ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೇಳತೀರವಾಗಿದೆ. ಬೆಳಗ್ಗೆ ಹಾಗೂ ಸಾಯಂಕಾಲದ ಪೀಕ್ ಅವರ್‌ನಲ್ಲಿ ಉಂಟಾಗುವ ಟ್ರಾಫಿಕ್‌ಗೆ ಜನ ಕಂಗಾಲಾಗಿದ್ದಾರೆ. ನಮ್ಮ ಮೆಟ್ರೋದಲ್ಲಿ ನಿತ್ಯ ಲಕ್ಷಾಂತರ ಜನ ಸಂಚರಿಸುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಕೊಂಚ ಕಡಿಮೆಯಾದಂತಾಗಿದೆ. ಇದೀಗ, ತಾಂತ್ರಿಕ ಸಮಸ್ಯೆಯಿಂದ ಬೈಯಪ್ಪನಹಳ್ಳಿಯಿಂದ ಗರುಡಾಚಾರ್‌ಪಾಳ್ಯದ ನೇರಳೆ ಮಾರ್ಗದ ನಡುವೆ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಮಂಗಳವಾರ ಬೆಳ್ಳಂಬೆಳಿಗ್ಗೆ ಮೆಟ್ರೋ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗಿದೆ.
ಬೆಳಿಗ್ಗೆಯಿಂದ ಈ ಸಮಸ್ಯೆ ಆರಂಭವಾಗಿದ್ದು, ನೇರಳೆ ಮಾರ್ಗದಲ್ಲಿ ಯಾವುದೇ ಮೆಟ್ರೋ ರೈಲುಗಳ ಸಂಚರಿಸುತ್ತಿಲ್ಲ. ಕೆಲಸಕ್ಕೆ ತೆರಳುವ ಪ್ರಯಾಣಿಕರು ಬೆಳ್ಳಂಬೆಳಿಗ್ಗೆ ನಿಲ್ದಾಣದಲ್ಲಿ ಕಾಯುವಂತಹ ಸ್ಥಿತಿ ಇದೆ. ಮೆಟ್ರೋ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿರುವುದರಿಂದ ಮೆಜೆಸ್ಟಿಕ್‌ನ ಕೆಂಪೇಗೌಡ ಮೆಟ್ರೋ ನಿಲ್ದಾಣ ಸೇರಿದಂತೆ ಎಲ್ಲ ನಿಲ್ದಾಣಗಳಲ್ಲಿಯೂ ಭಾರೀ ಜನದಟ್ಟಣೆ ಉಂಟಾಗಿದೆ.
ಅಲ್ಲದೇ, ಹಲವು ನಿಲ್ದಾಣಗಳಲ್ಲಿ ಮೆಟ್ರೋ ಹತ್ತಿದ್ದ ಪ್ರಯಾಣಿಕರನ್ನು ಇಳಿಯುವಂತೆ ಮನವಿ ಮಾಡಲಾಗುತ್ತಿದ್ದು, ಪರ್ಯಾಯ ಸಾರಿಗೆ ಬಳಸುವಂತೆ ಬಿಎಂಆರ್‌ಸಿಎಲ್ ಹೇಳುತ್ತಿದೆ ಎಂದು ತಿಳಿದು ಬಂದಿದೆ.
ಮೆಟ್ರೋದಲ್ಲಿ ಪ್ರಸಕ್ತ ತಡೆಗಾಗಿ ಕ್ಷಮಿಸಿ, ಆದಷ್ಟು ಬೇಗ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸುತ್ತೇವೆ. ದಯವಿಟ್ಟು ಮುಂದಿನ ಸೂಚನೆಗಾಗಿ ನಿರೀಕ್ಷಿಸಿ ಎಂದು ಮೆಟ್ರೋದ ಸೂಚನಾ ಸ್ಕ್ರೀನ್‌ಗಳಲ್ಲಿ ಸಂದೇಶವನ್ನು ಬಿಎಂಆರ್‌ಸಿಎಲ್ ಪ್ರದರ್ಶಿಸುತ್ತಿದೆ.
Huge mismanagement!! #nammametro @OfficialBMRCL @WF_Watcher
Avoid Purple line #metro till noon today! #bengaluru pic.twitter.com/N633iBzone— SALAAR (@FilmsCricket) February 20, 2024
ಈ ಬಗ್ಗೆ ಟ್ವಿಟರ್ (ಎಕ್ಸ್) ಮೂಲಕ ಮಾಹಿತಿ ನೀಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್), “ತಾಂತ್ರಿಕ ದೋಷದಿಂದ ಬೈಯಪ್ಪನಹಳ್ಳಿಯಿಂದ ಗರುಡಾಚಾರ್‌ಪಾಳ್ಯ ನಡುವೆ ನೇರಳೆ ಮಾರ್ಗದ ರೈಲುಗಳು ನಿಧಾನಗತಿಯಲ್ಲಿ ಚಲಿಸುತ್ತಿವೆ. ಇದರಿಂದ ರೈಲು ವೇಳಾಪಟ್ಟಿಯಲ್ಲಿ ಅಡಚಣೆಯಾಗುತ್ತದೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸಲು ನಮ್ಮ ತಂಡ ಕೆಲಸ ಮಾಡುತ್ತಿದೆ. ಅನಾನುಕೂಲತೆಗಾಗಿ ವಿಷಾದಿಸುತ್ತೇವೆ” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಖಾಸಗಿ ಟ್ಯಾಂಕರ್ಗಳಿಗೆ ದರ ನಿಗದಿಗೆ ಮುಂದಾದ ಬಿಬಿಎಂಪಿ
ಈ ಬಗ್ಗೆ ಹಲವು ಜನ ಟ್ವೀಟ್ ಮಾಡಿದ್ದು, “ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ತೊಂದರೆಯಲ್ಲಿದೆ. ಇದು ವಾಕಿಂಗ್ ವೇಗದಲ್ಲಿ ಸಾಗುತ್ತದೆ. ಟಿನ್ ಫ್ಯಾಕ್ಟರಿಯಿಂದ ಪ್ರತಿ ನಿಲ್ದಾಣದಲ್ಲಿ ನಿಲ್ಲುತ್ತದೆ. ಎಲ್ಲ ಸಮಯದಲ್ಲೂ ಕಠಿಣವಾದ ಬ್ರೇಕ್ ಹಾಕಲಾಗುತ್ತಿದೆ” ಎಂದು ಮುರುಗೇಶನ್ ಎಂಬುವವರು ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.