ಒಂದು ಸಾರ್ವಭೌಮ ದೇಶಕ್ಕೆ ನುಗ್ಗಿ ಅದರ ರಾಷ್ಟ್ರಾಧ್ಯಕ್ಷನನ್ನು ಮತ್ತೊಂದು ದೇಶ ಅಪಹರಿಸಬಹುದೇ?

Date:

ತಾನೊಬ್ಬ ಶಾಂತಿದೂತ, ತನಗೆ ‘ನೊಬೆಲ್ ಶಾಂತಿ’ ಪ್ರಶಸ್ತಿ ನೀಡಬೇಕೆಂದು ಪದೇ-ಪದೇ ಹೇಳುತ್ತಿದ್ದ, ನೊಬೆಲ್‌ಗಾಗಿ ಒತ್ತಾಯಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಶಾಂತಿಯ ಮುಖವಾಡ ಕಳಚಿದೆ. ಟ್ರಂಪ್ ಅವರ ಅಮೆರಿಕ ಸೇನೆಯು ವೆನೆಜುವೆಲಾಗೆ ನುಗ್ಗಿ, ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೋ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರೆಸ್ ಅವರನ್ನು ಸೆರೆ (ಅಪಹರಣ) ಹಿಡಿದಿದೆ. ವೆನೆಜುವೆಲಾದಲ್ಲಿ ನಡೆಯುತ್ತಿರುವ ‘ಮಾದಕ ವಸ್ತು ಕಳ್ಳಸಾಗಣೆ’ ಮತ್ತು ‘ನಾರ್ಕೋ-ಟೆರರಿಸಂ’ಅನ್ನು ತಡೆಗಟ್ಟಲು ಅವರನ್ನು ಸೆರೆಹಿಡಿದಿದ್ದೇವೆಂದು ಟ್ರಂಪ್ ಹೇಳಿಕೊಂಡಿದ್ದಾರೆ. ಆದರೆ, ಅವರ ಹುನ್ನಾರವು, ಅತೀ ಹೆಚ್ಚು, ಬೃಹತ್ ತೈಲ ನಿಕ್ಷೇಪಗಳನ್ನು ಹೊಂದಿರುವ ‘ವೆನೆಜುವೆಲಾ’ವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕುತಂತ್ರವೆಂದು ಇಡೀ ಜಗತ್ತು ಅರಿತಿದೆ. ಹಲವು ರಾಷ್ಟ್ರಗಳು ಅಮೆರಿಕದ ಕೃತ್ಯವನ್ನು ಖಂಡಿಸಿವೆ.

- Advertisement -

ಜಗತ್ತಿನಲ್ಲಿ ತೈಲ ಬಿಕ್ಕಟ್ಟು ಎದುರಾಗುತ್ತಿದೆ. ತೈಲ ಹೊಂದಿರುವ ರಾಷ್ಟ್ರಗಳು ಮಾರುಕಟ್ಟೆಯಲ್ಲಿ ಸಾರ್ವಭೌಮತ್ವ ಪಡೆಯಲಿವೆ. ಸೌದಿ ರಾಷ್ಟ್ರಗಳು, ಮಧ್ಯ ಪ್ರಾಚ್ಯ ರಾಷ್ಟ್ರಗಳು ಹಾಗೂ ವೆನೆಜುವೆಲಾ ಅತೀ ಹೆಚ್ಚು ತೈಲ ನಿಕ್ಷೇಪಗಳನ್ನು ಹೊಂದಿವೆ. ಆದ್ದರಿಂದಲೇ, ಇಸ್ರೇಲ್‌ ಮುಂದಿಟ್ಟುಕೊಂಡು ಮಧ್ಯಪ್ರಾಚ್ಯವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಅಮೆರಿಕ ಯತ್ನಿಸುತ್ತಿದೆ. ಆದರೆ, ಅದು ಕೈಗೂಡುತ್ತಿಲ್ಲ. ತನ್ನ ಸಮೀಪದಲ್ಲೇ ಇರುವ ಜಗತ್ತಿನ ಒಟ್ಟು ತೈಲ ನಿಕ್ಷೇಪಗಳಲ್ಲಿ 18% ಪಾಲು ಹೊಂದಿರುವ ವೆನೆಜುವೆಲಾವನ್ನು ಆಕ್ರಮಿಸಿಕೊಳ್ಳಲು ಟ್ರಂಪ್ ಮುಂದಾಗಿದ್ದಾರೆ. ವೆನೆಜುವೆಲಾ ಅಧ್ಯಕ್ಷರನ್ನು ಅಪಹರಿಸಿ, ಆ ರಾಷ್ಟ್ರದಲ್ಲಿ ಅಸ್ಥಿರತೆ ಉಂಟುಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

