ಬಾಂಗ್ಲಾ ಗಾರ್ಮೆಂಟ್ಸ್ ಬಿಕ್ಕಟ್ಟು: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮುಷ್ಕರ; 150ಕ್ಕೂ ಹೆಚ್ಚು ಕಾರ್ಖಾನೆಗಳು ಬಂದ್!

Date:

ಬಾಂಗ್ಲಾದೇಶದ ಪ್ರಮುಖ ಸಿದ್ಧ ಉಡುಪು (ಗಾರ್ಮೆಂಟ್ಸ್) ಉತ್ಪಾದನಾ ಕೇಂದ್ರಗಳಲ್ಲಿ ಕನಿಷ್ಠ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕಾರ್ಮಿಕರು ನಡೆಸುತ್ತಿರುವ ಮುಷ್ಕರ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರ ಪರಿಣಾಮವಾಗಿ ದೇಶದ ಪ್ರಮುಖ ಜವಳಿ ಕೇಂದ್ರಗಳಾದ ಸಾವರ್, ಅಶುಲಿಯಾ ಮತ್ತು ಗಾಜಿಪುರಗಳಲ್ಲಿನ ಸುಮಾರು 150ಕ್ಕೂ ಹೆಚ್ಚು ಕಾರ್ಖಾನೆಗಳು ಬಾಗಿಲು ಮುಚ್ಚಿವೆ.

- Advertisement -

ಪ್ರಸ್ತುತ ಬಾಂಗ್ಲಾದೇಶದ ಗಾರ್ಮೆಂಟ್ಸ್ ಕಾರ್ಮಿಕರ ಕನಿಷ್ಠ ಮಾಸಿಕ ವೇತನ 12,500 ಟಾಕಾ (9,300 ರಿಂದ 9,600 ರೂ.) ಇದೆ. ಆದರೆ, ದಿನೇ ದಿನೇ ಏರುತ್ತಿರುವ ಆಹಾರ, ಮನೆ ಬಾಡಿಗೆ, ಸಾರಿಗೆ ಮತ್ತು ಆರೋಗ್ಯ ವೆಚ್ಚಗಳನ್ನು ಹಾಗೂ ಜೀವನ ನಿರ್ವಹಣಾ ಬಿಕ್ಕಟ್ಟನ್ನು ನಿಭಾಯಿಸಲು ಈ ವೇತನ ಸಾಲುತ್ತಿಲ್ಲ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ. ಬದುಕಲು ಯೋಗ್ಯವಾದ ವೇತನಕ್ಕಾಗಿ ಆಗ್ರಹಿಸುತ್ತಿರುವ ಕಾರ್ಮಿಕರು, ತಮ್ಮ ಕನಿಷ್ಠ ಮಾಸಿಕ ವೇತನವನ್ನು 30,000 ಟಾಕಾಗೆ (ಸುಮಾರು 22,500 ರಿಂದ 23,100 ರೂ.) ಹೆಚ್ಚಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಮಾನತೆಯ ಮರೆಯಲ್ಲಿ ಅಸಮಾನತೆಯ ನೆರಳು: ಹಸಿರು ಕನಸುಗಳ ಕಾಲಡಿಯಲ್ಲಿ...

ದೇಶದಲ್ಲಿ ಬಡತನ ಇಳಿಕೆಯಾಗುತ್ತಿದೆ, ಅಭಿವೃದ್ಧಿಯ ಅಂಕಿಅಂಶಗಳು ಏರುತ್ತಿವೆ. ಆದರೆ, ಆರ್ಥಿಕ ಪ್ರಗತಿಯ ನಡುವೆಯೂ ಶ್ರಮಜೀವಿಗಳ ಬದುಕಿನಲ್ಲಿ ಬಡತನ, ಜಾತಿ ತಾರತಮ್ಯ ಮತ್ತು ಅಸಮಾನತೆ ಏಕೆ ಮುಂದುವರಿದಿವೆ? ಅಭಿವೃದ್ಧಿಯ ಫಲ ಸಮಾಜದ ಕಟ್ಟಕಡೆಯ ಮನುಷ್ಯನಿಗೂ...

ಬಾಗಲಕೋಟೆ | ಸಾಕ್ಷರತೆಯಲಿ ಹಿಂದುಳಿದ ಜಿಲ್ಲೆ ʻಅಕ್ಷರ ಕ್ರಾಂತಿಗೆʼ...

