ಬಾಲಕಿಯ ತಲೆಯನ್ನು ಡೆಸ್ಕ್‌ಗೆ ಒಡೆದು, ಬಾಲಕನ ಮುಖಕ್ಕೆ ಗುದ್ದಿದ ವಿಕೃತ ಶಿಕ್ಷಕಿ; ಆಕ್ರೋಶ

Date:

ವಿದ್ಯಾರ್ಥಿಗಳ ಮೇಲೆ ಶಿಕ್ಷಕರು ದೈಹಿಕ ಹಲ್ಲೆ ನಡೆಸುತ್ತಿರುವ ಆತಂಕಕಾರಿ ಪ್ರಕರಣಗಳು ಚೀನಾದಲ್ಲಿ ಹೆಚ್ಚಾಗುತ್ತಿವೆ ಎಂದು ವರದಿಗಳು ಹೇಳುತ್ತಿವೆ. ಇತ್ತೀಚೆಗೆ, ಅಂತಹದೊಂದು ಘಟನೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು ಇಬ್ಬರು ವಿದ್ಯಾರ್ಥಿಗಳ ಮೇಲೆ ಹಿಂಸಾತ್ಮಕ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಆಕೆಯನ್ನು ತನಿಖೆಗೆ ಒಳಪಡಿಸಲಾಗಿದೆ.

ಚೀನಾದ ಹುನಾನ್ ಪ್ರಾಂತ್ಯದ ಜಿನ್‌ಕ್ವಾನ್ ಪ್ರಾಥಮಿಕ ಶಾಲೆಯಲ್ಲಿ ಗಣಿತ ಶಿಕ್ಷಕಿ ಫೆಬ್ರವರಿ 28ರಂದು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯನ್ನು ಮತ್ತೋರ್ವ ಶಿಕ್ಷಕಿ ವಿಡಿಯೋ ಮಾಡಿದ್ದಾರೆ. ‘ಹೋಮ್ ವರ್ಕ್‌’ ವಿಚಾರಕ್ಕಾಗಿ ಹಲ್ಲೆ ಮಾಡಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಾಲಕಿಯೊಬ್ಬಳ ಮುಖವನ್ನು ಶಿಕ್ಷಕಿ ಹಿಸುಕಿ, ಆಕೆಯ ಕೂದಲನ್ನು ಹಿಂದಕ್ಕೆ ಎಳೆದು, ಆಕೆಯ ತಲೆಯನ್ನು ಮೇಜಿಗೆ ಬಡಿದಿದ್ದಾರೆ. ಅಲ್ಲದೆ, ಆಕೆಯ ತಡೆಯಲು ಶಿಕ್ಷಕಿಯ ಬಳಿಗೆ ಬಂದ ಬಾಲಕನ ಮುಖಕ್ಕೆ ಗುದ್ದಿದ್ದಾರೆ. ಪಠ್ಯಪುಸ್ತಕವನ್ನು ಆತನ ಮೇಲೆ ಎಸೆದಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

‘ನೀವು ಲೆಕ್ಕ ಮಾಡುತ್ತೀರಾ, ನೀವು ಲೆಕ್ಕ ಮಾಡುತ್ತೀರಾ’ ಎಂದು ಶಿಕ್ಷಕಿ ಕಿರುಚುವುದು ವಿಡಿಯೋದಲ್ಲಿ ಸೆರೆಯಾಗಿದೆ. ಶಿಕ್ಷಕಿ ತನ್ನ ಆಕ್ರಮಣವನ್ನು ಮುಂದುವರೆಸಿದಾಗ ಹುಡುಗಿ ಮೌನವಾಗಿ ತಲೆ ತಗ್ಗಿಸುವುದು ಕಂಡುಬಂದಿದೆ.

ಈ ಸುದ್ದಿ ಓದಿದ್ದೀರಾ?: 5,8 ಹಾಗೂ 9ನೇ ತರಗತಿಗಳ ಪಬ್ಲಿಕ್ ಪರೀಕ್ಷೆ‌ ಮುಂದೂಡಿ ಸರ್ಕಾರ ಆದೇಶ

ಈ ಘಟನೆಯು ಚೀನಾದಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಅನೇಕರು ಶಿಕ್ಷಕಿಯನ್ನು ಕ್ರೂರಿ ಎಂದು ಕರೆದಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ

ಕಳೆದ ವರ್ಷ, ಒಂಬತ್ತು ವರ್ಷದ ಬಾಲಕಿಯೊಬ್ಬಳು ತನ್ನ ಶಾಲಾ ಶಿಕ್ಷಕರಿಂದ ಥಳಿಸಲ್ಪಟ್ಟ ಕಾರಣ ತಲೆಗೆ ಬಲವಾದ ಪೆಟ್ಟುಬಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆಕೆಯ ಮೇಲೆ ಶಿಕ್ಷಕ ಲೋಹದ ಸ್ಕೇಲ್‌ನಿಂದ ಹಲ್ಲೆ ಮಾಡಿದ್ದರು. ಆತನನ್ನು ಬಂಧಿಸಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಾಲ್ಡೀವ್ಸ್ ಸಂಸತ್ ಚುನಾವಣೆ | ಚೀನಾ ಬೆಂಬಲಿತ ಅಧ್ಯಕ್ಷ ಮುಯಿಝ್ಜು ಮತ್ತೆ ಅಧಿಕಾರಕ್ಕೆ; ಭಾರತದ ಪರ MDPಗೆ ಹೀನಾಯ ಸೋಲು

ಮಾಲ್ಡೀವ್ಸ್‌ನ ಸಂಸತ್ತಿನ ಮಜ್ಲಿಸ್‌ಗೆ ನಡೆದ ಚುನಾವಣೆಯಲ್ಲಿ ಚೀನಾ ಪರ ಅಧ್ಯಕ್ಷ ಮೊಹಮ್ಮದ್...

ಗಾಜಾದಲ್ಲಿ ಇಸ್ರೇಲ್ ಪಡೆಗಳ ದಾಳಿ: 9 ಮಕ್ಕಳು ಸೇರಿ 13 ಸಾವು

ದಕ್ಷಿಣ ಗಾಜಾ ಪಟ್ಟಣದ ರಾಫಾದಲ್ಲಿ ಕಳೆದ ರಾತ್ರಿ ಇಸ್ರೇಲ್‌ ಪಡೆಗಳು ದಾಳಿ...

ಟೆಸ್ಲಾ ಕಾರಣ; ಭಾರತ ಭೇಟಿ ಮುಂದೂಡಿದ ಎಲಾನ್ ಮಸ್ಕ್!

ಟೆಸ್ಲಾ ಸಿಇಒ, ವಿಶ್ವದ ಮೂರನೇ ಅತೀ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್...

ಇಸ್ರೇಲ್‌ ಜೊತೆ ಗೂಗಲ್ ಒಪ್ಪಂದ ವಿರೋಧಿಸಿ ಪ್ರತಿಭಟನೆ; ಗೂಗಲ್‌ ಉದ್ಯೋಗಿಗಳ ಬಂಧನ

ಇಸ್ರೇಲ್‌ ಸರ್ಕಾರದೊಂದಿಗೆ ಕೆಲಸ ಮಾಡಲು ಒಪ್ಪಂದ ಮಾಡಿಕೊಂಡಿದ್ದ ಗೂಗಲ್ ಸಂಸ್ಥೆಯ ನಡೆ...