‘ವೆನೆಜುವೆಲಾದಲ್ಲಿ ನಾವೇ ಆಡಳಿತ ನಡೆಸುತ್ತೇವೆ. ಆ ರಾಷ್ಟ್ರವನ್ನು ನಿಯಂತ್ರಿಸುತ್ತೇವೆ. ತೈಲ ಗಣಿಗಾರಿಕೆ ನಡೆಸುತ್ತೇವೆ’ ಎಂದು ಟ್ರಂಪ್ ಘೋಷಿಸಿದ್ದಾರೆ. ಈ ಬೆಳವಣಿಗೆ ವಿಶ್ವದಲ್ಲಿ ಆಘಾತ ಮೂಡಿಸಿದೆ. ಅಮೆರಿಕವನ್ನು ವಿಶ್ವಸಂಸ್ಥೆಯ ತುರ್ತು ಸಭೆ ಟೀಕಿಸಿದೆ.

ಅಂತಾರಾಷ್ಟ್ರೀಯ ಸಂಬಂಧಗಳನ್ನು ವಿವರಿಸುವ ವಿಶ್ವಸಂಸ್ಥೆಯ ಚಾರ್ಟರ್ (UN Charter) ಎಲ್ಲ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಅಂತರರಾಷ್ಟ್ರೀಯ ಶಾಂತಿ ರಕ್ಷಣೆಗೆ ಒತ್ತುಕೊಡುತ್ತದೆ. ಚಾರ್ಟರ್‌ನ ಅನುಚ್ಛೇದ 2(1)ರಲ್ಲಿ, ಎಲ್ಲ ಸದಸ್ಯ ರಾಷ್ಟ್ರಗಳು ಸಾರ್ವಭೌಮತೆಯನ್ನು ಹೊಂದಿದ್ದು, ಗಾತ್ರ, ಶಕ್ತಿ ಅಥವಾ ಇತರೆ ಅಂಶಗಳನ್ನು ಲೆಕ್ಕಿಸದೆ ಸಮಾನವಾಗಿರುತ್ತವೆ ಎಂದು ಹೇಳುತ್ತದೆ. ಅಂತೆಯೇ, ಆರ್ಟಿಕಲ್ 2(4); “ಸದಸ್ಯ ರಾಷ್ಟ್ರಗಳು ತಮ್ಮ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಯಾವುದೇ ರಾಷ್ಟ್ರದ ಭೌಗೋಳಿಕ ಸಮಗ್ರತೆ ಅಥವಾ ರಾಜಕೀಯ ಸ್ವಾತಂತ್ರ್ಯದ ವಿರುದ್ಧ ಬಲಪ್ರಯೋಗ ಅಥವಾ ಬೆದರಿಕೆ ಹಾಕಬಾರದು” ಎಂದು ಸ್ಪಷ್ಟವಾಗಿ ಹೇಳುತ್ತದೆ.

ಚಾರ್ಟರ್‌ನ ವಿಧಿ 2(7)ರಲ್ಲಿ ಯಾವುದೇ ದೇಶದ ಆಂತರಿಕ ವಿಷಯಗಳಲ್ಲಿ ಮತ್ತೊಂದು ರಾಷ್ಟ್ರವು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೇಳುತ್ತದೆ. ಮುಂದುವರೆದು, ಅಧ್ಯಾಯ 6 ಮತ್ತು 7ರಲ್ಲಿ ವಿವಾದಗಳ ಶಾಂತಿಯುತ ಪರಿಹಾರಕ್ಕೆ ಒತ್ತುಕೊಡಲಾಗಿದೆ. ಶಾಂತಿಗೆ ಬೆದರಿಕೆ ಇದ್ದಾಗ, ಭದ್ರತಾ ಮಂಡಳಿ ಮಾತ್ರವೇ ಬಲಪ್ರಯೋಗಕ್ಕೆ ಮುಂದಾಗಬಹುದು ಅಥವಾ ಅನುಮೋದಿಸಬಹುದು ಎಂದು ಹೇಳಲಾಗಿದೆ.

