ರಸ್ತೆ ಸುರಕ್ಷತೆ ಕೇವಲ ಮರೀಚಿಕೆ: ರಾಜ್ಯದಲ್ಲಿ ಅಪಘಾತಗಳಿಗೆ ವರ್ಷಕ್ಕೆ 11,000 ಸಾವು

Date:

ಕರ್ನಾಟಕದಲ್ಲಿ ರಸ್ತೆ ಸುರಕ್ಷತೆಯು ಆತಂಕಕಾರಿ ಮಟ್ಟ ತಲುಪಿದ್ದು, ರಸ್ತೆ ಅಪಘಾತಗಳಲ್ಲಿ ಪ್ರತಿ ವರ್ಷ 11 ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಟ್ರಾಫಿಕ್ ಮತ್ತು ರಸ್ತೆ ಸುರಕ್ಷತಾ ಘಟಕದ ದತ್ತಾಂಶದ ಪ್ರಕಾರ, ಬೆಂಗಳೂರು ನಗರವನ್ನು ಹೊರತುಪಡಿಸಿ ರಾಜ್ಯದಲ್ಲಿ 2021ರಲ್ಲಿ 31,434 ಇದ್ದ ಅಪಘಾತಗಳ ಸಂಖ್ಯೆ 2025ರ ವೇಳೆಗೆ 37,682ಕ್ಕೆ (ಶೇ 20ರಷ್ಟು) ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಸಾವಿನ ಸಂಖ್ಯೆಯು 9,384 ರಿಂದ 11,344ಕ್ಕೆ ಅಂದರೆ ಶೇ 21ರಷ್ಟು ಹೆಚ್ಚಳ ಕಂಡಿದೆ.

- Advertisement -

ಕಳೆದ ಐದು ವರ್ಷಗಳ ಅಂಕಿ-ಅಂಶಗಳನ್ನು ಗಮನಿಸಿದರೆ, 2024ರಲ್ಲಿ ಅತಿ ಹೆಚ್ಚು ಅಂದರೆ 38,293 ಅಪಘಾತಗಳು ಸಂಭವಿಸಿದ್ದು, 11,496 ಮಂದಿ ಮೃತಪಟ್ಟಿದ್ದಾರೆ. 2025ರಲ್ಲಿ ಸಾವಿನ ಸಂಖ್ಯೆ 11,344ಕ್ಕೆ ಅಲ್ಪ ಇಳಿಕೆಯಾಗಿದ್ದರೂ, ಗಾಯಾಳುಗಳ ಸಂಖ್ಯೆ 2021ರಲ್ಲಿದ್ದ 37,934 ರಿಂದ 49,305ಕ್ಕೆ ಭಾರಿ ಏರಿಕೆಯಾಗಿದೆ. 2026ರ ಮೊದಲ ಒಂಬತ್ತು ತಿಂಗಳ ತಾತ್ಕಾಲಿಕ ವರದಿಯಂತೆ 28,809 ಅಪಘಾತಗಳು ಸಂಭವಿಸಿದ್ದು, 8,048 ಮಂದಿ ಸಾವನ್ನಪ್ಪಿದ್ದಾರೆ. ಇನ್ನು, ಬೆಂಗಳೂರು ನಗರವೊಂದರಲ್ಲೇ 2021-2025ರ ಅವಧಿಯಲ್ಲಿ ವಾರ್ಷಿಕ ಸರಾಸರಿ 4,447 ಅಪಘಾತಗಳು ಹಾಗೂ 847 ಸಾವುಗಳು ಸಂಭವಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಮಾನತೆಯ ಮರೆಯಲ್ಲಿ ಅಸಮಾನತೆಯ ನೆರಳು: ಹಸಿರು ಕನಸುಗಳ ಕಾಲಡಿಯಲ್ಲಿ...

ದೇಶದಲ್ಲಿ ಬಡತನ ಇಳಿಕೆಯಾಗುತ್ತಿದೆ, ಅಭಿವೃದ್ಧಿಯ ಅಂಕಿಅಂಶಗಳು ಏರುತ್ತಿವೆ. ಆದರೆ, ಆರ್ಥಿಕ ಪ್ರಗತಿಯ ನಡುವೆಯೂ ಶ್ರಮಜೀವಿಗಳ ಬದುಕಿನಲ್ಲಿ ಬಡತನ, ಜಾತಿ ತಾರತಮ್ಯ ಮತ್ತು ಅಸಮಾನತೆ ಏಕೆ ಮುಂದುವರಿದಿವೆ? ಅಭಿವೃದ್ಧಿಯ ಫಲ ಸಮಾಜದ ಕಟ್ಟಕಡೆಯ ಮನುಷ್ಯನಿಗೂ...

