ಅಮೆರಿಕದಲ್ಲಿ ಡೀಸೆಲ್ ರಫ್ತು ನಿಷೇಧದ ಚರ್ಚೆ; ಭಾರತದ ಮೇಲಾಗುವ ಪರಿಣಾಮವೇನು?

Date:

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ರಷ್ಯಾ-ಉಕ್ರೇನ್ ನಡುವಿನ ಸಂಘರ್ಷದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯು ಕಳೆದ ಕೆಲವು ತಿಂಗಳುಗಳಿಂದ ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ಸಾಂಪ್ರದಾಯಿಕ ತೈಲ ಪೂರೈಕೆ ಮಾರ್ಗಗಳು ಬಂದ್ ಆಗಿರುವುದರಿಂದ ಮತ್ತು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ವಿಶ್ವದಾದ್ಯಂತ ತೈಲ ಆಮದು ಮಾಡಿಕೊಳ್ಳುವ ದೇಶಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಈ ಕಠಿಣ ಪರಿಸ್ಥಿತಿಯ ನಡುವೆಯೇ, ಜಗತ್ತಿನ ಅತಿ ದೊಡ್ಡ ಇಂಧನ ರಫ್ತುದಾರ ದೇಶವಾದ ಅಮೆರಿಕವು ಡೀಸೆಲ್ ರಫ್ತಿನ ಮೇಲೆ ಸಂಪೂರ್ಣ ನಿಷೇಧ ಅಥವಾ ಕಠಿಣ ನಿರ್ಬಂಧ ಹೇರಲು ಆಲೋಚಿಸುತ್ತಿದೆ ಎಂದು ವರದಿಯಾಗಿದೆ. ಈ ಸುದ್ದಿಗಳು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರಿ ಆತಂಕ ಮತ್ತು ತೊಳಲಾಟ ಸೃಷ್ಟಿಸಿವೆ.

- Advertisement -

ಸದ್ಯಕ್ಕೆ, ಅಮೆರಿಕ ಸರ್ಕಾರವು ಅಧಿಕೃತವಾಗಿ ಇನ್ನೂ ಡೀಸೆಲ್ ರಫ್ತು ನಿಷೇಧವನ್ನು ಜಾರಿಗೆ ತಂದಿಲ್ಲ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ದೇಶದಲ್ಲಿ ಇಂಧನ ದರಗಳು ಸಾರ್ವಕಾಲಿಕ ಎತ್ತರಕ್ಕೆ ಏರುತ್ತಿರುವುದನ್ನು ತಡೆಯಲು ರಫ್ತು ನಿರ್ಬಂಧಿಸುವುದನ್ನು ಸಾರ್ವಜನಿಕವಾಗಿ ಬೆಂಬಲಿಸಿದ್ದಾರೆ. ಅಮೆರಿಕದಲ್ಲಿ ಸಾರ್ವಜನಿಕ ಸಾರಿಗೆ ಮಾತ್ರವಲ್ಲದೆ, ಸರಕು ಸಾಗಣೆ ಲಾರಿಗಳು, ಕೃಷಿ ಯಂತ್ರೋಪಕರಣಗಳು, ಗಣಿ ಮತ್ತು ಕಟ್ಟಡ ನಿರ್ಮಾಣ ವಲಯದ ಯಂತ್ರಗಳು ಸಂಪೂರ್ಣವಾಗಿ ಡೀಸೆಲ್ ಅನ್ನೇ ನೆಚ್ಚಿಕೊಂಡಿವೆ. ಹೀಗಾಗಿ, ಡೀಸೆಲ್ ಬೆಲೆ ಏರಿಕೆಯಾದರೆ ಅದು ದೇಶದ ದೈನಂದಿನ ಗೃಹಬಳಕೆಯ ವಸ್ತುಗಳ ಬೆಲೆ ಏರಿಕೆಗೆ ನೇರ ಕಾರಣವಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಅಮೆರಿಕದಲ್ಲಿ ಶೀಘ್ರದಲ್ಲೇ ಮಧ್ಯಂತರ ಚುನಾವಣೆಗಳು ನಡೆಯಲಿರುವುದರಿಂದ, ಟ್ರಂಪ್ ಸರ್ಕಾರಕ್ಕೆ ಬೆಲೆ ಏರಿಕೆ ನಿಯಂತ್ರಿಸುವುದು ಮುಖ್ಯವಾಗಿದೆ. ಅಮೆರಿಕದಲ್ಲಿ ಪ್ರಸ್ತುತ ಗ್ಯಾಲನ್ (3.78 ಲೀ.) ಡೀಸೆಲ್ ಬೆಲೆ 6 ಡಾಲರ್ (570 ರೂ.) ದಾಟಿದೆ. ಪರಿಣಾಮ, ಅಮೆರಿಕನ್ನರು ಟ್ರಂಪ್ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಡೀಸೆಲ್ ರಫ್ತು ತಡೆಯುವ ಕುರಿತು ಅಮೆರಿಕದಲ್ಲಿ ಚರ್ಚೆಗಳು ನಡೆಯುತ್ತಿವೆ. ಆದಾಗ್ಯೂ, ಇಂಧನ ಸಚಿವಾಲಯ ಮತ್ತು ಶ್ವೇತಭವನವು ರಫ್ತು ತಡೆಯುವ ಬದಲು ದೇಶೀಯವಾಗಿ ಡೀಸೆಲ್ ಉತ್ಪಾದನೆಯನ್ನು ಹೆಚ್ಚಿಸುವ ಇತರ ಮಾರ್ಗಗಳತ್ತ ಗಮನ ಹರಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿವೆ. ಆದರೂ, ಜಾಗತಿಕ ಮಾರುಕಟ್ಟೆಯಲ್ಲಿನ ಆತಂಕ ಮುಂದುವರೆದಿದೆ.

ರಫ್ತು ನಿಷೇಧದ ಲೆಕ್ಕಾಚಾರ ಮತ್ತು ತಾಂತ್ರಿಕ ತೊಡಕುಗಳು

ಅಮೆರಿಕವು ಹೊರದೇಶಗಳಿಗೆ ಹೋಗುವ ಡೀಸೆಲ್ ಅನ್ನು ತಡೆದರೆ ದೇಶದೊಳಗೆ ಸಾಕಷ್ಟು ಡೀಸೆಲ್ ಉಳಿದು ಬೆಲೆ ಕಡಿಮೆಯಾಗುತ್ತದೆ ಎಂಬುದು ಮೇಲ್ನೋಟದ ಸರಳ ಲೆಕ್ಕಾಚಾರ. ಆದರೆ, ಅಮೆರಿಕದ ಇಂಧನ ವ್ಯವಸ್ಥೆ ಮತ್ತು ಭೂಗೋಳ ತೀರಾ ಭಿನ್ನವಾಗಿದೆ: ಅಮೆರಿಕದ ಒಟ್ಟು ತೈಲ ಸಂಸ್ಕರಣಾ ಸಾಮರ್ಥ್ಯದ 54% ಭಾಗವು ಮೆಕ್ಸಿಕೋ ಗಲ್ಫ್ ಕರಾವಳಿಯಲ್ಲಿದೆ. ಅಲ್ಲಿ ಉತ್ಪಾದನೆಯಾಗುವ ಡೀಸೆಲ್ ಆ ಭಾಗದ ಜನರ ಬಳಕೆಗೆ ಅಗತ್ಯವಿರುವುದಕ್ಕಿಂತ ತೀರಾ ಹೆಚ್ಚಿರುತ್ತದೆ. ಆದರೆ, ಅಲ್ಲಿಂದ ಉತ್ಪಾದನೆಯಾಗುವ ಹೆಚ್ಚುವರಿ ಡೀಸೆಲ್ ಅನ್ನು ದೇಶದ ಇತರ ಭಾಗಗಳಿಗೆ (ಉದಾಹರಣೆಗೆ ಈಶಾನ್ಯ ಅಮೆರಿಕ) ತಲುಪಿಸಲು ಸೂಕ್ತವಾದ ಪೈಪ್‌ಲೈನ್ ಮತ್ತು ರಸ್ತೆ ಸಂಪರ್ಕಗಳಿಲ್ಲ.

ರಫ್ತು ನಿಷೇಧಿಸಿದರೆ ಗಲ್ಫ್ ಕರಾವಳಿಯ ದಾಸ್ತಾನು ಮಳಿಗೆಗಳು ಭರ್ತಿಯಾಗುತ್ತವೆ. ಆಗ ಕಚ್ಚಾ ತೈಲ ಸಂಸ್ಕರಣೆಯನ್ನು ಕಡಿತಗೊಳಿಸಬೇಕಾಗುತ್ತದೆ. ಕಚ್ಚಾ ತೈಲ ಸಂಸ್ಕರಣೆ ಕಡಿಮೆಯಾದರೆ ಡೀಸೆಲ್ ಒಂದೇ ಅಲ್ಲದೆ, ಪೆಟ್ರೋಲ್, ವಿಮಾನ ಇಂಧನ ಹಾಗೂ ಮನೆ ಬೆಚ್ಚಗಿಡುವ ತೈಲಗಳ (Home Heating Oil) ಉತ್ಪಾದನೆಯೂ ತೀವ್ರವಾಗಿ ಕುಸಿಯುತ್ತದೆ.

ಹೀಗೆ ಇತರ ಇಂಧನಗಳ ಉತ್ಪಾದನೆ ಕುಸಿದರೆ ಅಮೆರಿಕದಲ್ಲೇ ಪೆಟ್ರೋಲ್ ಮತ್ತು ವಿಮಾನ ಇಂಧನದ ಬೆಲೆ ಮತ್ತಷ್ಟು ಗಗನಕ್ಕೇರಲಿದೆ. ಈ ಕಾರಣದಿಂದಲೇ ‘ಅಮೆರಿಕನ್ ಪೆಟ್ರೋಲಿಯಂ ಇನ್ಸ್ಟಿಟ್ಯೂಟ್’ (API) ಸೇರಿದಂತೆ ಹಲವು ತೈಲ ಒಕ್ಕೂಟಗಳು ‘ಈ ನಿರ್ಧಾರವು ಸ್ವತಃ ಅಮೆರಿಕ ಮತ್ತು ಜಾಗತಿಕ ಮಾರುಕಟ್ಟೆ ಎರಡಕ್ಕೂ ಸ್ವಯಂಕೃತ ಅಪರಾಧವಾಗಲಿದೆ’ ಎಂದು ಹೇಳಿವೆ.

ಜಾಗತಿಕ ಇಂಧನ ಮಾರುಕಟ್ಟೆಯ ಮೇಲಾಗುವ ಭೀಕರ ಪರಿಣಾಮಗಳು

ಸಮುದ್ರ ಮಾರ್ಗದ ಮೂಲಕ ಜಗತ್ತಿನಲ್ಲಿ ಪ್ರತಿದಿನ ಸುಮಾರು 80 ಲಕ್ಷ ಬ್ಯಾರಲ್ ಡೀಸೆಲ್ ವಹಿವಾಟು ನಡೆಯುತ್ತದೆ. ಇದರಲ್ಲಿ ಅಮೆರಿಕ ಒಂದೇ ಸುಮಾರು 15 ಲಕ್ಷ ಬ್ಯಾರಲ್ (20%) ಡೀಸೆಲ್ ಪೂರೈಸುತ್ತದೆ. ಪ್ರಸ್ತುತ ಅಮೆರಿಕದ ಡೀಸೆಲ್‌ನ 50%ರಷ್ಟು ಭಾಗ ಲ್ಯಾಟಿನ್ ಅಮೆರಿಕ ದೇಶಗಳಿಗೆ (ಬ್ರೆಜಿಲ್, ಚಿಲಿ, ಮೆಕ್ಸಿಕೋ), 35%ರಷ್ಟು ಯುರೋಪ್‌ಗೆ ಹಾಗೂ ಉಳಿದ ಭಾಗ ಆಫ್ರಿಕಾ ದೇಶಗಳಿಗೆ ತಲುಪುತ್ತಿದೆ.

ಒಂದು ವೇಳೆ ಅಮೆರಿಕ ತನ್ನ ರಫ್ತು ಬಂದ್ ಮಾಡಿದರೆ, ಯುರೋಪ್ ಮತ್ತು ಲ್ಯಾಟಿನ್ ಅಮೆರಿಕಕ್ಕೆ ಭಾರಿ ಹೊಡೆತ ಬೀಳಲಿದೆ. ಏಕೆಂದರೆ, ರಷ್ಯಾ-ಉಕ್ರೇನ್ ಯುದ್ಧದ ನಂತರ ರಷ್ಯಾದ ತೈಲವನ್ನು ನಿಷೇಧಿಸಿದ್ದ ಯುರೋಪ್ ದೇಶಗಳು ಅಮೆರಿಕದ ಡೀಸೆಲ್ ಅನ್ನೇ ನೆಚ್ಚಿಕೊಂಡಿದ್ದವು. ಯುರೋಪ್‌ ಆಮದು ಮಾಡಿಕೊಳ್ಳುವ ಡೀಸೆಲ್‌ನಲ್ಲಿ 25%ರಷ್ಟು ಅಮೆರಿಕದಿಂದಲೇ ಬರುತ್ತದೆ. ಈಗ ಅಮೆರಿಕವೂ ಬಾಗಿಲು ಮುಚ್ಚಿದರೆ ಯುರೋಪ್ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಕಡು ಇಂಧನ ಕ್ಷಾಮ ಎದುರಾಗಲಿದೆ.

ಈ ಲೇಖನ ಓದಿದ್ದೀರಾ?: ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ ಅಸ್ತ್ರ!

ಮಾತ್ರವಲ್ಲದೆ, ಜಾಗತಿಕ ಸರಕು ರವಾನೆ, ಹಡಗು ಸಾರಿಗೆ, ತಯಾರಿಕಾ ವಲಯ ಹಾಗೂ ಕೃಷಿ ಕ್ಷೇತ್ರಗಳು ಡೀಸೆಲ್ ಅಭಾವದಿಂದ ತತ್ತರಿಸಿ, ವಿಶ್ವದಾದ್ಯಂತ ಹಣದುಬ್ಬರ ಭಾರೀ ಪ್ರಮಾಣದಲ್ಲಿ ಹೆಚ್ಚಾಗಲಿದೆ.

ಭಾರತದ ಪರಿಸ್ಥಿತಿ ಏನಾಗಲಿದೆ?

 ಜಾಗತಿಕ ಮಟ್ಟದಲ್ಲಿ ಅಮೆರಿಕಕ್ಕೆ ಹೋಲಿಸಿದರೆ ಭಾರತವು ಸಣ್ಣ ಮಟ್ಟದ ಡೀಸೆಲ್ ರಫ್ತುದಾರ ದೇಶ. ಭಾರತವು ತನ್ನ ದೇಶೀಯ ಬಳಕೆಗೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಡೀಸೆಲ್‌ಅನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಅಮೆರಿಕದ ಡೀಸೆಲ್ ಮಾರುಕಟ್ಟೆಯಿಂದ ಕಣ್ಮರೆಯಾದರೆ, ಜಾಗತಿಕವಾಗಿ ಡೀಸೆಲ್‌ಗೆ ಭಾರೀ ಬೇಡಿಕೆ ಬಂದು ಬೆಲೆಗಳು ಹೆಚ್ಚಾಗಲಿವೆ. ಇದರಿಂದ ಭಾರತದ ಖಾಸಗಿ ಸಂಸ್ಕರಣಾಗಾರಗಳಾದ ರಿಲಯನ್ಸ್ ಇಂಡಸ್ಟ್ರೀಸ್ (RIL) ಮತ್ತು ನಾಯರಾ ಎನರ್ಜಿ (Nayara Energy) ಜಾಗತಿಕ ಮಾರುಕಟ್ಟೆಗೆ ಹೆಚ್ಚಿನ ದರದಲ್ಲಿ ಡೀಸೆಲ್ ಮಾರಾಟ ಮಾಡಿ ಭಾರೀ ಲಾಭ ಗಳಿಸಬಹುದು.