ವಿಶ್ವಸಂಸ್ಥೆಯ ಚಾರ್ಟರ್‌ ಸ್ಪಷ್ಟವಾಗಿ, ಒಂದು ದೇಶವು ಮತ್ತೊಂದು ದೇಶದ ಮೇಲೆ ದಾಳಿ ಮಾಡುವುದನ್ನು ಅಥವಾ ಅದರ ನಾಯಕನನ್ನು ಅಪಹರಿಸುವುದನ್ನು ನಿಷೇಧಿಸಿದೆ. ಆದರೆ, ಅಮೆರಿಕ ಈ ಎಲ್ಲ ನಿಯಮಗಳನ್ನು ಉಲ್ಲಂಘಿಸಿದೆ. ಮಡುರೋ ಅವರನ್ನು ಅಪಹರಿಸಿ, ವೆನೆಜುವೆಲಾದ ರಾಜಕೀಯ ಸ್ವಾತಂತ್ರ್ಯವನ್ನು ದಮನಿಸಿದೆ. ಆಕ್ರಮಣಕಾರಿಯಾಗಿ ವರ್ತಿಸಿದೆ.

ಆದ್ದರಿಂದಲೇ,  ಅಮೆರಿಕ ಕೃತ್ಯವನ್ನು ವಿಶ್ವಸಂಸ್ಥೆಯ ‘ಮಾನವ ಹಕ್ಕು ಆಯೋಗ’ವು ಅಕ್ರಮ ಎಂದು ಘೋಷಿಸಿದೆ. ವೆನೆಜುಯೆಲಾದ ವಿಶ್ವಸಂಸ್ಥೆ ರಾಯಭಾರಿ ಸ್ಯಾಮ್ಯುಯಲ್ ಮೊನ್ಕಾಡಾ ಅವರು ‘ಅಕ್ರಮ ಸಶಸ್ತ್ರ ದಾಳಿ’ ಎಂದು ಬಣ್ಣಿಸಿದ್ದಾರೆ.

ಹಲವು ರಾಷ್ಟ್ರಗಳು ಅಮೆರಿಕದ ದಾಳಿಯನ್ನು ಖಂಡಿಸಿವೆ. ಇದೊಂದು ಸಾಮ್ರಾಜ್ಯವಾದದ ಕೃತ್ಯ, ಅಕ್ರಮ ದಾಳಿ ಹಾಗೂ ‘ಯುದ್ಧ ಅಪರಾಧ’ ಎಂದು ಕರೆದಿವೆ.

ಅಂತಾರಾಷ್ಟ್ರೀಯ ಕಾನೂನು ಅಥವಾ ವಿಶ್ವಸಂಸ್ಥೆಯ ನಿಮಯಗಳನ್ನು ಅಮೆರಿಕ ಉಲ್ಲಂಘಿಸಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಪುಟ್ಟ ರಾಷ್ಟ್ರಗಳ ಮೇಲೆ ಅಮೆರಿಕ ಕ್ರೌರ್ಯ ಮೆರೆದಿದೆ. ಅಲ್ಲಿನ ನಾಯಕರನ್ನು ಅಪಹರಿಸಿದೆ.