ಬಾಗಲಕೋಟೆ | ಸಾಕ್ಷರತೆಯಲಿ ಹಿಂದುಳಿದ ಜಿಲ್ಲೆ ʻಅಕ್ಷರ ಕ್ರಾಂತಿಗೆʼ...

ಮುಳುಗಡೆ ನಗರಿ ಬಾಗಲಕೋಟೆ ಜಿಲ್ಲೆ ಇಂದು ಕಬ್ಬಿನ ಬೆಲೆ ಹೋರಾಟದಲ್ಲಿ ಗೆಲುವು ಸಾಧಿಸಿ ಸಂಭ್ರಮಿಸುತ್ತಿದೆ. ಇದೇ ಸಂಭ್ರಮ ಶಿಕ್ಷಣ ಕ್ಷೇತ್ರದಲ್ಲಿಯೂ ಕಾಣಿಸಿಕೊಳ್ಳಬೇಕಿದೆ. ಆದರೆ, ಸಾಕ್ಷರತೆ, ಶಿಕ್ಷಕರ ಕೊರತೆ ಹಾಗೂ ಡಿಜಿಟಲ್ ಸೌಲಭ್ಯಗಳ ಅಭಾವ...

25ರ ಹರೆಯದಲ್ಲೇ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾದ ಆದಿವಾಸಿ ಕ್ರಾಂತಿಕಾರಿ...

ಕೇವಲ 25 ವರ್ಷಗಳ ಬದುಕಿನಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತಕ್ಕೆ ಸವಾಲು ಹಾಕಿ, ಸಾವಿರಾರು ಆದಿವಾಸಿಗಳನ್ನು ಸಂಘಟಿಸಿ, ಭೂಮಿಯ ಹಕ್ಕು ಮತ್ತು ಸ್ವಯಂ ಆಡಳಿತಕ್ಕಾಗಿ ಬೃಹತ್ ಚಳವಳಿಯನ್ನು ಕಟ್ಟಿದ ಬಿರ್ಸಾ ಮುಂಡಾ ಅವರು ಕೇವಲ...

ಅತಿವೇಗ, ವಾಹನಗಳ ಕಳಪೆ ನಿರ್ವಹಣೆ ಹಾಗೂ ಚಾಲಕರ ಆಯಾಸವು ಹೆದ್ದಾರಿ ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿವೆ. ಸವೆದ ಟೈರ್‌ಗಳ ಬಳಕೆ ಹಾಗೂ ಗಂಟೆಗೆ 120 ಕಿ.ಮೀ ವೇಗದಲ್ಲಿ ಚಲಿಸುವಾಗ ರಸ್ತೆಯಲ್ಲಿ ನಿಂತ ನೀರು ಗಮನಕ್ಕೆ ಬಾರದಿರುವುದು (ಅಕ್ವಾಪ್ಲಾನಿಂಗ್) ಅಪಾಯ ತಂದೊಡ್ಡುತ್ತಿದೆ. ಗಂಟೆಗೆ 60 ಕಿ.ಮೀ ಸ್ಥಿರ ವೇಗ ಕಾಯ್ದುಕೊಂಡರೆ ಬಹುಪಾಲು ಅಪಾಯಗಳನ್ನು ತಡೆಯಬಹುದು ಎನ್ನುತ್ತಾರೆ ಹಿರಿಯ ಸಂಚಾರ ಪೊಲೀಸ್ ಅಧಿಕಾರಿ. ರಾತ್ರಿ 11 ರಿಂದ ಬೆಳಗಿನ ಜಾವ 4 ಗಂಟೆಯವರೆಗಿನ ಅವಧಿಯಲ್ಲಿ ಚಾಲಕರು ಆಯಾಸ ಮೀರಿ ವಾಹನ ಚಲಾಯಿಸುವುದರಿಂದ ಹೆಚ್ಚು ಮಾರಣಾಂತಿಕ ಅಪಘಾತಗಳು ಸಂಭವಿಸುತ್ತವೆ. ನೇರವಾದ ರಸ್ತೆಗಳಲ್ಲಿ ಕಾಡುವ ‘ಹೈವೇ ಹಿಪ್ನೋಸಿಸ್’ (ಒಂದೇ ಗುರಿಯಲ್ಲಿದ್ದು ಎಚ್ಚರತಪ್ಪುವ ಸ್ಥಿತಿ) ಹಾಗೂ ಹೈ-ಬೀಮ್ ಲೈಟ್‌ಗಳ ಗ್ಲೇರ್ ಕೂಡ ದೊಡ್ಡ ಅಪಾಯವಾಗಿವೆ.

ರಾಜ್ಯ ಹೆದ್ದಾರಿಗಳು ಹಳ್ಳಿ ಮತ್ತು ಪಟ್ಟಣಗಳ ಮೂಲಕ ಹಾದುಹೋಗುವುದರಿಂದ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳು, ಬಸ್‌ಗಳು ಹಾಗೂ ಪಾದಚಾರಿಗಳ ಓಡಾಟ ಹೆಚ್ಚಿರುತ್ತದೆ. ಇಂತಹ ರಸ್ತೆಗಳಲ್ಲಿ ಜಂಕ್ಷನ್‌ಗಳು, ತಿರುವುಗಳು ಮತ್ತು ರಸ್ತೆ ಬದಿಯ ಚಟುವಟಿಕೆಗಳು ಅಪಘಾತದ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ಡಿಜಿ ಮತ್ತು ಐಜಿಪಿ ಎಂ.ಎ. ಸಲೀಂ ವಿವರಿಸಿದ್ದಾರೆ. ಹೀಗಾಗಿ, ಸ್ಥಳೀಯ ಸಂಸ್ಥೆಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ (PWD) ಹಾಗೂ ಸಾರಿಗೆ ಇಲಾಖೆಯೊಂದಿಗೆ ಸೇರಿ ಪೊಲೀಸರು ಹೆದ್ದಾರಿ ಸುರಕ್ಷತೆಗಾಗಿ ಕೆಲಸ ಮಾಡುತ್ತಿದ್ದಾರೆ.

ಹೆದ್ದಾರಿಗಳಲ್ಲಿ ಕಣ್ಗಾವಲಿರಿಸಲು ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ITMS) ಮತ್ತು ಎಐ (AI) ಆಧಾರಿತ ಕ್ಯಾಮೆರಾಗಳನ್ನು ನಗರಗಳಾಚೆಗೂ ವಿಸ್ತರಿಸಲಾಗುತ್ತಿದೆ. ಅತಿವೇಗ, ಮದ್ಯಪಾನ, ರಾಂಗ್-ರೂಟ್ ಚಾಲನೆ ಮತ್ತು ಹೆಲ್ಮೆಟ್-ಸೀಟ್‌ಬೆಲ್ಟ್ ನಿಯಮ ಉಲ್ಲಂಘನೆಗಳನ್ನು ತಡೆಯಲು ಲೇಸರ್ ಸ್ಪೀಡ್ ಗನ್, ಆಲ್ಕೋಮೀಟರ್ ಹಾಗೂ ವೇರಿಯಬಲ್ ಮೆಸೇಜ್ ಸೈನ್‌ಗಳನ್ನು ಬಳಸಲಾಗುತ್ತಿದೆ. ಅಪಘಾತವಾದಾಗ ಗಾಯಾಳುಗಳಿಗೆ ‘ಗೋಲ್ಡನ್ ಅವರ್’ನಲ್ಲಿ ಚಿಕಿತ್ಸೆ ಒದಗಿಸಲು ಪ್ರಮುಖ ಹೆದ್ದಾರಿ ಕಾರಿಡಾರ್‌ಗಳಲ್ಲಿ ಗಸ್ತು ಪಡೆಯನ್ನು ಬಲಪಡಿಸಲಾಗಿದೆ.

ರಾಜ್ಯದ ಹೆದ್ದಾರಿಗಳಲ್ಲಿ ಜಿಲ್ಲಾವಾರು ‘ಬ್ಲ್ಯಾಕ್ ಸ್ಪಾಟ್’ಗಳನ್ನು (ಅಪಘಾತ ವಲಯ) ಗುರುತಿಸಲಾಗಿದೆ. ಸೂಚನಾ ಫಲಕಗಳು, ದೀಪದ ವ್ಯವಸ್ಥೆ, ರಂಬಲ್ ಸ್ಟ್ರಿಪ್, ರಸ್ತೆ ಮಾರ್ಕಿಂಗ್‌ಗಳು ಹಾಗೂ ಜಂಕ್ಷನ್‌ಗಳ ಸುಧಾರಣೆಯಂತಹ ತಾಂತ್ರಿಕ ದೋಷಗಳನ್ನು ತ್ವರಿತವಾಗಿ ಸರಿಪಡಿಸಲು ಸಂಬಂಧಪಟ್ಟ ರಸ್ತೆ ನಿರ್ವಹಣಾ ಏಜೆನ್ಸಿಗಳೊಂದಿಗೆ ದತ್ತಾಂಶವನ್ನು ಹಂಚಿಕೊಳ್ಳಲಾಗುತ್ತಿದೆ. ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಗಳು ಇದರ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸುತ್ತಿವೆ ಎಂದು ಸಲೀಂ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಕರ್ನಾಟಕದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಮಾರು 900 ಬ್ಲ್ಯಾಕ್ ಸ್ಪಾಟ್‌ಗಳನ್ನು ಗುರುತಿಸಿದ್ದು, ಬಹುತೇಕ ಕಡೆ ಅಲ್ಪಾವಧಿ ತಡೆ-ಕ್ರಮಗಳನ್ನು ಪೂರ್ಣಗೊಳಿಸಿದೆ. ಈ ಪೈಕಿ 200 ಸ್ಥಳಗಳಿಗೆ ದೀರ್ಘಕಾಲೀನ ಕ್ರಮಗಳ ಅಗತ್ಯವಿರಲಿಲ್ಲ, ಆದರೆ 400 ಸ್ಥಳಗಳಲ್ಲಿ ದೀರ್ಘಕಾಲೀನ ಪರಿಹಾರಗಳನ್ನು ಕೈಗೊಳ್ಳಲಾಗಿದೆ. ಉಳಿದ 170 ಕಡೆಗಳಲ್ಲಿ ಗ್ರೇಡ್-ಸಪರೇಟೆಡ್ ರಚನೆಗಳು, ಅಂಡರ್‌ಪಾಸ್, ಓವರ್‌ಪಾಸ್, ಪಾದಚಾರಿ ಮೇಲ್ಸೇತುವೆ (FoB) ಮತ್ತು ಸರ್ವೀಸ್ ರಸ್ತೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿರಿಯೂರು ಉಪಚುನಾವಣೆ | BJPಗೆ ಟಿಕೆಟ್‌, ಸ್ಪರ್ಧೆಯಿಂದ JDS ಔಟ್‌?

ಕಾಂಗ್ರೆಸ್‌ ಶಾಸಕ-ಸಚಿವ ಡಿ ಸುಧಾಕರ್ ಅವರ ಮರಣದಿಂದ ತೆರವಾಗಿರುವ ಹಿರಿಯೂರು ವಿಧಾನಸಭಾ...

ವಿಜಯಪುರ | ನ.19ರಿಂದ ಲೋಕಾಯುಕ್ತ, ಉಪಲೋಕಾಯುಕ್ತರಿಂದ ಜಿಲ್ಲಾ ಪ್ರವಾಸ

ಕರ್ನಾಟಕ ಲೋಕಾಯುಕ್ತದ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ನವೆಂಬರ್ 19ರಿಂದ...

ಹುಲಸೂರ | ಶಿಕ್ಷಕರು ಮಕ್ಕಳ ಪ್ರತಿಭೆ ಗುರುತಿಸಿ : ಸಭಿಯಾ ಪಟೇಲ್

ಹುಲಸೂರ ಪಟ್ಟಣದ ಇಕ್ಬಾಲ್‌ ಪಟೇಲ್‌ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ...

ವಿಜಯಪುರ | ಹಾಲುಮತ ಸಮಾಜದ ಭಂಡಾರದಲ್ಲಿ ಶಕ್ತಿ, ಭಕ್ತಿ ಇದೆ: ಎಂ.ಬಿ.ಪಾಟೀಲ

ಹಾಲುಮತ ಸಮಾಜ ಸ್ವಚ್ಛ ಹಾಗೂ ಶ್ರೇಷ್ಠ ಸಮುದಾಯವಾಗಿದ್ದು, ಅದರ ಭಂಡಾರದಲ್ಲಿ ಶಕ್ತಿ...