ಟೆಸ್ಲಾ ಷೇರು ಜಿಗಿತ | ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್‌ ಆದಾಯ ದಾಖಲೆ ಮಟ್ಟಕ್ಕೆ ಏರಿಕೆ

Date:

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಜಯ ಗಳಿಸುತ್ತಿದ್ದಂತೆ ಟ್ರಂಪ್‌ನ ಆತ್ಮೀಯ ಎಲಾನ್‌ ಮಸ್ಕ್‌ ಖಜಾನೆ ಇನ್ನಷ್ಟು ತುಂಬುತ್ತಿದೆ. ಅಮೆರಿಕ ಚುನಾವಣೆ ಬಳಿಕ ವಾಲ್‌ಸ್ಟ್ರೀಟ್‌ನಲ್ಲಿ ಟೆಸ್ಲಾ ಷೇರು ಭಾರೀ ಜಿಗಿತ ಕಂಡಿದ್ದು, ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್‌ ಆದಾಯವು ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಡೊನಾಲ್ಡ್ ಟ್ರಂಪ್ ಚುನಾವಣಾ ಪ್ರಚಾರಕ್ಕಾಗಿ ಮಸ್ಕ್ ಸುಮಾರು 100 ಮಿಲಿಯನ್ ಡಾಲರ್ ದೇಣಿಗೆಯಾಗಿ ನೀಡಿದ್ದರು.

- Advertisement -

ಫೋರ್ಬ್ಸ್ ಪ್ರಕಾರ ಎಲಾನ್ ಮಸ್ಕ್ ಆದಾಯವು ಸುಮಾರು 321.7 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಅಮೆರಿಕದಲ್ಲಿ ಚುನಾವಣೆ ನಡೆದ ದಿನದಂದ ಟೆಸ್ಲಾ ಸ್ಟಾಕ್ ಸುಮಾರು ಶೇಕಡ 40ರಷ್ಟು ಏರಿಕೆಯಾಗಿದೆ. ವಾಲ್‌ಸ್ಟ್ರೀಟ್‌ನಲ್ಲಿ ವಾರದ ವಹಿವಾಟಿನ ಕೊನೆಯ ದಿನವಾದ ಶುಕ್ರವಾರವೇ ಸುಮಾರು ಶೇಕಡ 3.8ರಷ್ಟು ಜಿಗಿತ ಕಂಡು 352.56 ಡಾಲರ್‌ಗೆ ವಹಿವಾಟು ಸ್ಥಗಿತಗೊಳಿಸಿದೆ. ಈ ಮೂಲಕ ಟೆಸ್ಲಾ ಷೇರು ಮೂರು ವರ್ಷದ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಇದನ್ನು ಓದಿದ್ದೀರಾ? ಅಮೆರಿಕ ಚುನಾವಣೆ | ಟ್ರಂಪ್ ಗೆಲುವು; ಎಲಾನ್ ಮಸ್ಕ್‌ನ ಟೆಸ್ಲಾ ಷೇರು ಭಾರೀ ಏರಿಕೆ!

ಶುಕ್ರವಾರ ಮಸ್ಕ್ ಆದಾಯಕ್ಕೆ 7 ಬಿಲಿಯನ್ ಡಾಲರ್ ಆದಾರ ಸೇರ್ಪಡೆಯಾಗಿದೆ. ಈ ಹಿಂದೆ 2021ರ ನವೆಂಬರ್‌ನಲ್ಲಿ ಕೋವಿಡ್ ಸಂದರ್ಭದಲ್ಲಿ ಟೆಸ್ಲಾ ಷೇರು 320.3 ಬಿಲಿಯನ್ ಡಾಲರ್‌ಗೆ ತಲುಪಿತ್ತು. ಇದೀಗ ಟೆಸ್ಲಾ ಷೇರು ಮೌಲ್ಯ 352.56 ಡಾಲರ್‌ ಆಗಿದೆ.