1960ರಲ್ಲಿ ಅಮೆರಿಕವು ಇಸ್ರೇಲ್‌ಗೆ ಕುಮ್ಮಕ್ಕು ನೀಡಿ, ಅರ್ಜೆಂಟೀನಾದ ನಾಜಿ ಅಪರಾಧಿ ಅಡಾಲ್ಫ್‌ ಐಚ್‌ಮನ್‌ ಅವರನ್ನು ಅಪಹರಿಸಿತ್ತು. 1989ರಲ್ಲಿ ಪನಾಮಾ ಮೇಲೆ ಅಮೆರಿಕ ದಾಳಿ ಮಾಡಿತ್ತು. ಪಮಾನಾದ ಜನರಲ್ ಮ್ಯಾನುಯಲ್ ನೋರಿಗಾ ಅವರನ್ನು ಅಪಹರಿಸಿತ್ತು. ಈ ಅಪಹರಣವನ್ನೂ ಸೆರೆ ಎಂದೇ ಕರೆದಿದ್ದ ಅಮೆರಿಕ, ‘ನೋರಿಗಾ ಅವರು ಮಾದಕ ದ್ರವ್ಯ ಕಳ್ಳಸಾಗಣೆ ನಡೆಸುತ್ತಿದ್ದಾರೆ. ಡ್ರಗ್ಸ್‌ ಟ್ರಾಫಿಂಗ್‌ ತಡೆಯುವ ಉದ್ದೇಶದಿಂದ, ಅವರನ್ನು ಸೆರೆಹಿಡಿದಿದ್ದೇವೆ’ ಎಂದು ಹೇಳಿಕೊಂಡಿತ್ತು. ಆದರೆ, ಅಮೆರಿಕದ ದಾಳಿಯನ್ನು ಜಗತ್ತು ಖಂಡಿಸಿತ್ತು.

ಈ ಲೇಖನ ಓದಿದ್ದೀರಾ?: ವೆನೆಜುವೆಲಾದ ಮೇಲೆ ಡೊನಾಲ್ಡ್ ಟ್ರಂಪ್ ಬಾಂಬ್ ಹಾಕಿದ್ದು ಯಾಕೆ?

ಅಮೆರಿಕ ಮಾತ್ರವಲ್ಲದೆ, ರಷ್ಯಾ ಕೂಡ ಇಂತಹ ದಾಳಿಗಳನ್ನು ನಡೆಸಿದೆ. 1979ರಲ್ಲಿ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದ್ದ ರಷ್ಯಾ, ಅಫ್ಘಾನ್‌ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಇತ್ತೀಚಿನ ವರ್ಷಗಳಲ್ಲಿ, ಉಕ್ರೇನ್‌ ಮೇಲೆ ರಷ್ಯಾ, ಪ್ಯಾಲೆಸ್ತೀನ್‌ ಮೇಲೆ ಇಸ್ರೇಲ್ ದಾಳಿಗಳನ್ನು ನಡೆಸುತ್ತಿವೆ. ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹವಣಿಸುತ್ತಿವೆ. ಇದೇ ಹೊತ್ತಿನಲ್ಲಿ, ವೆನೆಜುವೆಲಾ ಮೇಲೆ ಅಮೆರಿಕ ತೀವ್ರ ದಾಳಿ ನಡೆಸಿದೆ.

ಕಳೆದ ನಾಲ್ಕೈದು ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ದೃಷ್ಟಿಯಲ್ಲಿ ಅಮೆರಿಕದ ಕೃತ್ಯವನ್ನು ನೋಡಿದರೆ, ಅನೇಕ ರಾಷ್ಟ್ರಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆಗಳಿವೆ. ಅಮೆರಿಕದ ದಾಳಿಯು ದುರ್ಬಲ ಮೇಲೆ ಪ್ರಬಲರ ಬಲಪ್ರಯೋಗ ಮತ್ತು ನಿಯಂತ್ರಣಕ್ಕೆ ಕುಮ್ಮಕ್ಕು ನೀಡುವ ‘ಜಂಗಲ್ ಲಾ’ (ಅರಣ್ಯ ನ್ಯಾಯ)ಕ್ಕೆ ನಾಂದಿ ಹಾಡಿದೆ. ವೆನೆಜುವೆಲಾದಂತೆಯೇ ಅಮೆರಿಕವು ಇರಾನ್ ಮತ್ತು ಕ್ಯೂಬಾ ಮೇಲೆ ತನ್ನ ದಾಳಿಯನ್ನು ವಿಸ್ತರಿಸಬಹುದು ಎಂಬ ಕಳವಳ ವ್ಯಕ್ತವಾಗುತ್ತಿವೆ.

