ಗದಗ | ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ: ಶಿಸ್ತುಬದ್ಧ, ಅಚ್ಚುಕಟ್ಟಾದ ವ್ಯವಸ್ಥೆಗೆ ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಸೂಚನೆ

Date:

ಜಿಲ್ಲೆಯಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಅತ್ಯಂತ ಯಶಸ್ವಿಯಾಗಿ ಹಾಗೂ ಶಿಸ್ತುಬದ್ಧ, ಸುವ್ಯವಸ್ಥಿತವಾಗಿ ನಡೆಸಬೇಕು” ಎಂದು ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ತಿಳಿಸಿದರು.

- Advertisement -

ಗದಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಕ್ಟೋಬರ್ (9) ರಂದು ಜರುಗಿದ ಗದಗ ಜಿಲ್ಲೆಗೆ ವಹಿಸಿರುವ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯ ನಿಮಿತ್ಯ ಪೂರ್ವ ಸಿದ್ಧತಾ ಸಭೆಯ  ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

​ಸಭೆಯಲ್ಲಿ ಪಂದ್ಯಾವಳಿಯ ಯಶಸ್ಸಿಗಾಗಿ ವಿವಿಧ ಸಮಿತಿಗಳ ಸಿದ್ಧತೆಗಳನ್ನು ಪರಾಮರ್ಶಿಸಿದ ಜಿಲ್ಲಾಧಿಕಾರಿಗಳು, ಅಧಿಕಾರಿಗಳಿಗೆ ಹಾಗೂ ಸಂಘಟಕರಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದರು. 

​ವಸತಿ ಮತ್ತು ಸಾರಿಗೆ ವ್ಯವಸ್ಥೆ: “ವಿವಿಧ ಜಿಲ್ಲೆಗಳಿಂದ ಆಗಮಿಸುವ 14/17 ವಯೋಮಿತಿಯ ಕ್ರೀಡಾಪಟುಗಳು, ಕೋಚ್‌ಗಳು ಹಾಗೂ  ತಂಡಗಳಿಗೆ ಸೂಕ್ತ ವಸತಿ ಹಾಗೂ ಕ್ರೀಡಾಂಗಣಕ್ಕೆ ಬರಲು ಸಾರಿಗೆ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಬೇಕು. ​ಕ್ರೀಡಾಪಟುಗಳ ಪಟ್ಟಿ ಮತ್ತು ಸಮಯ ಪಾಲನೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಕ್ರೀಡಾಪಟುಗಳ ನಿಖರವಾದ ಸಂಖ್ಯೆ, ಆಗಮನದ ಸಮಯ ಮತ್ತು ಅವರ ತಂಗುವಿಕೆಯ ಪಟ್ಟಿಯನ್ನು ಸಮಿತಿಯು ಶೀಘ್ರವೇ ಸಿದ್ಧಪಡಿಸಿ ಸಲ್ಲಿಸಬೇಕು” ಎಂದರು.

“ಕುಸ್ತಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಆರೋಗ್ಯ ಮತ್ತು ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕು. ತುರ್ತು ವೈದ್ಯಕೀಯ ಸೇವೆ ಹಾಗೂ ಪ್ರಾಥಮಿಕ ಚಿಕಿತ್ಸಾ ಸೌಲಭ್ಯಗಳನ್ನು ಸ್ಥಳದಲ್ಲಿ ಸದಾ ಸಿದ್ಧವಾಗಿಟ್ಟುಕೊಳ್ಳಬೇಕು. ಕ್ರೀಡಾ ಪಟುಗಳಿಗೆ ವ್ಯವಸ್ಥಿತವಾಗಿ ಯಾವುದೇ ರೀತಿಯ ಗೊಂದಲಗಳಿಗೆ ಆಸ್ಪದ ನೀಡದಂತೆ ಸಾರಿಗೆ, ವಸತಿ, ಆಹಾರ, ಅರೋಗ್ಯ, ಊಟದ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಬೇಕು. ವೇದಿಕೆ ನಿರ್ವಹಣಾ ಸಮಿತಿಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು” ಎಂದು ನಿರ್ದೇಶನ ನೀಡಿದರು.

ಆನ್‌ಲೈನ್ ದಾಖಲೆ ಹಾಗೂ SATS ವೆರಿಫಿಕೇಶನ್: “ಕ್ರೀಡಾಪಟುಗಳು ತರುವ ದಾಖಲೆಗಳಲ್ಲಿ ಯಾವುದೇ ಅಕ್ರಮ ಅಥವಾ ವಯೋಮಿತಿ ವಂಚನೆ ನಡೆಯದಂತೆ ತಡೆಯಲು, ಆನ್‌ಲೈನ್‌ನಲ್ಲಿ SATS  ತಂತ್ರಾಂಶ ಹಾಗೂ ಶಾಲಾ ದಾಖಲೆಗಳನ್ನು ಕಡ್ಡಾಯವಾಗಿ ನೈಜವಾಗಿ ಪರಿಶೀಲಿಸಬೇಕು. ಪ್ರತಿಯೊಂದು ವಸತಿ ನಿಲಯಕ್ಕೂ (ಹೋಸ್ಟೆಲ್) ಒಬ್ಬೊಬ್ಬರು ಉಸ್ತುವಾರಿ/ನೋಡಲ್ ಅಧಿಕಾರಿಗಳನ್ನು ನಿಯೋಜಿಸಬೇಕು. ಕ್ರೀಡಾಪಟುಗಳ ಪಟ್ಟಿ, ಅಗತ್ಯ ಸೌಲಭ್ಯಗಳು ಮತ್ತು ಸುರಕ್ಷತೆಗೆ ಆದ್ಯತೆ ನೀಡಬೇಕು” ಎಂದರು.