ಮುಳುಗಡೆ ನಗರಿ ಬಾಗಲಕೋಟೆ ಜಿಲ್ಲೆ ಇಂದು ಕಬ್ಬಿನ ಬೆಲೆ ಹೋರಾಟದಲ್ಲಿ ಗೆಲುವು ಸಾಧಿಸಿ ಸಂಭ್ರಮಿಸುತ್ತಿದೆ. ಇದೇ ಸಂಭ್ರಮ ಶಿಕ್ಷಣ ಕ್ಷೇತ್ರದಲ್ಲಿಯೂ ಕಾಣಿಸಿಕೊಳ್ಳಬೇಕಿದೆ. ಆದರೆ, ಸಾಕ್ಷರತೆ, ಶಿಕ್ಷಕರ ಕೊರತೆ ಹಾಗೂ ಡಿಜಿಟಲ್ ಸೌಲಭ್ಯಗಳ ಅಭಾವ...

25ರ ಹರೆಯದಲ್ಲೇ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾದ ಆದಿವಾಸಿ ಕ್ರಾಂತಿಕಾರಿ...

ಕೇವಲ 25 ವರ್ಷಗಳ ಬದುಕಿನಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತಕ್ಕೆ ಸವಾಲು ಹಾಕಿ, ಸಾವಿರಾರು ಆದಿವಾಸಿಗಳನ್ನು ಸಂಘಟಿಸಿ, ಭೂಮಿಯ ಹಕ್ಕು ಮತ್ತು ಸ್ವಯಂ ಆಡಳಿತಕ್ಕಾಗಿ ಬೃಹತ್ ಚಳವಳಿಯನ್ನು ಕಟ್ಟಿದ ಬಿರ್ಸಾ ಮುಂಡಾ ಅವರು ಕೇವಲ...

ಗಾರ್ಮೆಂಟ್ಸ್ ವರ್ಕರ್ಸ್ ಟ್ರೇಡ್ ಯೂನಿಯನ್ ಸೆಂಟರ್‌ನ ಉಪಾಧ್ಯಕ್ಷೆ ಜೋಲಿ ತಲುಕ್ದರ್ ಬಿಬಿಸಿಯ ನ್ಯೂಸ್‌ಗೆ ಪ್ರತಿಕ್ರಿಯಿಸಿ, “ಕಾರ್ಮಿಕರು ವರ್ಷಗಳಿಂದ ಇದರ ವೆಚ್ಚವನ್ನು ಭರಿಸುತ್ತಿದ್ದಾರೆ, ಆದರೆ ಕಾರ್ಖಾನೆ ಮಾಲೀಕರು ಮತ್ತು ಜಾಗತಿಕ ಚಿಲ್ಲರೆ ವ್ಯಾಪಾರಿಗಳು ಅವರ ಶೋಷಣೆಯಿಂದ ಲಾಭ ಪಡೆಯುತ್ತಿದ್ದಾರೆ. ಅವರು ಬದುಕಲು ಸಾಧ್ಯವಾಗುವ ವೇತನವನ್ನು ಕೇಳುತ್ತಿದ್ದಾರೆ, ಇಂತಹ ಮೂಲಭೂತ ಮಾನವ ಬೇಡಿಕೆಯನ್ನು ಯಾರ ತಾನೆ ವಿರೋಧಿಸಲು ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.

ಭಾನುವಾರ ಬೆಳಿಗ್ಗೆ ಗಾಜಿಪುರದ ಕೊನಬರಿ ಮತ್ತು ಮೌಚಕ್ ಪ್ರದೇಶಗಳಲ್ಲಿ ಕಾರ್ಮಿಕರು ಬೃಹತ್ ಪ್ರತಿಭಟನೆ ನಡೆಸಿದ್ದು, ಢಾಕಾ-ಟಂಗೈಲ್ ಹೆದ್ದಾರಿಯನ್ನು ಸುಮಾರು ಒಂದು ಗಂಟೆ ಕಾಲ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಸೌಂಡ್ ಗ್ರೆನೇಡ್‌ಗಳನ್ನು ಬಳಸಿದರು. ನವೆಂಬರ್ ಮೊದಲ ವಾರದಲ್ಲಿ ನಡೆದ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿ, ಪ್ರತಿಭಟನಾಕಾರರು ಪೊಲೀಸ್ ವ್ಯಾನ್‌ಗಳು ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳಿಗೆ ಬೆಂಕಿ ಹಚ್ಚಿ ಎರಡು ಪ್ರಮುಖ ಹೆದ್ದಾರಿಗಳನ್ನು ತಡೆದಿದ್ದರು.

ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಕಾರ್ಖಾನೆಗಳಿಗೆ ರಕ್ಷಣೆ ನೀಡಲು ಬೃಹತ್ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. 13 ತುಕಡಿ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ್ ಅರೆಸೇನಾ ಪಡೆ, ರಯೋಟ್ ಗೇರ್ ಧರಿಸಿದ ಪೊಲೀಸರು, ಸೇನಾ, ನೌಕಾ, ವಾಯುಪಡೆ ಮತ್ತು ಪೊಲೀಸರ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ಪ್ರತಿಕ್ರಿಯಾ ದಳ,  ಅನ್ಸಾರ್ ಬೆಟಾಲಿಯನ್ ತುಕಡಿಗಳು ಹಾಗೂ ಭದ್ರತೆಯನ್ನು ಮೇಲ್ವಿಚಾರಣೆ ಮಾಡಲು 25 ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗಳ ನಿಯೋಜನೆ ಮಾಡಲಾಗಿದೆ.

ಗಾಜಿಪುರ ಕೈಗಾರಿಕಾ ಪೊಲೀಸ್ ಅಧೀಕ್ಷಕ ಮೊಹಮ್ಮದ್ ಅಮ್ಜದ್ ಹೊಸೈನ್ ಮಾತನಾಡಿ, ಶನಿವಾರ ರಾತ್ರಿ 13 ಕಾರ್ಖಾನೆಗಳು ಮತ್ತು ಬೆಳಗಿನ ಗಲಭೆಯ ಸಮಯದಲ್ಲಿ 16 ಕಾರ್ಖಾನೆಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ ಎಂದು ಬಿಬಿಸಿ ನ್ಯೂಸ್‌ಗೆ ಮಾಹಿತಿ ತಿಳಿಸಿದ್ದರು. ಉತ್ಪಾದನೆಗೆ ಅಡ್ಡಿಯಾದರೆ “ಕೆಲಸವಿಲ್ಲದಿದ್ದರೆ ವೇತನವಿಲ್ಲ” ಎಂಬ ಕಾರ್ಮಿಕ ಕಾನೂನಿನ ನಿಬಂಧನೆಯಡಿ ಮಾಲೀಕರು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ವೇತನವನ್ನು ತಡೆಹಿಡಿಯುವ ಅಧಿಕಾರ ಹೊಂದಿದ್ದಾರೆ. ಇದರಂತೆ ಒಟ್ಟಾರೆ 50ಕ್ಕೂ ಹೆಚ್ಚು ಘಟಕಗಳು ಮುಚ್ಚಲ್ಪಟ್ಟಿವೆ.

ಇನ್ನು ಚೀನಾದ ನಂತರ ಬಾಂಗ್ಲಾದೇಶವು ವಿಶ್ವದ ಎರಡನೇ ಅತಿದೊಡ್ಡ ಸಿದ್ಧ ಉಡುಪು ರಫ್ತುದಾರ ರಾಷ್ಟ್ರವಾಗಿದೆ. ಈ ಉದ್ಯಮವು ಬಾಂಗ್ಲಾದೇಶದ ಒಟ್ಟು ರಫ್ತು ಆದಾಯದಲ್ಲಿ ಶೇ. 80ಕ್ಕಿಂತ ಹೆಚ್ಚು ಪಾಲನ್ನು ಹೊಂದಿದ್ದು, ದೇಶದ ಒಟ್ಟು ಜಿಡಿಪಿಗೆ ಶೇ. 10ರಷ್ಟು ಕೊಡುಗೆ ನೀಡುತ್ತಿದೆ. ಸುಮಾರು 40 ಲಕ್ಷಕ್ಕೂ ಅಧಿಕ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದು, H&M, Zara, Primark ಮತ್ತು Gap ನಂತಹ ಪ್ರಮುಖ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳಿಗೆ ಇಲ್ಲಿಂದಲೇ ಬಟ್ಟೆಗಳು ಪೂರೈಕೆಯಾಗುತ್ತವೆ.