ಕಾನೂನು ತಜ್ಞರು ಹೇಳುವಂತೆ, ಅಮೆರಿಕದ ಈ ಕ್ರಮವು ರಷ್ಯಾ ಮತ್ತು ಚೀನಾಗೆ ‘ಹಸಿರು ನಿಶಾನೆ’ ನೀಡುತ್ತದೆ. ಉಕ್ರೇನ್‌ ಮೇಲಿನ ದಾಳಿಯನ್ನು ರಷ್ಯಾ ಸಮರ್ಥಿಸಿಕೊಳ್ಳಲು ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಅತೀ ಹೆಚ್ಚು ಆಕ್ರಮಣಕಾರಿ ನೀತಿಗಳನ್ನು ಅನುಸರಿಸಲು ಕಾರಣವಾಗಬಹುದು ಹಾಗೂ ಪ್ಯಾಲೆಸ್ತೀನ್ ಮೇಲಿನ ನರಮೇಧವನ್ನು ಇಸ್ರೇಲ್‌ ಕೂಡ ಸಮರ್ಥಿಸಿಕೊಳ್ಳಲು ದಾಳಿ ಮಾಡಿಕೊಡುತ್ತದೆ. ಅಂತಾರಾಷ್ಟ್ರೀಯ ಉದ್ವಿಗ್ನತೆಯನ್ನು ಹೆಚ್ಚಿಸುವ ಸೂಚಕವೂ ಆಗಿದೆ.

ಮೆನೆಜುವೆಲಾ ಮೇಲಿನ ದಾಳಿಯು ಅಂತಾರಾಷ್ಟ್ರೀಯ ವ್ಯವಸ್ಥೆಯ ದೌರ್ಬಲ್ಯಕ್ಕೆ ಕನ್ನಡಿ ಹಿಡಿದಿದೆ. ಎಲ್ಲ ರಾಷ್ಟ್ರಗಳ ಸಾರ್ವಭೌಮತ್ವವನ್ನು ರಕ್ಷಿಸುವ ವಿಶ್ವಸಂಸ್ಥೆಯ ಆಶಯವನ್ನು ಅಣಕಿಸಿದೆ. ಬಲಿಷ್ಠ ರಾಷ್ಟ್ರಗಳು ಸಾಮ್ರಾಜ್ಯವಾದಕ್ಕೆ ನಾಂದಿ ಹಾಡಿದಂತೆ ಕಾಣುತ್ತಿದೆ.  ಜಗತ್ತಿನಲ್ಲಿ ಅರಾಜಕತೆಯನ್ನು ಹುಟ್ಟುಹಾಕುವ ಸಾಧ್ಯತೆಯನ್ನು ತೋರುತ್ತಿದೆ. ವಿಶ್ವಸಂಸ್ಥೆಯು ಮಧ್ಯಪ್ರವೇಶಿಸಿ, ಶಾಂತಿ ಮತ್ತು ಮಾತುಕತೆಗೆ ಯತ್ನಿಸದಿದ್ದರೆ, ಮುಂದಿನ ದಿನಗಳು ಭೀಕರವಾಗುವ ಅಪಾಯವೂ ಇದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗ್ಯಾನೇಶ್ ಕುಮಾರ್ ವಿರುದ್ಧದ 20 ವರ್ಷಗಳ ಪ್ರಕರಣಕ್ಕೆ ಮರುಜೀವ; ಮೋದಿ ಸರ್ಕಾರಕ್ಕೆ ಕೇರಳದ ಪೆಟ್ಟು

ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್‌ ಕುಮಾರ್ ವಿರುದ್ಧ 2006ರಲ್ಲಿ...

‘ಭಾರತದ ನಿಜವಾದ ಬಾಸ್ ಅಂಬಾನಿಯೇ’: ಸ್ಟಾರ್‌ಲಿಂಕ್ ಸೇವೆಗೆ ಅನುಮತಿ ವಿಳಂಬದ ಬಗ್ಗೆ ಎಲಾನ್ ಮಸ್ಕ್ ಪ್ರಶ್ನೆ

ವಾಷಿಂಗ್ಟನ್‌ ಡಿಸಿ/ನವದೆಹಲಿ: ಭಾರತದಲ್ಲಿ ತನ್ನ ಸ್ಟಾರ್‌ಲಿಂಕ್ (Starlink) ಉಪಗ್ರಹ ಆಧಾರಿತ ಇಂಟರ್ನೆಟ್...