ತೆರಳಿದ್ದ ಹೋಟೆಲ್‌...

ಚಿಕ್ಕಮಗಳೂರು | ಭಾರತದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ; ಮಾವಳ್ಳಿ ಶಂಕರ್

ಚಿಕ್ಕಮಗಳೂರಿನ ಮಹಾರಾಜ ಗ್ರ್ಯಾಂಡ್ ಹೋಟೆಲ್ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ...

ಹಾಸನ | ಪ್ರತಿಭಟನೆ ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ಕ್ರಮ ಖಂಡಿಸಿ ಜನಪರ ಒಕ್ಕೂಟ ಪ್ರತಿಭಟನೆ 

ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ಕ್ರಮವನ್ನು ಖಂಡಿಸಿ ಹಾಸನದ ಹೇಮಾವತಿ ಪ್ರತಿಮೆಯ...

ಚಿಕ್ಕಮಗಳೂರು | SIR ವಿರೋಧ: ಫಾರಂ – 7ರಲ್ಲಿ ತಪ್ಪು ಮಾಹಿತಿ ನೀಡಿ, ಮತವಂಚಿಸಲಾಗಿದೆ; ಎದ್ದೇಳು ಕರ್ನಾಟಕ 

SIR ವಿರೋಧಿಸಿ, ಚುನಾವಣಾ ಆಯುಕ್ತರಾದ ಜ್ಞಾನೇಶ್‌ಕುಮಾರ್‌ರವರನ್ನು ವಜಾಗೊಳಿಸಲು ಮತ್ತು ಫಾರಂ ನಂ.7...