ವಂಚನೆ ಪ್ರಕರಣದಲ್ಲಿ ವಿಯೆಟ್ನಾಂ ಶತ ಕೋಟ್ಯಾಧೀಶೆಗೆ ಮರಣ ದಂಡನೆ

Date:

ದೇಶದ ಅತೀ ದೊಡ್ಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಯೆಟ್ನಾಂ ನ ರಿಯಲ್‌ ಎಸ್ಟೇಟ್‌ ಉದ್ಯಮಿ, ಶತ ಕೋಟ್ಯಾಧೀಶೆ ಟ್ರೂಂಗ್‌ ಮೈ ಲಾನ್‌ ಎಂಬುವವರಿಗೆ ಸ್ಥಳೀಯ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ.

- Advertisement -

67 ವರ್ಷದ ಉದ್ಯಮಿ ಲಾನ್‌ ಅವರು ವಾನ್‌ ಥಿನ್‌ ಪಾತ್‌ ಎಂಬ ರಿಯಲ್‌ ಎಸ್ಟೇಟ್‌ ಕಂಪನಿ ನಡೆಸುತ್ತಿದ್ದು, 2022ರಲ್ಲಿ ಬಂಧಿತರಾಗಿದ್ದರು. 12 ಬಿಲಿಯನ್‌ ಡಾಲರ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಇವರ ಮೇಲಿದೆ ಎಂದು ಸ್ಥಳೀಯ ಪತ್ರಿಕೆಗಳು ಆರೋಪಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

2012ರಿಂದ 2022ರವರೆಗೂ ಲಾನ್ ಅವರು ಹಲವು ಬಿಲಿಯನ್‌ ಡಾಲರ್‌ ಹಣ ಪಡೆಯಲು ಸಾವಿರಾರು ಅಗೋಚರ ಕಂಪನಿಗಳ ಮೂಲಕ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡುವ ಮೂಲಕ ಪ್ರಮುಖ ಬ್ಯಾಂಕ್‌ಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ವಿಯೆಟ್ನಾಂ ಸರ್ಕಾರ ಭ್ರಷ್ಟಾಚಾರವನ್ನು ನಿಯಂತ್ರಿಸುವ ಸಲುವಾಗಿ 2022ರಲ್ಲಿ ತೀವ್ರ ಕ್ರಮ ಕೈಗೊಂಡ ನಂತರ ಲಾನ್‌ ಅವರನ್ನು ಬಂಧಿಸಿತು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ ಪ್ರಣಾಳಿಕೆ- ಸುಳ್ಳು ಸುಳ್ಳೇ ಮುಸ್ಲಿಮ್ ಲೀಗ್ ಮೊಹರು ಹಾಕಿದ ಮೋದಿ

ಸರ್ಕಾರದ ಭ್ರಷ್ಟಾಚಾರ ನಿಯಂತ್ರಣ ಕ್ರಮದ ಭಾಗವಾಗಿ ವಿಯೆಟ್ನಾಂ ಮಾಜಿ ಅಧ್ಯಕ್ಷ ವೊ ವಾಮ್ ತೌಂಗ್‌ ಕೂಡ ಕಳೆದ ತಿಂಗಳು ರಾಜೀನಾಮೆ ನೀಡಿದ್ದರು.

ಟ್ರೂಂಗ್‌ ಮೈ ಲಾನ್‌ ಅವರು ವಿಯೆಟ್ನಾಂ ನ ಶ್ರೀಮಂತ ರಿಯಲ್‌ ಎಸ್ಟೇಟ್ ಉದ್ಯಮಿಯಾಗಿದ್ದು, ಇವರ ಸಂಸ್ಥೆ ಐಶಾರಾಮಿ ವಸತಿ ಕಟ್ಟಡಗಳು, ಕಚೇರಿಗಳು ಶಾಪಿಂಗ್‌ ಮಾಲ್‌ಗಳು ಹಾಗೂ ಹೋಟೆಲ್‌ಗಳನ್ನು ನಿರ್ಮಿಸುತ್ತದೆ.

ಲಾನ್‌ ಅವರ ಕಂಪನಿಯು ಖರೀದಿದಾರರನ್ನು ಸೆಳೆಯಲು ವಿನಾಯಿತಿಗಳು ಹಾಗೂ ಚಿನ್ನದ ಕೊಡುಗೆಗಳನ್ನು ನೀಡುತ್ತಿದ್ದರು. ರಿಯಲ್‌ ಎಸ್ಟೇಟ್‌ ಉದ್ಯಮ ಕುಸಿದ ಪರಿಣಾಮ ಲಾನ್‌ ಅವರ ಕಂಪನಿ ನಿರ್ಮಿಸಿದ ಹಲವು ಕಟ್ಟಡಗಳು ಖಾಲಿಯಾಗಿ ಉಳಿದಿವೆ.

ವಿಯೆಟ್ನಾಂನ ಪ್ರಮುಖ ರಾಜಕಾರಣಿ, ಕಮ್ಯೂಮಿಸ್ಟ್‌ ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ನುಗೆಯನ್‌ ಫೂ ಟ್ರೋಂಗ್‌,  ಭ್ರಷ್ಟಾಚಾರ ವಿರೋಧಿ ಅಭಿಯಾನ ದೀರ್ಘಕಾಲದವರೆಗೂ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಮೆನ್ ರಾಷ್ಟ್ರಪತಿ ಭವನದ ಮೇಲೆ ಹೂತಿಗಳ ಕ್ಷಿಪಣಿ ದಾಳಿ: ಐವರ ಸಾವು

ಯಮೆನ್‌ನ ದಕ್ಷಿಣ ಭಾಗದ ಪ್ರಮುಖ ನಗರವಾದ ಅದನ್‌ನಲ್ಲಿರುವ ಅಲ್-ಮಾಶಿಕ್ ರಾಷ್ಟ್ರಪತಿ ಭವನದ...

ಭಾರತದ ಮೇಲೆ ಶೇ.100 ಸುಂಕ: 10 ದಿನಗಳಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅಂತಿಮ ತೀರ್ಮಾನ!

ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ ಶೇ. 100ರಷ್ಟು ಭಾರಿ ಆಮದು...

ರಾತ್ರಿ ವೇಳೆಯಲ್ಲೂ ರವಿ; ಸೂರ್ಯನ ಬೆಳಕು ಮಾರಾಟ ಮಾಡಲು ಅಮೆರಿಕ-ಭಾರತ ಸಹಭಾಗಿತ್ವ: ಏನಿದು ಯೋಜನೆ?

ವಿಜ್ಞಾನ ಕಲ್ಪನೆಗಳಿಗಿಂತಲೂ ಮಿಗಿಲಾದ ಅಪರೂಪದ ಯೋಜನೆಯೊಂದು ಈಗ ಜಾಗತಿಕ ಇಂಧನ ಕ್ಷೇತ್ರದಲ್ಲಿ...

ಸೌದಿ ಅರಾಮ್ಕೊ ಪ್ರಧಾನ ಕಚೇರಿ ಮೇಲೆ ದಾಳಿ: ಮತ್ತೆ ಪುಟಿದೆದ್ದರೇ ಹೂತಿ ಬಂಡುಕೋರರು?

ಯೆಮನ್‌ನ ಹೂತಿ ಬಂಡುಕೋರರು ಸೌದಿ ಅರೇಬಿಯಾದ ಧಹ್ರಾನ್‌ನಲ್ಲಿರುವ ತೈಲ ದೈತ್ಯ ಕಂಪನಿ...