ಟೆಸ್ಲಾ ಕಾರಣ; ಭಾರತ ಭೇಟಿ ಮುಂದೂಡಿದ ಎಲಾನ್ ಮಸ್ಕ್!

Date:

ಟೆಸ್ಲಾ ಸಿಇಒ, ವಿಶ್ವದ ಮೂರನೇ ಅತೀ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರು ತಮ್ಮ ಎರಡು ದಿನಗಳ ಭಾರತ ಭೇಟಿಯನ್ನು ಮುಂದೂಡಿದ್ದಾರೆ. ಮಸ್ಕ್ ಏಪ್ರಿಲ್ 21 ಮತ್ತು 22 ರಂದು ಭಾರತಕ್ಕೆ ಭೇಟಿ ನೀಡಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಬೇಕಿತ್ತು. ಜೊತೆಗೆ ಭಾರತದ ಮಾರುಕಟ್ಟೆಗೆ ಟೆಸ್ಲಾ ಪ್ರವೇಶದ ಬಗ್ಗೆ ಘೋಷಿಸುವ ನಿರೀಕ್ಷೆಯಿತ್ತು.

ತನ್ನ ಎಕ್ಸ್‌ ಪೋಸ್ಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಎಲಾನ್ ಮಸ್ಕ್, ಭಾರತಕ್ಕೆ ತನ್ನ ಭೇಟಿಯನ್ನು “ಟೆಸ್ಲಾದಲ್ಲಿ ಭಾರೀ ಒತ್ತಡದ ಕೆಲಸದ ಕಾರಣ” ವಿಳಂಬಗೊಳಿಸಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.

“ದುರದೃಷ್ಟವಶಾತ್, ಟೆಸ್ಲಾದಲ್ಲಿ ಭಾರೀ ಒತ್ತಡದ ಕೆಲಸದ ಕಾರಣ ಭಾರತಕ್ಕೆ ಭೇಟಿ ನೀಡುವುದು ವಿಳಂಬವಾಗುತ್ತದೆ. ಆದರೆ ಈ ವರ್ಷದಲ್ಲೇ ಭಾರತಕ್ಕೆ ಭೇಟಿ ನೀಡಲು ನಾನು ಕಾಯುತ್ತಿದ್ದೇನೆ” ಎಂದು ಸ್ಪೇಸ್‌ಎಕ್ಸ್‌ ಸಿಇಒ ಕೂಡಾ ಆದ ಎಲಾನ್ ಮಸ್ಕ್ ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ?  2024ರಲ್ಲಿ 40 ಬಿಲಿಯನ್ ಡಾಲರ್ ಕಳೆದುಕೊಂಡ ಎಲಾನ್ ಮಸ್ಕ್; ಬಿಲಿಯನೇರ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ!

ಇನ್ನು ಟೆಸ್ಲಾದ ಮೊದಲ ತ್ರೈಮಾಸಿಕ ವರದಿಯ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸಲು ಎಲಾನ್ ಮಸ್ಕ್ ಅವರು ಏಪ್ರಿಲ್ 23 ರಂದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಾನ್ಫರೆನ್ಸ್‌ಗೆ ಹಾಜರಾಗಬೇಕು ಎಂದು ವರದಿಯಾಗಿದೆ.

ಈ ತಿಂಗಳಲ್ಲೇ ಎಕ್ಸ್‌ ಮಾಲೀಕ ಎಲಾನ್ ಮಸ್ಕ್ ಮತ್ತು​ ಪ್ರಧಾನಿ ನರೇಂದ್ರ ಮೋದಿ ಭೇಟಿ ನಿಗದಿಯಾಗಿದ್ದು ಕಳೆದ ವಾರವಷ್ಟೇ ಟೆಸ್ಲಾ ಸಂಸ್ಥಾಪಕ ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದರು. ಆದರೆ ಈಗ ಟೆಸ್ಲಾದ ತ್ರೈಮಾಸಿಕ ವರದಿಯ ಕಾರಣ ನೀಡಿ ಈ ಭೇಟಿ ಮುಂದೂಡಲಾಗಿದೆ. ಅದು ಕೂಡಾ ಒಂದು ಸಂಸ್ಥೆಯ ಮುಖ್ಯಸ್ಥರಾಗಿರುವವರ ದಿನಚರಿ ಮೂರು ತಿಂಗಳ ಮುನ್ನವೇ ನಿಗದಿಯಾಗಿರುತ್ತದೆ. ಹಾಗಿರುವಾಗ ಈ ಭಾರತ ಭೇಟಿ ಮುಂದೂಡಿಕೆ ಅಸಹಜ ಎಂಬ ಮಾತು ಕೂಡ ಕೇಳಿಬರುತ್ತಿದೆ.

ಇದನ್ನು ಓದಿದ್ದೀರಾ?  ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸ್ಥಾನ ನೀಡದಿರುವುದು ಅವಿವೇಕತನ: ಎಲಾನ್ ಮಸ್ಕ್

ಇನ್ನು ಈ ಭೇಟಿಯ ಮೂಲ ಉದ್ದೇಶ ಭಾರತದಲ್ಲಿ ಟೆಸ್ಲಾ ಇವಿ ಘಟಕ ಸ್ಥಾಪನೆಯ ಬಗ್ಗೆ ಚರ್ಚೆಯಾಗಿತ್ತು. ಜೊತೆಗೆ ತಮ್ಮ ಸಾಟಲೈಟ್​​ ಇಂಟರ್​ನೆಟ್​ ಸೇವೆ ಸ್ಟಾರ್​ಲಿಂಕ್​ ಪ್ರವೇಶದ ಕುರಿಯೂ ಚರ್ಚಿಸಲಿದ್ದಾರೆ ಎಂದು ಹೇಳಲಾಗಿತ್ತು. ಇನ್ನು ಪ್ರಧಾನಿ ಮಾತ್ರವಲ್ಲದೆ ಮಸ್ಕ್​ ಭಾರತೀಯ ಬಾಹ್ಯಾಕಾಶ ಕಂಪನಿಗಳ ಪ್ರತಿನಿಧಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದರು.

 

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಫಿಕೋ ಮೇಲೆ ಭೀಕರ ಗುಂಡಿನ ದಾಳಿ: ಪರಿಸ್ಥಿತಿ ಚಿಂತಾಜನಕ

ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಫಿಕೋ ಮೇಲೆ ಭೀಕರ ಗುಂಡಿನ ದಾಳಿ ನಡೆದಿದ್ದು,...

ಲಂಡನ್‌ನಲ್ಲಿ ಭಾರತೀಯ ಮೂಲದ ಮಹಿಳೆಯ ಹತ್ಯೆ

ಲಂಡನ್‌ನ ಬರ್ಂಟ್ ಓಕ್‌ನಲ್ಲಿ 66 ವರ್ಷದ ಭಾರತೀಯ ಮೂಲದ ಬ್ರಿಟಿಷ್ ಪ್ರಜೆಯನ್ನು 22...

ಭಾರತ ಮತ್ತು ಇರಾನ್ ನಡುವೆ ಬಂದರು ಒಪ್ಪಂದ; ಭಾರತದ ಪಾಲಿಗೆ ದೊಡ್ಡ ವ್ಯವಹಾರ

ಭಾರತದ ತೈಲ ವ್ಯಾಪಾರದಲ್ಲಿ ಯಾವುದೇ ಅಡೆತಡೆ ಉಂಟಾದರೆ, ಅದು ತೈಲದ ಖರೀದಿ...