ಟೆಸ್ಲಾ ಮಾತ್ರವಲ್ಲ ಎಐ (ಕೃತಕ ಬುದ್ಧಿಮತ್ತೆ) ಮತ್ತು ಏರೋಸ್ಪೇಸ್ ಕೂಡಾ ಎಲಾನ್ ಮಸ್ಕ್ ಆದಾಯಕ್ಕೆ ಕೊಡುಗೆ ನೀಡಿದೆ. ಎಐನಿಂದ 13 ಬಿಲಿಯನ್ ಡಾಲರ್ ಆದಾಯವನ್ನು ಮಸ್ಕ್ ಗಳಿಸಿದ್ದಾರೆ. ಸ್ಪೇಸ್‌ಎಕ್ಸ್‌ನಿಂದ 88 ಬಿಲಿಯನ್ ಡಾಲರ್ ಪಡೆದಿದ್ದಾರೆ.

ಟಾಪ್ 10ರಲ್ಲೂ ಇಲ್ಲ ಅದಾನಿ, ಅಂಬಾನಿ

ಹಿಂಡನ್‌ಬರ್ಗ್ ವರದಿ ಬಳಿಕ ಅದಾನಿ ಷೇರುಗಳು ಭಾರೀ ಇಳಿಕೆಯಾಗಿದೆ. ಇದರಿಂದಾಗಿ ಗೌತಮ್ ಅದಾನಿ ಆದಾಯ ಕುಗ್ಗಿದೆ. ಪೋರ್ಬ್ಸ್‌ನ ಪ್ರಕಾರ ಗೌತಮ್ ಅದಾನಿ ವಿಶ್ವದ 27ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇನ್ನು ಭಾರತದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಪೋರ್ಬ್ಸ್ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದ್ದಾರೆ. ಟಾಪ್ 10ರಲ್ಲಿ ಇಬ್ಬರೂ ಇಲ್ಲ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಮೆನ್ ರಾಷ್ಟ್ರಪತಿ ಭವನದ ಮೇಲೆ ಹೂತಿಗಳ ಕ್ಷಿಪಣಿ ದಾಳಿ: ಐವರ ಸಾವು

ಯಮೆನ್‌ನ ದಕ್ಷಿಣ ಭಾಗದ ಪ್ರಮುಖ ನಗರವಾದ ಅದನ್‌ನಲ್ಲಿರುವ ಅಲ್-ಮಾಶಿಕ್ ರಾಷ್ಟ್ರಪತಿ ಭವನದ...

ಭಾರತದ ಮೇಲೆ ಶೇ.100 ಸುಂಕ: 10 ದಿನಗಳಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅಂತಿಮ ತೀರ್ಮಾನ!

ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ ಶೇ. 100ರಷ್ಟು ಭಾರಿ ಆಮದು...

ರಾತ್ರಿ ವೇಳೆಯಲ್ಲೂ ರವಿ; ಸೂರ್ಯನ ಬೆಳಕು ಮಾರಾಟ ಮಾಡಲು ಅಮೆರಿಕ-ಭಾರತ ಸಹಭಾಗಿತ್ವ: ಏನಿದು ಯೋಜನೆ?

ವಿಜ್ಞಾನ ಕಲ್ಪನೆಗಳಿಗಿಂತಲೂ ಮಿಗಿಲಾದ ಅಪರೂಪದ ಯೋಜನೆಯೊಂದು ಈಗ ಜಾಗತಿಕ ಇಂಧನ ಕ್ಷೇತ್ರದಲ್ಲಿ...

ಸೌದಿ ಅರಾಮ್ಕೊ ಪ್ರಧಾನ ಕಚೇರಿ ಮೇಲೆ ದಾಳಿ: ಮತ್ತೆ ಪುಟಿದೆದ್ದರೇ ಹೂತಿ ಬಂಡುಕೋರರು?

ಯೆಮನ್‌ನ ಹೂತಿ ಬಂಡುಕೋರರು ಸೌದಿ ಅರೇಬಿಯಾದ ಧಹ್ರಾನ್‌ನಲ್ಲಿರುವ ತೈಲ ದೈತ್ಯ ಕಂಪನಿ...