ಪಾಕಿಸ್ತಾನ | ಪ್ರಯಾಣಿಕರಿದ್ದ ಬಸ್ ಮೇಲೆ ಬಾಂಬ್ ದಾಳಿ; ನಾಲ್ವರು ಸಾವು – ಹಲವರಿಗೆ ಗಾಯ

Date:

ಪಾಕಿಸ್ತಾನದಲ್ಲಿ ನಿಷೇಧಿಸಲ್ಪಟ್ಟಿರುವ ಪ್ರತ್ಯೇಕತಾವಾದಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಸಂಘಟನೆಯು ಪ್ರಯಾಣಿಕರಿದ್ದ ಬಸ್‌ ಮೇಲೆ ಬಾಂಬ್ ದಾಳಿಸಿರುವ ಘಟನೆ ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನಡೆದಿದೆ. ದಾಳಿಯಲ್ಲಿ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದು, 32 ಮಂದಿ ಗಾಯಗೊಂಡಿದ್ದಾರೆ.

- Advertisement -

ಕರಾಚಿಯಿಂದ ಟರ್ಬತ್‌ಗೆ ಹೋಗುವ ಬಸ್‌ನ ಬಳಿ ಸುಧಾರಿತ ಸ್ಫೋಟಕ ಸಾಧನ ಸ್ಫೋಟಗೊಂಡಾಗ ಟರ್ಬತ್ ನಗರದ ನ್ಯೂ ಬಹ್ಮನ್ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

4 ಮೃತದೇಹಗಳು ಮತ್ತು 32 ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಫೋಟದ ನಿಖರವಾದ ವಿವರಗಳನ್ನು ತನಿಖೆ ಮಾಡಲಾಗುತ್ತಿದೆ. ಆದರರೆ ಉನ್ನತ ಶ್ರೇಣಿಯ ಪೊಲೀಸ್ ಅಧಿಕಾರಿ ಎಸ್‌ಎಸ್‌ಪಿ ಜೊಹೈಬ್ ಮೊಹ್ಸಿನ್ ಅವರು ಕುಟುಂಬದೊಂದಿಗೆ ಬಸ್‌ನಲ್ಲಿದ್ದರು. ಇವರನ್ನು ಗುರಿ ಮಾಡಿ ಈ ದಾಳಿ ನಡೆದಿರಬಹುದೆಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿ ಮತ್ತು ಅವರ ಕುಟುಂಬವು ಮದುವೆ ಪಾರ್ಟಿಗಾಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಬಲೂಚಿಸ್ತಾನ್ ಪ್ರಾಂತ್ಯದ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಅವರು ದಾಳಿಯನ್ನು ಖಂಡಿಸಿದ್ದು, ಅಮಾಯಕರನ್ನು ಗುರಿ ಮಾಡುವವರನ್ನು ಮನುಷ್ಯರು ಎಂದು ಕರೆಯಲು ಅರ್ಹರಲ್ಲ ಎಂದಿದದಾರೆ.

ಬಲೂಚ್ ಲಿಬರೇಶನ್ ಆರ್ಮಿ ಎಂಬ ಪ್ರತ್ಯೇಕತಾವಾದಿ ಗುಂಪು ಸ್ಫೋಟದ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. ಬಲೂಚಿಸ್ತಾನ್ ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವಾಗಿದೆ. ಆದರೆ ಕಡಿಮೆ ಜನಸಂಖ್ಯೆ ಹೊಂದಿದೆ. ಇದು ದೇಶದಲ್ಲಿ ಬಲೂಚ್ ಅಲ್ಪಸಂಖ್ಯಾತ ಜನಾಂಗದ ಕೇಂದ್ರವಾಗಿದೆ. ಇವರ ಪಾಕ್ ಸರ್ಕಾರದಿಂದ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂದು ಬಲೂಚ್ ಲಿಬರೇಶನ್ ಆರ್ಮಿಯ ಆರೋಪವಾಗಿದೆ.

ಬಲೂಚಿಸ್ತಾನ್ ದೀರ್ಘಾವಧಿಯಿಂದ ದಂಗೆಯನ್ನು ಕಾಣುತ್ತಿದೆ. ಹಲವಾರು ಪ್ರತ್ಯೇಕತಾವಾದಿ ಗುಂಪುಗಳು ದಾಳಿಗಳನ್ನು ನಡೆಸುತ್ತಿವೆ. ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡಿವೆ. ಅಲ್ಲಿಂದಲೇ ಕಾರ್ಯನಿರ್ವಹಿಸುತ್ತಿರುವ ಇತರ ಉಗ್ರಗಾಮಿ ಗುಂಪುಗಳನ್ನೂ ಈ ಪ್ರಾಂತ್ಯ ಹೊಂದಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2026ರ ನೊಬೆಲ್ ಸಾಹಿತ್ಯ ಪ್ರಶಸ್ತಿ: ಕೆನಡಾದ ಖ್ಯಾತ ಕವಯಿತ್ರಿ ‘ಆನ್ ಕಾರ್ಸನ್’ ಮುಡಿಗೇರಿದ ಗರಿ

ಸಾಹಿತ್ಯ ಲೋಕದ ಅತ್ಯಂತ ಪ್ರತಿಷ್ಠಿತ ಗೌರವವಾದ 2026ನೇ ಸಾಲಿನ 'ನೊಬೆಲ್ ಸಾಹಿತ್ಯ...

ಅಮೆರಿಕದಲ್ಲಿ ಓದಿದರೂ ಭಾರತೀಯರಿಗೆ ಉದ್ಯೋಗ ಅಸಾಧ್ಯ; ಒಪಿಟಿ ಶುಲ್ಕ 60 ಲಕ್ಷ ರೂ. ಏರಿಸಲು ಟ್ರಂಪ್ ಸರ್ಕಾರ ಚಿಂತನೆ

ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಭಾರೀ...

‘8 ಯುದ್ಧಗಳನ್ನು ನಿಲ್ಲಿಸಿದ್ದೇನೆ, ನನಗೇ ನೊಬೆಲ್ ಕೊಡಿ’: ಟ್ರಂಪ್ ಮತ್ತೆ ಪಟ್ಟು

ನಾರ್ವೇಜಿಯನ್ ನೊಬೆಲ್ ಸಮಿತಿಯು ಈ ಸಾಲಿನ ಪ್ರತಿಷ್ಠಿತ ‘ನೊಬೆಲ್ ಶಾಂತಿ ಪ್ರಶಸ್ತಿ’ಯನ್ನು...

ಗಾಜಾ ನರಮೇಧ : ಪ್ಯಾಲೆಸ್ತೀನಿಯನ್ ಪಟ್ಟಣಗಳ ನಾಶವನ್ನು ತೋರಿಸುವ ಉಪಗ್ರಹಚಿತ್ರಗಳು

ಜೆರುಸಲೇಮ್: ಕಳೆದ ವರ್ಷ ಇಸ್ರೇಲ್–ಹಮಾಸ್ ಕದನ ವಿರಾಮ ಒಪ್ಪಂದ ಜಾರಿಯಾದ ಬಳಿಕವೂ...