ಅಪೌಷ್ಟಿಕತೆ ವಿರುದ್ಧದ ಹೋರಾಟದಲ್ಲಿ ದೊಡ್ಡ ಹೆಜ್ಜೆ: ಯುನಿಸೆಫ್ ಚೈಲ್ಡ್ ನ್ಯೂಟ್ರಿಷನ್ ಫಂಡ್ ವರದಿ ಬಿಡುಗಡೆ

Date:

ಜಾಗತಿಕ ಮಟ್ಟದಲ್ಲಿ ಮಕ್ಕಳು ಮತ್ತು ಮಹಿಳೆಯರ ಅಪೌಷ್ಟಿಕತೆ ಹಾಗೂ ಆರೋಗ್ಯ ಬಿಕ್ಕಟ್ಟು ತಡೆಗಟ್ಟಲು ಎಲ್ಲರೂ ಒಟ್ಟಾಗಿ ಹೂಡಿಕೆ ಮಾಡಿದಾಗ ಎಂತಹ ಅದ್ಭುತ ಬದಲಾವಣೆ ಸಾಧ್ಯ ಎಂಬುದನ್ನು ಯುನಿಸೆಫ್‌ (UNICEF) ನೇತೃತ್ವದ ‘ಚೈಲ್ಡ್ ನ್ಯೂಟ್ರಿಷನ್ ಫಂಡ್ (Child Nutrition Fund) 2025’ ವಾರ್ಷಿಕ ವರದಿ ಜಗತ್ತಿಗೆ ತೋರಿಸಿಕೊಟ್ಟಿದೆ.

- Advertisement -

ವಿವಿಧ ದೇಶಗಳ ಸರ್ಕಾರಗಳು, ಅಂತಾರಾಷ್ಟ್ರೀಯ ದಾನಿಗಳು, ಖಾಸಗಿ ಸಂಸ್ಥೆಗಳು ಮತ್ತು ರಕ್ಷಣೆ ನೀಡುವ ಏಜೆನ್ಸಿಗಳು ಸೇರಿ ಜಂಟಿಯಾಗಿ ರೂಪಿಸಿದ ಈ ಆರ್ಥಿಕ ಮಾದರಿಯು ಜಾಗತಿಕವಾಗಿ ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿರುವ ಲಕ್ಷಾಂತರ ಮಕ್ಕಳಿಗೆ ಸಕಾಲದಲ್ಲಿ ಪೌಷ್ಟಿಕಾಂಶ ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿತ್ತನೆ ಗುರಿ ಅರ್ಧದಷ್ಟೂ ಮುಟ್ಟದ ಕೃಷಿ ಚಟುವಟಿಕೆ; ಜೋಳದ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟದಿಂದ ಕಂಗೆಟ್ಟ ಅನ್ನದಾತರಿಗೆ ಹಿಂಗಾರು ಹಂಗಾಮಿನಲ್ಲಾದರೂ ಮಳೆ ಆಸರೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ರೈತರ ಆ ನಿರೀಕ್ಷೆಯೂ ಹುಸಿಯಾಗಿದೆ. ಮುಂಗಾರಿನ ಬೆನ್ನಲ್ಲೇ ಹಿಂಗಾರು ಹಂಗಾಮಿನಲ್ಲೂ ಮಳೆ ಕೈಕೊಟ್ಟಿರುವುದರಿಂದ...

ಧಾರವಾಡದ ‘ಲಲಿತಕಲಾ ಅಕಾಡೆಮಿ’ಗೆ ದುಸ್ಥಿತಿ: ಕಲಾವಿದರಿಂದಲೇ ದೂರವಾದ ಪ್ರಾದೇಶಿಕ...

ಕಲಾವಿದರ ಬಹುದಿನಗಳ ಬೇಡಿಕೆಯಂತೆ ಸ್ಥಾಪನೆಯಾದ ಕೇಂದ್ರಕ್ಕೆ ಮೂರೇ ವರ್ಷಗಳಲ್ಲಿ ದುಸ್ಥಿತಿ; ಸಂಚಾಲಕರ ಏಕಪಕ್ಷೀಯ ಧೋರಣೆ, ಕಲಾವಿದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಹಾಗೂ ಕಲಾ ಚಟುವಟಿಕೆಗಳ ಕೊರತೆಯ ವಿರುದ್ಧ ಹಿರಿಯ ಕಲಾವಿದರ ಆಕ್ರೋಶ. ಸಲಹಾ ಸಮಿತಿ...

ಗದಗ | ವರದಕ್ಷಿಣೆ ಮುಟ್ಟದ, ಒಗ್ಗಟ್ಟು ಬಿಡದ ತುಂಬು...

ಆಧುನಿಕತೆ ಬೆಳೆದಂತೆಲ್ಲ ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ ವಿಭಕ್ತ ಕುಟುಂಬಗಳ ಸಂಖ್ಯೆಗಳು ಹೆಚ್ಚಾಗುತ್ತಿವೆ. ನಾವು ನಮ್ಮವರು ಎನ್ನುವ ಭಾವನೆಗಳು ಮರೆಯಾಗುತ್ತಿರುವ ಹೊತ್ತಿನಲ್ಲಿ ನಂಬಿಕೆ, ವಿಶ್ವಾಸ, ಪ್ರೀತಿಯ ತಳಗಹದಿಯ ಮೇಲೆ ಇಂದಿಗೂ ಜಾಲವಾಡಗಿ ಅವಿಭಕ್ತ...

