ವಾಟ್ಸ್‌ಆ್ಯಪ್‌ನಿಂದ ಹೊಸ ವಿಡಿಯೋ ನೋಟ್ಸ್ ಫೀಚರ್: ಹೇಗೆ ಬಳಸಬೇಕು?

Date:

ವಾಟ್ಸ್‌ಆ್ಯಪ್ ತನ್ನ ಕೋಟ್ಯಂತರ ಬಳಕೆದಾರರಿಗಾಗಿ ಆಂಡ್ರಾಯ್ಡ್ ಮತ್ತು ಐಒಎಸ್ ವೇದಿಕೆಗಳಲ್ಲಿ ಹೊಸ ವಿಡಿಯೋ ನೋಟ್ಸ್ ವೈಶಿಷ್ಟ್ಯವನ್ನು ಜಾಗತಿಕವಾಗಿ ಬಿಡುಗಡೆ ಮಾಡಿದೆ. ಈ ಹೊಸ ವೈಶಿಷ್ಟ್ಯವು ವಾಯ್ಸ್ ನೋಟ್ಸ್‌ಗೆ ಸಮಾನವಾಗಿದ್ದು, ಚಾಟ್‌ನಲ್ಲಿ 60 ಸೆಕೆಂಡುಗಳ ಒಳಗಿನ ಸಣ್ಣ ವಿಡಿಯೋ ಸಂದೇಶಗಳನ್ನು ಕಳುಹಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಈ ವೈಶಿಷ್ಟ್ಯದ ಮೂಲಕ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಶುಭಾಶಯಗಳು, ಭಾವನೆಗಳು ಮತ್ತು ವಿಶೇಷ ಕ್ಷಣಗಳನ್ನು ವಿಡಿಯೋ ರೂಪದಲ್ಲಿ ಸುಲಭವಾಗಿ ಹಂಚಿಕೊಳ್ಳಬಹುದು.

- Advertisement -

ಈ ವೈಶಿಷ್ಟ್ಯವು ವಿಶೇಷ ಸಂದರ್ಭಗಳಲ್ಲಿ, ವೈಯಕ್ತಿಕ ಶುಭಾಶಯ ಸಂದೇಶಗಳನ್ನು ರೆಕಾರ್ಡ್ ಮಾಡಿ ಕಳುಹಿಸಲು ಅತ್ಯಂತ ಉಪಯುಕ್ತವಾಗಿದೆ. ವಾಯ್ಸ್ ನೋಟ್ಸ್‌ನಂತೆಯೇ ಈ ವಿಡಿಯೋ ನೋಟ್ಸ್ ವೈಶಿಷ್ಟ್ಯವು ಬಳಕೆದಾರರಿಗೆ ಸರಳ ಮತ್ತು ಸುಲಭವಾಗಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರು ಈ ವೈಶಿಷ್ಟ್ಯವನ್ನು ಹೇಗೆ ಬಳಸಬಹುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಆಂಡ್ರಾಯ್ಡ್‌ನಲ್ಲಿ ವಿಡಿಯೋ ನೋಟ್ಸ್ ಕಳುಹಿಸುವ ವಿಧಾನ

ವಾಟ್ಸ್‌ಆ್ಯಪ್ ಆಪ್‌ನ ಇತ್ತೀಚಿನ ಆವೃತ್ತಿಗೆ ನವೀಕರಿಸಿ.
ಆಪ್ ತೆರೆದು, ನೀವು ವಿಡಿಯೋ ನೋಟ್ ಕಳುಹಿಸಲು ಬಯಸುವ ವ್ಯಕ್ತಿಯ ಚಾಟ್ ವಿಂಡೋವನ್ನು ತೆರೆಯಿರಿ.
ಚಾಟ್ ವಿಂಡೋದ ಕೆಳಭಾಗದಲ್ಲಿರುವ ಕ್ಯಾಮೆರಾ ಐಕಾನ್‌ ಅನ್ನು ಒತ್ತಿ ಹಿಡಿದುಕೊಳ್ಳಿ.
ಮೊದಲಿಗೆ ಮುಂಭಾಗದ ಕ್ಯಾಮೆರಾ ಸಕ್ರಿಯವಾಗುತ್ತದೆ. ಹಿಂಭಾಗದ ಕ್ಯಾಮೆರಾಕ್ಕೆ ಬದಲಾಯಿಸಲು ಫ್ಲಿಪ್ ಐಕಾನ್‌ ಮೇಲೆ ಟ್ಯಾಪ್ ಮಾಡಿ.
60 ಸೆಕೆಂಡುಗಳವರೆಗೆ ವಿಡಿಯೋ ರೆಕಾರ್ಡ್ ಮಾಡಿ.
ರೆಕಾರ್ಡಿಂಗ್ ಮುಗಿದ ನಂತರ, ಒತ್ತಿರುವ ಬೆರಳನ್ನು ಮಾಡಿ.
ಕಳುಹಿಸು ಬಟನ್ ಮೇಲೆ ಟ್ಯಾಪ್ ಮಾಡಿ ವಿಡಿಯೋ ನೋಟ್‌ನ್ನು ಹಂಚಿಕೊಳ್ಳಿ.

