‘ರಫಾ ದುರಂತ’ಕ್ಕೆ ಸಂತಾಪ ವ್ಯಕ್ತಪಡಿಸಿ ನಂತರ ಸ್ಟೇಟಸ್ ಡಿಲೀಟ್ ಮಾಡಿದ ರೋಹಿತ್ ಪತ್ನಿ

Date:

ಪ್ಯಾಲಿಸ್ಟೇನ್‌ನ ದಕ್ಷಿಣ ಗಾಜಾದ ರಫಾ ಪಟ್ಟಣದ ಮೇಲೆ ಇಸ್ರೇಲ್ ಸೇನೆ ಕಳೆದ ಭಾನುವಾರ ವಾಯುದಾಳಿ ನಡೆಸಿದ ಪರಿಣಾಮ 45 ಮಂದಿ ಅಮಾಯಕರು ಮೃತಪಟ್ಟಿದ್ದರು. ಈ ಘಟನೆಯ ನಂತರ ಅಂತಾರಾಷ್ಟ್ರೀಯ ನ್ಯಾಯಾಲಯ ರಫಾದ ಮೇಲೆ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಆದೇಶಿಸಿತ್ತು. ವಿಶ್ವದ ಹಲವು ರಾಷ್ಟ್ರಗಳು ಇಸ್ರೇಲ್‌ನ ಹೀನ ಕೃತ್ಯವನ್ನು ಖಂಡಿಸಿದ್ದವು.

ಈ ದುರಂತಕ್ಕೆ ವಿಶ್ವದಾದ್ಯಂತ ಲಕ್ಷಾಂತರ ಮಂದಿ ‘’ಆಲ್‌ ಐಯ್ಸ್‌ ಆನ್‌ ರಫಾ(ಎಲ್ಲರ ಕಣ್ಣು ರಫಾದ ಮೇಲೆ)’ ಅಡಿಬರಹ ನೀಡಿ ಸಂತಾಪ ಸೂಚಿಸಿದ್ದರು. ಬಹುತೇಕರು ತಮ್ಮ ಫೇಸ್‌ಬುಕ್‌, ವಾಟ್ಸಾಪ್‌ ಮುಂತಾದ ಖಾತೆಯಲ್ಲಿ ಸ್ಟೇಟಸ್‌ ಕೂಡ ಹಾಕಿಕೊಂಡಿದ್ದರು.

ಈ ನಡುವೆ ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಪತ್ನಿ ರಿತಿಕಾ ಸಜ್ದಾ ಕೂಡ ತಮ್ಮ ಇನ್‌ಸ್ಟಾ ಖಾತೆಯಲ್ಲಿ ‘ಆಲ್‌ ಐಯ್ಸ್‌ ಆನ್‌ ರಫಾ’ ಎಂಬ ಭಾವಚಿತ್ರವುಳ್ಳ ಅಡಿಬರಹವನ್ನು ಹಾಕಿಕೊಂಡಿದ್ದರು. ಆದರೆ ಕೆಲವು ಬಲಪಂಥೀಯ ಟ್ರೋಲರ್‌ಗಳು ರಿತಿಕಾ ಸ್ಟೇಟಸ್‌ಗೆ ವಿರೋಧ ವ್ಯಕ್ತಪಡಿಸಿದ ನಂತರ ತಮ್ಮ ಸ್ಟೇಟಸ್‌ಅನ್ನು ಅಳಿಸಿಹಾಕಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಿತಿಕಾ ರಫಾ ಸ್ಟೇಟಸ್‌ಅನ್ನು ಅಳಿಸಿಹಾಕಿದ ಕ್ರಮದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತವಾಗಿದೆ. ನೀವು ಈ ರೀತಿ ನಾಟಕವಾಡುವ ಬದಲು ಸ್ಟೇಟಸ್‌ಅನ್ನು ಹಾಕಿಕೊಳ್ಳದೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕೆಲವರು ಕುಟುಕಿದರೆ, ಇನ್ನೂ ಹಲವರು ಇಸ್ರೇಲ್‌ನಿಂದ ಹಲವು ದಶಕಗಳ ಕಾಲ ಪ್ಯಾಲಿಸ್ಟೀನ್‌ ಜನತೆ ಅನುಭವಿಸಿರುವ ಸಂಕಷ್ಟ ನಿಮಗೇನು ಗೊತ್ತು ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಪ್ಯಾಲಿಸ್ಟೀನ್‌ಗೆ ಅಧಿಕೃತ ದೇಶದ ಸ್ಥಾನಮಾನ ನೀಡಿದ ಐರ್ಲೆಂಡ್ 

