ಬದಲಾಯ್ತು ಟ್ವಿಟರ್‌ ಲೋಗೋ; ಮಸ್ಕ್‌ ಮಸ್ತಿಗೆ ಹಕ್ಕಿ ಬದಲಿಗೆ ನಾಯಿ ಬಂತು

Date:

  • ವೆಬ್‌ ಆವೃತ್ತಿಗೆ ಕ್ರಿಪ್ಟೋ ಕರೆನ್ಸಿಯ ನಾಯಿ ಚಿತ್ರ
  • ಮೊಬೈಲ್ ಟ್ವಿಟರ್ ಆ್ಯಪ್‌ನಲ್ಲಿ ಪಕ್ಷಿಯ ಲೋಗೋ

ಸದಾ ಒಂದಿಲ್ಲೊಂದು ವಿಷಯದಲ್ಲಿ ಸದ್ದು ಮಾಡುತ್ತಿದ್ದ ಬಿಲೇನಿಯರ್ ಎಲಾನ್ ಮಸ್ಕ್‌ ತನ್ನ ಒಡೆತನದ ಟ್ವಿಟರ್‌ ಲೋಗೋ ಬದಲಾಯಿಸುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಇತ್ತೀಚೆಗೆ ಟ್ವಿಟರ್‌ಗೆ ಹೊಸ ಸಿಇಒ ಹುಡುಕಾಡುತ್ತಿದ್ದೇನೆ ಎಂದಿದ್ದ ಎಲಾನ್‌ ಮಸ್ಕ್‌, ಇದೀಗ ಟ್ವಿಟರ್‌ ವೆಬ್‌ ಆವೃತ್ತಿಯ ಲೋಗೋವನ್ನೇ ಬದಲಿಸಿದ್ದಾರೆ. ಮೊದಲಿದ್ದ ‘ನೀಲಿ ಹಕ್ಕಿ’ಯ ಬದಲಿಗೆ ನಾಯಿಗಳ ಮೀಮ್‌ಗಳಲ್ಲಿ ಅಥವಾ ಕ್ರಿಪ್ಟೋ ಕರೆನ್ಸಿಯಲ್ಲಿ ಬಳಕೆಯಾಗುತ್ತಿದ್ದ ‘ನಾಯಿ’ ಚಿತ್ರವನ್ನು ಹಾಕಿದ್ದಾರೆ.

ನೂತನವಾಗಿ ಪರಿ‍ಚಯಿಸಲಾಗಿರುವ ಟ್ವಿಟರ್ ಲೋಗೋ ಬದಲಾವಣೆಯು ಕೇವಲ ವೆಬ್‌ ಆವೃತ್ತಿಗೆ ಮಾತ್ರ ಸೀಮಿತವಾಗಿದೆ. ಮೊಬೈಲ್ ಟ್ವಿಟರ್ ಆ್ಯಪ್‌ನಲ್ಲಿ ಪಕ್ಷಿಯ ಲೋಗೋ ಮುಂದುವರೆದಿದೆ.

ಹತ್ತು ವರ್ಷಗಳ ಹಿಂದೆ ಬಿಟ್‌ಕಾಯಿನ್‌ನಂತಹ ಇತರ ಕ್ರಿಪ್ಟೋಕರೆನ್ಸಿಗಳನ್ನು ಅಪಹಾಸ್ಯ ಮಾಡುವ ಉದ್ದೇಶದಿಂದ ನಾಯಿ ಚಿತ್ರವನ್ನು ರಚಿಸಲಾಗಿತ್ತು. ಇದೀಗ ಅದನ್ನೇ ಟ್ವಿಟರ್‌ ಲೋಗೋವಾಗಿ ಬಳಸಲಾಗಿದೆ.

ಈ ಕುರಿತು ಟ್ವೀಟ್ ಮಾಡಿದ್ದ ಮಸ್ಕ್‌, ಹೊಸ ಲೋಗೋಗೆ ಸಂಬಂಧಿಸಿದಂತೆ ಫೋಟೋ ಒಂದನ್ನು ಶೇರ್​ ಮಾಡಿಕೊಂಡಿದ್ದರು. ನಾಯಿ ತನ್ನ ಕಾರಿನಲ್ಲಿ ಚಲಾಯಿಸುತ್ತಿರುವಾಗ ಪೊಲೀಸರು ಐಡಿ ಕಾರ್ಡ್‌ ಪರಿಶೀಲಿಸುತ್ತಾರೆ. ಆ ಫೋಟೋದಲ್ಲಿ ನೀಲಿ ಹಕ್ಕಿಯ ಚಿತ್ರವಿದೆ. ಆಗ ನಾಯಿ, “ಇದು ನನ್ನ ಹಳೆಯ ಫೋಟೋ” ಎನ್ನುತ್ತದೆ.

ಎಲಾನ್​ ಮಸ್ಕ್​ ಅವರು ಕೆಲ ತಿಂಗಳ ಹಿಂದೆ, ‘ಟ್ವಿಟರ್​ ಸಿಇಒ ಬದಲಾಗಿದ್ದಾರೆ’ ಎಂದು ಹೇಳಿ, ನಾಯಿ ಸಿಇಒ ಸೀಟ್​ನಲ್ಲಿ ಕುಳಿತುಕೊಂಡಿರುವಂತೆ ಫೋಟೋ ಶೇರ್ ಮಾಡಿದ್ದರು. ಇದೀಗ ನಾಯಿಯ ಫೋಟೋವನ್ನೆ ಲೋಗೋ ಆಗಿ ಬದಲಾಯಿಸಿದ್ದಾರೆ.

ಕಳೆದ ವರ್ಷದ ಭರವಸೆ ಈಡೇರಿಸಿದ ಮಸ್ಕ್‌

2022ರ ಮಾರ್ಚ್‌ನಲ್ಲಿನ ಟ್ವೀಟ್ ಸ್ಕ್ರೀನ್‌ಶಾಟ್‌ವೊಂದನ್ನು ಎಲಾನ್‌ ಮಸ್ಕ್‌ ಹಂಚಿಕೊಂಡಿದ್ದಾರೆ. ಅದರಲ್ಲಿ ಬಳಕೆದಾರರೊಬ್ಬರು, ಪಕ್ಷಿ ಲೋಗೋವನ್ನು ‘ನಾಯಿ’ ಚಿತ್ರಕ್ಕೆ ಬದಲಾಯಿಸಲು ಕೇಳಿದ್ದರು. ‘ಖಂಡಿತ’ ಎಂದು ಮಸ್ಕ್‌ ಭರವಸೆ ನೀಡಿದ್ದರು. ಅಂತೆಯೇ ಇದೀಗ ವೆಬ್ ಆವೃತ್ತಿಯಲ್ಲಿ ಮಾತ್ರ ಬದಲಾವಣೆ ಮಾಡಿದ್ದಾರೆ.

ಮಸ್ಕ್‌ ಅವಾಂತರ ಒಂದೇ ಎರಡೇ!

ಟ್ವಿಟರ್‌ ಲೋಗೋ ಬದಲಾವಣೆಯ ಮೂಲಕ ಮಸ್ಕ್‌ ಈಗ ಸುದ್ದಿಯಾಗಿರಬಹುದು. ಆದರೆ, ಅವರು ತಮ್ಮ ನಿರ್ಧಾರಗಳ ಮೂಲಕ ಸದಾ ಒಂದಿಲ್ಲೊಂದು ವಿವಾದಕ್ಕೀಡಾಗುತ್ತಾ ಬಂದಿದ್ದಾರೆ.