“ಕ್ರೀಡಾಪಟುಗಳಿಗೆ ಪಂದ್ಯ ನಡೆಸಲು ಸೂಕ್ತ ಮ್ಯಾಟ್ ವ್ಯವಸ್ಥೆ ಹಾಗೂ ಮೂರನೇ ತೀರ್ಪುಗಾರರ  ನಿರ್ಧಾರಕ್ಕೆ ಅನುಕೂಲವಾಗುವಂತೆ ಡಿಜಿಟಲ್ ತಂತ್ರಜ್ಞಾನ ವ್ಯವಸ್ಥೆ ಮಾಡಬೇಕು. ತೀರ್ಪುಗಾರರು ಮತ್ತು ಅಫಿಷಿಯಲ್ಸ್ ಅವರ ನಿಖರ ಸಂಖ್ಯೆ ಹಾಗೂ ಕಾರ್ಯನಿರ್ವಹಣೆಯನ್ನು ಸ್ಪಷ್ಟಪಡಿಸಬೇಕು. ಪಂದ್ಯಾವಳಿಗೆ ಆಗಮಿಸುವ ಪೈಲ್ವಾನರ ಆಹಾರ ಶೈಲಿಗೆ ತಕ್ಕಂತೆ (ಚಪಾತಿ, ಧಾನ್ಯಗಳು ಇತ್ಯಾದಿ) ಪೌಷ್ಟಿಕ ಹಾಗೂ ಸತ್ವಯುತ ಆಹಾರದ ವ್ಯವಸ್ಥೆ ಮಾಡಬೇಕು. ಪಂದ್ಯಗಳು ನಿಗದಿತ ವೇಳಾಪಟ್ಟಿಯಂತೆ ಸಾಗುವಂತೆ ನೋಡಿಕೊಳ್ಳಬೇಕು. ಪಂದ್ಯಾವಳಿಯಲ್ಲಿ ಯಾವುದೇ ಸಣ್ಣ ಮಟ್ಟದ ನ್ಯೂನತೆಗಳಾಗದಂತೆ ಅಧಿಕಾರಿಗಳು ಶಿಸ್ತು ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು” ಎಂದು ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಅಧಿಕಾರಿಗಳಿಗೆ ಸೂಚಿಸಿದರು.

ಈ ​ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್, ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ ಆರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಶ್ರೀಮತಿ ಡಾ. ನಂದಾ ಹಣಬರಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆರ್.ಎಸ್.  ಬುರಡಿ  ವಿವಿಧ ಇಲಾಖೆಗಳ  ಅಧಿಕಾರಿಗಳು ಮತ್ತು ಪಂದ್ಯಾವಳಿ ಸಂಘಟನಾ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಂದ ಹಣ ವಸೂಲಿ: ಆರೋಪಿ ಸಿಐಎಸ್‌ಎಫ್‌ ಬಲೆಗೆ

ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಂದ ಹಣ ವಸೂಲಿ ಮಾಡುತ್ತಿದ್ದ...

ಚಿಕ್ಕಮಗಳೂರು | ಫಾರಂ-7 ದುರುಪಯೋಗ; ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್‌ ಯತ್ನಕ್ಕೆ ತೀವ್ರ ವಿರೋಧ

ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಮತದಾರರ...

ರಾಯಚೂರು | ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೃಷಿ ವಿವಿಯಲ್ಲಿ ವರ್ಗಾವಣೆ ಆದೇಶ: ಉಲ್ಲಂಘನೆ ಆರೋಪ

ಈಶಾನ್ಯ ಶಿಕ್ಷಕರ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ರಾಯಚೂರಿನ ಕೃಷಿ ವಿಜ್ಞಾನಗಳ...

ರಾಯಚೂರು | ಹೊನ್ನಕುಣಿ ಕ್ರಾಸ್‌ನಿಂದ ಸಿರಿವಾರದವರೆಗೆ 8 ಸೇತುವೆಗಳ ಕಾಮಗಾರಿ ತಕ್ಷಣ ಆರಂಭಿಸಲು ಒತ್ತಾಯ

ದೇವದುರ್ಗ ತಾಲ್ಲೂಕಿನ ಮನಗೂಳಿ–ಬಿಚ್ಚಾಲಿ–61 ರಾಜ್ಯ ಹೆದ್ದಾರಿಯ ಹೊನ್ನಕುಣಿ ಕ್ರಾಸ್‌ನಿಂದ ಸಿರಿವಾರದವರೆಗೆ ನಿರ್ಮಿಸಬೇಕಿರುವ...