ವಿಭಿನ್ನ ಆಲೋಚನೆ ಮೂಲಕ ಪಟ್ಟಣದ ಸ್ವಚ್ಛತೆಗೆ ಮುಂದಾಗಿರುವ ಪುರಸಭೆ ಕಸ ಹಾಕುವ ಸ್ಥಳದಲ್ಲಿ ರಂಗೋಲಿ ಬಿಡಿಸಿ ಜನರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಹೊಸ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಪಟ್ಟಣದ ಡಿ.ವಿ.ಜಿ ಮುಖ್ಯ ರಸ್ತೆಯಲ್ಲಿ ಹಾಗೂ ಬೀದಿಗಳಲ್ಲಿ ಎಲ್ಲೆಂದರಲ್ಲಿ ಕಸದ ಗುಡ್ಡೆಗಳು ಬಿದ್ದು, ಸುಂದರ ಪರಿಸರಕ್ಕೆ ಅಡ್ಡಿಯಾಗಿತ್ತು. ಪುರಸಭೆ ಮನೆ ಮನೆಗೆ ಕಸದ ಆಟೋ ಸೇವೆ ನೀಡಿದ್ದರೂ ರಾತ್ರೋರಾತ್ರಿ ಕಸದ ಗುಡ್ಡೆಗಳು ನಿರ್ಮಾಣವಾಗುತ್ತಿದ್ದವು. ಕಸವನ್ನು ಚೆಲ್ಲಾಡುತ್ತಾ ನಾಯಿಗಳು ವಾಸಸ್ಥಾನವಾಗಿ ಮಾಡಿಕೊಳ್ಳುತ್ತಿದ್ದವು. ಇದರಿಂದ ಸಾರ್ವಜನಿಕರಿಗೆ ಕಿರಿ ಕಿರಿಯಾಗುತ್ತಿತ್ತು.
ಪುರಸಭೆ ಮುಖ್ಯಾಧಿಕಾರಿಗಳು ಶ್ರೀನಿವಾಸ್ ನೇತೃತ್ವದಲ್ಲಿ ಪಟ್ಟಣದ ಕಸ ಇರುವ ಜಾಗ ಗುರುತಿಸಿ, ಆ ಜಾಗಗಳಲ್ಲಿ ಜನರನ್ನು ಒಟ್ಟಿಗೆ ಸೇರಿಸಿ ಕಸ ಹಾಕದಂತೆ ತಿಳಿಸಿ ಅವರಲ್ಲಿ ಸುಂದರ ಪಟ್ಟಣದ ಪರಿಕಲ್ಪನೆ, ಸ್ವಚ್ಛ ಪರಿಸರದ ಬಗ್ಗೆ ಮಾಹಿತಿ ನೀಡಿದ್ದಾರೆ. ಬೀದಿ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿ, ಪುರಸಭೆ ಬಿಟ್ಟಿರುವ ಕಸ ಎತ್ತುವ ಆಟೋಗಳ ವಿವರ ನೀಡಿ ಹಸಿ ಕಸ ಒಣಕಸ ವಿಂಗಡಣೆ ಬಗ್ಗೆ ತಿಳಿಸಿ, ಕಸ ಹಾಕುತ್ತಿದ್ದ ಸ್ಥಳದಲ್ಲಿ ರಂಗೋಲಿ ಬಿಡಿಸಿ ಗೋಡೆ ಮೇಲೆ ಬರಹ ಬರೆಸಿ, ಅಭಿಯಾನದ ಮೂಲಕ ಜನರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ವಿಶೇಷ ಪ್ರಯತ್ನ ನಡೆಸಿದ್ದೆವೆ ಎಂದು ಪುರಸಭೆ ಕಮ್ಯುನಿಟಿ ಮೊಬಿಲೈಜರ್ ಆದಾ ಮಂಜುಳಾ ತಿಳಿಸಿದರು.
8 ಜಾಗ ಗುರುತು
ಸ್ವಚ್ಛತೆಗೆ ಆದ್ಯತೆ ನೀಡುವುದು ಪುರಸಭೆ ಕರ್ತವ್ಯ. ಕಸ ಸಂಗ್ರವಾಗುತ್ತಿದ್ದ ಪಟ್ಟಣದ 8 ಕಡೆಗಳಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನದ ಮೂಲಕ ಅರಿವು ಮೂಡಿಸಲು ರಂಗೋಲಿ ಬಿಡಿಸುವ ಜತೆಗೆ ಶುಚಿತ್ವದ ಬಗ್ಗೆ ತಿಳಿಸಿಕೊಡಲಾಗುತ್ತಿದೆ. ಸಾರ್ವಜನಿಕರು ನಮ್ಮ ಜತೆ ಕೈ ಜೋಡಿಸಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಮೇಸ್ತ್ರಿ ಶಿವಪ್ಪ ತಿಳಿಸಿದರು.
ಕಮ್ಯುನಿಟಿ ಮೊಬಿಲೈಜರ್ ನೇಮಿಸಿಕೊಂಡ ಬಾಗೇಪಲ್ಲಿ ಪುರಸಭೆ ಇವರಿಂದಲೂ ಸ್ವಚ್ಛತೆಯ ಜಾಗೃತಿ, ಅರಿವು ಮೂಡಿಸುವ ಕೆಲಸ ಮಾಡುತ್ತದೆ .
ಇದನ್ನು ಓದಿದ್ದೀರಾ..?ಕೋಲಾರ | ಅಂಬೇಡ್ಕರ್ ಪುತ್ಥಳಿ ನಿರ್ಮಾಣದಲ್ಲಿ ಪ್ರತಿಷ್ಠೆಗಿಂತ ಗೌರವ, ರಕ್ಷಣೆಗೆ ಆದ್ಯತೆ: ಕೊತ್ತೂರು ಮಂಜುನಾಥ್
ಈ ಸಂದರ್ಭದಲ್ಲಿ ಕಮ್ಯುನಿಟಿ ಮೊಬಿಲೈಜರ್ ಗಳಾದ ನಂದಿನಿ ಗಂಗೋತ್ರಿ, ಮಂಜುಳ, ಆಯೇಷಾ, ಸ್ವಚ್ಛತೆ ವಾಹನ ಚಾಲಕ ಶಿವ ಕುಮಾರ್ ಮತ್ತಿತರರು ಇದ್ದರು.