ಇತ್ತೀಚೆಗೆ ಟ್ವಿಟರ್​ನಲ್ಲಿ ಬ್ಲೂಟಿಕ್​ಗೆ ಶುಲ್ಕ ವಿಧಿಸುವ ‘ಫೀಚರ್’​ ಪರಿಚಯಿಸುವ ಮೂಲಕ ಬಹಳಷ್ಟು ಚರ್ಚೆಗೆ ಒಳಗಾಗಿದ್ದರು. ಇಷ್ಟೇ ಅಲ್ಲದೆ, ತಮ್ಮ ಉದ್ಯೋಗಿಗಳಿಗೆ ‘ಮನೆಯಲ್ಲಿಯೇ ಇರಿ’ ಎಂದು ಸಂದೇಶ ಕಳುಹಿಸುವ ಮೂಲಕ ಉದ್ಯೋಗ ಕಡಿತಗೊಳಸಿದ್ದರು.

ಟ್ವಿಟರ್‌ನ ಸಿಇಒ ಖುರ್ಚಿಯ ಮೇಲೆ ಕುಳಿತಿರುವ ಮಸ್ಕ್‌ ತಮ್ಮ ಸ್ಥಾನಕ್ಕಾಗಿ ಮತ್ತೊಬ್ಬರನ್ನು ಹುಡುಕುತ್ತಿದ್ದೇನೆ ಎಂದಿದ್ದರು. ಏಪ್ರಿಲ್‌ ತಿಂಗಳಲ್ಲಿ ಬರೀ ವೆಬ್‌ ಆವೃತ್ತಿಗೆ ಮಾತ್ರ ಲೋಗೋ ಬದಲಾವಣೆಯಾಗಿದ್ದು, ಇದು ‘ಏಪ್ರಿಲ್ ಫೂಲ್‌’ ಸಹ ಇರಬಹುದು ಎಂದು ಹೇಳಲಾಗುತ್ತಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆನಡಾದಲ್ಲಿ ಇನ್ನು ಮುಂದೆ ಪ್ರತಿ ಸಿಗರೇಟಿನ ಮೇಲೂ ಹಾನಿ ಎಚ್ಚರಿಕೆ ಸಂದೇಶ

ಕೆನಡಾ ದೇಶವು 2035 ರ ವೇಳೆಗೆ ರಾಷ್ಟ್ರ ವ್ಯಾಪಿ ತಂಬಾಕು ಸೇವನೆ...

ಮರಳಿ ವಿಶ್ವದ ನಂ.1 ಶ್ರೀಮಂತ ಪಟ್ಟಕ್ಕೇರಿದ ಎಲಾನ್ ಮಸ್ಕ್; ಮತ್ತೆ ಕುಸಿತ ಕಂಡ ಅಂಬಾನಿ, ಅದಾನಿ

ಟೆಸ್ಲಾ, ಸ್ಪೇಸ್ ಎಕ್ಸ್ ಸಿಇಒ ಹಾಗೂ ಟ್ವಟರ್ ಮುಖ್ಯಸ್ಥ ಎಲಾನ್ ಮಸ್ಕ್...

ತೆಲಂಗಾಣ | ಸರ್ಕಾರಿ ಉದ್ಯೋಗ ಪರೀಕ್ಷೆಯಲ್ಲಿ ಚಾಟ್‌ಜಿಪಿಟಿ ಬಳಸಿ ವಂಚನೆ

ಕೃತಕ ಬುದ್ಧಿಮತ್ತೆ ಚಾಟ್‌ಜಿಪಿಟಿ ಬಳಸಿ ಬ್ಲೂಟೂತ್ ಮೂಲಕ ಉತ್ತರ ರವಾನೆ ಪ್ರತಿಯೊಬ್ಬ ಅಭ್ಯರ್ಥಿಗಳಿಂದ...

ನವ್‌ಐಸಿ ಉಪಗ್ರಹ | ಪ್ರಾದೇಶಿಕ ನೇವಿಗೇಶನ್ ವ್ಯವಸ್ಥೆ ಪ್ರಬಲಗೊಳಿಸಿದ ಇಸ್ರೋ

ನವ್ಐಸಿ ಉಪಗ್ರಹ ಸಂಕೇತಗಳು 90 ಡಿಗ್ರಿ ಕೋನದಲ್ಲಿ ಬರುವ ಕಾರಣ ನಿಬಿಡ...