ಇದನ್ನು ಓದಿದ್ದೀರಾ? ಕೈ ಚೀಲದಲ್ಲಿ ಮಲ್ಲಿಗೆ ಹೂ: ಆಸ್ಟ್ರೇಲಿಯಾದಲ್ಲಿ ನಟಿ ನವ್ಯಾ ನಾಯರ್‌ಗೆ 1.14 ಲಕ್ಷ ರೂ. ದಂಡ

ಐಒಎಸ್‌ನಲ್ಲಿ ವಿಡಿಯೋ ನೋಟ್ಸ್ ಕಳುಹಿಸುವ ವಿಧಾನ

ವಾಟ್ಸ್‌ಆ್ಯಪ್ ಆಪ್‌ನ ಇತ್ತೀಚಿನ ಆವೃತ್ತಿಯನ್ನು ಡೌನ್‌ಲೋಡ್ ಮಾಡಿ ಅಥವಾ ನವೀಕರಿಸಿ.
ಆಪ್ ತೆರೆದು, ವಿಡಿಯೋ ನೋಟ್ ಕಳುಹಿಸಲು ಬಯಸುವ ವ್ಯಕ್ತಿಯ ಚಾಟ್ ವಿಂಡೋವನ್ನು ತೆರೆಯಿರಿ.
ಕ್ಯಾಮೆರಾ ಐಕಾನ್‌ ಮೇಲೆ ಟ್ಯಾಪ್ ಮಾಡಿ.
ರೆಕಾರ್ಡಿಂಗ್ ಆರಂಭಿಸಲು ಕ್ಯಾಮೆರಾ ಐಕಾನ್‌ ಅನ್ನು ಒತ್ತಿ ಹಿಡಿಯಿರಿ.
ಹ್ಯಾಂಡ್ಸ್-ಫ್ರೀ ರೆಕಾರ್ಡಿಂಗ್‌ಗಾಗಿ ಬೆರಳನ್ನು ಮೇಲಕ್ಕೆ ಸ್ಲೈಡ್ ಮಾಡಿ ಲಾಕ್ ಮಾಡಿ.
ವಿಡಿಯೋ ನೋಟ್ ರೆಕಾರ್ಡ್ ಮಾಡಿ (ಗರಿಷ್ಠ 60 ಸೆಕೆಂಡುಗಳು).
ಬೆರಳನ್ನು ಬಿಡುತ್ತಿದ್ದಂತೆ ರೆಕಾರ್ಡಿಂಗ್ ನಿಲ್ಲುತ್ತದೆ. ಕಳುಹಿಸು ಬಟನ್ ಮೇಲೆ ಟ್ಯಾಪ್ ಮಾಡಿ ವಿಡಿಯೋವನ್ನು ಕಳುಹಿಸಿ.

ಈ ಹೊಸ ವೈಶಿಷ್ಟ್ಯವು ವಾಟ್ಸ್‌ಆ್ಯಪ್ ಬಳಕೆದಾರರಿಗೆ ತಮ್ಮ ಸಂದೇಶಗಳನ್ನು ಹೆಚ್ಚು ವೈಯಕ್ತಿಕ ಮತ್ತು ಆಕರ್ಷಕವಾಗಿ ವ್ಯಕ್ತಪಡಿಸಲು ಸಹಾಯ ಮಾಡುತ್ತದೆ. ಇದು ವಿಶೇಷ ಸಂದರ್ಭಗಳಲ್ಲಿ ಅಥವಾ ದೈನಂದಿನ ಸಂವಹನದಲ್ಲಿ ಭಾವನಾತ್ಮಕ ಸಂದೇಶಗಳನ್ನು ಹಂಚಿಕೊಳ್ಳಲು ಉತ್ತಮ ಮಾರ್ಗವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು...

ಸೂಚನೆಯಿಲ್ಲದೆ ಆಸ್ಟ್ರೇಲಿಯಾದ ಸರ್ಕಾರಿ ವೆಬ್‌ಸೈಟ್ ಹ್ಯಾಕ್ ಮಾಡಿದ ‘OpenAI’

ಆಸ್ಟ್ರೇಲಿಯಾದ ಸರ್ಕಾರಿ ಆರೋಗ್ಯ ಇಲಾಖೆಯ ವೆಬ್‌ಸೈಟ್‌ ಒಂದನ್ನು ಕೃತಕ ಬುದ್ಧಿಮತ್ತೆ (AI)...

10 ಸಾವಿರ ಸಂಸ್ಥೆಗಳ ಇ-ಮೇಲ್ ಹ್ಯಾಕ್: ಸೈಬರ್ ವಂಚಕರ ‘ಎಐ ಚಾಟ್‌ಬಾಟ್’ ಸ್ಥಗಿತಗೊಳಿಸಿದ ಮೈಕ್ರೋಸಾಫ್ಟ್

ವಿಶ್ವಾದ್ಯಂತ 10,000ಕ್ಕೂ ಹೆಚ್ಚು ಸಂಸ್ಥೆಗಳಿಗೆ ಸೇರಿದ 12,000ಕ್ಕೂ ಅಧಿಕ ಇ-ಮೇಲ್ ಖಾತೆಗಳನ್ನು...

ಬಾಹ್ಯಾಕಾಶದಲ್ಲಿ ಆಯುಧಗಳನ್ನು ಇರಿಸಿದ್ದನ್ನು ಒಪ್ಪಿಕೊಂಡ ಅಮೆರಿಕ

ಉಪಗ್ರಹವನ್ನು ಸ್ಫೋಟಿಸದಿದ್ದರೂ ಬಾಹ್ಯಾಕಾಶದಲ್ಲಿ ಜಾಮರ್‌ಗಳು ಸಹ ಅತ್ಯಂತ ಮಾರಕವಾಗಿ ಪರಿಣಮಿಸಬಹುದು. ಇಂದಿನ...