ಪ್ರಸ್ತುತ  ಆರ್ಡರ್‌ಗಳ ಉತ್ಪಾದನೆಯ ಪ್ರಮುಖ ಸಮಯ ಇದಾಗಿದ್ದು, ಮುಷ್ಕರ ಹೀಗೆಯೇ ಮುಂದುವರಿದರೆ ವಿದೇಶಿ ಖರೀದಿದಾರರ ವಿಶ್ವಾಸಕ್ಕೆ ಧಕ್ಕೆಯಾಗಿ, ಸಾಗಣೆ ವಿಳಂಬವಾಗಿ ಆರ್ಡರ್‌ಗಳು ರದ್ದಾಗುವ ಭೀತಿಯನ್ನು ಬಾಂಗ್ಲಾದೇಶ ಗಾರ್ಮೆಂಟ್ ತಯಾರಕರು ಮತ್ತು ರಫ್ತುದಾರರ ಸಂಘ (BGMEA) ಹಾಗೂ ಬಾಂಗ್ಲಾದೇಶ ನಿಟ್ವೇರ್ ತಯಾರಕರು ಮತ್ತು ರಫ್ತುದಾರರ ಸಂಘ (BKMEA) ವ್ಯಕ್ತಪಡಿಸಿವೆ. ಕಾರ್ಖಾನೆಗಳಿಗೆ ಸೂಕ್ತ ರಕ್ಷಣೆ ಸಿಗದಿದ್ದರೆ ವೇತನ ಮಂಡಳಿಯ ಮುಂದಿನ ಸಭೆಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸುವ ಬಗ್ಗೆ ಪುನರ್‌ವಿಮರ್ಶೆ ಮಾಡಬೇಕಾಗುತ್ತದೆ ಎಂದು BGMEA ಅಧ್ಯಕ್ಷ ಮಹಮುದ್ ಹಸನ್ ಖಾನ್ ಎಚ್ಚರಿಸಿದ್ದಾರೆ.

ಆಡಳಿತಾರೂಢ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP) ಕಾರ್ಯಕರ್ತರು ಸಹ ರಸ್ತೆಗಿಳಿದು, ಕಿಡಿಗೇಡಿಗಳನ್ನ ಪ್ರತಿರೋಧಿಸಲು ಮತ್ತು ಶಾಂತಿ ಕಾಪಾಡಲು ಬಿದಿರಿನ ತುಂಡುಗಳನ್ನು ಹಿಡಿದು ಪ್ರತಿಭಟನಾ ವಿರೋಧಿ ಅಭಿಯಾನಗಳನ್ನು ನಡೆಸಿದ್ದಾರೆ. ಹಸೀನಾ ಮತ್ತು ಅವರ ಬೆಂಬಲಿಗರು ಪ್ರತಿಭಟನೆಗಳ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಎನ್‌ಪಿ ನಾಯಕರು ಆರೋಪಿಸಿದ್ದರೆ, ಮಾಜಿ ಪ್ರಧಾನಿ ಶೇಖ್ ಹಸೀನಾ ಮಾಧ್ಯಮ ಸಂದರ್ಶನಗಳಲ್ಲಿ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಪ್ರಧಾನಿ ತಾರಿಕ್ ರೆಹಮಾನ್ ಅವರ ಮಾಹಿತಿ ವ್ಯವಹಾರಗಳ ಸಲಹೆಗಾರ ಜಹೇದುರ್ ರೆಹಮಾನ್ ಮಾತನಾಡಿ, “ಶೇಖ್ ಹಸೀನಾ ಅವರು ಜೀವಂತವಿರುವವರೆಗೆ ಸರ್ಕಾರವನ್ನು ನೆಮ್ಮದಿಯಿಂದ ಇರಲು ಬಿಡುವುದಿಲ್ಲ” ಎಂದು ಆರೋಪಿಸಿದ್ದಾರೆ.

ಆಗಸ್ಟ್ 5, 2024ರಂದು ನಡೆದ ವಿದ್ಯಾರ್ಥಿಗಳ ನೇತೃತ್ವದ ದಂಗೆಯು ಹಸೀನಾ ಸರ್ಕಾರವನ್ನು ಪದಚ್ಯುತಗೊಳಿಸಿತು, ಇದರಿಂದಾಗಿ ಅವರು ಭಾರತಕ್ಕೆ ಪಲಾಯನ ಮಾಡಬೇಕಾಯಿತು. ನಂತರ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರವು ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಅವಾಮಿ ಲೀಗ್ ಅನ್ನು ನಿಷೇಧಿಸಿತು.

ಪರಿಸ್ಥಿತಿಯನ್ನು ತಿಳಿಗೊಳಿಸಲು ನವೆಂಬರ್ 1ರಂದು ಸರ್ಕಾರವು ಹಿರಿಯ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಕನಿಷ್ಠ ವೇತನ ಮಂಡಳಿಯನ್ನು ರಚಿಸಿದೆ. ನವೆಂಬರ್ ಅಂತ್ಯದೊಳಗೆ ತನ್ನ ಶಿಫಾರಸುಗಳನ್ನು ಅಂತಿಮಗೊಳಿಸುವುದಾಗಿ ಮಂಡಳಿ ತಿಳಿಸಿದ್ದು, ಪರಿಷ್ಕೃತ ವೇತನ ರಚನೆಯು ಡಿಸೆಂಬರ್ 1ರಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ಈ ಹೊಸ ವೇತನ ಶ್ರೇಣಿಯಡಿಯ ಮೊದಲ ಸಂಬಳವನ್ನು ಕಾರ್ಮಿಕರು ಜನವರಿಯಲ್ಲಿ ಪಡೆಯಲಿದ್ದಾರೆ. ಸೋಮವಾರ ನಿಗದಿಯಾಗಿರುವ ಕನಿಷ್ಠ ವೇತನ ಮಂಡಳಿಯ ಸಭೆಯಲ್ಲಿ BGMEA ತನ್ನ ಪ್ರಸ್ತಾವನೆಯನ್ನು ಸಲ್ಲಿಸಲಿದ್ದು, ಅಂದಿನ ಪರಿಸ್ಥಿತಿಯನ್ನು ಅವಲಂಬಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಲಕನೆಂದು ನಂಬಿಸಿ 70 ಬಾಲಕಿಯರಿಗೆ ವಂಚನೆ: ಭಾರತೀಯ ಮೂಲದ ಬ್ರಿಟನ್ ಯುವಕನಿಗೆ 30 ವರ್ಷ ಜೈಲು

ಬ್ರಿಟನ್‌ನಲ್ಲಿ ಕನಿಷ್ಠ 70 ಅಪ್ರಾಪ್ತ ಬಾಲಕಿಯರನ್ನು ಆನ್‌ಲೈನ್ ಮೂಲಕ ವಂಚಿಸಿ, ಲೈಂಗಿಕ...

36 ಗಂಟೆಗಳ ಸ್ಥಗಿತದ ಬಳಿಕ ಯಥಾಸ್ಥಿತಿಗೆ ಮರಳಿದ ಮೈಕ್ರೋಸಾಫ್ಟ್: ಔಟ್‌ಲುಕ್, ಟೀಮ್ಸ್ ಸೇವೆಗಳ ಯಶಸ್ವಿ ಮರುಸ್ಥಾಪನೆ

ಜಗತ್ತಿನಾದ್ಯಂತ ಲಕ್ಷಾಂತರ ಗ್ರಾಹಕರು, ವಾಣಿಜ್ಯ ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳನ್ನು ತೀವ್ರವಾಗಿ...

ಅಮೆರಿಕದ ವಿಮಾನಯಾನದಲ್ಲಿ ಕಂಡರಿಯದ ಅಲ್ಲೋಲ-ಕಲ್ಲೋಲ: 11,000 ವಿಮಾನಗಳು ದಿಢೀರ್ ಸ್ಥಗಿತ

ಅಮೆರಿಕದ ವಾಯು ಸಂಚಾರ ನಿಯಂತ್ರಣ (ATC) ಸಂಪರ್ಕ ವ್ಯವಸ್ಥೆಯಲ್ಲಿ ಉಂಟಾದ ಭಾರಿ...

ಆಫೀಸ್, ಔಟ್‌ಲುಕ್, ಟೀಮ್ಸ್ ಸ್ಥಗಿತಕ್ಕೆ ಸೈಬರ್ ದಾಳಿ ಕಾರಣವೇ; ಅಸಲಿ ಸತ್ಯ ಬಿಚ್ಚಿಟ್ಟ ಮೈಕ್ರೋಸಾಫ್ಟ್

ಜಗತ್ತಿನಾದ್ಯಂತ ಮೈಕ್ರೋಸಾಫ್ಟ್ 365 ಸೇವೆಗಳಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಲಕ್ಷಾಂತರ ಬಳಕೆದಾರರು...