ಬೆಂಗಳೂರು | ಪ್ರಸಾದ್ ಬಿದ್ದಪ್ಪ ಪುತ್ರ ಆ್ಯಡಂ ವಿರುದ್ಧ ಧರ್ಮ ನಿಂದನೆ ಪ್ರಕರಣ ದಾಖಲು

Date:

ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರ ಆ್ಯಡಂ ಬಿದ್ದಪ್ಪ ಮದ್ಯದ ಅಮಲಿನಲ್ಲಿ ದುರ್ವರ್ತನೆ ಪ್ರದರ್ಶಿಸಿ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಬೆಂಗಳೂರಿನ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಈಗಾಗಲೇ, ಪ್ರಕರಣ ದಾಖಲಾಗಿದೆ.

ಈ ಘಟನೆ ವೇಳೆ, ಕರ್ತವ್ಯದಲ್ಲಿದ್ದ ಪೊಲೀಸ್‌ ಅಧಿಕಾರಿಯ ಧರ್ಮವನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಾನೆ. ಹಾಗಾಗಿ, ಆತನ ವಿರುದ್ಧ ಐಪಿಸಿ ಸೆಕ್ಷನ್ 295ಎ ಅಡಿಯಲ್ಲಿ ಧರ್ಮ ನಿಂದನೆಯ ಮತ್ತೊಂದು ಪ್ರಕರಣ ದಾಖಲಾಗಿದೆ.

ಅ.25 ರಂದು ರಾತ್ರಿ ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಯಲಹಂಕ ನ್ಯೂ ಟೌನ್‌ನಲ್ಲಿರುವ ರೈಲ್ವೇ ವೀಲ್ ಫ್ಯಾಕ್ಟರಿ ಬಳಿ ಆ್ಯಡಂ ಬಿದಪ್ಪ ಅವರು ಅತಿವೇಗವಾಗಿ ವಾಹನ ಚಾಲನೆ ಮಾಡಿ, ಇನ್ನೋರ್ವ ವಾಹನ ಸವಾರ ರಾಹುಲ್ ಉನ್ನಿಕೃಷ್ಣನ್ ಎಂಬುವವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದರು. ಈ ಬಗ್ಗೆ ಯಲಹಂಕ ನ್ಯೂ ಟೌನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈಗ ಆ್ಯಡಂ ಪೊಲೀಸ್ ಅಧಿಕಾರಿಯ ಧರ್ಮವನ್ನು ಅವಮಾನಿಸಿದ ವಿಡಿಯೋ ವೈರಲ್ ಆಗಿದ್ದು, ಈ ಸಂಬಂಧ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ. ಆ್ಯಡಂ ವಿರುದ್ಧ ದಾಖಲಾದ ಈ ಮೂರು ಪ್ರಕರಣಗಳು ಒಂದೇ ಘಟನೆಗೆ ಸಂಬಂಧಿಸಿವೆ.

ಪೊಲೀಸ್‌ ಅಧಿಕಾರಿಯ ಧರ್ಮವನ್ನು ಹೀಯಾಳಿಸಿದ ಆ್ಯಡಂ ವಿರುದ್ಧ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಗೌಸ್ ಪಾಷಾ (45) ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಏನಿದು ಘಟನೆ?

ಆ್ಯಡಂ ಬಿದ್ದಪ್ಪ ಅವರು ಅ.25 ರಂದು ರಾತ್ರಿ ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಯಲಹಂಕ ನ್ಯೂ ಟೌನ್‌ನಲ್ಲಿರುವ ರೈಲ್ವೇ ವೀಲ್ ಫ್ಯಾಕ್ಟರಿ ಬಳಿ ಮದ್ಯದ ಅಮಲಿನಲ್ಲಿ ಅತಿವೇಗವಾಗಿ ವಾಹನ ಚಾಲನೆ ಮಾಡಿದ್ದರು. ಹಿಂದೆ ಇದ್ದ ಮತ್ತೋರ್ವ ಸವಾರ ರಾಹುಲ್ ಎಂಬುವವರು ಹಾರ್ನ್‌ ಮಾಡಿ ಮುಂದೆ ಕಾರು ಚಾಲನೆ ಮಾಡಿದ್ದಾರೆ. ಇಷ್ಟಕ್ಕೇ ಕೋಪಗೊಂಡ ಆ್ಯಡಂ, ರಾಹುಲ್ ಅವರ ಕಾರನ್ನು ಓವರ್ ಟೇಕ್ ಮಾಡಿಕೊಂಡು ಬಂದಿದ್ದಾರೆ.

