ನಾಸಾದ ಬಹು ನಿರೀಕ್ಷಿತ ಅರ್ಟೆಮಿಸ್2 ಮಿಶನ್ ಚಂದ್ರನತ್ತ ಹಾರಿದೆ. ನಾಸಾದ ಈ ಬಾಹ್ಯಾಕಾಶ ಯೋಜನೆಯು ಚಂದ್ರನತ್ತ ಮಾನವರನ್ನು ಕಳುಹಿಸುವ, ಗಗನಯಾನಿಗಳನ್ನು ಮಂಗಳನತ್ತ ಕರೆದೊಯ್ಯುವ ಯೋಜನೆಯಾಗಿದೆ.
ಬುಧವಾರ ಅಮೆರಿಕದ ಫ್ಲೋರಿಡಾದಿಂದ ಜಿಗಿದಿರುವ ಅರ್ಟೆಮಿಸ್2 ನಾಲ್ವರು ಖಗೋಳ ವಿಜ್ಞಾನಿಗಳನ್ನು ಚಂದ್ರನ ಕಕ್ಷೆಗೆ ಕರೆದೊಯ್ಯಲಿದೆ. ಕಳೆದ 50 ವರ್ಷಗಳಲ್ಲಿ ಕಡಿಮೆ ಭೂ ಕಕ್ಷೆಯಿಂದ ಯಾನ ಕೈಗೊಂಡ ಮೊದಲ ಚಂದ್ರಯಾನ ಯೋಜನೆ ಇದಾಗಿದೆ.
ನಾಸಾದ ಕೇಪ್ ಕೆನವೆರಲ್‌ನ ಕೆನ್ನೆಡಿ ಸ್ಪೇಸ್ ಸೆಂಟರ್‌ನ 32 ಸ್ಟೋರಿ ರಾಕೆಟ್ ಉಡಾವಣೆಯಾಗುವುದನ್ನ ಸಹಸ್ರ ಸಂಖ್ಯೆಯ ಬಾಹ್ಯಾಕಾಶ ಪ್ರೇಮಿಗಳು ಕಣ್ತುಂಬಿಕೊಂಡರು.
ಅರ್ಟೆಮಿಸ್ 2 ತಂಡದ ಖಗೋಳಯಾನಿ ರೈಡ್ ವೈಸ್ಮೆನ್. ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್ ಹಾಗೂ ಕೆನಡದ ಸ್ಪೇಸ್ ಏಜೆನ್ಸಿಯ ಖಗೋಳಯಾನಿ ಜೆರ್ಮಿ ಹಾನ್ಸೆನ್ 10 ದಿನದ ಕಾಲ ಚಂದ್ರನ ಕಕ್ಷೆಯ ಸುತ್ತ ಸುತ್ತಲು ತಯಾರಾಗಿದ್ದಾರೆ. ಇವರು ದಶಕಗಳಲ್ಲಿ ಮಾನವರು ಪಯಣಿಸಿದ ಬಾಹ್ಯಾಕಾಶ ಪ್ರಯಾಣದ ದೂರಕ್ಕಿಂತ ಹೆಚ್ಚು ದೂರಕ್ಕೆ ತಲುಪಲಿದ್ದಾರೆ.
ʼಈ ಐತಿಹಾಸಿಕ ಯೋಜನೆಯಲ್ಲಿ ನೀವು ನಿಮ್ಮೊಂದಿಗೆ ಅರ್ಟೆಮಿಸ್2 ತಂಡದ ಹೃದಯವನ್ನು ಜೊತೆಗೊಯ್ಯಲಿದ್ದೀರಿ, ಅಮೆರಿಕನ್ನರ ದಿಟ್ಟ ಚೇತನವನ್ನು, ಜಗತ್ತಿನಾದಂತ್ಯವಿರುವ ನಮ್ಮ ಸಂಗಾತಿಗಳ ಸ್ಫೂರ್ತಿಯನ್ನು ಜೊತೆಗೆ ನವ ಪೀಳಿಗೆಯ ನಿರೀಕ್ಷೆ, ಕನಸುಗಳನ್ನು ಹೊತ್ತೊಯ್ಯುತ್ತಿರುವಿರಿ, ಗುಡ್ ಲಕ್ʼ ಎಂದು ಶುಭಕೋರಿ ಚಂದ್ರಯಾನ ಯೋಜನೆಯ ನಿರ್ದೇಶಕ ಚಾರ್ಲಿ ಬ್ಲಾಕ್ವೆಲ್ ತಮ್ಮ ತಂಡವನ್ನು ಬೀಳ್ಕೊಟ್ಟರು.
ಹೈಡ್ರೋಜನ್ ಸೋರಿಕೆಯ ಆತಂಕ: ಉಡಾವಣೆಯ ಸಮಯದಲ್ಲಿ ರಾಕೆಟ್‌ಗೆ ಹೈಡ್ರೋಜನ್ ಹಾಯಿಸುವ ಸಮಯದಲ್ಲಿ ಎಲ್ಲರಲ್ಲೂ ಆತಂಕ ಮನೆ ಮಾಡಿತ್ತು. ಈ ಹಿಂದಿನ ಮಿಶನ್ ಟೆಸ್ಟ್ ಸಂದರ್ಭದಲ್ಲಿ ಹೈಡ್ರೋಜನ್ ಸೋರಿಕೆಯಾಗಿ ವಿಳಂಬಕ್ಕೆ ಕಾರಣವಾಗಿತ್ತು.
ಉಡಾವಣೆಯ ಸಮಯ ಯಾವುದೇ ಲೋಪಗಳು ಕಾಣಿಸಿಕೊಂಡಿಲ್ಲ. ಹೈಡ್ರೋಜನ್ ಸೋರಿಕೆಯ ಆತಂಕವು ತಿಳಿಗೊಂಡು ನಾಸಾ ನಿರುಮ್ಮಳ ಸ್ಥಿತಿ ಕಂಡಿತು.




