ನೀರಿನ ಕೊರತೆ | ನಿತ್ಯದ ಊಟಕ್ಕೆ ಬಾಳೆ ಎಲೆ, ಪೇಪರ್ ಪ್ಲೇಟ್ ಬಳಸುತ್ತಿರುವ ಬೆಂಗಳೂರಿನ ಜನ

Date:

ಬೆಂಗಳೂರಿನಲ್ಲಿ ಸದ್ಯ ನೀರಿನ ಸಮಸ್ಯೆ ಎದುರಾಗಿದೆ. ನಗರದ ಕೆಲವೆಡೆ ಜನರು ಕುಡಿಯುವ ನೀರಿಗಾಗಿ ಪರದಾಡುವಂತಹ ಸ್ಥಿತಿ ಎದುರಾಗಿದೆ. ಹೀಗಾಗಿ, ಜನರು ಬಾಳೆಎಲೆ ಹಾಗೂ ಪೇಪರ್ ಪ್ಲೇಟ್‌ಗಳ ಬಳಕೆಯನ್ನು ಹೆಚ್ಚಾಗಿ ಮಾಡುತ್ತಿದ್ದಾರೆ. ನೀರಿನ ಕೊರತೆಯ ತೀವ್ರ ಬಿಕ್ಕಟ್ಟಿನ ನಡುವೆ, ಬಾಳೆ ಎಲೆ ಹಾಗೂ ಪೇಪರ್ ಪ್ಲೇಟ್‌ಗಳ ಬೆಲೆ ಗಗನಕ್ಕೇರಿವೆ.

- Advertisement -

ನೀರಿನ ಅಭಾವ ಹಿನ್ನೆಲೆಯಲ್ಲಿ ಜನರು ಬಾಳೆಎಲೆ ಹಾಗೂ ಪೇಪರ್ ಪ್ಲೇಟ್‌ಗಳ ಬಳಕೆಯನ್ನು ಹೆಚ್ಚಾಗಿ ಮಾಡುತ್ತಿದ್ದಾರೆ. ಹೀಗಾಗಿ, ಮಾರಾಟಗಾರರೂ ಇವುಗಳ ಬೆಲೆಯನ್ನು ಹೆಚ್ಚಳ ಮಾಡಿದ್ದಾರೆ. ಮಲ್ಲೇಶ್ವರಂ ಮಾರಾಟಗಾರರು ಮಾರಾಟದ ಬೆಲೆಯನ್ನು ಶೇ.30ರಷ್ಟು ಹೆಚ್ಚಳ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಮಲ್ಲೇಶ್ವರಂನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಜನರು ನೀರಿನ ಸಮಸ್ಯೆಯನ್ನು ನಿಭಾಯಿಸಲು ಹಾಗೂ ನೀರಿನ ಬಳಕೆಯನ್ನು ಕಡಿಮೆ ಮಾಡಲು ಬಾಳೆ ಎಲೆಗಳು ಮತ್ತು ಪೇಪರ್ ಪ್ಲೇಟ್‌ಗಳನ್ನು ಬಳಕೆ ಮಾಡುತ್ತಿದ್ದಾರೆ.

ಮಲ್ಲೇಶ್ವರಂನ 10ನೇ ಕ್ರಾಸ್‌ನಲ್ಲಿ ವ್ಯಾಪಾರ ನಡೆಸುತ್ತಿರುವ ನೀಲಮ್ಮ ಅವರು ಮಾತನಾಡಿ, “ಕಳೆದ ಬಾರಿ ಓಣಂ ಸಮಯದಲ್ಲಿ ಉತ್ತಮ ಮಾರಾಟವನ್ನು ಮಾಡಿದ್ದೇವು. ಈ ಹಿಂದೆ, ಬಾಳೆ ಎಲೆಗಳು ಪ್ರತಿ ಎಲೆಗೆ ₹6 ರಿಂದ ₹8 ನಡುವೆ ಬೆಲೆ ಇತ್ತು. ಬಾಳೆ ಎಲೆಗಳ ಗಾತ್ರದಲ್ಲಿ ವ್ಯತ್ಯಾಸವಿತ್ತು. ಆದರೆ, ಕಳೆದೊಂದು ತಿಂಗಳಿಂದ ಒಂದು ಎಲೆಯನ್ನು ₹9 ರಿಂದ ₹13ಗೆ ಅಥವಾ ಆರು ಎಲೆಗಳ ಸೆಟ್‌ಗೆ ₹70ಗೆ ಮಾರಾಟ ಮಾಡುತ್ತಿದ್ದೇವೆ. ಹಲವು ವರ್ಷಗಳಿಂದಲೂ ಇಷ್ಟು ಮಟ್ಟದ ವ್ಯಾಪಾರವನ್ನು ನೋಡಿರಲಿಲ್ಲ” ಎಂದು ಹೇಳಿದರು.

“ಕಳೆದ 6 ತಿಂಗಳಿನಿಂದ ಮಾರಾಟ ಸೀಮಿತವಾಗಿತ್ತು. ಹಬ್ಬ, ಮದುವೆ ಹಾಗೂ ಸಮಾರಂಭದ ಸಮಯದಲ್ಲಿ ಮಾತ್ರ ಹೆಚ್ಚು ಮಾರಾಟವಾಗುತ್ತಿತ್ತು. ಆದರೆ, ಈಗ ಜನರು ತಮ್ಮ ದಿನಚರಿಯ ಭಾಗವಾಗಿ ಎಲೆಗಳನ್ನು ಪ್ಲೇಟ್‌ಗಳಾಗಿ ಬಳಸುತ್ತಿದ್ದಾರೆ” ಎಂದು ನೀಲಮ್ಮ ಹೇಳಿದರು.

