ದಿನ್ನೆ ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರಂಗಮಂದಿರವನ್ನು ಕಟ್ಟಿಸಿಕೊಡುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೆ ಕೈ ಜೋಡಿಸುವುದಾಗಿ ಮಾಜಿ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಕೆ.ವಿ.ಪ್ರಭಾಕರ್ ಹೇಳಿದರು. ತಾಲೂಕಿನ ದಿನ್ನೇಹೊಹಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕನಕ ಜಯಂತಿ ಉದ್ಘಾಟಿಸಿ ಮಾತನಾಡಿ, ಮಳೆ ಸಂದರ್ಭದಲ್ಲಿ ಮಕ್ಕಳಿಗೆ ಊಟ ಮಾಡಲು ತೊಂದರೆ ಆಗುವುದರಿಂದಾಗಿ ರಂಗಮಂದಿರದ ಅಗತ್ಯ ಇದೆ ಎಂದು ಮುಖ್ಯೋಪಾಧ್ಯಾಯರು ತಿಳಿಸಿದ ಮೇರೆಗೆ ಶೀಘ್ರದಲ್ಲೇ ಮಕ್ಕಳಿಗೆ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಜಮೀನಿನಲ್ಲಿ ಬಂಗಾರ ಸಿಕ್ಕ ಕಾರಣ ಕನಕ ಎಂಬ ಹೆಸರು ಬರುತ್ತದೆ. ಜಾತಿ ತಾರತಮ್ಯ ಮತ್ತು ಸಮಾಜದಲ್ಲಿನ ಮೇಲು-ಕೀಳು ಕಂಡು ಬೇಸತ್ತ ಕನಕದಾಸರು ಕೀರ್ತನೆಗಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾದರು. ಉಡುಪಿ ಶ್ರೀ ಕೃಷ್ಣನ ದರ್ಶನಕ್ಕೆ ತೆರಳಿದ ಕನಕದಾಸರನ್ನು ದೇಗುಲದ ಹಿಂದೆ ಕಟ್ಟಿಹಾಕಿದ ಮುಖಂಡರು ಕೀಳು ಜಾತಿಯವನನ್ನು ಒಳಗೆ ಬಿಡಲು ಸಾಧ್ಯ ಇಲ್ಲ ಎಂದು ತಿಳಿಸಿದರು. ಆಗ ಕೀರ್ತನೆ ಮೂಲಕ ದೇವರ ದರ್ಶನ ಪಡೆದ ಕನಕದಾಸರಿಂದ ಇಂದು ಉಡುಪಿಯಲ್ಲಿ ಕನಕನ ಕಿಂಡಿ ಇದೆ ಎಂದರು. ಕನಕದಾಸರು ವ್ಯಾಸರಾಯರ ಬಳಿ ಶಿಷ್ಯರಾಗಿದ್ದಾಗ ದೇವರಿಲ್ಲದ ಜಾಗ ಇಲ್ಲ ಎಂದು ಬಾಳೆಹಣ್ಣು ವಾಪಸ್ ಕೊಟ್ಟ ಕನಕದಾಸರ ನಿಲುವು ಅವರ ದೈವೀಶಕ್ತಿಯನ್ನು ಸಾಕ್ಷೀಕರಿಸುತ್ತದೆ. ಹೀಗಾಗಿ ಕನಕದಾಸರು ಒಂದು ಸಮಾಜಕ್ಕೆ ಸೀಮಿತರಲ್ಲ, ಅವರು ಸಮಾಜದ ಬಹುದೊಡ್ಡ ದಾರ್ಶನಿಕರಾಗಿದ್ದು ಅವರ ತತ್ವ ಮತ್ತು ಆದರ್ಶಗಳನ್ನು ಮಕ್ಕಳು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆ ಸಾಧಿಸಬೇಕೆಂದು ಕೆ.ವಿ.ಪ್ರಭಾಕರ್ ಹೇಳಿದರು.
ಇದನ್ನು ಓದಿದ್ದೀರಾ..?ಕೋಲಾರ | ಅಂಬೇಡ್ಕರ್ ಪುತ್ಥಳಿ ನಿರ್ಮಾಣದಲ್ಲಿ ಪ್ರತಿಷ್ಠೆಗಿಂತ ಗೌರವ, ರಕ್ಷಣೆಗೆ ಆದ್ಯತೆ: ಕೊತ್ತೂರು ಮಂಜುನಾಥ್
ಮುಖಂಡ ಅಪ್ಸಸಂದ್ರ ರಘುಪತಿ ಅವರು ವ್ಯವಸ್ಥೆ ಮಾಡಿದ್ದ ನೋಟ್‌ಪುಸ್ತಕ, ಜಾಮಿಟ್ರಿ, ಕಲರ್ ಪೆನ್ಸಿಲ್ ಸೇರಿದಂತೆ ಶೈಕ್ಷಣಿಕ ಪರಿಕರಗಳನ್ನು ಪ್ರಭಾಕರ್ ಅವರು ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ವಿತರಿಸಿ ಶುಭ ಹಾರೈಸಿದರು.
ಕೋಲಾರ | ದಿನ್ನೆ ಹೊಸಹಳ್ಳಿ ಸರ್ಕಾರಿ ಶಾಲೆಗೆ ರಂಗಮಂದಿರ ಕಟ್ಟಿಸಿಕೊಡ್ತೇನೆ : ಕೆ.ವಿ.ಪ್ರಭಾಕರ್
<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>
ಪೋಸ್ಟ್ ಹಂಚಿಕೊಳ್ಳಿ:



