ಲೇಬರ್ ಪಕ್ಷದಲ್ಲಿ ಭುಗಿಲೆದ್ದ ಭಿನ್ನಮತ: ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಕೀರ್ ಸ್ಟಾರ್ಮರ್ ರಾಜೀನಾಮೆ

Date:

ಲೇಬರ್ ಪಕ್ಷದಲ್ಲಿ ತಲೆದೋರಿದ ತೀವ್ರ ಆಂತರಿಕ ಭಿನ್ನಮತದ ನಡುವೆಯೇ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ್ದಾರೆ. ಅವರ ನಿರ್ಗಮನದೊಂದಿಗೆ ಡೌನಿಂಗ್ ಸ್ಟ್ರೀಟ್‌ನಲ್ಲಿ (ಪ್ರಧಾನಿ ಕಾರ್ಯಾಲಯ) ಮತ್ತೊಂದು ಅಲ್ಪಾವಧಿಯ ಆಡಳಿತ ಅಂತ್ಯಗೊಂಡಂತಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಬ್ರಿಟನ್‌ನಲ್ಲಿ ಕಂಡುಬರುತ್ತಿರುವ ಕ್ಷಿಪ್ರ ರಾಜಕೀಯ ಪಲ್ಲಟಗಳ ಸರಪಳಿಗೆ ಇದು ಹೊಸ ಸೇರ್ಪಡೆಯಾಗಿದೆ.

- Advertisement -

10, ಡೌನಿಂಗ್ ಸ್ಟ್ರೀಟ್‌ನ ಹೊರಗೆ ಮಾತನಾಡಿದ ಸ್ಟಾರ್ಮರ್, ತಮ್ಮ ನಿರ್ಧಾರದ ಕುರಿತು ಬ್ರಿಟನ್ ದೊರೆ ಮೂರನೇ ಚಾರ್ಲ್ಸ್ ಅವರಿಗೆ ಈಗಾಗಲೇ ಮಾಹಿತಿ ನೀಡಿದ್ದು, ಲೇಬರ್ ಪಕ್ಷದ ನೂತನ ನಾಯಕನ ಆಯ್ಕೆಯಾಗುವವರೆಗೆ ತಾವು ಪ್ರಧಾನಿಯಾಗಿ ಮುಂದುವರಿಯುವುದಾಗಿ ತಿಳಿಸಿದ್ದಾರೆ. ಆರಂಭದಲ್ಲಿ ಭಾರಿ ಜನಬೆಂಬಲ ಹೊಂದಿದ್ದ ಅವರ ಸರ್ಕಾರವು, ನಂತರದ ದಿನಗಳಲ್ಲಿ ಆರ್ಥಿಕತೆ, ಸಾರ್ವಜನಿಕ ಸೇವೆಗಳು ಮತ್ತು ಪಕ್ಷದ ಆಂತರಿಕ ಭಿನ್ನಮತದಂತಹ ಸವಾಲುಗಳನ್ನು ಎದುರಿಸಬೇಕಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

2024ರ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಕ್ಷಕ್ಕೆ ಭಾರಿ ಬಹುಮತ ತಂದುಕೊಡುವ ಮೂಲಕ, ಸತತ 14 ವರ್ಷಗಳ ಕನ್ಸರ್ವೇಟಿವ್ ಪಕ್ಷದ ಆಡಳಿತಕ್ಕೆ ತೆರೆ ಎಳೆದು ಬ್ರಿಟನ್‌ನ 58ನೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕೇವಲ ಎರಡು ವರ್ಷಗಳ ಬೆನ್ನಲ್ಲೇ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ರಾಜೀನಾಮೆ ನಿರ್ಧಾರ ಪ್ರಕಟಿಸಿದ ಸ್ಟಾರ್ಮರ್, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಲು ತಾವು ಸೂಕ್ತ ವ್ಯಕ್ತಿಯೇ ಎಂಬ ಪ್ರಶ್ನೆ ಲೇಬರ್ ಪಕ್ಷದ ಮುಂದಿತ್ತು ಎಂದರು. “ಆ ಪ್ರಶ್ನೆಗೆ ನನ್ನ ಪಕ್ಷ ನೀಡಿರುವ ಉತ್ತರವನ್ನು ನಾನು ಆಲಿಸಿದ್ದೇನೆ ಮತ್ತು ಅದನ್ನು ಅತ್ಯಂತ ಸೌಜನ್ಯದಿಂದ ಸ್ವೀಕರಿಸುತ್ತೇನೆ,” ಎಂದು ಅವರು ಹೇಳಿದರು. “ನಾನು ತೆಗೆದುಕೊಂಡ ಪ್ರತಿಯೊಂದು ನಿರ್ಧಾರವೂ ನಾನು ಪ್ರೀತಿಸುವ ದೇಶಕ್ಕೆ ಮೊದಲ ಆದ್ಯತೆ ನೀಡುವುದೇ ಆಗಿತ್ತು. ನಾನು ಲೇಬರ್ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ” ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: KPCC ಹುದ್ದೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್

ಸರಣಿ ರಾಜಕೀಯ ಹಿನ್ನಡೆಗಳು, ಕುಸಿಯುತ್ತಿರುವ ಸಾರ್ವಜನಿಕ ಬೆಂಬಲ ಮತ್ತು ನಾಯಕತ್ವ ಬದಲಾವಣೆಗಾಗಿ ಲೇಬರ್ ಪಕ್ಷದೊಳಗೇ ಹೆಚ್ಚುತ್ತಿದ್ದ ಒತ್ತಡಗಳಿಂದಾಗಿ ಕಳೆದ ಕೆಲವು ವಾರಗಳಿಂದ ಅವರ ಭವಿಷ್ಯದ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದವು. ಸೋಮವಾರ ಬೆಳಿಗ್ಗೆ ದೊರೆಯೊಂದಿಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದ ಅವರು, ನೂತನ ನಾಯಕನ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸುವಂತೆ ಲೇಬರ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಗೆ (NEC) ಸೂಚಿಸಿರುವುದಾಗಿ ಹೇಳಿದರು.
ವೇಳಾಪಟ್ಟಿಯ ಪ್ರಕಾರ, ನಾಯಕತ್ವದ ಸ್ಪರ್ಧೆಗಾಗಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಜುಲೈ 9 ರಂದು ಆರಂಭವಾಗಲಿದ್ದು, ಸಂಸತ್ತಿನ ಬೇಸಿಗೆಯ ರಜೆಗೂ ಮುನ್ನ ಪೂರ್ಣಗೊಳ್ಳಲಿದೆ. ಸೆಪ್ಟೆಂಬರ್‌ನಲ್ಲಿ ಸಂಸದರು ಹಿಂದಿರುಗುವ ವೇಳೆಗೆ ಲೇಬರ್ ಪಕ್ಷಕ್ಕೆ ನೂತನ ನಾಯಕನ ಆಯ್ಕೆಯಾಗಿರಲಿದೆ. ಅಲ್ಲಿಯವರೆಗೆ ತಾವು ಪ್ರಧಾನಿಯಾಗಿ ಮುಂದುವರಿಯುವುದಾಗಿ ಸ್ಟಾರ್ಮರ್ ತಿಳಿಸಿದ್ದಾರೆ.

ತಮ್ಮ ರಾಜೀನಾಮೆ ಭಾಷಣದ ಭಾವುಕ ಮುಕ್ತಾಯದಲ್ಲಿ, “ದೇಶದ ಅತಿದೊಡ್ಡ ಹುದ್ದೆ”ಯನ್ನು ತ್ಯಜಿಸಿದ ಬಳಿಕ ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಎದುರು ನೋಡುತ್ತಿರುವುದಾಗಿ ಸ್ಟಾರ್ಮರ್ ಹೇಳಿದರು. “ನನ್ನ ಬದುಕಿನ ಕಷ್ಟ-ಸುಖಗಳಲ್ಲಿ ಬೆನ್ನೆಲುಬಾಗಿ ನಿಂತಿರುವ ನನ್ನ ಅದ್ಭುತ ಪತ್ನಿ ವಿಕ್ (ವಿಕ್ಟೋರಿಯಾ) ಳಿಗೆ ಉತ್ತಮ ಪತಿಯಾಗಿರಲು ಬಯಸುತ್ತೇನೆ,” ಎಂದು ಹೇಳುವಾಗ ಅವರು ಭಾವುಕರಾದರು. “ನನ್ನ ಹೆಮ್ಮೆ ಮತ್ತು ಸಂತೋಷವಾಗಿರುವ ನನ್ನ ಮುದ್ದಾದ ಮಕ್ಕಳಿಗೆ ಅತ್ಯುತ್ತಮ ತಂದೆಯಾಗಲು ಇಚ್ಛಿಸುತ್ತೇನೆ” ಎಂದು ಅವರು ರುದ್ದ ದನಿಯಿಂದ ನುಡಿದರು. ಬಳಿಕ ಪತ್ನಿ ವಿಕ್ಟೋರಿಯಾ ಸ್ಟಾರ್ಮರ್ ಅವರನ್ನು ತಬ್ಬಿಕೊಂಡ ಅವರು, ಹೊರಗಡೆ ಸೇರಿದ್ದ ಬೆಂಬಲಿಗರು ಮತ್ತು ಸಿಬ್ಬಂದಿಯ ಕರತಾಡನದ ನಡುವೆ 10, ಡೌನಿಂಗ್ ಸ್ಟ್ರೀಟ್‌ನೊಳಗೆ ಮರಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ ಸಾಕೇ, ಇನ್ನಷ್ಟು ಬೇಕೇ?

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು....

ಕೇರಳದಲ್ಲಿ ಮತ್ತೆ ಭೂಕುಸಿತ; 9 ಮಂದಿ ಸಾವು, ಹಲವರು ನಾಪತ್ತೆ

ಕೇರಳ ರಾಜ್ಯದಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದಿಂದ...

ವಿಧಾನ ಮಂಡಲದಲ್ಲಿ ಕಸ್ತೂರಿರಂಗನ್ ವರದಿ ಕುರಿತು ಗಂಭೀರ ಚರ್ಚೆ; ಕಾಡಂಚಿನ ಜನರ ಹಿತ ಕಾಯಲು ಶಾಸಕರ ಒಕ್ಕೊರಲ ಆಗ್ರಹ

ಸದನದಲ್ಲಿ ಮಾತನಾಡಿದ ಈ ಎಲ್ಲಾ ನಾಯಕರು, ಕಸ್ತೂರಿರಂಗನ್ ವರದಿಯನ್ನು ಅರಣ್ಯದ ಸಮೀಪ...

ಜಾರ್ಖಂಡ್ ಸಿಎಂ ಸೊರೇನ್ ವಿರುದ್ಧ ಹೇಳಿಕೆ: ಮಾಜಿ ಸಚಿವ ಯೋಗೇಂದ್ರ ಸಾವ್‌ಗೆ ಕಾಂಗ್ರೆಸ್‌ ಶೋಕಾಸ್ ನೋಟಿಸ್

ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೆನ್ ವಿರುದ್ಧ ಮಾಜಿ ಸಚಿವ ಹಾಗೂ ಹಿರಿಯ...