‘ಹೇರ್‌ ಸ್ಟೈಲ್’ ಕಾರಣಕ್ಕೆ ಶಾಲೆಯಲ್ಲಿ ಕಪ್ಪು ವರ್ಣೀಯ ವಿದ್ಯಾರ್ಥಿಗೆ ಶಿಕ್ಷೆ; ಶಾಲೆಯ ನಡೆ ಎತ್ತಿಹಿಡಿದ ಕೋರ್ಟ್‌

Date:

ತನ್ನ ಕೂದಲು ವಿನ್ಯಾಸದ ಕಾರಣಕ್ಕಾಗಿ ಕಪ್ಪು ವರ್ಣೀಯ ವಿದ್ಯಾರ್ಥಿಗೆ ಹೈಸ್ಕೂಲ್‌ನಲ್ಲಿ ಶಿಕ್ಷಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ತನ್ನನ್ನು ಶಿಕ್ಷಿಸಿದ ಶಾಲೆಯ ವಿರುದ್ಧ 18 ವರ್ಷದ ವಿದ್ಯಾರ್ಥಿ ಡ್ಯಾರಿಲ್ ಜಾರ್ಜ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ನ್ಯಾಯಾಲಯವು ಆತನ ವಿರುದ್ಧ ಶಾಲೆಯು ತೆಗೆದುಕೊಂಡ ಶಿಸ್ತು ಕ್ರಮವನ್ನು ಎತ್ತಿಹಿಡಿದಿದೆ.

- Advertisement -

ಜಾರ್ಜ್‌ ತನ್ನ ಕೂದಲನ್ನು ಹಗ್ಗದ ರೀತಿಯಲ್ಲಿ ಎಳೆಗಳಾಗಿ ಎಣೆದುಕೊಂಡು, ಅದಕ್ಕೆ ಪಿನ್ ಮಾಡಿಕೊಂಡಿದ್ದರು. ಆತನ ಕೂದಲಿನ ಶೈಲಿಯು ಶಾಲೆಯ ಡ್ರೆಸ್‌ ಕೋಡ್‌ಅನ್ನು ಉಲ್ಲಂಘಿಸುತ್ತದೆ ಎಂದು ಆತನ ವಿರುದ್ಧ ಬಾರ್ಬರ್ಸ್ ಹಿಲ್ ಹೈಸ್ಕೂಲ್‌ ಕ್ರಮ ಕೈಗೊಂಡಿತ್ತು. ಆತನನ್ನು ಆಗಸ್ಟ್‌ನಿಂದಲೂ ಆತನ ಸಹಪಾಠಿಗಳಿಂದ ಬೇರ್ಪಡಿಸಿ, ಕೂರಿಸಲಾಗುತ್ತಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

“ಆತನ ಕೂದಲು ಟಿ-ಶರ್ಟ್‌ ಕಾಲರ್‌, ಕಣ್ಣು ಹುಬ್ಬು ಹಾಗೂ ಕಿವಿಯೋಲೆಗಳ ಕೆಳಭಾಗದವರೆಗೆ ಉದ್ದವಾಗಿತ್ತು. ಆತನ ಕೂದಲಿನ ಶೈಲಿಯು ವಸ್ತ್ರ ಸಂಹಿತೆಗೆ ವಿರುದ್ಧವಾಗಿದೆ” ಎಂದು ಶಾಲೆಯು ಹೇಳಿದೆ.

