ಸಿಂಗಾಪುರದ ಬಳಿಕ ಹಾಂಗ್ ಕಾಂಗ್‌ನಲ್ಲಿ ಎಂಡಿಹೆಚ್, ಎವರೆಸ್ಟ್ ಮಸಾಲೆ ಮಾರಾಟ ನಿಷೇಧ

Date:

ಸಿಂಗಾಪುರದ ಬಳಿಕ ಈಗ ಹಾಂಗ್ ಕಾಂಗ್ ಜನಪ್ರಿಯ ಭಾರತೀಯ ಮಸಾಲೆ ಬ್ರಾಂಡ್‌ಗಳಾದ ಎಂಡಿಹೆಚ್ ಪ್ರೈವೇಟ್‌ನ ಮಸಾಲೆಗಳು ಮತ್ತು ಎವರೆಸ್ಟ್ ಫುಡ್ ಪ್ರಾಡಕ್ಟ್ಸ್ ಪ್ರೈವೇಟ್‌ನ ಎವರೆಸ್ಟ್ ಮಸಾಲೆ ನಿಷೇಧಿಸಿದೆ. ಹಲವಾರು ಮಸಾಲೆ ಮಿಶ್ರಣಗಳಲ್ಲಿ ಕಾರ್ಸಿನೋಜೆನಿಕ್ ಕೀಟನಾಶಕ ಎಥಿಲೀನ್ ಆಕ್ಸೈಡ್ ಕಂಡು ಬಂದಿದೆ ಎಂಬ ಆರೋಪದ ಬಳಿಕ ನಿಷೇಧ ಹೇರಲಾಗಿದೆ.

ಹಾಂಗ್ ಕಾಂಗ್‌ ಸರ್ಕಾರದ ಆಹಾರ ಸುರಕ್ಷತೆ ಕೇಂದ್ರವು ಏಪ್ರಿಲ್ 5ರಂದು ಪರೀಕ್ಷೆ ನಡೆಸಿದಾಗ ಎಚ್‌ಡಿಹೆಚ್ ಗ್ರೂಪ್‌ನ ಮದ್ರಾಸ್ ಕರಿ ಪೌಡರ್, ಸಾಂಬಾರ್ ಮಸಾಲಾ ಪೌಡರ್ ಮತ್ತು ಕರಿ ಪೌಡರ್‌ ಎಂಬ ಮೂರು ಮಸಾಲೆ ಮಿಶ್ರಣಗಳಲ್ಲಿ ಎಥಿಲೀನ್ ಆಕ್ಸೈಡ್ ಇರುವುದು ತಿಳಿದು ಬಂದಿದೆ ಎಂದು ಘೋಷಿಸಿದೆ.

“ಸಿಎಫ್‌ಎಸ್‌ ತನ್ನ ದಿನನಿತ್ಯದ ಆಹಾರ ಪರೀಕ್ಷೆ ಕಾರ್ಯಕ್ರಮದ ಅಡಿಯಲ್ಲಿ ತ್ಸಿ ಶಾ ತ್ಸುಯ್‌ನಲ್ಲಿರುವ ಮೂರು ಚಿಲ್ಲರೆ ಮಳಿಗೆಗಳಿಂದ ಈ ಮಸಾಲೆಯನ್ನು ಪರೀಕ್ಷೆಗಾಗಿ ಸಂಗ್ರಹಿಸಿದೆ. ಪರೀಕ್ಷೆಯ ಬಳಿಕ ಈ ಮಸಾಲೆಗಳಲ್ಲಿ ಕೀಟನಾಶಕ, ಎಥಿಲೀನ್ ಆಕ್ಸೈಡ್ ಇರುವುದು ಬಹಿರಂಗವಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ?  ಗೋಬಿ, ಪಾನಿಪುರಿ, ಕಬಾಬ್‌ ಸೇರಿ ಎಲ್ಲ ಖಾದ್ಯಗಳಲ್ಲಿ ಕೃತಕ ಬಣ್ಣ ನಿಷೇಧ: ಸಚಿವ ಗುಂಡೂರಾವ್