ಯಲಹಂಕದ ರೈಲ್ವೆ ವೀಲ್ ಫ್ಯಾಕ್ಟರಿ ಬಳಿ ಅಡ್ಡಗಟ್ಟಿ ಗಲಾಟೆ ಮಾಡಿದ್ದರು. ಈ ವೇಳೆ, ರಾಹುಲ್ ಉನ್ನಿಕೃಷ್ಣನ್ ಅವರು ರಾತ್ರಿ 11 ಗಂಟೆ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ (112) ಕರೆ ಮಾಡಿದ್ದಾರೆ. ಜತೆಗೆ ತನಗೆ ಪ್ರಭಾವಿ ವ್ಯಕ್ತಿಗಳು ಪರಿಚಯವಿದೆ ಎಂದು ಜೀವ ಬೆದರಿಕೆ ಹಾಕಿದ್ದಾರೆ.

ಕೂಡಲೇ ಸ್ಥಳಕ್ಕೆ ಬಂದ ಪೊಲೀಸರ ಜತೆಗೂ ಕೂಡ ಬಿದ್ದಪ್ಪ ವಾಗ್ವಾದ ನಡೆಸಿದ್ದಾರೆ. ಪೊಲೀಸರು ಬಿದ್ದಪ್ಪ ಅವರಿಗೆ ರಾಹುಲ್‌ ಅವರನ್ನು ಏಕೆ ಹಿಂಬಾಲಿಸಿ, ಅವರ ಕಾರನ್ನು ಅಡ್ಡಗಟ್ಟಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕಾರನ್ನು ನಾನು ಹಿಂಬಾಲಿಸಲಿಲ್ಲ ಎಂದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.

ಈ ವೇಳೆ, ಎಎಸ್ಐ ಸಮವಸ್ತ್ರದಲ್ಲಿದ್ದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಗೌಸ್ ಪಾಷಾ ನಾಮಫಲಕ ಗಮನಿಸಿದ ಆ್ಯಡಂ, ಅವರ ಹೆಸರನ್ನೂ ಕೂಗಿ, ಅಸಭ್ಯವಾಗಿ ಮಾತನಾಡಿದ್ದರು. ಅಲ್ಲದೇ ‘ಸ್ಟೇಷನ್‌ಗೆ ಬರ್ತೀನಿ, ಏನ್ ಮಾಡಿಕೊಳ್ತಿರೋ ಮಾಡ್ಕೊಳಿ’ ಎಂದು ಉದ್ಧಟತನದಲ್ಲಿ ಮಾತನಾಡಿದ್ದಾರೆ. ಜತೆಗೆ, ‘ಗೌಸ್, ಗೌಸ್ ಪಾಷಾ, ಒಬ್ಬ ಮುಸ್ಲಿಂ’ ಎನ್ನುತ್ತಾ ಪೊಲೀಸ್ ಅಧಿಕಾರಿಯ ಮೇಲೆ ಉಗುಳುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿತ್ತು.

ರಾಹುಲ್ ಉನ್ನಿಕೃಷ್ಣನ್ ಅವರು ಯಲಹಂಕ ಹೊಸನಗರದ ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಅನಂತಪುರ ಗೇಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ನ ನಿವಾಸಿ. ರಾಹುಲ್ ಉನ್ನಿಕೃಷ್ಣನ್ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆ್ಯಡಂ ಬಿದ್ದಪ್ಪ ಅವರನ್ನು ಬಂಧಿಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.

