ಬಿಜೆಪಿ ಸರ್ಕಾರ ಬಿಟ್ ಕಾಯಿನ್ ಬಿಟ್ಟಿದೆ, ನಾವು ಮರು ತನಿಖೆ ಮಾಡುತ್ತೇವೆ: ಸಚಿವ ಪರಮೇಶ್ವರ್‌

Date:

  • ರಾಜ್ಯದಲ್ಲಿ ಸದ್ಯ ಸಿಐಡಿ ಹೆಚ್ಚು ಶಕ್ತಿಯುತವಾಗಿದೆ
  • ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆಯೂ ತನಿಖೆ

ಬಿಟ್ ಕಾಯಿನ್ ಬಗ್ಗೆ ಹಿಂದಿನ ಸರ್ಕಾರ ತನಿಖೆ ಮುಕ್ತಾಯಗೊಳಿಸಿದೆ. ಈಗ ನಾವು ಈ ಬಗ್ಗೆ ಮರುತನಿಖೆ ಮಾಡಿ ಸತ್ಯ ಹೊರಹಾಕುತ್ತೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್‌ ತಿಳಿಸಿದರು.

- Advertisement -

ವಿಧಾನಸೌಧದಲ್ಲಿ ಮಂಗಳವಾರ ಮಾತನಾಡಿದ ಅವರು, “ಬಿಟ್ ಕಾಯಿನ್ ತನಿಖೆಯನ್ನು ಸಿಐಡಿಗೆ ಕೊಡಬೇಕಾ ಅಥವಾ ಬೇರೆ ತನಿಖಾ ಸಂಸ್ಥೆಗೆ ಕೊಡಬೇಕಾ ಎಂಬುದನ್ನು ನಿರ್ಧರಿಸುತ್ತೇವೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

“ರಾಜ್ಯದಲ್ಲಿ ಸದ್ಯ ಸಿಐಡಿ ಹೆಚ್ಚು ಶಕ್ತಿಯುತವಾಗಿದೆ. ಬೇರೆ ಬೇರೆ ಏಜೆನ್ಸಿಗಳ ಸಹಕಾರವನ್ನು ಸಿಐಡಿಗೆ ನೀಡಿ, ತನಿಖೆಯನ್ನು ಸಿಐಡಿಗೆ ಕೊಡುವ ಬಗ್ಗೆ ತೀರ್ಮಾನ ಮಾಡಲಾಗುತ್ತಿದೆ” ಎಂದು ಹೇಳಿದರು.

“ಎರಡು ಬಾರಿ ಬಿಟ್ ಕಾಯಿನ್ ಹಗರಣ ಕುರಿತು ಸಭೆ ನಡೆಸಲಾಗಿದೆ. ತಾಂತ್ರಿಕವಾಗಿ ಯಾರಿಗೆಲ್ಲ ಹಣ ಹೋಗಿದೆ? ಕಾನೂನುಬಾಹಿರವಾಗಿ ಸಾವಿರಾರು ಕೋಟಿ ಹಣ ವರ್ಗಾವಣೆಯಾಗಿದೆ. ಕೆಲವೊಂದು ವಿಚಾರಗಳನ್ನು ಹೇಳಲು ಆಗಲ್ಲ. ಯಾವ ಯಾವ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ತನಿಖೆ ಮಾಡಿಸುತ್ತೇವೆ” ಎಂದು ವಿವರಿಸಿದರು.