ಇದನ್ನೂ ಓದಿ: ವಿಜಯಪುರ | ಜಂತುಹುಳು ಬಾಧೆಯಿಂದ ಅಪೌಷ್ಟಿಕತೆ, ರಕ್ತಹೀನತೆ ಅಪಾಯ: ಡಾ. ಸಂಪತ್ ಗುಣಾರಿ

ಯುನಿಸೆಫ್‌ನ ‘ಚೈಲ್ಡ್ ನ್ಯೂಟ್ರಿಷನ್ ಫಂಡ್’ (CNF) ಎನ್ನುವುದು ಕೇವಲ ಧನಸಹಾಯ ನೀಡುವುದಕ್ಕೆ ಸೀಮಿತವಾಗಿರದೆ, ದೇಶಗಳ ಸರ್ಕಾರಗಳು ಮಾಡುವ ಪ್ರತಿಯೊಂದು ರೂಪಾಯಿಯ/ಡಾಲರ್‌ನ ಪೌಷ್ಟಿಕಾಂಶ ಹೂಡಿಕೆಗೆ ಎದುರಾಗಿ (Matching Grant) ಹೆಚ್ಚುವರಿ ಅನುದಾನವನ್ನು ಒದಗಿಸುವ ಮಾದರಿಯಾಗಿದೆ. ಇದರಿಂದ ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ದೇಶದ ಮಕ್ಕಳ ಅಪೌಷ್ಟಿಕತೆ ತಡೆಯಲು ಹೆಚ್ಚಿನ ಹಣ ಮೀಸಲಿಡಲು ಉತ್ತೇಜನ ಸಿಕ್ಕಿದೆ ಎಂದು ವರದಿಯು ಹೇಳಿದೆ.

ಈ ವರದಿಯ ಪ್ರಕಾರ, ಅಪೌಷ್ಟಿಕತೆಯನ್ನು ಶಿಶು ಜನಿಸಿದ ನಂತರ ತಡೆಯುವುದಕ್ಕಿಂತ, ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಆರಂಭದಲ್ಲೇ ಪೌಷ್ಟಿಕಾಂಶ ನೀಡುವುದು ಅತ್ಯಂತ ಪರಿಣಾಮಕಾರಿ. ಗರ್ಭಿಣಿಯರಲ್ಲಿ ಕಂಡುಬರುವ ತೀವ್ರ ರಕ್ತಹೀನತೆ (Anemia) ತಡೆಯಲು ಮಲ್ಟಿಪಲ್ ಮೈಕ್ರೋನ್ಯೂಟ್ರಿಯೆಂಟ್ ಸಪ್ಲಿಮೆಂಟ್ಸ್ (MMS) ವಿತರಣೆಯನ್ನು ಹೆಚ್ಚಿಸಲಾಗಿದೆ. ಇದರಿಂದಾಗಿ ಹುಟ್ಟುವ ಮಕ್ಕಳ ತೂಕ ಕಡಿಮೆಯಾಗುವುದು ಮತ್ತು ತಾಯಂದಿರ ಗರ್ಭಾವಸ್ಥೆಯ ತೊಡಕುಗಳು ಗಣನೀಯವಾಗಿ ಕಡಿಮೆಯಾಗಿವೆ.

ಯುನಿಸೆಫ್ ವರದಿ ಪ್ರಕಾರ ಪ್ರಪಂಚದಾದ್ಯಂತ ಯುದ್ಧ ಪೀಡಿತ, ಹವಾಮಾನ ವೈಪರೀತ್ಯ ಹಾಗೂ ಬಡತನದಿಂದ ಬಳಲುತ್ತಿರುವ ಪ್ರದೇಶಗಳಲ್ಲಿ ‘ರೆಡಿ-ಟು-ಯೂಸ್ ಥೆರಪಿಟಿಕ್ ಫುಡ್’ (RUTF) ನಂತಹ ತುರ್ತು ಜೀವ ರಕ್ಷಕ ಪೌಷ್ಟಿಕ ಆಹಾರಗಳನ್ನು ತಲುಪಿಸಲಾಗಿದೆ. ಆಸ್ಪತ್ರೆ ಹಂತಕ್ಕೆ ಹೋಗುವ ಮುನ್ನವೇ ಸಮುದಾಯ ಮಟ್ಟದಲ್ಲಿ ಮಗುವಿಗೆ ಚಿಕಿತ್ಸೆ ನೀಡಿ ಪ್ರಾಣ ಉಳಿಸುವ ಕಾರ್ಯಕ್ರಮಗಳು ಯಶಸ್ವಿಯಾಗಿವೆ.