ಸದ್ಯ ಎಎಸ್ಐ ದೂರಿನ ಮೇರೆಗೆ ಆ್ಯಡಂ ಬಿದ್ದಪ್ಪ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮದ್ಯದ ಅಮಲಿನಲ್ಲಿ ದುರ್ವರ್ತನೆ ಪ್ರದರ್ಶಿಸಿದ ಪ್ರಸಾದ್ ಬಿದ್ದಪ್ಪ ಪುತ್ರ, ಪ್ರಕರಣ ದಾಖಲು

ಆ್ಯಡಂ ಕುಡಿದು ಗಲಾಟೆ ಮಾಡಿರುವುದು ಇದೇ ಮೊದಲೇನಲ್ಲ, ಈ ಹಿಂದೆ ಸ್ಯಾಂಡಲ್​ವುಡ್​ ಖ್ಯಾತ ನಟಿ ಸಂಜನಾ ಗಲ್ರಾನಿ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಸಂದೇಶ ಕಳುಹಿಸಿದ್ದ ಆರೋಪದಡಿ ಕಳೆದ ವರ್ಷ ಮಾರ್ಚ್‌ನಲ್ಲಿ ಆ್ಯಡಂ ಬಿದ್ದಪ್ಪ ಅವರನ್ನು ಇಂದಿರಾ ನಗರ ಪೊಲೀಸರು ಬಂಧಿಸಿದ್ದರು. ಈತ ನಟ ಅಭಿಷೇಕ್‌ ಅಂಬರೀಶ್ ಅವರ ಪತ್ನಿ ಅವಿವಾ ಬಿದ್ದಪ್ಪ ಅವರ ಸಹೋದರ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ಭದ್ರಾ ಮೆಲ್ದಂಡೆ ಯೋಜನೆ ಜಾರಿಗೆ ಸರ್ಕಾರದಿಂದ ಮೀನಮೇಷ: ರೈತರ ಆಕ್ರೋಶ

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಬಯಲು ಸೀಮೆಗೆ ನೀರು ಹರಿಸುವ ಭದ್ರಾ...

ವಿಜಯಪುರ | ಮಹಾರಾಷ್ಟ್ರ ಮೂಲದ ಅಂತಾರಾಜ್ಯ ಕಳ್ಳರ ಬಂಧನ: 208 ಗ್ರಾಂ ಚಿನ್ನಾಭರಣ ವಶಕ್ಕೆ

ಅಂತಾರಾಜ್ಯಗಳಲ್ಲಿ ಮನೆಗಳ್ಳತನ ನಡೆಸುತ್ತಿದ್ದ ಆರೋಪದಲ್ಲಿ ಮಹಾರಾಷ್ಟ್ರ ಮೂಲದ ನಾಲ್ವರನ್ನು ವಿಜಯಪುರ ಜಿಲ್ಲೆಯ...

ವಿಜಯಪುರ | ಶಿಕ್ಷಕರು ವಿದ್ಯಾರ್ಥಿಗಳಿಗೆ ಜೀವನ ಪಾಠಗಳನ್ನೂ ಕಲಿಸಬೇಕು: ಪ್ರೊ.‌ಬಿ ಕೆ ತುಳಸಿಮಾಲ

ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಪುಸ್ತಕದ ಜ್ಞಾನವನ್ನಷ್ಟೇ ಅಲ್ಲದೆ, ಜೀವನದ ಪಾಠಗಳನ್ನೂ ಕಲಿಸಬೇಕಿದೆ...

ಯಾದಗಿರಿ | ಬೋಧ ಗಯಾ ಮಂದಿರ ಕಾಯ್ದೆ ರದ್ದುಪಡಿಸಲು ಒತ್ತಾಯಿಸಿ ಸೆ.17ರಂದು ‘ಪಾಟ್ನಾ ಚಲೋ’

ಬೋಧ ಗಯಾ ಮಂದಿರ ಕಾಯ್ದೆ 1949 ರದ್ದುಪಡಿಸಲು ಒತ್ತಾಯಿಸಿ ಮತ್ತು ಬುದ್ಧ...