ಬಾಳೆ ಎಲೆ ಮಾರಾಟಗಾರ ಕರುಪಸ್ವಾಮಿ ಮಾತನಾಡಿ, “ಫೆಬ್ರವರಿ ಮಧ್ಯದಿಂದ ಅಡಿಕೆ ಎಲೆಗಳ ತಟ್ಟೆಗಳು ಮತ್ತು ಬಾಳೆ ಎಲೆಗಳ ಮಾರಾಟದಲ್ಲಿ ಏರಿಕೆ ಕಾಣುತ್ತಿದ್ದೇವೆ. ಬೆಲೆ ಏರಿಕೆಯ ಹೊರತಾಗಿಯೂ, ಗ್ರಾಹಕರು ಖರೀದಿಸಲು ಸಿದ್ಧರಿದ್ದಾರೆ” ಎಂದರು.

“ಪ್ರತಿ ತಿಂಗಳು ಸಾಮಾನ್ಯವಾಗಿ ನಾವು ಸುಮಾರು 2,000 ಎಲೆಗಳು ಮತ್ತು ಮೂರು ವಿಭಿನ್ನ ಗಾತ್ರದ 200 ಕ್ಕೂ ಹೆಚ್ಚು ಅರೆಕಾ ಎಲೆಗಳ ಸೆಟ್‌ಗಳನ್ನು ಮಾರಾಟ ಮಾಡುತ್ತಿದ್ದೇವು. ಆಗ ಕೇವಲ ಸಮಾರಂಭ ಅಥವಾ ಇನ್ನಿತರ ಕಾರ್ಯಕ್ರಮಗಳಿಗೆ ಎಲೆಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಜನರನ್ನು ವ್ಯಾಪಾರದ ಕೇಂದ್ರವಾಗಿ ಗುರುತಿಸಿಕೊಂಡಿದ್ದೇವು. ಆದರೆ, ಈಗ ಜನರು ಕೂಡ ಖರೀದಿ ಮಾಡುತ್ತಿದ್ದಾರೆ. ಮಾರಾಟ ಹೆಚ್ಚಾಗಿದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ‘ಡಿಹೈಡ್ರೇಶನ್’ ಪ್ರಕರಣಗಳಲ್ಲಿ ಹೆಚ್ಚಳ; ಓಆರ್‌ಎಸ್‌ ಮಾರಾಟದಲ್ಲಿ ಶೇ.60 ಏರಿಕೆ

ಬಾಳೆ ಎಲೆ ಗ್ರಾಹಕ ಶೇಖರ್ ಮಾತನಾಡಿ, “ನಮ್ಮ ಕುಟುಂಬದವರು ಸಮಾರಂಭಗಳಲ್ಲಿ ಮಾತ್ರ ಬಾಳೆ ಎಲೆಗಳನ್ನು ಬಳಸುತ್ತಿದ್ದರು. ಆದರೆ, ಈಗ ನಾವು ಅದನ್ನು ಪ್ಲೇಟ್‌ ಆಗಿ ಪರ್ಯಾಯವಾಗಿ ಬಳಸುತ್ತಿದ್ದೇವೆ. ಮಲ್ಲೇಶ್ವರಂ ಮತ್ತು ರಾಜಾಜಿನಗರದ ಸುತ್ತಮುತ್ತಲಿನ ಜನರು ನೀರಿನ ಟ್ಯಾಂಕರ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಅನೇಕ ಕುಟುಂಬಗಳು ನೀರಿನ ಬಳಕೆಯನ್ನು ಕಡಿಮೆ ಮಾಡಲು ಊಟಕ್ಕೆ ಪ್ಲೆಟ್‌ಗಳ ಬದಲಾಗಿ ಎಲೆಗಳನ್ನು ಬಳಕೆ ಮಾಡುತ್ತಿದ್ದಾರೆ” ಎಂದರು.

ಮೂಲ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ‌ | ಬಾಲಕರ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ

ಚುನಾವಣಾ ಸಂಬಂಧಿತ ಕಾರ್ಯಗಳ ಪರಿಶೀಲನೆಯ ಜೊತೆಗೆ, ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ...

ಗದಗ | ಮಾನವ ದಿನಗಳ ಸೃಜನೆ ಮಾಡದಿದ್ದರೇ ಶಿಸ್ತು ಕ್ರಮ : ಜಿಪಂ ಸಿಇಓ ಮುಕುಲ್ ಜೈನ್

ರೋಣ ತಾಲೂಕಿನಲ್ಲಿ ಮಾನವ ದಿನಗಳ ಸೃಜನೆ ತುಂಬಾ ಕಡಿಮೆ ಇದೆ. ಮಾನವ...

ಮಹಿಷಮಂಡಲದ ಇತಿಹಾಸಕ್ಕೆ ಮರುಜೀವ: ಮೈಸೂರಿನಲ್ಲಿ ಮಹಿಷಮಂಡಲೋತ್ಸವ-2026

ರಾಜ್ಯದ ಪ್ರಗತಿಪರ ಚಿಂತಕರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ದಲಿತ ಸಂಘಟನೆಗಳು,...

ಗದಗ | ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ: ಶಿಸ್ತುಬದ್ಧ, ಅಚ್ಚುಕಟ್ಟಾದ ವ್ಯವಸ್ಥೆಗೆ ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಸೂಚನೆ

ಜಿಲ್ಲೆಯಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಅತ್ಯಂತ ಯಶಸ್ವಿಯಾಗಿ ಹಾಗೂ...