ವರದಿಯಲ್ಲಿ ಯುನಿಸೆಫ್ ಕೇವಲ ಯಶಸ್ಸನ್ನು ಮಾತ್ರವಲ್ಲದೆ ಮುಂಬರುವ ಅಪಾಯಗಳನ್ನೂ ಎತ್ತಿಹಿಡಿದಿದೆ. ಜಗತ್ತಿನಲ್ಲಿ ಒಂದೆಡೆ ತೀವ್ರ ಅಪೌಷ್ಟಿಕತೆಯಿದ್ದರೆ, ಮತ್ತೊಂದೆಡೆ ಮಕ್ಕಳು ಮತ್ತು ಹದಿಹರೆಯದವರಲ್ಲಿ ಅನಾರೋಗ್ಯಕರ ಸಂಸ್ಕರಿಸಿದ ಆಹಾರಗಳ (Ultra-processed foods) ಬಳಕೆಯಿಂದ ‘ಬೊಜ್ಜು’ (Overweight & Obesity) ಹೆಚ್ಚಾಗುತ್ತಿರುವುದನ್ನು ವರದಿ ಕಳವಳಕಾರಿಯಾಗಿ ಉಲ್ಲೇಖಿಸಿದೆ. ಸಣ್ಣ ವಯಸ್ಸಿನ ಮಕ್ಕಳಿಗೆ ಪೋಷಕಾಂಶಯುಕ್ತ ನೈಸರ್ಗಿಕ ಆಹಾರ ಸುಲಭವಾಗಿ ಸಿಗುವಂತೆ ‘ಆಹಾರ ಪರಿಸರ’ವನ್ನು ಸುಧಾರಿಸಬೇಕು ಎಂದು ರಾಷ್ಟ್ರಗಳಿಗೆ ಯುನಿಸೆಫ್ ಕರೆ ನೀಡಿದೆ.

ಯಾವ ಮಗುವೂ ಅಪೌಷ್ಟಿಕತೆಯಿಂದ ಬಳಲಬಾರದು ಎನ್ನುವುದು ಜಾಗತಿಕ ಹೊಣೆಗಾರಿಕೆ. ನಾವು ಸಂಪನ್ಮೂಲಗಳನ್ನು ಒಂದೆಡೆ ಸೇರಿಸಿ ಯೋಜನೆ ಜಾರಿಗೊಳಿಸಿದರೆ, ಕೇವಲ ಬದುಕುಳಿಯುವಿಕೆಯಷ್ಟೇ ಅಲ್ಲದೆ, ಪ್ರತಿಯೊಂದು ಮಗುವಿನ ಭವಿಷ್ಯವನ್ನೂ ಬದಲಾಯಿಸಬಹುದು ಎಂಬುದನ್ನು 2025ರ ಈ ವರದಿ ವಿವರಿಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿತ್ತನೆ ಗುರಿ ಅರ್ಧದಷ್ಟೂ ಮುಟ್ಟದ ಕೃಷಿ ಚಟುವಟಿಕೆ; ಜೋಳದ ಬೆಲೆ 20,000 ಗಡಿ ದಾಟುವ ಆತಂಕ

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟದಿಂದ ಕಂಗೆಟ್ಟ ಅನ್ನದಾತರಿಗೆ ಹಿಂಗಾರು ಹಂಗಾಮಿನಲ್ಲಾದರೂ...

ಧಾರವಾಡದ ‘ಲಲಿತಕಲಾ ಅಕಾಡೆಮಿ’ಗೆ ದುಸ್ಥಿತಿ: ಕಲಾವಿದರಿಂದಲೇ ದೂರವಾದ ಪ್ರಾದೇಶಿಕ ಕೇಂದ್ರ!

ಕಲಾವಿದರ ಬಹುದಿನಗಳ ಬೇಡಿಕೆಯಂತೆ ಸ್ಥಾಪನೆಯಾದ ಕೇಂದ್ರಕ್ಕೆ ಮೂರೇ ವರ್ಷಗಳಲ್ಲಿ ದುಸ್ಥಿತಿ; ಸಂಚಾಲಕರ...

ಗದಗ | ವರದಕ್ಷಿಣೆ ಮುಟ್ಟದ, ಒಗ್ಗಟ್ಟು ಬಿಡದ ತುಂಬು ಸಂಸಾರ ʻಜಾಲವಾಡಗಿʼ

ಆಧುನಿಕತೆ ಬೆಳೆದಂತೆಲ್ಲ ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ ವಿಭಕ್ತ ಕುಟುಂಬಗಳ ಸಂಖ್ಯೆಗಳು...

ಈ ದಿನ ಸಂಪಾದಕೀಯ | ನರಾಧಮ ಇಸ್ರೇಲಿನ ನೀಚ ಕೃತ್ಯಗಳು ಮತ್ತು ಮೋದಿ ಮೌನಕ್ಕೆ ಕೊನೆಯೇ ಇಲ್ಲವೇ?

ಇಸ್ರೇಲ್- ಪ್ಯಾಲೆಸ್ತೀನ್ ಸಂಘರ್ಷ ಕುರಿತ ಭಾರತದ ನಿಲುವು ಅತ್ಯಂತ ನಿರಾಶಾಜನಕ. ಮೋದಿ...