ಇನ್ನು “ಈ ಬಗ್ಗೆ ಸಿಎಫ್‌ಎಸ್ ಸಂಬಂಧಿಸಿದ ಮಾರಾಟಗಾರರಿಗೆ ಮಾಹಿತಿ ನೀಡಿದೆ. ಅಕ್ರಮಗಳು ಮತ್ತು ಮಾರಾಟವನ್ನು ನಿಲ್ಲಿಸಲು, ಈ ಉತ್ಪನ್ನಗಳನ್ನು ನಿಷೇಧಿಸಲು ಸೂಚಿಸಲಾಗಿದೆ” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು, ಎವರೆಸ್ಟ್ ಗ್ರೂಪ್‌ನ ಫಿಶ್ ಕರಿ ಮಸಾಲಾದಲ್ಲಿ ಕೀಟನಾಶಕ ಇರುವುದು ಕಂಡುಬಂದಿದೆ ಎಂದು ವರದಿಯಾಗಿದೆ. ಇಂಟರ್‌ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್‌ ಗ್ರೂಪ್‌ ನಡೆಸಿದ ಪರೀಕ್ಷೆಯಲ್ಲಿ ಗ್ರೂಪ್ 1 ಕಾರ್ಸಿನೋಜೆನ್ ಎಂದು ವರ್ಗೀಕರಿಸಲಾದ ಎಥಿಲೀನ್ ಆಕ್ಸೈಡ್ ಈ ಮಸಾಲೆಯಲ್ಲಿ ಕಂಡು ಬಂದಿದೆ. ಇದರಿಂದಾಗಿ ಸ್ತನ ಕ್ಯಾನ್ಸರ್‌ನ ಅಪಾಯವಿದೆ ಮತ್ತು ಗಂಭೀರ ಆರೋಗ್ಯ ಸಮಸ್ಯೆಯ ಅಪಾಯವಿದೆ ಎಂದು ಪರೀಕ್ಷೆಯಲ್ಲಿ ತಿಳಿದು ಬಂದಿರುವುದಾಗಿ ವರದಿಯಾಗಿದೆ.

ಇದನ್ನು ಓದಿದ್ದೀರಾ?  ಬಾಬಾ ರಾಮ್‌ದೇವ್‌ ಮಾಲೀಕತ್ವದ ಪತಂಜಲಿಯ ಜಾಹೀರಾತಿಗೆ ನಿಷೇಧ ಹೇರಿದ ಸುಪ್ರೀಂ ಕೋರ್ಟ್

ಈ ಪರೀಕ್ಷೆ ನಿಟ್ಟಿನಲ್ಲಿ ಹಾಂಗ್ ಕಾಂಗ್ ಮತ್ತು ಸಿಂಗಾಪುರ ಎರಡೂ ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಸಿಂಗಾಪುರವೂ ಎವರೆಸ್ಟ್‌ನ ಉತ್ಪನ್ನಗಳನ್ನು ನಿಷೇಧಿಸಿದೆ.

ಇನ್ನು ಭಾರತೀಯ ಮಸಾಲೆ ಬ್ರಾಂಡ್ ವಿದೇಶದಲ್ಲಿ ನಿಷೇಧಕ್ಕೆ ಒಳಗಾಗುತ್ತಿರುವುದು ಇದೇ ಮೊದಲೇನಲ್ಲ. 2023 ರಲ್ಲಿ, ಯುಎಸ್‌ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಎವರೆಸ್ಟ್ ಆಹಾರ ಉತ್ಪನ್ನಗಳನ್ನು ನಿ‍ಷೇಧಿಸಿದೆ.Singapore

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಫಿಕೋ ಮೇಲೆ ಭೀಕರ ಗುಂಡಿನ ದಾಳಿ: ಪರಿಸ್ಥಿತಿ ಚಿಂತಾಜನಕ

ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಫಿಕೋ ಮೇಲೆ ಭೀಕರ ಗುಂಡಿನ ದಾಳಿ ನಡೆದಿದ್ದು,...

ಲಂಡನ್‌ನಲ್ಲಿ ಭಾರತೀಯ ಮೂಲದ ಮಹಿಳೆಯ ಹತ್ಯೆ

ಲಂಡನ್‌ನ ಬರ್ಂಟ್ ಓಕ್‌ನಲ್ಲಿ 66 ವರ್ಷದ ಭಾರತೀಯ ಮೂಲದ ಬ್ರಿಟಿಷ್ ಪ್ರಜೆಯನ್ನು 22...

ಭಾರತ ಮತ್ತು ಇರಾನ್ ನಡುವೆ ಬಂದರು ಒಪ್ಪಂದ; ಭಾರತದ ಪಾಲಿಗೆ ದೊಡ್ಡ ವ್ಯವಹಾರ

ಭಾರತದ ತೈಲ ವ್ಯಾಪಾರದಲ್ಲಿ ಯಾವುದೇ ಅಡೆತಡೆ ಉಂಟಾದರೆ, ಅದು ತೈಲದ ಖರೀದಿ...