ರಫಾ ಮೇಲೆ ನಡೆದ ದಾಳಿಗೆ ಸಂತಾಪ ವ್ಯಕ್ತಪಡಿಸಿ ಬಾಲಿವುಡ್‌ನ ಸೆಲಬ್ರಿಟಿಗಳಾದ ಕರೀನಾ ಕಪೂರ್, ಅಲಿಯಾ ಭಟ್, ವರುಣ್‌ ಧವನ್‌, ತೃಪ್ತಿ ದಿಮ್ರಿ, ಸಮಂತ ರುತು ಪ್ರಭು, ಸ್ವಾರಾ ಭಾಸ್ಕರ್, ದಿಯಾ ಮಿರ್ಜಾ ಸೇರಿದಂತೆ ಹಲವು ನಟನಟಿಯರು ಬೆಂಬಲ ವ್ಯಕ್ತಪಡಿಸಿದ್ದರು.

ಕಳೆದ ಭಾನುವಾರ (ಮೇ 26)ದಂದು ಪ್ಯಾಲಿಸ್ಟೀನ್‌ನ ರಫಾದ ಮೇಲೆ ಇಸ್ರೇಲ್‌ ಸೇನೆ ವಾಯು ದಾಳಿ ನಡೆಸಿದ ಪರಿಣಾಮ 45 ಮಂದಿ ಮೃತಪಟ್ಟು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ನವದೆಹಲಿಯಲ್ಲಿ ಇರಾನ್‌ ರಾಯಭಾರಿ ಕಚೇರಿ ಕೂಡ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ‘’ಆಲ್‌ ಐಯ್ಸ್‌ ಆನ್‌ ರಫಾ(ಎಲ್ಲರ ಕಣ್ಣು ರಫಾದ ಮೇಲೆ)”ಎಂಬ ಅಡಿಬರಹದೊಂದಿಗೆ ಇಸ್ರೇಲ್ ಕೃತ್ಯವನ್ನು ಖಂಡಿಸಿತ್ತು. ಇಸ್ರೇಲ್‌ನ ಮಾರಣಹೋಮದಿಂದ ರಫಾ ಹಾಗೂ ಗಾಜಾದಲ್ಲಿ ಸಾವಿರಾರು ಅಮಾಯಕರು ಮೃತಪಟ್ಟಿರುವುದಲ್ಲದೆ 15 ಲಕ್ಷ ಪ್ಯಾಲಿಸ್ಟೀನ್‌ ನಾಗರಿಕರು ವಸತಿ ಕಳೆದುಕೊಂಡು ನಿರಾಶ್ರಿತ ಶಿಬಿರದಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಅಡಿಬರಹದೊಂದಿಗೆ ವಿವರಿಸಲಾಗಿತ್ತು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೀರಿನ ಬಿಕ್ಕಟ್ಟು| ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ದೆಹಲಿ ಸಚಿವೆ ಅತಿಶಿ

ದೆಹಲಿಯಲ್ಲಿ ತೀವ್ರ ನೀರಿನ ಬಿಕ್ಕಟ್ಟು ಉಂಟಾಗಿದ್ದು, ದೆಹಲಿ ಸರ್ಕಾರದ ಸಚಿವೆ, ಎಎಪಿ...

ಉತ್ತರ ಪ್ರದೇಶ | ಚಪ್ಪಲಿ ಹಾರ ಹಾಕಿ ದಲಿತ ವೃದ್ಧನ ಮೆರವಣಿಗೆ; ಐವರ ಬಂಧನ

ಉತ್ತರ ಪ್ರದೇಶದ ಕೌಶಾಂಬಿಯ ಬಿರ್ನರ್ ಗ್ರಾಮದಲ್ಲಿ ಪ್ರಬಲ ಜಾತಿಯ ದುರುಳರು 62...

ಲೋಕಸಭೆ ಚುನಾವಣೆ ಹಿನ್ನಡೆಗೆ ಬಿಜೆಪಿ, ಎನ್‌ಸಿಪಿಯನ್ನು ದೂಷಿಸಿದ ಶಿಂದೆ ಬಣದ ನಾಯಕ

ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾಯುತಿ ಒಕ್ಕೂಟದಲ್ಲಿ ಆಂತರಿಕ ಕಲಹ ಆರಂಭವಾಗಿದ್ದು, ಲೋಕಸಭೆ ಚುನಾವಣೆ...

ಅಬಕಾರಿ ನೀತಿ ಪ್ರಕರಣ| ಅರವಿಂದ್ ಕೇಜ್ರಿವಾಲ್ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಡೆ

ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌...