ಗುಬ್ಬಿ | ರಾಜ್ಯಸಭಾ ಮಾಜಿ ಸದಸ್ಯೆ ಜಯಶ್ರೀ ಅವರನ್ನು ಅಲೆದಾಡಿಸಿದ ಭೂ ಮಾಪನ ಇಲಾಖೆ

Date:

 ರಂಗ ಚಟುವಟಿಕೆಗೆ ಮುಡುಪಾದ ಜಿ.ವಿ.ಮಾಲತಮ್ಮ ಆರ್ಟ್ ಟ್ರಸ್ಟ್ ಹೆಸರಿನಲ್ಲಿ ಜಮೀನು ಖಾತೆ ಮಾಡಿಸಿಕೊಳ್ಳಲು ಅವಶ್ಯವಾದ ಸರ್ವೇ ಕೆಲಸಕ್ಕೆ ಕಳೆದ ಒಂದು ತಿಂಗಳಿಂದ ಮೂರು ಬಾರಿ ಹಣ ಸಂದಾಯ ಮಾಡಿಯೂ ಗುರುವಾರ ಬೆಳಿಗ್ಗೆ ಬರಲು ಹೇಳಿದ್ದ ಸರ್ವೇಯರ್ ಶಿವಾನಂದ್ ಅವರ ಕೈಗೆ ಸಿಗದೆ ಬೇಜವಾಬ್ದಾರಿ ತೋರಿ ನಿಮ್ಮ ಕೆಲಸಕ್ಕಿಂತ ನಮ್ಮ ಮೇಲಾಧಿಕಾರಿಗಳ ಕೆಲಸ ಮುಖ್ಯ ಎಂದು ಹಾರಿಕೆ ಉತ್ತರ ನೀಡಿ ರಾಜ್ಯಸಭಾ ಮಾಜಿ ಸದಸ್ಯೆ ಬಿ.ಜಯಶ್ರೀ ಹಾಗೂ ರಂಗತಜ್ಞ ಅನಂದರಾಜ್ ಅವರನ್ನು ಅಲೆದಾಡಿಸಿದ ಘಟನೆ ಸ್ಥಳದಲ್ಲಿದ್ದ ಸಾರ್ವಜನಿಕರಲ್ಲೇ ಬೇಸರ ತಂದ ಘಟನೆ ತಾಲ್ಲೂಕು ಕಚೇರಿಯ ಭೂ ಮಾಪನ ಇಲಾಖೆ ಕಚೇರಿಯಲ್ಲಿ ನಡೆಯಿತು.

- Advertisement -

ಒಂದು ತಿಂಗಳ ಹಿಂದೆ ರಾಜ್ಯಸಭಾ ಮಾಜಿ ಸದಸ್ಯೆ ಜಯಶ್ರೀ ಅವರು ತಮ್ಮದೇ ಜಮೀನನ್ನು ರಂಗ ಚಟುವಟಿಕೆಗೆ ಬಳಸಲು ದಾನವಾಗಿ ಸುಮಾರು 5 ಗುಂಟೆ ಜಮೀನು ನೀಡಲು ಸಜ್ಜಾದರು. ಸರ್ಕಾರ ಸಹ ರಂಗ ಸಜ್ಜಿಕೆಗೆ ಅನುದಾನ ಮಂಜೂರು ಮಾಡಿದೆ. ಆದರೆ ದಾನ ಪ್ರಕ್ರಿಯೆ ನಡೆಸಲು ಅವಶ್ಯವಾದ ಸರ್ವೇ ಕೆಲಸ ಮಾಡಲು ಭೂ ಮಾಪನ ಇಲಾಖೆಗೆ ಮೂರು ಬಾರಿ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕ ಮೂರು ಬಾರಿ ಕಟ್ಟಿದ್ದರು. ಸಾಮಾನ್ಯ ಅರ್ಜಿ ಸೇರಿದಂತೆ ಎರಡು ಬಾರಿ ಸ್ವಾವಲಂಬಿ ಅರ್ಜಿ ಸಲ್ಲಿಸಿದ ನಂತರ ಈಗ ಆಗ ಎನ್ನುತ್ತಲೇ ಗುರುವಾರ ಬರಲು ಸರ್ವೇಯರ್ ಶಿವಾನಂದ್ ಹೇಳಿದ್ದರು. ಮಾಜಿ ಸಂಸದೆ ಜಯಶ್ರೀ ಹೇಳಿದಂತೆ ಬೆಂಗಳೂರಿನಿಂದ ಗುಬ್ಬಿ ಕಚೇರಿಗೆ ಬಂದರೆ ಶಿವಾನಂದ್ ಬೇರೆಡೆ ಸರ್ವೇ ಕೆಲಸವಿದೆ. ನಮ್ಮ ಮೇಲಾಧಿಕಾರಿಗಳ ಕೆಲಸ. ಪೋನ್ ಕರೆ ಬಂದಿದೆ ಆಗಾಗಿ ಆ ಕೆಲಸ ಮುಖ್ಯ. ನಿಮ್ಮದಲ್ಲ ಎಂಬ ಬೇಜವಾಬ್ದಾರಿ ಉತ್ತರ ನೀಡಿದ್ದು ಜಯಶ್ರೀ ಅವರಲ್ಲಿ ತೀವ್ರ ಬೇಸರ ತಂದಿದೆ. ಇಲ್ಲಿನ ವ್ಯವಸ್ಥೆ ಕರ್ತವ್ಯ ಲೋಪದ ಬಗ್ಗೆ ತೀವ್ರ ಅಸಮಾಧಾನ ಸಹ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ...

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ'ದ ಆವರಣದಲ್ಲಿ ನಿರ್ಮಿಸಲಾಗಿರುವ ಸಬರಮತಿ ಆಶ್ರಮವು ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಪ್ರೇರಣಾ ಕೇಂದ್ರವಾಗಿ...

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು ಹಣದ ಕತ್ತಲೆ ಗಾಢವಾಗಿ, ಸೂತ್ರಧಾರಿಗಳು ಉಳ್ಳವರಾಗಿ ಕೈಲಾಸದಲ್ಲಿನ ಭವ್ಯ ಶಿವಾಲಯದಲ್ಲಿದ್ದಾರೆ. ಊರ ಹೊರಗಣ ಕೇರಿಯವರಿಗೆ ಕೊಳಕು ಬಳಿಯುವ ಕಾಯಕ ಮತ್ತು ಕೊಳಗೇರಿ...

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...
1002752652

ಒಟ್ಟು ಮೂರು ಅರ್ಜಿಗಳನ್ನು ಸಲ್ಲಿಸಿ ಒಟ್ಟು 3,500 ರೂಗಳನ್ನು ಶುಲ್ಕ ಕಟ್ಟಿ ಹೇಳಿದ ಸಮಯಕ್ಕೆ ಕಚೇರಿ ಬಳಿ ಬಂದರೂ ಕೈಗೆ ಸಿಗದ ಸರ್ವೇಯರ್ ಉದ್ಧಟತನ ಮಾತುಗಳಾಡಿ ತೀವ್ರ ಬೇಸರ ಉಂಟು ಮಾಡಿದ್ದಾರೆ. ಕಚೇರಿಯಲ್ಲಿ ಸಾರ್ವಜನಿಕರ ಕೆಲಸಕ್ಕೆ ಮನ್ನಣೆ ಸಿಗದಿದ್ದರೆ ಹೇಗೆ, ಮಾಜಿ ಸಂಸದೆ ನನಗೆ ಅಲೆದಾಡುವ ಈ ಗತಿ ಬಂದಿದೆ. ಸಾಮಾನ್ಯ ರೈತನ ಕತೆ ಏನು ಎಂದು ಪ್ರಶ್ನಿಸಿದರು. ಸರ್ವೇ ಮೇಲ್ವಿಚಾರಕ ನಿಜಗುಣಪ್ಪ ಅವರೊಂದಿಗೆ ನಮ್ಮ ಇಲಾಖೆಯ ಕಮಿಷನರ್ ಕಚೇರಿಯಿಂದ ಮೌಖಿಕ ಆದೇಶ ಬಂದ ಹಿನ್ನಲೆ ನಿಟ್ಟೂರು ಭಾಗಕ್ಕೆ ತೆರಳಿದ್ದೇನೆ ಎಂದು ಹಾರಿಕೆ ಉತ್ತರ ನೀಡಿದ ಪರವಾನಗಿ ಸರ್ವೇಯರ್ ಶಿವಾನಂದ್ ಅವರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಬೇಕು ಎಂದು ಸ್ಥಳದಲ್ಲಿ ಒತ್ತಾಯಿಸಿದರು.

ಸ್ಥಳಕ್ಕೆ ಧಾವಿಸಿದ ಸರ್ವೇಯರ್ ದಿನೇಶ್ ಹಾಗೂ ಬಾಹುಬಲಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದರು. ಶಿವಾನಂದ್ ಅವರು ಅರ್ಜಿಗೆ ಸಹಿ ಹಾಕಿಸಲು ಸೂಚಿಸಿದ್ದ ಮತ್ತೋರ್ವ ಸರ್ವೇಯರ್ ರಂಗಸ್ವಾಮಿ ಬಂದು ಸಹಿ ಪಡೆದರು. ಸಹಾಯಕ ನಿರ್ದೇಶಕ ತಿಮ್ಮಯ್ಯ ಅವರೊಂದಿಗೆ ಮೊಬೈಲ್ ಮೂಲಕ ಮಾತನಾಡಿ ಜಯಶ್ರೀ ಅವರು ಮಾಜಿ ಸಂಸದೆ ಸ್ಥಾನಕ್ಕೆ ಕೊಂಚ ಬೆಲೆ ನೀಡಬೇಕಿತ್ತು ಎಂದು ತಿಳಿಸಿ ಬೇಸರದಲ್ಲೇ ಕಚೇರಿಯಿಂದ ಹೊರ ನಡೆದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related