ಆತನ ಪರವಾಗಿ ವಾದ ಮಂಡಿಸಿದ ವಕೀಲರು, “ವಿದ್ಯಾರ್ಥಿಯ ಕೇಶವಿನ್ಯಾಸವು ಟೆಕ್ಸಾಸ್ ಕ್ರೌನ್ ಆಕ್ಟ್ ಎಂಬ ಕಾನೂನಿನಿಂದ ರಕ್ಷಣೆ ಪಡೆಯುತ್ತದೆ. ವಿದ್ಯಾರ್ಥಿಯ ಜನಾಂಗದ ಸಾಮಾನ್ಯವಾಗಿ ಅಥವಾ ಐತಿಹಾಸಿಕ ಕೇಶವಿನ್ಯಾಸವು ಇದೇ ರೀತಿ ಇರುತ್ತದೆ. ಹೀಗಾಗಿ, ಶಾಲೆಯಲ್ಲಿ ಆತ ಕೂದಲಿನ ವಿನ್ಯಾಸದ ವಿರುದ್ಧ ತಾರತಮ್ಯ ಮಾಡಬಾರದು” ಎಂದು ವಾದಿಸಿದ್ದರು. ಆದರೆ, ಶಾಲೆಯು ತಾರತಮ್ಯದ ಆರೋಪವನ್ನು ನಿರಾಕರಿಸಿತ್ತು.

ಈ ಸುದ್ದಿ ಓದಿದ್ದೀರಾ?: ರೈತರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ: ಪ್ರಧಾನಿ ಮೋದಿ

ವಾದವನ್ನು ಆಲಿಸಿದ ನ್ಯಾಯಾಲಯ, “ಬಾರ್ಬರ್ಸ್‌ ಹಿಲ್ ಶಾಲೆಯ ನಿಮಯಗಳು ಟೆಕ್ಸಾಸ್ ಕ್ರೌನ್ ಆಕ್ಟ್‌ಅನ್ನು ಉಲ್ಲಂಘಿಸುವುದಿಲ್ಲ” ಎಂದು ಹೇಳಿದೆ. ಶಾಲೆಯ ಶಿಸ್ತು ಕ್ರಮವನ್ನು ಎತ್ತಿಹಿಡಿದಿದೆ.

ಪ್ರಕರಣದ ಬಗ್ಗೆ ಮಾತನಾಡಿದ ವಿದ್ಯಾರ್ಥಿ ಜಾರ್ಜ್‌, “ಎಲ್ಲವೂ ನನ್ನ ಕೂದಲಿನಿಂದಾಗಿ? ಕೂದಲಿನ ಕಾರಣಕ್ಕಾಗಿ ನಾನು ಶಿಕ್ಷಣ ಪಡೆಯಲು ಸಾಧ್ಯವಿಲ್ಲವೇ? ನಾನು ಇತರ ಗೆಳೆಯರೊಂದಿಗೆ ಸೇರಲು ಮತ್ತು ವಿದ್ಯಾರ್ಥಿ ಜೀವನವನ್ನು ಆನಂದಿಸಲು ಸಾಧ್ಯವಿಲ್ಲವೇ. ಇದಕ್ಕೆಲ್ಲ ನನ್ನ ಕೂದಲು ಕಾರಣವೇ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕ ಹಿಂದಿಕ್ಕಿ ಭಾರತದ ನಂ.1 LNG ಪೂರೈಕೆದಾರನಾದ ಓಮನ್‌!

ಪಶ್ಚಿಮ ಏಷ್ಯಾದ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಅನಿಲ ಪೂರೈಕೆಯಲ್ಲಿ...

ರಷ್ಯಾದಿಂದ ತೈಲ ಖರೀದಿಸಿದ ಅಮೆರಿಕ -ಜಾಗತಿಕ ಸೋಜಿಗ

ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿ,...

ಲಡಾಖ್ ಭಾರತದ ಅವಿಭಾಜ್ಯ ಅಂಗ, ಚೀನಾ ನಿರಾಕರಿಸಿದರೂ‌ ಇದೇ ಸತ್ಯ; ಡ್ರ್ಯಾಗನ್‌ಗೆ ಭಾರತ ತಿರುಗೇಟು!

ಲಡಾಖ್ ಕೇಂದ್ರಾಡಳಿತ ಪ್ರದೇಶದ 28 ಪ್ರಮುಖ ಹಾಗೂ ಕಾರ್ಯತಂತ್ರದ (Strategic) ಸ್ಥಳಗಳಿಗೆ...