“ದಾರ್ಶನಿಕರ ಕಥೆಗಳು, ವಾಣಿಗಳು ಜನರಿಗೆ ಒಳ್ಳೆಯ ಜೀವನಕ್ಕೆ ಸ್ಫೂರ್ತಿ ಹಾಗೂ ಇನ್ನು ಸಾವಿರ ವರ್ಷ ಕಳೆದರೂ ಅವರ ಸಂದೇಶ ಪ್ರಸ್ತುತವಾಗಿರುತ್ತದೆ ಮತ್ತು ಸಮಾನತೆಯ ಹರಿಕಾರರು” ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದರು. ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ ಅವರ ವತಿಾುಂದ ತುಳು ಭವನದಲ್ಲಿ ಕನಕ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ ಅವರು ಮಾತನಾಡಿ, “ಜಯಂತಿಗಳು ಶ್ರೇಷ್ಠ ಮಹಾತ್ಮರನ್ನು ನೆನೆಪು ಮಾಡಿ ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿಯಾಗುತ್ತದೆ” ಎಂದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಬಾಪೂಜಿ ನಗರ, ಶಿವಮೊಗ್ಗದ ಕನ್ನಡ ಸಹ ಪ್ರಾಧ್ಯಾಪಕ ಡಾ.ಮಂಜುನಾಥ್ ಎಂ.ಎಂ ಉಪನ್ಯಾಸ ನೀಡಿ, “ಕನಕದಾಸರು ಹುಟ್ಟಿನಿಂದಲೇ ತನ್ನ ವ್ಯಕ್ತಿತ್ವ ಹಾಗೂ ಜೀವನದ ಮೂಲಕ ಜನಮನ್ನಣೆ ಪಡೆದವರು” ಎಂದರು.
ಮಂಗಳೂರು ಮಹಾನಗರ ಪಾಲಿಕೆ ಆಯ್ತುಕ ರಾಹುಲ್ ರತ್ನಂ ಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ ಜಿ ಸ್ವಾಗತಿಸಿದರು. ಕರಾವಳಿ ಕುರುಬರ ಸಂಘ ಮಂಗಳೂರು ಅಧ್ಯಕ್ಷ ಅನಿಲ್ ಕುಮಾರ್ ಭೂಮರೆಡ್ಡಿ, ನಿರಂಜನ್, ಹಾಲುಮತ ಮಹಾಸಭಾದ ಗೌರವ ಅಧ್ಯಕ್ಷ ಮಲಿಯಪ್ಪ ಕರಿಯಪ್ಪ ಕಂಬ್ಳಿ, ಕರಾವಳಿ ಹಾಲುಮತ ಕುರುಬರ ಸಂಘದ ಅಧ್ಯಕ್ಷ ಚಂದ್ರಪ್ಪ ಬಿ ಕೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಜಿಲ್ಲಾ ಅಧ್ಯಕ್ಷ ಯಮುನಪ್ಪ ಶಿರಹಟ್ಟಿ, ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರು ನಿರ್ದೇಶಕ ಶಿವಾನಂದ ಯರಝೇರಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ರಾಜೇಶ್ ಐ ಮೊದಲಾದವರು ಉಪಸ್ಥಿತರಿದ್ದರು. ವಾರಣಿ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.