ಈ ಸುದ್ದಿ ಓದಿದ್ದೀರಾ? ಹಿಂದಿನ ಸರ್ಕಾರದ ಪ್ರಮುಖ ಹಗರಣಗಳ ತನಿಖೆ ನಡೆಸುತ್ತೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಪಿಎಸ್ಐ ಪ್ರಕರಣ

“ಪಿಎಸ್ಐ ಪ್ರಕರಣವನ್ನು ನ್ಯಾಯಾಲಯ ತೀರ್ಪಿನ ಆಧಾರದಲ್ಲಿ ನಿರ್ಧಾರ ಮಾಡುತ್ತೇವೆ. ಯಾವ ಯಾವ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಆ ಬಗ್ಗೆ ತನಿಖೆ ಮಾಡಿಸುತ್ತೇವೆ. ಇದೇ ಮಾತನ್ನು ಸಿಎಂ ಕೂಡ ಹೇಳಿದ್ದಾರೆ” ಎಂದರು.

ಫೇಕ್ ನ್ಯೂಸ್ ಹರಡುವವರಿಗೆ ಶಿಕ್ಷೆ

“ಫೇಕ್ ನ್ಯೂಸ್ ಹರಡುವುದರಲ್ಲಿ ಕೆಲವರು ನಿರತರಾಗಿದ್ದಾರೆ. ಅದು ರಾಜಕೀಯ ಇರಬಹುದು ಅಥವಾ ಸಮಾಜದ ಶಾಂತಿ ಕದಡುವ ವಿಚಾರ ಇರಬಹುದು. ಸುಳ್ಳು ಸುದ್ದಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದನ್ನು ಗಮನಿಸಿದ್ದೇವೆ. ಫೇಕ್ ನ್ಯೂಸ್ ಹರಡುವವರಿಗೆ ಶಿಕ್ಷೆ ನೀಡುವ ನಿಟ್ಟಿನಲ್ಲಿ ಸೂಕ್ತ ಕಾನೂನು ಜಾರಿಗೆ ತರಲಾಗುವುದು” ಎಂದು ಇದೇ ವೇಳೆ ಪರಮೇಶ್ವರ್‌ ತಿಳಿಸಿದರು.

“ಸಂಬಂಧವೇ ಇಲ್ಲದ ಫೋಟೋಗಳನ್ನು ಹಾಕಿ ಸಂಬಂಧ ಕಲ್ಪಿಸುವುದು ನಡೆಯುತ್ತಿದೆ. ಸರ್ಕಾರ ರಚನೆ ಆದಮೇಲೆ ಫೇಕ್ ನ್ಯೂಸ್ ಗಮನಿಸಿದ್ದೇವೆ. ಇದನ್ನು ಇಲ್ಲಿಗೆ ನಿಲ್ಲಿಸದಿದ್ದರೆ ಬಹಳಷ್ಟು ಸಮಸ್ಯೆ ಎದುರಿಸಲಿದ್ದಾರೆ” ಎಂದು ಎಚ್ಚರಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ.2 ಮೀಸಲಾತಿ ಸ್ವಾಗತಾರ್ಹ: ಮುತ್ತಣ್ಣ ಮೇತ್ರಿ

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಗಳ ನೇಮಕಾತಿಯಲ್ಲಿ ಶೇ.2ರಷ್ಟು...

ವಿಜಯಪುರ | ಉದ್ಯೋಗ ಖಾತ್ರಿ ಪೂರ್ಣ ಕೂಲಿ ಪಾವತಿಗೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿರುವ ಕೂಲಿಕಾರರಿಗೆ ಅವರ ಶ್ರಮಕ್ಕೆ ತಕ್ಕಂತೆ...

ಕೊಡಗು | ಫಾರಂ-7 ದುರುಪಯೋಗ: ಬಿಜೆಪಿ ಬೂತ್ ಅಧ್ಯಕ್ಷ ಸೇರಿ ಐವರ ವಿರುದ್ಧ ಎಫ್‌ಐಆರ್!

ಕೊಡಗು ಜಿಲ್ಲೆಯ ಬ್ಯಾಡಗೊಟ್ಟ ಗ್ರಾಮದಲ್ಲಿ ಮತದಾರರ ಹೆಸರುಗಳನ್ನು ಅಳಿಸಲು ಫಾರಂ-7 ಅರ್ಜಿಗಳನ್ನು...