ಆದರೆ, ಇದು ದೇಶೀಯ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ವಿಶೇಷವಾಗಿ, ಅಕ್ಟೋಬರ್‌ನಿಂದ ಮಾರ್ಚ್-ಏಪ್ರಿಲ್ ಅವಧಿಯಲ್ಲಿ ಭಾರತದಲ್ಲಿ ಕೃಷಿ ಮತ್ತು ಹಬ್ಬಗಳ ಕಾರಣದಿಂದ ದೇಶೀಯ ಡೀಸೆಲ್ ಬಳಕೆ ಗರಿಷ್ಠ ಮಟ್ಟದಲ್ಲಿರುತ್ತದೆ. ಹೆಚ್ಚಿನ ಡೀಸೆಲ್‌ಗಳ ಅಗತ್ಯವೂ ಇರುತ್ತದೆ. ಈ ಹೆಚ್ಚುವರಿ ಬೇಡಿಕೆಗೆ ಕೊರತೆ ಎದುರಾಗುವ ಸಾಧ್ಯತೆ ಇರುತ್ತದೆ.

ಬೇಡಿಕೆ ಮತ್ತು ಪೂರೈಕೆ ನಡುವಿನ ಕೊರತೆ ಒಂದೆಡೆಯಾದರೆ, ಜಾಗತಿಕವಾಗಿ ಡೀಸೆಲ್ ಬೆಲೆ ಏರಿಕೆಯಾದಾಗ ಭಾರತದಲ್ಲಿಯೂ ಡೀಸೆಲ್ ಬೆಲೆ ಗಣನೀಯವಾಗಿ ಹೆಚ್ಚಾಗುವ ಅಪಾಯವನ್ನು ತಳ್ಳಿಹಾಕುವಂತಿಲ್ಲ.

ಪ್ರಸ್ತುತ ಸನ್ನಿವೇಶದಲ್ಲಿ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಕಡಿಮೆಯಿದ್ದರೂ, ನಷ್ಟ ಸರಿದೂಗಿಸುವ ನೆಪದಲ್ಲಿ ಭಾರತದೊಳಗೆ ಪೆಟ್ರೋಲ್-ಡೀಸೆಲ್ ಬೆಲೆಗಳನ್ನು ಗಗನಕ್ಕೇರಿಸಲಾಗಿದೆ. ಹೀಗಿರುವಾಗ, ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಹೆಚ್ಚಾದರೆ, ಭಾರತದಲ್ಲಿ ಏನಾಗಲಿದೆ? ಖಂಡಿತವಾಗಿಯೂ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶೂನ್ಯ ಜನವಸತಿ!

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು...

RSSಗೆ ಅಪಾರ್ಟ್‌ಮೆಂಟ್ ಬಾಗಿಲು ತೆರೆದಿದ್ದಕ್ಕೆ ಪ್ರಿಯಾಂಕ್ ಖರ್ಗೆ ಆಕ್ಷೇಪ: ಪಾರದರ್ಶಕತೆ ಪ್ರಶ್ನಿಸುವಂತೆ ಸಂಘಗಳಿಗೆ ಸಲಹೆ

ಬೆಂಗಳೂರಿನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಆರ್‌ಎಸ್‌ಎಸ್‌ ಆಯೋಜಿಸಿದ್ದ ಸಭೆಗೆ ಗೃಹ ಸಚಿವ ಪ್ರಿಯಾಂಕ್...

ರಾಜ್ಯದಲ್ಲಿ 1.07 ಕೋಟಿ ಮತದಾರರ ಹೆಸರು ಡಿಲೀಟ್: ಮರು ಸೇರ್ಪಡೆಗೆ ಕೇವಲ 7.7 ಲಕ್ಷ ಅರ್ಜಿ

ವಿಶೇಷ ತೀವ್ರ ಪರಿಷ್ಕರಣೆ (SIR) ಅಡಿಯಲ್ಲಿ ರಾಜ್ಯದ ಮತದಾರರ ಪಟ್ಟಿಯಿಂದ ಬರೋಬ್ಬರಿ...

ದೆಹಲಿ | ರಸ್ತೆ ಕಳಪೆ ಕಾಮಗಾರಿ ಪ್ರಶ್ನಿಸಿದಕ್ಕೆ ಹಲ್ಲೆ; ಯುವಕನ ಕಪಾಳಕ್ಕೆ ಹೊಡೆದ ದುರಹಂಕಾರಿ ಸಚಿವ

ದೆಹಲಿಯಲ್ಲಿ ಸಚಿವ ಪರ್ವೇಶ್ ವರ್ಮಾ ಅವರು ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾದ...